AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Triple Talaq: ವರದಕ್ಷಿಣೆಯಾಗಿ 7 ಸೀಟಿನ ಕಾರು, 10 ಲಕ್ಷ ರೂ ನೀಡಲಿಲ್ಲ ಎಂದು ಪತ್ನಿಗೆ ತಲಾಖ್ ನೀಡಿದ ಪತಿ

ಪತಿಯೊಬ್ಬ ವರದಕ್ಷಿಣೆ ಬೇಡಿಕೆಯನ್ನು ಈಡೇರಿಸಲಿಲ್ಲ ಎನ್ನುವ ಕಾರಣಕ್ಕೆ ಪತ್ನಿಗೆ ತಲಾಖ್(Talaq) ನೀಡಿದ್ದಾನೆ. ಆತ 7 ಸೀಟಿನ ಕಾರು ಹಾಗೂ 10 ಲಕ್ಷ ರೂ ವರದಕ್ಷಿಣೆಯನ್ನು ಕೇಳಿದ್ದ ಆದರೆ ಪತ್ನಿಯ ಕುಟುಂಬದವರಿಗೆ ಅದನ್ನು ನೀಡಲು ಸಾಧ್ಯವಾಗಿಲ್ಲ ಹೀಗಾಗಿ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾನೆ.

Triple Talaq: ವರದಕ್ಷಿಣೆಯಾಗಿ 7 ಸೀಟಿನ ಕಾರು, 10 ಲಕ್ಷ ರೂ ನೀಡಲಿಲ್ಲ ಎಂದು ಪತ್ನಿಗೆ ತಲಾಖ್ ನೀಡಿದ ಪತಿ
ತಲಾಖ್Image Credit source: DNA India
Follow us
ನಯನಾ ರಾಜೀವ್
|

Updated on:Jul 05, 2023 | 2:46 PM

ಪತಿಯೊಬ್ಬ ವರದಕ್ಷಿಣೆ ಬೇಡಿಕೆಯನ್ನು ಈಡೇರಿಸಲಿಲ್ಲ ಎನ್ನುವ ಕಾರಣಕ್ಕೆ ಪತ್ನಿಗೆ ತಲಾಖ್(Talaq) ನೀಡಿದ್ದಾನೆ. ಆತ 7 ಸೀಟಿನ ಕಾರು ಹಾಗೂ 10 ಲಕ್ಷ ರೂ ವರದಕ್ಷಿಣೆಯನ್ನು ಕೇಳಿದ್ದ ಆದರೆ ಪತ್ನಿಯ ಕುಟುಂಬದವರಿಗೆ ಅದನ್ನು ನೀಡಲು ಸಾಧ್ಯವಾಗಿಲ್ಲ ಹೀಗಾಗಿ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾನೆ. ಸಂತ್ರಸ್ತೆ ಫರ್ಹೀನ್ ಪತಿ ಫೈಸಲ್ ಹಸನ್, ಅತ್ತೆ ಅಖ್ತರಿ ಬೇಗಂ, ಸೋದರ ಅದೀಬ್ ಹುಸೇನ್, ಅರಾಫತ್ ಮತ್ತು ಸೊಸೆ ಕೈನಾತ್ ವಿರುದ್ಧ ಉತ್ತರ ಪ್ರದೇಶದ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಫರ್ಹೀನ್ 2019 ರಲ್ಲಿ ಅಜಂಗಢ ರಾಮನಗರ ಕಾಲೋನಿ ನಿವಾಸಿ ಫೈಸಲ್ ಹಸನ್ ಅವರನ್ನು ವಿವಾಹವಾಗಿದ್ದರು. ಫರ್ಹೀನ್ ಪ್ರಕಾರ, ಪೋಷಕರು ನಾಲ್ಕು ಚಕ್ರದ ವಾಹನವನ್ನು ವರದಕ್ಷಿಣೆಯಾಗಿ ನೀಡಿದ್ದರು ಮತ್ತು 25 ಲಕ್ಷ ರೂ. ಕೂಡ ನೀಡಿದ್ದರು.

ಮತ್ತಷ್ಟು ಓದಿ:ತಲಾಖ್ ಕುರಿತು ಇನ್​ಸ್ಟಾಗ್ರಾಂನಲ್ಲಿ ರೀಲ್ಸ್​ ಮಾಡಿದ ಪತ್ನಿ, ರಿಯಲ್​ ಆಗಿಯೇ ತಲಾಖ್ ನೀಡಿದ ಪತಿ

ಕೆಲವು ದಿನಗಳ ನಂತರ, ಅವರು ಏಳು ಆಸನದ ಕಾರು ಮತ್ತು 10 ಲಕ್ಷ ನಗದು ಬೇಡಿಕೆಯನ್ನು ಪ್ರಾರಂಭಿಸಿದರು. ಬೇಡಿಕೆ ಈಡೇರದಿದ್ದಾಗ ಚಿತ್ರಹಿಂಸೆ ನೀಡುತ್ತಿದ್ದರು. ಜುಲೈ 13, 2022 ರಂದು, ಆಕೆಯ ಪತಿ ಮತ್ತು ಅತ್ತೆ ಅವರನ್ನು ಹೊಡೆದು ಮನೆಯಿಂದ ಹೊರಹಾಕಿದ್ದರು.

ಸಂತ್ರಸ್ತೆಯ ದೂರಿನ ಆಧಾರದ ಮೇಲೆ, ಉತ್ತರ ಪ್ರದೇಶ ಪೊಲೀಸರು ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯಿದೆ, 2019 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ, ಇದನ್ನು ತ್ರಿವಳಿ ತಲಾಖ್ ಕಾನೂನು ಎಂದು ಕರೆಯಲಾಗುತ್ತದೆ.

ತಾಯಿ ಮನೆಗೆ ಹೋಗುವಂತೆ ಒತ್ತಾಯಿಸಿದ್ದರು, ಅತ್ತೆ ಮತ್ತೆ ಪತಿ ಸ್ವಲ್ಪ ದಿನದ ಬಳಿಕ ಕರೆಯುತ್ತಾರೆ ಎಂದು ಭಾವಿಸಿದ್ದಳು, ಆದರೆ ಆಕೆಯ ನಂಬಿಕೆ ಸುಳ್ಳಾಗಿತ್ತು, ವರದಕ್ಷಿಣೆ ನೀಡದಿದ್ದರೆ ಮನೆಗೆ ವಾಪಸ್ ಬರುವಂತಿಲ್ಲ ಎಂದು ಪತಿ ಹೇಳಿದ್ದರು, ಜೂನ್ 18ರಂದು ತಲಾಖ್ ನೀಡಿದ್ದಾರೆ ಎಂದು ಮಹಿಳೆ ದೂರಿದ್ದಾಳೆ.

ಸಂತ್ರಸ್ತ ಮಹಿಳೆ ದೂರಿನ ಮೇರೆಗೆ ಪೊಲೀಸರು ಆರೋಪಿ ಪತಿ ಹಾಗೂ ಆತನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುದ್ದಿಯನ್ನು ಇಂಗ್ಲಿಷ್​ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:45 pm, Wed, 5 July 23

VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ