Baba Ramdev: ಬಾಬಾ ರಾಮ್​ದೇವ್​ರ ಅಸಭ್ಯ ಕಾರ್ಟೂನ್ ರಚನೆ: ಇಬ್ಬರು ವ್ಯಂಗ್ಯಚಿತ್ರಕಾರರ ವಿರುದ್ಧ ಪ್ರಕರಣ ದಾಖಲು

ಯೋಗ ಗುರು ಬಾಬಾ ರಾಮ್‌ದೇವ್ ಅವರ ಅಶ್ಲೀಲ ಕಾರ್ಟೂನ್​ಗಳನ್ನು ರಚನೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡಿದ್ದ ಆರೋಪದ ಮೇಲೆ ಡೆಹ್ರಾಡೂನ್ ಮೂಲದ ಇಬ್ಬರು ವ್ಯಂಗ್ಯಚಿತ್ರಕಾರರ ವಿರುದ್ಧ ಪ್ರಕರಣ ದಾಖಲಾಗಿದೆ.

Baba Ramdev: ಬಾಬಾ ರಾಮ್​ದೇವ್​ರ ಅಸಭ್ಯ ಕಾರ್ಟೂನ್ ರಚನೆ: ಇಬ್ಬರು ವ್ಯಂಗ್ಯಚಿತ್ರಕಾರರ ವಿರುದ್ಧ ಪ್ರಕರಣ ದಾಖಲು
Baba Ramdev
Updated By: ನಯನಾ ರಾಜೀವ್

Updated on: Dec 21, 2022 | 12:56 PM

ಹರಿದ್ವಾರ: ಯೋಗ ಗುರು ಬಾಬಾ ರಾಮ್‌ದೇವ್ ಅವರ ಅಶ್ಲೀಲ ಕಾರ್ಟೂನ್​ಗಳನ್ನು ರಚನೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡಿದ್ದ ಆರೋಪದ ಮೇಲೆ ಡೆಹ್ರಾಡೂನ್ ಮೂಲದ ಇಬ್ಬರು ವ್ಯಂಗ್ಯಚಿತ್ರಕಾರರ ವಿರುದ್ಧ ಪ್ರಕರಣ ದಾಖಲಾಗಿದೆ.
ಪತಂಜಲಿ ಯೋಗಪೀಠದ ಲೀಗಲ್ ಸೆಲ್ ನೀಡಿದ ದೂರಿನ ಆಧಾರದ ಮೇಲೆ ವ್ಯಂಗ್ಯಚಿತ್ರಕಾರರಾದ ಗಜೇಂದ್ರ ರಾವತ್ ಮತ್ತು ಹೇಮಂತ್ ಮಾಳವೀಯ ವಿರುದ್ಧ ಇಲ್ಲಿನ ಕಂಖಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕಂಖಾಲ್ ಪೊಲೀಸ್ ಠಾಣೆ ಪ್ರಭಾರಿ ಮುಖೇಶ್ ಚೌಹಾಣ್ ತಿಳಿಸಿದ್ದಾರೆ.

ಅಶ್ಲೀಲ ಪೋಸ್ಟರ್‌ಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವ ಮೂಲಕ ಯೋಗ ಗುರುವಿನ ಚಿತ್ರಕ್ಕೆ ಧಕ್ಕೆ ತಂದ ಆರೋಪ ಇವರಿಬ್ಬರ ಮೇಲಿದೆ ಎಂದರು.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಅವರ ವಿರುದ್ಧ ಐಪಿಸಿ ಸೆಕ್ಷನ್ 153ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರ ಪತ್ತೆಗೆ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ