‘ಬಿಗ್​ ಬಾಸ್​ ಮನೆಯಲ್ಲಿ ನಾನು ನಾಗವಲ್ಲಿ ತರ ಆಗಿದ್ದೆ’; ಮನೆಯಿಂದ ಹೊರಬಂದ ರಘು ಹೇಳಿದ್ದಿಷ್ಟು

ಕಲರ್ಸ್ ಕನ್ನಡ ವಾಹಿನಿಯ ಸೋಶಿಯಲ್ ಮೀಡಿಯಾದಲ್ಲಿ ರಘು ಲೈವ್ ಬಂದಿದ್ದಾರೆ. ಈ ವೇಳೆ ಒಂದಷ್ಟು ವಿಚಾರದ ಬಗ್ಗೆ ಅವರು ಮಾತನಾಡಿದ್ದಾರೆ.

‘ಬಿಗ್​ ಬಾಸ್​ ಮನೆಯಲ್ಲಿ ನಾನು ನಾಗವಲ್ಲಿ ತರ ಆಗಿದ್ದೆ’; ಮನೆಯಿಂದ ಹೊರಬಂದ ರಘು ಹೇಳಿದ್ದಿಷ್ಟು
ರಘು ಗೌಡ
Follow us
ರಾಜೇಶ್ ದುಗ್ಗುಮನೆ
|

Updated on:May 13, 2021 | 6:05 PM

ರಘು ಗೌಡ ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಅರ್ಥವಾಗಿಲ್ಲ. ಆರಂಭದಲ್ಲಿ ತುಂಬಾನೇ ಕೊರಗಿದ್ದ ಅವರು, ಕಿಚ್ಚ ಸುದೀಪ್ ವಾರ್ನಿಂಗ್ ನೀಡಿದ ನಂತರ ತಿದ್ದಿಕೊಂಡರು. ಆದರೆ, ಕೊನೆಕೊನೆಗೆ ಮತ್ತೆ ಮೊದಲಿನಂತಾಗಿದ್ದರು. ಸಣ್ಣಸಣ್ಣ ವಿಚಾರಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದರು. ಈಗ ಅವರು ಮನೆಯಿಂದ ಹೊರ ಬಂದಮೇಲೆ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ‘ಬಿಗ್ ಬಾಸ್ ಮನೆಯಲ್ಲಿ ನಾನು ನಾಗವಲ್ಲಿ ರೀತಿ ಆಗಿದ್ದೆ’ ಎಂದು ರಘು ಹೇಳಿಕೊಂಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯ ಸೋಶಿಯಲ್ ಮೀಡಿಯಾದಲ್ಲಿ ರಘು ಲೈವ್ ಬಂದಿದ್ದಾರೆ. ಈ ವೇಳೆ ಒಂದಷ್ಟು ವಿಚಾರದ ಬಗ್ಗೆ ಅವರು ಮಾತನಾಡಿದ್ದಾರೆ. ನೀವು ಬಿಗ್ ಬಾಸ್ ಮನೆಯಲ್ಲಿ ಗೊಂದಲದಲ್ಲಿದ್ದಿರಿ. ನಿಮಗೆ ಕ್ಲ್ಯಾರಿಟಿ ಇತ್ತೇ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ರಘು, ‘ನನಗೆ ಜೀವನದಲ್ಲಿ ಕ್ಲ್ಯಾರಿಟಿ ಇದೆ. ನಾನು 8 ವರ್ಷ ಕೆಲಸ ಮಾಡಿದ್ದೇನೆ. 3 ವರ್ಷ ಎಂಟರ್ಟೇನ್ಮೆಂಟ್ ಫೀಲ್ಡ್​ನಲ್ಲೇ ಇದ್ದೆ. ಲೈಫ್​ನಲ್ಲಿ ಏನ್ ಮಾಡಬೇಕು ಅನ್ನೋದು ಕ್ಲಿಯರ್ ಆಗಿ ತಿಳಿದಿದೆ. ಬಿಗ್ ಬಾಸ್​ನಲ್ಲಿ ಮೇನ್ ನಾನು ನಾಗವಲ್ಲಿ ರೀತಿಯಲ್ಲಿ ಇದ್ದೆ. ರಘು ಆಗಿರಬೇಕೋ ಅಥವಾ ರಘು ವೈನ್ ಸ್ಟೋರ್ ಆಗಿರಬೇಕು ಎನ್ನುವ ದ್ವಂದ್ವದಲ್ಲೇ ಕಳೆದ’ ಎಂದರು.

‘ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನರು ಸೈಕೋ ಎಂದು ಕಮೆಂಟ್ ಮಾಡಿದ್ದರು. ಇದನ್ನು ನೋಡಿ ಬೇಸರವಾಗಿತ್ತು. ಬಿಗ್ ಬಾಸ್ ಮನೆಯಲ್ಲಿ ಗೊಂದಲ ಇತ್ತು. ಮೂಡ್ ಸ್ವಿಂಗ್ಸ್ ಜಾಸ್ತಿ ಇತ್ತು. ಅದಕ್ಕಾಗಿ ಸೈಕೋ ಎಂದು ಹೇಳುವುದು ಸರಿ ಅಲ್ಲ. ಈ ವಿಚಾರ ನನ್ನ ಮನೆಯವರ ಮೇಲೆ ಹೆಚ್ಚು ಇಂಪ್ಯಾಕ್ಟ್ ಮಾಡಿದೆ’ ಎಂದರು ರಘು.

ಬಿಗ್​ ಬಾಸ್​ ವೇದಿಕೆ ಏರಿಬಂದ ಮೇಲೆ ಅದೃಷ್ಟ ಬದಲಾಗುತ್ತದೆ ಎಂಬುದು ಸಾಕಷ್ಟು ಬಾರಿ ಸಾಬೀತಾಗಿದೆ. ಈ ಮೊದಲ ಏಳು ಸೀಸನ್​ಗಳಲ್ಲಿ ಕಾಣಿಸಿಕೊಂಡ ಸಾಕಷ್ಟು ಮಂದಿಯ ಲಕ್​ ಬದಲಾಗಿದೆ. ಈ ಬಾರಿಯ ಬಿಗ್​ ಬಾಸ್​ ಅರ್ಧಕ್ಕೆ ನಿಂತಿದ್ದರಿಂದ ಮನೆಯಲ್ಲಿದ್ದ 11 ಸ್ಪರ್ಧಿಗಳು ತಮ್ಮ ಮನೆ ಸೇರಿದ್ದಾರೆ. ಬಿಗ್​ ಬಾಸ್​ ಮನೆಯಿಂದ ಹೊರ ಬಂದ ಬೆನ್ನಲ್ಲೇ ರಘು ಗೌಡ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ ಎಂದು ಘೋಷಣೆ ಮಾಡಿದ್ದರು. ಅವರು ‘ದ್ವಿಪಾತ್ರ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: Raghu Gowda: ರಘು ಗೌಡಗೆ ಸಿನಿಮಾ ಆಫರ್​; ‘ದ್ವಿಪಾತ್ರ’ದಲ್ಲಿ ಕನ್ನಡ ಬಿಗ್​ ಬಾಸ್​ ಸ್ಪರ್ಧಿ

ಹೆಂಡತಿ ಮಾತು ಕೇಳಿ ಬಿಗ್​ ಬಾಸ್​ ಮನೆಯಲ್ಲಿ ಮಜಾ ಮಾಡಿದೆ, ಆದರೆ; ರಘುಗೆ ಸ್ಟಾರ್ಟ್​ ಆಯ್ತು ಆತಂಕ

Published On - 5:33 pm, Thu, 13 May 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ