ನನ್ನ ಟ್ವೀಟ್‌ಗಳು ಮಾನವೀಯತೆಗೆ ಸಂಬಂಧಿಸಿದ್ದಾಗಿದೆ: ಕಂಗನಾ ಪೋಸ್ಟ್​ಗೆ ಇರ್ಫಾನ್ ಪಠಾಣ್ ಖಡಕ್ ರಿಪ್ಲೆ

ರ್ಫಾನ್ ಪಠಾಣ್ ಅವರಿಗೆ ಇತರ ದೇಶದ ಬಗ್ಗೆ ತುಂಬಾ ಪ್ರೀತಿ ಇದೆ, ಆದರೆ ತಮ್ಮದೇ ದೇಶದಲ್ಲಿರುವ ಬಂಗಾಳದ ಬಗ್ಗೆ ಟ್ವೀಟ್ ಹಾಕಲು ಸಾಧ್ಯವಾಗಲಿಲ್ಲ ಎಂದು ಕಂಗನಾ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ನನ್ನ ಟ್ವೀಟ್‌ಗಳು ಮಾನವೀಯತೆಗೆ ಸಂಬಂಧಿಸಿದ್ದಾಗಿದೆ: ಕಂಗನಾ ಪೋಸ್ಟ್​ಗೆ ಇರ್ಫಾನ್ ಪಠಾಣ್ ಖಡಕ್ ರಿಪ್ಲೆ
ಕಂಗನಾ ರನೌತ್, ಇರ್ಫಾನ್ ಪಠಾಣ್
Follow us
ಪೃಥ್ವಿಶಂಕರ
|

Updated on: May 13, 2021 | 6:22 PM

ಈ ದಿನಗಳಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಯುದ್ಧವು ಪ್ರಪಂಚದಾದ್ಯಂತ ಬಾರಿ ಸುದ್ದಿ ಮಾಡುತ್ತಿದೆ. ಪ್ಯಾಲೆಸ್ಟೈನ್​ನಲ್ಲಿ ಹಿಂಸಾಚಾರ ಮುಂದುವರೆದಿದೆ. ಈ ವಿಷಯದ ಬಗ್ಗೆ ವಿಶ್ವದಾದ್ಯಂತ ಜನರು ಪ್ಯಾಲೆಸ್ಟೈನ್ ಅನ್ನು ಬೆಂಬಲಿಸುತ್ತಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ಪ್ಯಾಲೆಸ್ಟೈನ್ ಅನ್ನು ಬೆಂಬಲಿಸಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆದರೆ, ಬಾಲಿವುಡ್ ನಟಿ ಕಂಗನಾ ರನೌತ್​ಗೆ ಇರ್ಫಾನ್ ಪ್ಯಾಲೆಸ್ಟೈನ್​ನನ್ನು ಬೆಂಬಲಿಸುತ್ತಿರುವುದು ಇಷ್ಟವಾಗಲಿಲ್ಲ ಎಂದು ತೋಚುತ್ತದೆ. ಆದರಿಂದ ಅವರು ಇರ್ಫಾನ್ ಅವರ ಟ್ವೀಟ್ ಅನ್ನು ಗುರಿಯಾಗಿಸಿಕೊಂಡು ಪಠಾಣ್ ಮೇಲೆ ಮಾತಿನ ಯುದ್ಧ ಆರಂಭಿಸಿದ್ದಾರೆ.

ಪ್ಯಾಲೆಸ್ಟೈನ್​ನಲ್ಲಿ ಈ ಯುದ್ಧದಲ್ಲಿ ಅನೇಕ ಮಕ್ಕಳು ಮತ್ತು ಜನರು ಸಾಯುತ್ತಿರುವ ವರದಿಗಳಿವೆ. ಮಂಗಳವಾರ, ಇಸ್ರೇಲ್ ಹಮಾಸ್‌ನ ರಾಜಕೀಯ ವಿಂಕ್‌ನ ಅಧಿಕಾರಿಯ ಮೇಲೆ ಹಲ್ಲೆ ನಡೆಸಿ 13 ಅಂತಸ್ತಿನ ಕಟ್ಟಡವನ್ನು ನೆಲಸಮ ಮಾಡಿದೆ. ಉಭಯ ದೇಶಗಳ ನಡುವಿನ ಈ ಯುದ್ಧವು 2021 ಮೇ 9 ರ ಭಾನುವಾರದಿಂದ ಪ್ರಾರಂಭವಾಯಿತು ಎಂದು ಊಹಿಸಲಾಗಿದೆ. ಎರಡೂ ಕಡೆಯಿಂದ ರಾಕೆಟ್ ದಾಳಿ ಮುಂದುವರೆದಿದೆ. 1966 ರ ನಂತರ ಮೊದಲ ಬಾರಿಗೆ ಲಾಡ್ ನಗರದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ವಿಧಿಸಲಾಗಿದೆ.

ಇರ್ಫಾನ್ ಅವರ ಟ್ವೀಟ್‌ನಿಂದ ಕಂಗನಾ ಕೋಪ ಇರ್ಫಾನ್ ಮಂಗಳವಾರ ಟ್ವೀಟ್ ಮಾಡುವ ಮೂಲಕ ಪ್ಯಾಲೆಸ್ಟೈನ್ ಅನ್ನು ಬೆಂಬಲಿಸಿದ್ದಾರೆ. ನೀವು ಸ್ವಲ್ಪ ಮಾನವೀಯತೆಯನ್ನು ಹೊಂದಿದ್ದರೆ, ಪ್ಯಾಲೆಸ್ಟೈನ್​ನಲ್ಲಿ ಏನು ನಡೆಯುತ್ತಿದೆಯೋ ಅದನ್ನು ನೀವು ಬೆಂಬಲಿಸುವುದಿಲ್ಲ ಎಂದು ಅವರು ಟ್ವೀಟ್ ಮಾಡಿದ್ದರು.

ಬಂಗಾಳದ ಬಗ್ಗೆ ಟ್ವೀಟ್ ಹಾಕಲು ಸಾಧ್ಯವಾಗಲಿಲ್ಲ ಇರ್ಫಾನ್ ಅವರ ಈ ಟ್ವೀಟ್​ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ತಿರುಗೇಟು ನೀಡಿರುವ ಕಂಗನಾ ರನೌತ್, ಇರ್ಫಾನ್ ಪಠಾಣ್ ಅವರಿಗೆ ಇತರ ದೇಶದ ಬಗ್ಗೆ ತುಂಬಾ ಪ್ರೀತಿ ಇದೆ, ಆದರೆ ತಮ್ಮದೇ ದೇಶದಲ್ಲಿರುವ ಬಂಗಾಳದ ಬಗ್ಗೆ ಟ್ವೀಟ್ ಹಾಕಲು ಸಾಧ್ಯವಾಗಲಿಲ್ಲ ಎಂದು ಕಂಗನಾ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಕಂಗನಾ ಅವರ ಈ ಪ್ರತಿಕ್ರಿಯೆಯಿಂದ ಅಸಮಾದಾನಗೊಮಡಿರುವ ಇರ್ಫಾನ್ ಪಠಾಣ್, ಈ ರೀತಿಯ ಹೇಳಿಕೆಗಳಿಂದಾಗಿ ಅವರ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಸರಿಯಾದ ತಿರುಗೇಟು ನೀಡಿದ್ದಾರೆ.

ಕಂಗನಾ ಪೋಸ್ಟ್‌

ಮಾನವೀಯತೆ ಅಥವಾ ದೇಶವಾಸಿಗಳಿಗೆ ಸಂಬಂಧಿಸಿದ್ದಾಗಿರುತ್ತದೆ ನನ್ನ ಎಲ್ಲಾ ಟ್ವೀಟ್‌ಗಳು ಮಾನವೀಯತೆ ಅಥವಾ ದೇಶವಾಸಿಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಇದರಲ್ಲಿ, ದೇಶವನ್ನು ಉನ್ನತ ಮಟ್ಟದಲ್ಲಿ ಪ್ರತಿನಿಧಿಸಿದ ವ್ಯಕ್ತಿಯ ದೃಷ್ಟಿಕೋನವಿದೆ. ಆದರೆ ದೇಶದಲ್ಲಿ ದ್ವೇಷ ಬೀಜ ಬಿತ್ತಿ ಟ್ವಿಟರ್​ನಿಂದ ಅಮಾನತಿಗೊಳಗಾದ ಕಂಗನಾ ಅವರಂತಹ ವ್ಯಕ್ತಿಗಳಿಂದ ನಾನು ಇಂತಹ ಮಾತುಗಳನ್ನು ಕೇಳಬೇಕಾಗಿದೆ ಎಂದರು.

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ