ಟೆಸ್ಟ್ ಸರಣಿಯ ಹೀನಾಯ ಸೋಲಿಗೆ ಭಾರತದ ಮೇಲೆ ಗೂಬೆ ಕೂರಿಸಿದ ಆಸಿಸ್ ನಾಯಕ ಟಿಮ್ ಪೈನ್
ಸರಣಿಯ ಸಮಯದಲ್ಲಿ ಭಾರತೀಯ ತಂಡ ತಮ್ಮ ಗಮನವನ್ನು ಬೇರೆಡೆ ಸೆಳೆಯಿತು. ಇದರಿಂದಾಗಿ ಅವರು ಸೋಲನ್ನು ಎದುರಿಸಬೇಕಾಯಿತು ಎಂದು ಟಿಮ್ ಪೈನ್ ಹೇಳಿಕೆ ನೀಡಿದ್ದಾರೆ.
ಆಸ್ಟ್ರೇಲಿಯಾದ ಟೆಸ್ಟ್ ತಂಡದ ನಾಯಕ ಟಿಮ್ ಪೈನ್ ಭಾರತದ ವಿರುದ್ಧ ಟೆಸ್ಟ್ ಸರಣಿಯನ್ನು ಕಳೆದುಕೊಂಡಿರುವ ಬಗ್ಗೆ ಈಗ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ. ಸರಣಿಯ ಸಮಯದಲ್ಲಿ ಭಾರತೀಯ ತಂಡ ತಮ್ಮ ಗಮನವನ್ನು ಬೇರೆಡೆ ಸೆಳೆಯಿತು. ಇದರಿಂದಾಗಿ ಅವರು ಸೋಲನ್ನು ಎದುರಿಸಬೇಕಾಯಿತು ಎಂದು ಟಿಮ್ ಪೈನ್ ಹೇಳಿಕೆ ನೀಡಿದ್ದಾರೆ. ಭಾರತದ ವಿರುದ್ಧದ ಸರಣಿಯ ಬಗ್ಗೆ ಮಾತನಾಡಿದ ಟಿಮ್ ಪೈನ್, ಟೀಂ ಇಂಡಿಯಾ ನಿಮ್ಮ ಗಮನವನ್ನು ಬೇರೆಡೆ ಸೆಳೆಯುವಲ್ಲಿ ಪರಿಣತರಾಗಿದ್ದಾರೆ. ನಾವು ಅದರಲ್ಲಿ ಸಿಲುಕಿಕೊಂಡೆವು. ಟೀಂ ಇಂಡಿಯಾ ಗಬಾದಲ್ಲಿ ಆಡುವುದಿಲ್ಲ ಎಂಬ ಮಾತುಗಳು ಕೇಳಿಬಂದವು, ಆದರಿಂದ ನಾವು ಮುಂದಿನ ಪಂದ್ಯವನ್ನು ಎಲ್ಲಿ ಆಡುತ್ತೇವೆ ಎಂದು ನಮಗೆ ತಿಳಿದಿರಲಿಲ್ಲ. ಹೀಗಾಗಿ ಈ ವಿಚಾರ ನಮ್ಮ ಗಮನವನ್ನು ಬದಲಾಯಿಸಿತು ಎಂದಿದ್ದಾರೆ.
ಟೀಂ ಇಂಡಿಯಾ ಮೇಲೆ ಆಪಾದನೆ ಮಾಡಿದ್ದಾರೆ ಬ್ರಿಸ್ಬೇನ್‌ನ ಕಠಿಣ ಕ್ವಾರಂಟೈನ್ ನಿಯಮಗಳಿಂದಾಗಿ ಆ ಪ್ರವಾಸದಲ್ಲಿ ಭಾರತ ತಂಡವು ಬ್ರಿಸ್ಬೇನ್‌ನಲ್ಲಿ ಆಡಲು ಒಪ್ಪುತ್ತಿಲ್ಲ ಎಂಬ ಊಹಾಪೋಹಗಳು ಇದ್ದವು. ಆದರೆ ಅಲ್ಲಿ ನಡೆದ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಇತಿಹಾಸ ಸೃಷ್ಟಿಸಿತು. ಆದರೆ ಆಸಿಸ್ ನಾಯಕ ತಮ್ಮ ಸೋಲಿನ ಹೊರೆಯನ್ನು ತಾವು ಹೊರದೆ ಟೀಂ ಇಂಡಿಯಾ ಮೇಲೆ ಆಪಾದನೆ ಮಾಡಿದ್ದಾರೆ. ಆ ಸರಣಿಯಲ್ಲಿ ಭಾರತ ತಂಡವು ಅದ್ಭುತ ಆಟವನ್ನು ಆಡಿದೆ ಎಂಬುದನ್ನು ಟಿಮ್ ಗಮನಸಿಲ್ಲ ಎಂದು ಕಾಣುತ್ತದೆ. ಟೀಂ ಇಂಡಿಯಾದಲ್ಲಿ ಮುಖ್ಯ ಆಟಗಾರರ ಅಲಭ್ಯದ ವೇಳೆ ಯುವ ಆಟಗಾರರು ಉತ್ತಮ ಪ್ರದರ್ಶನ ತೋರಿದರು. ಅಲ್ಲದೆ, ರಿಷಭ್ ಪಂತ್ ಅದ್ಭುತ ಬ್ಯಾಟಿಂಗ್ ಮಾಡಿದಲ್ಲದೆ ಗೆಲುವನ್ನು ಆಸಿಸ್ ಕೈ ಇಂದ ಕಿತ್ತುಕೊಂಡರು.
ಪೈನ್ ನಾಯಕತ್ವದ ಸೋಲು ಸರಣಿಯ ಸೋಲಿನೊಂದಿಗೆ ಪ್ರಾರಂಭವಾಯಿತು ಟಿಮ್ ಪೈನ್ ಆಸಿಸ್ ತಂಡದ ನಾಯಕತ್ವವನ್ನು 2018 ರಲ್ಲಿ ವಹಿಸಿಕೊಂಡರು. ಪಾಕಿಸ್ತಾನದ ವಿರುದ್ಧ ಯುಎಇಯಲ್ಲಿ ಹಾಗೂ ಭಾರತದ ವಿರುದ್ಧ ತಮ್ಮದೇ ನೆಲದಲ್ಲಿ ಸೋಲುವ ಮೂಲಕ ಕಳಪೆ ಆರಂಭ ಪಡೆದರು. ಆದರೆ ಇದರ ನಂತರ, 2019 ರಲ್ಲಿ ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ, ಶ್ರೀಲಂಕಾ, ಇಂಗ್ಲೆಂಡ್, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ಗಳನ್ನು ಸೋಲಿಸಿತು. ಆದರೆ 2020 ರ ಕೊನೆಯಲ್ಲಿ, ರೋಮಾಂಚಕ ಪಂದ್ಯದಲ್ಲಿ ಭಾರತ ಅವರನ್ನು ಮತ್ತೆ ಸೋಲಿಸಿತು. ಮೊದಲ ಟೆಸ್ಟ್‌ನಲ್ಲಿ ಸೋತ ನಂತರ ಭಾರತ ಬಲವಾಗಿ ಪುಟಿದೇಳುವ ಮೂಲಕ ಸರಣಿಯನ್ನು 2-1ರಿಂದ ಗೆದ್ದುಕೊಂಡಿತು.
2018 ರಲ್ಲಿ, ಸ್ಟೀವ್ ಸ್ಮಿತ್ ಬದಲಿಗೆ ಪೈನ್‌ಗೆ ನಾಯಕತ್ವವನ್ನು ನೀಡಲಾಯಿತು. ವಾಸ್ತವವಾಗಿ, 2018 ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಆಡಿದ ಟೆಸ್ಟ್ ಪಂದ್ಯವೊಂದರಲ್ಲಿ ಸ್ಟೀವ್ ಸ್ಮಿತ್‌ಗೆ ಬಾಲ್ ಟೆಂಪರಿಂಗ್ ಅಪರಾದದಲ್ಲಿ 12 ತಿಂಗಳು ನಿಷೇಧ ಹೇರಲಾಯಿತು, ನಂತರ ಪೈನ್‌ನನ್ನು ಆಸ್ಟ್ರೇಲಿಯಾದ ಹೊಸ ನಾಯಕನನ್ನಾಗಿ ಮಾಡಲಾಯಿತು.