AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಕೆಟ್ ದುನಿಯಾಕ್ಕೆ ಹೆಲಿಕಾಪ್ಟರ್ ಶಾಟ್ ಪರಿಚಯಿಸಿದ್ದು ಧೋನಿಯಲ್ಲ! ವಿಡಿಯೋ ನೋಡಿ

ಮೊದಲ ನಾಲ್ಕು ಬೌಂಡರಿ ಬಾರಿಸಿದ ಅಜರ್, ಕ್ಲೂಸ್ನರ್ ಐದನೇ ಬಾಲ್​ನಲ್ಲಿ ಹೆಲಿಕಾಪ್ಟರ್ ಶಾಟ್ ಮೂಲಕ ಬೌಂಡರಿಗಟ್ತಾರೆ. ಆದ್ರೆ ಆವತ್ತು ಕಾಮಂಟೇಟರ್​ಗಳಾಗಲಿ.. ಕ್ರಿಕೆಟ್ ಪ್ರೇಮಿಗಳಾಗಲಿ ಹೆಚ್ಚಾಗಿ ಗಮನಿಸಿಲ್ಲ.

ಕ್ರಿಕೆಟ್ ದುನಿಯಾಕ್ಕೆ ಹೆಲಿಕಾಪ್ಟರ್ ಶಾಟ್ ಪರಿಚಯಿಸಿದ್ದು ಧೋನಿಯಲ್ಲ! ವಿಡಿಯೋ ನೋಡಿ
ಮೊಹಮ್ಮದ್ ಅಜರುದ್ದೀನ್, ಮಹೇಂದ್ರ ಸಿಂಗ್ ಧೋನಿ
Follow us
ಪೃಥ್ವಿಶಂಕರ
|

Updated on:May 14, 2021 | 2:51 PM

ಕ್ರಿಕೆಟ್ ದುನಿಯಾಕ್ಕೆ ಹೆಲಿಕಾಪ್ಟರ್ ಶಾಟ್ ಪರಿಚಯಿಸಿದ ಕೀರ್ತಿ ಮಹೇಂದ್ರ ಸಿಂಗ್ ಧೋನಿಗೆ ಸಲ್ಲುತ್ತೆ. ಆದ್ರೆ ಧೋನಿಗಿಂತ ಮುಂಚೆ, ಭಾರತದ ಮತ್ತೋಬ್ಬ ಮಹಾನ್ ನಾಯಕ ಹೆಲಿಕಾಪ್ಟರ್ ಹಾರಿಸಿದ್ದ. ಡಿಫರೆಂಟ್ ಶಾಟ್​ನಲ್ಲಿ ಮುಂಚೂಣಿಯಲ್ಲಿ ನಿಲ್ಲೋದೇ ನಮ್ಮ ಮಹೇಂದ್ರ ಸಿಂಗ್ ಧೋನಿ ಹೆಲಿಕಾಪ್ಟರ್ ಶಾಟ್.. ಧೋನಿ ಸಿಡಿಸೋ ಶಾಂದಾರ್ ಹೆಲಿಕಾಪ್ಟರ್ ಶಾಟ್​ಗೆ ಸರಿಸಮನಾದ ಯಾವ ಶಾಟೂ ಇಲ್ಲ.. ಅಷ್ಟರ ಮಟ್ಟಿಗೆ ಮಹೇಂದ್ರ ಹೆಲಿಕಾಪ್ಟರ್ ಅನ್ ಟೆಕ್ ಆಫ್ ಮಾಡ್ತಾರೆ.

ಧೋನಿ ಶಾಟ್ ಅನ್ನ ಕಾಪಿ ಮಾಡೋದಕ್ಕೆ ಸಾಧ್ಯವಾಗ್ಲಿಲ್ಲ ನಾವ್ಯಾಕೆ ಮಹೇಂದ್ರ ಸಿಂಗ್ ಧೋನಿಯ ಈ ಹೆಲಿಕಾಪ್ಟರ್ ಬಗ್ಗೆ ಹೇಳ್ತಿದ್ದೀವಿ ಅಂದ್ರೆ, ಈಗಾಗಲೇ ಸಾಕಷ್ಟು ಕ್ರಿಕೆಟಿಗರು ಧೋನಿಯ ಹೆಲಿಕಾಪ್ಟರ್ ಶಾಟ್ ಹೊಡೆಯೋಕೆ ಪ್ರಯತ್ನ ಮಾಡಿದ್ದಾರೆ. ಆದ್ರೆ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಎಡವಿದ್ದಾರೆ. ಅಂದ್ರೆ ಕಂಪ್ಲೀಟ್ ಆಗಿ ಧೋನಿ ಶಾಟ್ ಅನ್ನ ಕಾಪಿ ಮಾಡೋದಕ್ಕೆ ಸಾಧ್ಯವಾಗ್ಲಿಲ್ಲ.

ಮಹೇಂದ್ರ ಈ ಹೆಲಿಕಾಪ್ಟರ್ ಹಾರಿಸೋದನ್ನ ಕಲಿತಿದ್ದು ತಮ್ಮ ಗೆಳೆಯ ಸಂತೋಷ್​ನಿಂದ. ಧೋನಿಯ ಹೆಲಿಕಾಪ್ಟರ್ ಇವತ್ತು ಕ್ರಿಕೆಟ್ ಲೋಕದಲ್ಲಿ ಸಿಗ್ನಿಚರ್ ಶಾಟ್ ಆಗುಳಿದಿದೆ. ಆದ್ರೆ ಧೋನಿಗಿಂತ ಮೊದಲು ಈ ಹೆಲಿಕಾಪ್ಟರ್ ಅನ್ನ ಹಾರಿಸಿದ್ದು ಭಾರತ ತಂಡದ ಮತ್ತೊಬ್ಬ ನಾಯಕ ಮೊಹಮ್ಮದ್ ಅಜರುದ್ದೀನ್..

ಐದನೇ ಬಾಲ್​ನಲ್ಲಿ ಹೆಲಿಕಾಪ್ಟರ್ ಶಾಟ್ 90ರ ದಶಕದಲ್ಲಿ ಭಾರತೀಯ ಕ್ರಿಕೆಟ್​ನ ಮುಕುಟಮಣಿಯಾಗಿ ಮಿಂಚಿದ ಮೊಹಮ್ಮದ್ ಅಜರುದ್ದೀನ್. 1996ರಲ್ಲಿ ಮೊಹಮ್ಮದ್ ಅಜರುದ್ದೀನ್ ದಕ್ಷಿಣ ಆಫ್ರಿಕಾ ವಿರುದ್ಧದ ಕೊಲ್ಕತ್ತಾ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ರು. ಈ ಪಂದ್ಯದಲ್ಲಿ ಅಜರ್, ದಕ್ಷಿಣ ಆಫ್ರಿಕಾದ ಲ್ಯಾನ್ಸ್ ಕ್ಲೂಸ್ನರ್ ಒಂದೇ ಓವರ್​ನಲ್ಲಿ ಐದು ಬೌಂಡರಿ ಬಾರಿಸ್ತಾರೆ.

ಮೊದಲ ನಾಲ್ಕು ಬೌಂಡರಿ ಬಾರಿಸಿದ ಅಜರ್, ಕ್ಲೂಸ್ನರ್ ಐದನೇ ಬಾಲ್​ನಲ್ಲಿ ಹೆಲಿಕಾಪ್ಟರ್ ಶಾಟ್ ಮೂಲಕ ಬೌಂಡರಿಗಟ್ತಾರೆ. ಆದ್ರೆ ಆವತ್ತು ಕಾಮಂಟೇಟರ್​ಗಳಾಗಲಿ.. ಕ್ರಿಕೆಟ್ ಪ್ರೇಮಿಗಳಾಗಲಿ ಹೆಚ್ಚಾಗಿ ಗಮನಿಸಿಲ್ಲ. ಆದ್ರೀಗ ಹೆಲಿಕಾಪ್ಟರ್ ಶಾಟ್​ ಅನ್ನ ಧೋನಿಗಿಂತ ಮುಂಚೆ ಕ್ರಿಕೆಟ್ ದುನಿಯಾಕ್ಕೆ ಪರಿಚಯಿಸಿದ್ದು ಅಜರುದ್ದೀನ್..

ಇವತ್ತು ಧೋನಿ ಹೆಲಿಕಾಪ್ಟರ್ ಹಾರಿಸೋದ್ರಲ್ಲಿ ಪಂಟರ್ ಅಂತಾ ಹೆಸರು ಮಾಡಿದ್ದಾರೆ ನಿಜ. ಆದ್ರೆ ಧೋನಿಗಿಂತ ಮುಂಚೆ ಕ್ರಿಕೆಟ್ ದುನಿಯಾಕ್ಕೆ ಹೆಲಿಕಾಪ್ಟರ್ ಶಾಟ್ ಪರಿಚಯಿಸಿದ್ದು ಅಜರುದ್ದೀನ್ ಅನ್ನೋದನ್ನ ಯಾರೂ ಅಲ್ಲಗೆಳಯುವ ಹಾಗಿಲ್ಲ.

Published On - 2:50 pm, Fri, 14 May 21