
ಫಿರೋಜ್‌ಪುರ, ಡಿಸೆಂಬರ್ 31: ಪಂಜಾಬ್‌ನ ಫಿರೋಜ್‌ಪುರದಲ್ಲಿ ಸೋಫಾದಿಂದ ಎದ್ದೇಳುವಾಗ ಸೊಂಟದಲ್ಲಿ ತುಂಬಿದ್ದ ಲೋಡ್ ಮಾಡಿದ ಪಿಸ್ತೂಲ್ನಿಂದ ಗುಂಡು ಹಾರಿ ಅನಿವಾಸಿ ಭಾರತೀಯ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಹರ್ಪಿಂದರ್ ಸಿಂಗ್ ಎಂಬ ವ್ಯಕ್ತಿ ಧನಿ ಸುಚಾ ಸಿಂಗ್ ಗ್ರಾಮದಲ್ಲಿ ಇತ್ತೀಚೆಗೆ ನೆಲೆಸಿದ್ದ ಅನಿವಾಸಿ ಭಾರತೀಯ. ಸೋಮವಾರ ಈ ಘಟನೆ ನಡೆದಿದೆ. ಮನೆಯೊಳಗೆ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ಘಟನೆ ಸೆರೆಯಾಗಿದೆ.
ಹರ್ಪಿಂದರ್ ಸಿಂಗ್ ಅವರು ತಮ್ಮ ಸಂಬಂಧಿಕರೊಂದಿಗೆ ಸೋಫಾದಲ್ಲಿ ಕುಳಿತಿದ್ದವರು ಎದ್ದು ನಿಂತಿದ್ದಾರೆ. ಆಗ ಆಕಸ್ಮಿಕವಾಗಿ ಪಿಸ್ತೂಲ್ ಸಿಡಿದು, ಗುಂಡು ಅವರ ಕಿಬ್ಬೊಟ್ಟೆಗೆ ತಗುಲಿತು ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡೇಟಿನ ಶಬ್ದ ಕೇಳಿದ ನಂತರ ಅವರ ಕುಟುಂಬದ ಸದಸ್ಯರು ಹರ್ಪಿಂದರ್ ಅವರನ್ನು ಕರೆದುಕೊಂಡು ಹೊರಗೆ ಓಡುವುದನ್ನು ಸಿಸಿಟಿವಿ ವಿಡಿಯೋದಲ್ಲಿ ನೋಡಬಹುದು. ತಕ್ಷಣ, ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳಿದರು. ಆದರೆ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು.
NRI died in Dhani Sucha Singh village with his holstered gun going off while he was rising from a sofa. The entire ordeal was recorded by the home’s #CCTV cameras.#viralVideo #punjab pic.twitter.com/HvuWpYSVXK
— Nomadic Nitin (@Niitz1) December 30, 2025
ಇದನ್ನೂ ಓದಿ: ನೆಲಮಂಗಲ: ಎಣ್ಣೆ ನಶೆಯಲ್ಲಿ ತಮಾಷೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕ
ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹರ್ಪಿಂದರ್ ಇತ್ತೀಚೆಗೆ ವಿದೇಶದಿಂದ ಹಿಂದಿರುಗಿ ವಿವಾಹವಾಗಿದ್ದರು. ಅವರಿಗೆ 2 ವರ್ಷದ ಹೆಣ್ಣು ಮಗುವಿದೆ. ಅವರ ಅಂತ್ಯಕ್ರಿಯೆಯನ್ನು ಇಂದು ಅವರ ಗ್ರಾಮದ ಅನೇಕ ಜನರ ಸಮ್ಮುಖದಲ್ಲಿ ನಡೆಸಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ