AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿಯವರ ಕಲ್ಪನೆಯ ಭಾರತ ಇದಲ್ಲ; ಗೋವಾದಲ್ಲಿ ಒತ್ತೆಯಾಳಾಗಿದ್ದ ಮನೆಯನ್ನು ತೊರೆದ ಫ್ರೆಂಚ್ ನಟಿ

ವಿವಾದ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. ಬೋರ್ಗೊ (ಚಿಚೆರಿಯೊ) ಅವರು 2008 ರಲ್ಲಿ ಫ್ರಾನ್ಸಿಸ್ಕೊ ಸೌಜಾ ಎಂಬ ವಕೀಲರಿಂದ ಮನೆಯನ್ನು ಖರೀದಿಸಿದ್ದರು.

ಮೋದಿಯವರ ಕಲ್ಪನೆಯ ಭಾರತ ಇದಲ್ಲ; ಗೋವಾದಲ್ಲಿ ಒತ್ತೆಯಾಳಾಗಿದ್ದ ಮನೆಯನ್ನು ತೊರೆದ ಫ್ರೆಂಚ್ ನಟಿ
ಮರಿಯಾನ್ನೆ ಬೋರ್ಗೊ
ರಶ್ಮಿ ಕಲ್ಲಕಟ್ಟ
|

Updated on: Feb 03, 2023 | 4:42 PM

Share

ಪಣಜಿ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರ ಗೋವಾದಲ್ಲಿ ತನ್ನ ಸ್ವಂತ ಮನೆಯಲ್ಲಿ ತನ್ನನ್ನು ಒತ್ತೆಯಾಳಾಗಿ ಇರಿಸಲಾಗಿದೆ ಎಂದು ಆರೋಪಿಸಿರುವ 75 ವರ್ಷದ ಫ್ರೆಂಚ್ ನಟಿ, ನಾನು ಆ ಜಾಗವನ್ನು ತೊರೆದಿದ್ದೇನೆ ಎಂದು ಹೇಳಿದ್ದಾರೆ. ಅದೇ ವೇಳೆ ಭಾರತವನ್ನು ಪ್ರವಾಸಿ ಸ್ನೇಹಿಯಾಗಿಸುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಪ್ರಯತ್ನಗಳ ಹೊರತಾಗಿಯೂ ನಾನು ಇಲ್ಲಿ ನಿರಾಶೆಗೊಂಡಿದ್ದೇನೆ ಎಂದಿದ್ದಾರೆ ಅವರು.ಪ್ರವಾಸಿಗರಲ್ಲಿ ಜನಪ್ರಿಯವಾಗಿರುವ ಪಣಜಿ ಬಳಿಯ ಬೀಚ್ ಟೌನ್ ಕ್ಯಾಲಂಗುಟ್‌ನಲ್ಲಿರುವ ಬಂಗಲೆಯಲ್ಲಿ ತನ್ನನ್ನು 11 ದಿನಗಳ ಕಾಲ  ದಿಗ್ಬಂಧನ ಮಾಡಲಾಗಿತ್ತು. ಈ ಬಂಗಲೆಯ ಹಿಂದಿನ ಮಾಲೀಕರ ವಿಧವೆ ಪತ್ನಿ ಈ ರೀತಿ ಮಾಡಿದ್ದಾರೆ. ಈಗ ಅದನ್ನು ತೊರೆಯುತ್ತಿದ್ದೇನೆ ಎಂದು ಮರಿಯಾನ್ನೆ ಬೋರ್ಗೊ (Marianne Borgo)ಗುರುವಾರ ರಾತ್ರಿ ಹೇಳಿದ್ದಾರೆ.

ತನ್ನ ಸ್ವಂತ ಮನೆಯಲ್ಲಿ ತನ್ನನ್ನು ಒತ್ತೆಯಾಳಾಗಿ ಇರಿಸಲಾಗಿದೆ. ತನ್ನ ಆಸ್ತಿಯ ಮೇಲೆ ಹಕ್ಕು ಸಾಧಿಸುವ ಜನರು ಅದರ ವಿದ್ಯುತ್ ಮತ್ತು ನೀರಿನ ಸಂಪರ್ಕಗಳನ್ನು ಕಡಿತಗೊಳಿಸಿದ್ದು, ಕತ್ತಲೆಯಲ್ಲಿ ವಾಸಿಸುವಂತೆ ಮಾಡಿದ್ದಾರೆ ಎಂದು ಅವರು ಕಳೆದ ವಾರ ಆರೋಪಿಸಿದ್ದರು. ಸರಿಯಾದ ಸ್ನಾನ ಕೂಡಾ ಮಾಡಲು ಸಾಧ್ಯವಾಗದೆ ಇನ್ನು ಮುಂದೆ ಇಲ್ಲಿರಲು ಸಾಧ್ಯವಿಲ್ಲ. ಪ್ರಸ್ತುತ ಪರಿಸ್ಥಿತಿಗಳಿಂದಾಗಿ ನನ್ನ ಆರೋಗ್ಯ ಹದಗೆಡುತ್ತಿದೆ ಎಂದು ಬೋರ್ಗೊ ಹೇಳಿದ್ದಾರೆ.

ಮೋದಿಯವರ ಕಲ್ಪನೆಯ ಭಾರತ ಇದಲ್ಲ. ಅವರು ಸಕಾರಾತ್ಮಕ ಪ್ರವಾಸೋದ್ಯಮ ಸ್ನೇಹಿ ಭಾರತ ಸೃಷ್ಟಿಸಲು ಪ್ರಪಂಚದಾದ್ಯಂತ ಕೆಲಸ ಮಾಡುತ್ತಿದ್ದಾರೆ. ಆದರೆ ಇತ್ತೀಚಿನ ಘಟನೆಗಳು ನನಗೆ ನಿರಾಶೆಯನ್ನುಂಟು ಮಾಡಿದೆ, ಏಕೆಂದರೆ ಸಾಧನೆಗಳು ಇಲ್ಲಿ ಗೋವಾದಲ್ಲಿ ರಾಜ್ಯ ಮಟ್ಟವನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿವಾದ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. ಬೋರ್ಗೊ (ಚಿಚೆರಿಯೊ) ಅವರು 2008 ರಲ್ಲಿ ಫ್ರಾನ್ಸಿಸ್ಕೊ ಸೌಜಾ ಎಂಬ ವಕೀಲರಿಂದ ಮನೆಯನ್ನು ಖರೀದಿಸಿದ್ದರು. ಆದರೆ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಸೌಜಾ ನಿಧನರಾದ ನಂತರ ಅವರ ಕಷ್ಟದ ದಿನಗಳು ಆರಂಭವಾದವು.

ಪ್ಯಾರಿಸ್ ಮೂಲದ ಸೆಂಟರ್ ಡಿ ಆರ್ಟೆ ಡ್ರಾಮಾಟಿಕ್ ಮತ್ತು ಕನ್ಸರ್ವೇಟೋಯರ್ ನ್ಯಾಷನಲ್ ಡಿ ಆರ್ಟೆ ಡ್ರಾಮಾಟಿಕ್ (ನ್ಯಾಷನಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್ಸ್) ನಲ್ಲಿ ತರಬೇತಿ ಪಡೆದ ಬೋರ್ಗೊ ಯುರೋಪ್ ಮತ್ತು ಭಾರತದಾದ್ಯಂತ ಸಿನಿಮಾ, ದೂರದರ್ಶನ ಮತ್ತು ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ.

“ದಿ ಬೌರ್ನ್ ಐಡೆಂಟಿಟಿ”, “ಎ ಲಿಟಲ್ ಪ್ರಿನ್ಸೆಸ್”, ಮತ್ತು ಫ್ರಾಂಕೋ-ಅಮೇರಿಕನ್ ರೋಮ್-ಕಾಮ್/ಡ್ರಾಮಾ “ಲೆ ಡೈವೋರ್ಸ್”ನಲ್ಲಿ ಅವರು ಕೇಟ್ ಹಡ್ಸನ್, ಗ್ಲೆನ್ ಕ್ಲೋಸ್ ಮತ್ತು ಸ್ಟೀಫನ್ ಫ್ರೈ ಜತೆಗೂ ನಟಿಸಿದ್ದಾರೆ. ಅವರು ಫ್ರೆಂಚ್ ಥ್ರಿಲ್ಲರ್ ಸರಣಿ “ಪ್ರೊಫೈಲೇಜ್”ನಲ್ಲಿಯೂ ನಟಿಸಿದ್ದು ಇತ್ತೀಚೆಗೆ ಭಾರತೀಯ ನಿರ್ಮಾಣದ “ಡ್ಯಾನಿ ಗೋಸ್ ಓಮ್” ನಲ್ಲಿ ನಾಯಕಿಯಾಗಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ