Delhi riots ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪಿತೂರಿ, ದೆಹಲಿ ಗಲಭೆ ಆ ಕ್ಷಣದ ಪ್ರಚೋದನೆಯಿಂದ ನಡೆದಿದ್ದಲ್ಲ: ಹೈಕೋರ್ಟ್

| Updated By: ರಶ್ಮಿ ಕಲ್ಲಕಟ್ಟ

Updated on: Sep 28, 2021 | 2:06 PM

Delhi High Court ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ದೆಹಲಿ ಪೊಲೀಸರು ಹೆಡ್ ಕಾನ್ಸ್ಟೇಬಲ್ ರತನ್ ಲಾಲ್ ಗಂಭೀರ ಗಾಯಗೊಂಡು ಸಾವಿಗೀಡಾಗಿದ್ದರು . ಪ್ರತಿಭಟನೆ ವೇಳೆ ಆರೋಪಿ ಮೊಹಮ್ಮದ್ ಇಬ್ರಾಹಿಂ ಖಡ್ಗ ಹಿಡಿದಿದ್ದ ಎನ್ನಲಾಗಿದೆ. ಲಾಲ್ ದೇಹದ ಮೇಲೆ ಆಳವಾದ ಗಾಯಗಳಿದ್ದರೂ ವರದಿಯ ಪ್ರಕಾರ ಅದು ಖಡ್ಗದಿಂದ ಸಂಭವಿಸಿಲ್ಲ.

Delhi riots ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪಿತೂರಿ, ದೆಹಲಿ ಗಲಭೆ ಆ ಕ್ಷಣದ ಪ್ರಚೋದನೆಯಿಂದ ನಡೆದಿದ್ದಲ್ಲ: ಹೈಕೋರ್ಟ್
ದೆಹಲಿ ಗಲಭೆ (ಸಂಗ್ರಹ ಚಿತ್ರ)
Follow us on

ದೆಹಲಿ: ದೆಹಲಿ ಹೈಕೋರ್ಟ್ (Delhi High Court )ಸೋಮವಾರ ಜಾಮೀನು ಆದೇಶದಲ್ಲಿ ಈಶಾನ್ಯ ದೆಹಲಿ ಗಲಭೆಗಳು “ಆ ಕ್ಷಣದ ಪ್ರಚೋದನೆಯಿಂದ ನಡೆದಿದ್ದಲ್ಲ”. ವಿಡಿಯೊಗಳ ಪ್ರಕಾರ ಪ್ರತಿಭಟನಾಕಾರರ ನಡವಳಿಕೆಯು ಸರ್ಕಾರದ ಕಾರ್ಯನಿರ್ವಹಣೆ ಹಾಗೂ ನಗರದ ಸಾಮಾನ್ಯ ಜೀವನವನ್ನು ಅಸ್ತವ್ಯಸ್ತಗೊಳಿಸುವುದಕ್ಕಾಗಿ “ಕಾರ್ಯನಿರ್ವಹಣೆಗೆ ಭಂಗ ತರವುದಾಗಿತ್ತು” ಎಂದು ಸ್ಪಷ್ಟವಾಗಿ ತೋರಿಸುತ್ತದೆ ಎಂದಿದೆ. “ಸಿಸಿಟಿವಿ ಕ್ಯಾಮೆರಾಗಳ ವ್ಯವಸ್ಥಿತ ಸಂಪರ್ಕ ಕಡಿತ ಮತ್ತು ಹಾಳು ಮಾಡಿರುವುದು ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪೂರ್ವ ಯೋಜಿತ ಮತ್ತು ಪೂರ್ವಯೋಜಿತ ಪಿತೂರಿ ಎಂಬುದನ್ನು ದೃಢಪಡಿಸುತ್ತದೆ. ಅಸಂಖ್ಯಾತ ಗಲಭೆಕೋರರು ನಿರ್ದಯವಾಗಿ ದೊಣ್ಣೆ, ಕೋಲು, ಬ್ಯಾಟ್ ಇತ್ಯಾದಿಗಳೊಂದಿಗೆ  ಅಧಿಕ ಸಂಖ್ಯೆಯಲ್ಲಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ ಎಂಬುದರಿಂದಲೂ ಇದು ಸ್ಪಷ್ಟವಾಗಿದೆ “ಎಂದು ನ್ಯಾಯಾಧೀಶ ಸುಬ್ರಮಣಿಯಮ್ ಪ್ರಸಾದ್ ಹೇಳಿದ್ದು ಕಳೆದ ವರ್ಷ ಬಂಧನಕ್ಕೊಳಗಾದ ಆರೋಪಿಗೆ ಜಾಮೀನು ನಿರಾಕರಿಸಿದರು.

ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ದೆಹಲಿ ಪೊಲೀಸರು ಹೆಡ್ ಕಾನ್ಸ್ಟೇಬಲ್ ರತನ್ ಲಾಲ್ ಗಂಭೀರ ಗಾಯಗೊಂಡು ಸಾವಿಗೀಡಾಗಿದ್ದರು . ಪ್ರತಿಭಟನೆ ವೇಳೆ ಆರೋಪಿ ಮೊಹಮ್ಮದ್ ಇಬ್ರಾಹಿಂ ಖಡ್ಗ ಹಿಡಿದಿದ್ದ ಎನ್ನಲಾಗಿದೆ. ಲಾಲ್ ದೇಹದ ಮೇಲೆ ಆಳವಾದ ಗಾಯಗಳಿದ್ದರೂ ವರದಿಯ ಪ್ರಕಾರ ಅದು ಖಡ್ಗದಿಂದ ಸಂಭವಿಸಿಲ್ಲ. ಇಬ್ರಾಹಿಂ ತಾನು ಮತ್ತು ತನ್ನ ಕುಟುಂಬವನ್ನು ರಕ್ಷಿಸಲು ಮಾತ್ರ ಖಡ್ಗವನ್ನು ಹೊತ್ತಿದ್ದ ಎಂದು ಆತನ ವಕೀಲರು ವಾದಿಸಿದ್ದರು. ಆರೋಪಿಯ ಕೈಯಲ್ಲಿರುವ ಆಯುಧವು ಗಂಭೀರ ಸಾಕ್ಷ್ಯವಾಗಿದ್ದು ಇದು ಗಂಭೀರವಾದ ಗಾಯಗಳು ಅಥವಾ  ಸಾವನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿದೆ. ಇದು ಬಲು ಅಪಾಯಕಾರಿ ಆಯುಧವಾಗಿದೆ” ಎಂದು ನ್ಯಾಯಾಲಯ  ಹೇಳಿದೆ.

“ಅರ್ಜಿದಾರ ಅಪರಾಧದ ಸ್ಥಳದಲ್ಲಿ ಕಾಣಿಸದೇ ಇದ್ದರೂ , ಅರ್ಜಿದಾರನು ಪ್ರಜ್ಞಾಪೂರ್ವಕವಾಗಿ ತನ್ನ ನೆರೆಹೊರೆಯಿಂದ 1.6 ಕಿಮೀ ದೂರದಲ್ಲಿ ಖಡ್ಗದೊಂದಿಗೆ ಪ್ರಯಾಣಿಸಿದ ಏಕೈಕ ಕಾರಣಕ್ಕಾಗಿ ಅವನು ಸ್ಪಷ್ಟವಾಗಿ ಗುಂಪಿನ ಭಾಗವಾಗಿದ್ದಾನೆ ಎಂದು ಈ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಖಡ್ಗವು ಹಿಂಸೆಯನ್ನು ಪ್ರಚೋದಿಸಲು ಮತ್ತು ಹಾನಿ ಮಾಡಲು ಮಾತ್ರ ಬಳಸಲಾಗುತ್ತದೆ ಎಂದು ನ್ಯಾಯಮೂರ್ತಿ ಪ್ರಸಾದ್ ಹೇಳಿದರು.

ನ್ಯಾಯಮೂರ್ತಿ ಪ್ರಸಾದ್ ಅವರು ಸೆಪ್ಟೆಂಬರ್ 8 ರಂದು ಐವರು ಆರೋಪಿಗಳಿಗೆ ಜಾಮೀನು ನೀಡಿದ್ದರು. ಈ ಹಕ್ಕನ್ನು ಚಲಾಯಿಸುವರ ಪ್ರತಿಭಟನೆಯು ಜೈಲು ವಾಸವನ್ನು ಸಮರ್ಥಿಸುವ ಅಸ್ತ್ರವಾಗಿ ಬಳಸಲಾಗುವುದಿಲ್ಲ ಎಂದು ಹೇಳಿತು.

ಸೋಮವಾರ ನೀಡಲಾದ ಆದೇಶದಲ್ಲಿ, “ಈ ನ್ಯಾಯಾಲಯವು ಈ ಹಿಂದೆ ಪ್ರಜಾಪ್ರಭುತ್ವದ ರಾಜಕೀಯದಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ಮಹತ್ವದ ಬಗ್ಗೆ ಅಭಿಪ್ರಾಯಪಟ್ಟಿದೆ, ಆದರೆ ನಿರ್ದಿಷ್ಟ ಸ್ವಾತಂತ್ರ್ಯವನ್ನು ಬೆದರಿಸುವ ರೀತಿಯಲ್ಲಿ ವೈಯಕ್ತಿಕ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಲಾಗುವುದಿಲ್ಲ ಎಂದು ನಿರ್ದಿಷ್ಟವಾಗಿ ಗಮನಿಸಬೇಕು. ಇತರ ವ್ಯಕ್ತಿಗಳಿಗೆ ನೋವುಂಟು ಮಾಡಲು ಪ್ರಯತ್ನಿಸುವ ಮೂಲಕ ಸುಸಂಸ್ಕೃತ ಸಮಾಜವನ್ನು ಅಸ್ಥಿರಗೊಳಿಸಬಾರದು ಎಂದು ನ್ಯಾಯಾಲಯ ಹೇಳಿದೆ .

ಪ್ರಕರಣದ ಮೂವರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿದೆ ಮತ್ತು 17 ತಿಂಗಳ ಸೆರೆವಾಸದ ನಂತರ ಸೋಮವಾರ ಜಾಮೀನು ಪಡೆದ ಮೊಹಮ್ಮದ್ ಸಲೀಂ ಖಾನ್ ಸೇರಿದಂತೆ ಎಂಟು ಮಂದಿಯನ್ನು ಬಿಡುಗಡೆ ಮಾಡಲು ಆದೇಶಿಸಿದೆ.  ಫೆಬ್ರವರಿ 24, 2020 ರಂದು ಚಾಂದ್ ಬಾಗ್ ಪ್ರದೇಶ ಮತ್ತು 25 ಫುಟಾ ರಸ್ತೆಯ ಬಳಿ ಜಮಾಯಿಸಿದ ಪ್ರತಿಭಟನಾಕಾರರಲ್ಲಿ ಆರೋಪಿಗಳು ಸೇರಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಗಲಭೆ ಪ್ರಕರಣದ ತನಿಖೆಯಲ್ಲಿ ಹಣ ಮತ್ತು ಸಮಯ ವ್ಯರ್ಥ; ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ

ಇದನ್ನೂ ಓದಿ: Bhabanipur bypolls ಭವಾನಿಪುರ ಉಪಚುನಾವಣೆಯ ಅರ್ಜಿ ವಜಾಗೊಳಿಸಿದ ಕಲ್ಕತ್ತಾ ಹೈಕೋರ್ಟ್; ನಿಗದಿತ ದಿನವೇ ನಡೆಯಲಿದೆ ಚುನಾವಣೆ

(Northeast Delhi riots did not take place in a spur of the moment says DELHI High Court)