ಒಂದೇ ಶ್ವಾಸಕೋಶ ಹೊಂದಿದ್ದರೂ ಧೃತಿಗೆಡದೆ ಕೊರೊನಾ ವಿರುದ್ಧ ಹೋರಾಡಿದ ನರ್ಸ್​; ಹದಿನಾಲ್ಕೇ ದಿನಗಳಲ್ಲಿ ಸೋಂಕು ಮಾಯ

ಪ್ರಫುಲ್ಲಿತಾ ಪೀಟರ್ ಅವರನ್ನು ಟಿಕಾಮಾರ್ಗ್​ ಆಸ್ಪತ್ರೆಯಲ್ಲಿ ಕೊವಿಡ್​ 19 ಡ್ಯೂಟಿಗೆ ನಿಯೋಜಿಸಲಾಗಿತ್ತು. ರೋಗಿಗಳ ಸೇವೆ ಮಾಡುತ್ತಲೇ ಸೋಂಕಿಗೆ ಒಳಗಾಗಿದ್ದರು. ಪ್ರಫುಲಿತಾ ಪೀಟರ್​ಗೆ ಕೊರೊನಾ ಸೋಂಕು ತಗುಲುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ, ಅಲ್ಲಿನ ವೈದ್ಯರೆಲ್ಲ ತುಂಬ ಆತಂಕ ವ್ಯಕ್ತಪಡಿಸಿದ್ದರು.

ಒಂದೇ ಶ್ವಾಸಕೋಶ ಹೊಂದಿದ್ದರೂ ಧೃತಿಗೆಡದೆ ಕೊರೊನಾ ವಿರುದ್ಧ ಹೋರಾಡಿದ ನರ್ಸ್​; ಹದಿನಾಲ್ಕೇ ದಿನಗಳಲ್ಲಿ ಸೋಂಕು ಮಾಯ
ನರ್ಸ್ ಪ್ರಫುಲ್ಲಿತಾ ಪೀಟರ್​
Follow us
|

Updated on:May 13, 2021 | 5:51 PM

ಮಧ್ಯಪ್ರದೇಶದ ಈ ನರ್ಸ್​​ಗೆ ಇರುವುದು ಒಂದೇ ಶ್ವಾಸಕೋಶ. ಹಾಗಿದ್ದಾಗ ಕೊರೊನಾ ಸೋಂಕಿಗೆ ಒಳಗಾದಾಗ ಸಹಜವಾಗಿಯೇ ಆತಂಕ ಮನೆಮಾಡಿತ್ತು. ಆದರೆ ಈ ದಿಟ್ಟ ನರ್ಸ್​ ಸ್ವಲ್ಪವೂ ಹೆದರದೆ 14 ದಿನಗಳಲ್ಲಿ ಕೊರೊನಾ ಸೋಂಕನ್ನು ಮಣಿಸಿದ್ದಾರೆ. ಎರಡೇ ವಾರದಲ್ಲಿ ಇವರ ವರದಿ ನೆಗೆಟಿವ್​ ಬಂದಿದೆ. ನರ್ಸ್​ ಪ್ರಫುಲಿತ್ ಪೀಟರ್​ ಅವರು ಮಧ್ಯಪ್ರದೇಶದ ಟಿಕಾಮಾರ್ಗ್​ ಸಿವಿಲ್ ಆಸ್ಪತ್ರೆಯಲ್ಲಿ ಕೊರೊನಾಕ್ಕೆ ಚಿಕಿತ್ಸೆ ಪಡೆದಿದ್ದರು. ಬಾಲ್ಯದಲ್ಲಿ ಒಂದು ಅಪಘಾತವಾದ ನಂತರ ಒಂದೇ ಶ್ವಾಸಕೋಶ ಹೊಂದಿದ್ದ ಇವರಿಗೆ ಸೋಂಕು ತಗುಲಿದಾಗ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೂ ಆತಂಕ ಇದ್ದೇ ಇತ್ತು. ಚಿಕ್ಕವರಿದ್ದಾಗ ತನ್ನಲ್ಲಿನ ಒಂದು ಶ್ವಾಸಕೋಶವನ್ನು ತೆಗೆದಿದ್ದು ಇವರಿಗೆ 2014ರವರೆಗೂ ಗೊತ್ತಿರಲಿಲ್ಲ. 2014ರಲ್ಲಿ ಒಂದು ಬಾರಿ ಎದೆಯ ಎಕ್ಸ್​ ರೇ ಮಾಡಿದಾಗಷ್ಟೇ ಈ ವಿಚಾರ ಆಕೆಗೆ ತಿಳಿಯಿತು.

ಪ್ರಫುಲ್ಲಿತಾ ಪೀಟರ್ ಅವರನ್ನು ಟಿಕಾಮಾರ್ಗ್​ ಆಸ್ಪತ್ರೆಯಲ್ಲಿ ಕೊವಿಡ್​ 19 ಡ್ಯೂಟಿಗೆ ನಿಯೋಜಿಸಲಾಗಿತ್ತು. ರೋಗಿಗಳ ಸೇವೆ ಮಾಡುತ್ತಲೇ ಸೋಂಕಿಗೆ ಒಳಗಾಗಿದ್ದರು. ಪ್ರಫುಲಿತಾ ಪೀಟರ್​ಗೆ ಕೊರೊನಾ ಸೋಂಕು ತಗುಲುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ, ಅಲ್ಲಿನ ವೈದ್ಯರೆಲ್ಲ ತುಂಬ ಆತಂಕ ವ್ಯಕ್ತಪಡಿಸಿದ್ದರು. ಒಂದೇ ಶ್ವಾಸಕೋಶ ಇರುವ ಆಕೆಗೆ ಕೊರೊನಾ ವಿರುದ್ಧ ಹೋರಾಟ ಕಷ್ಟವಾಗಬಹುದು ಎಂದೇ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಪ್ರಫುಲ್ಲಿತಾ ಪೀಟರ್ ಸ್ವಲ್ಪವೂ ಹೆದರದೆ ಮನೆಯಲ್ಲೇ ಐಸೋಲೇಟ್ ಆದರು. ವೈದ್ಯರು ಹೇಳಿದ ಔಷಧಿಯ ಜತೆ ನಿರಂತರವಾಗಿ ಯೋಗ, ಪ್ರಾಣಾಯಾಮ, ಉಸಿರಾಟಕ್ಕೆ ಸಂಬಂಧಪಟ್ಟ ವ್ಯಾಯಾಮಗಳನ್ನು ಮಾಡಿದರು. ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ ಬಲೂನ್​ಗಳನ್ನೂ ಊದಿದರು. ಅವರ ಈ ಶ್ರಮ ವ್ಯರ್ಥವಾಗಲಿಲ್ಲ. ಕೇವಲ 14ದಿನಗಳಲ್ಲಿ ಪ್ರಫುಲ್ಲಿತಾ ಅವರ ಕೊವಿಡ್​ 19 ತಪಾಸಣೆ ವರದಿ ನೆಗೆಟಿವ್​ ಬಂತು.

ನಾನು ಮೊದಲ ಹಂತದಲ್ಲಿಯೇ ಎರಡೂ ಡೋಸ್ ಕೊವಿಡ್ 19 ಲಸಿಕೆ ಪಡೆದಿದ್ದೆ. ಹಾಗಾಗಿ ಈ ಸೋಂಕು ನನಗೇನೂ ಮಾಡುವುದಿಲ್ಲ ಎಂಬ ನಂಬಿಕೆ ಇತ್ತು. ಯೋಗ, ಪ್ರಾಣಾಯಾಮಗಳು ನನ್ನ ಕೈಹಿಡಿದವು ಎನ್ನುತ್ತಾರೆ ಪ್ರಫುಲ್ಲಿತಾ ಪೀಟರ್​.

ಇದನ್ನೂ ಓದಿ: ‘ಬಿಗ್​ ಬಾಸ್​ ಮನೆಯಲ್ಲಿ ನಾನು ನಾಗವಲ್ಲಿ ತರ ಆಗಿದ್ದೆ’; ಮನೆಯಿಂದ ಹೊರಬಂದ ರಘು ಹೇಳಿದ್ದಿಷ್ಟು

ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡಲಿದ್ದಾರೆ ಭಾರತದ ಮತ್ತಿಬ್ಬರು ಮಹಿಳಾ ಆಟಗಾರ್ತಿಯರು

Published On - 5:49 pm, Thu, 13 May 21

ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​