ದಟ್ಟ ಮಂಜು: ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ, ಐವರು ಸಾವು, ಒಬ್ಬರಿಗೆ ಗಾಯ
ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಒಡಿಶಾದ ಗಂಜಾಂನಲ್ಲಿ ನಡೆದಿದೆ. ಗುರುವಾರ ರಾತ್ರಿ ಸೊರಡ ಸಮೀಪದ ಕೇಶರಿಪಟ್ಟಣದಲ್ಲಿ ಈ ಅಪಘಾತ ಸಂಭವಿಸಿದ್ದು, ಎರಡು ದ್ವಿಚಕ್ರ ವಾಹನಗಳಲ್ಲಿ ತಲಾ ಮೂವರು ಪ್ರಯಾಣಿಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.

ದಟ್ಟವಾದ ಮಂಜಿನಿಂದಾಗಿ ಗೋಚರತೆ ಕಡಿಮೆಯಾಗಿ ಅಪಘಾತ ಸಂಭವಿಸಿರುವ ಸಾಧ್ಯತೆಯಿದೆ ಎಂದು ಅವರು ಹೇಳಿದರು. ಮೃತರನ್ನು ಆಶುರಬಂದ್‌ನ ಶ್ರೀಕಾಂತ್ ಗೌಡ, ದುಲಾದದ ಮನೋಜ್ ಡಾಕುವಾ, ಗೋಪಾಲಪುರ ಸಶನ್‌ನ ಮಹೇಂದ್ರ ನಾಯಕ್, ಸೊರಡದ ಜಯಂತ್ ಬಡತ್ಯ ಮತ್ತು ಸನಾ ಸೊರಡದ ರಜನಿ ಗೌಡ ಎಂದು ಗುರುತಿಸಲಾಗಿದೆ. 43 ವರ್ಷದ ರಜನಿ ಅವರನ್ನು ಹೊರತುಪಡಿಸಿ ಉಳಿದವರೆಲ್ಲರೂ 30ರಿಂದ 35ರೊಳಗಿನವರು ಎಂಬುದು ತಿಳಿದುಬಂದಿದೆ.
ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಜಯಂತ್ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು ಓದಿ: Crime News: ಸಂಕ್ರಾಂತಿ ಹಬ್ಬದಂದೇ ಕರ್ನಾಟಕದ ವಿವಿಧೆಡೆ ಸಾಲು ಸಾಲು ಅಪಘಾತಗಳು
ಪಂಜಾಬ್ನಲ್ಲಿ 20 ವಾಹನಗಳ ನಡುವೆ ಸರಣಿ ಅಪಘಾತ ದಟ್ಟ ಮಂಜಿನಿಂದಾಗಿ ಗೋಚರತೆ ಕಡಿಮೆಯಿದ್ದ ಕಾರಣ 20ಕ್ಕೂ ಹೆಚ್ಚು ವಾಹನಗಳ ನಡುವೆ ಅಪಘಾತ ಸಂಭವಿಸಿರುವ ಘಟನೆ ಪಂಜಾಬ್ನಲ್ಲಿ ನಡೆದಿದೆ. ಖನ್ನಾ, ಉಪ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಶರ್ಮಾ ಮಾತನಾಡಿ, ಇಲ್ಲಿಂದ ಸುಮಾರು 20 ಕಿಮೀ ದೂರದಲ್ಲಿರುವ ದೋರಾಹಾ ಬಳಿ ಅಪಘಾತ ಸಂಭವಿಸಿದೆ.
ಹಲವು ಕಾರುಗಳು ಮತ್ತು ಟ್ರಕ್‌ಗಳು ಜಖಂಗೊಂಡ ಅಪಘಾತದಲ್ಲಿ ಯಾವುದೇ ಪ್ರಯಾಣಿಕರಿಗೆ ಹೆಚ್ಚಿನ ಗಾಯಗಳಾಗಿಲ್ಲ ಎಂದು ಅವರು ಹೇಳಿದರು.
ಅನೇಕ ಜನರು ತಮ್ಮ ಹಾನಿಗೊಳಗಾದ ವಾಹನಗಳೊಂದಿಗೆ ಓಡಿಸಿದ್ದರಿಂದ ಮೊದಲು ಅಪಘಾತಕ್ಕೆ ಒಳಗಾದ ವಾಹನ ಯಾವುದು ಎಂದು ಕಂಡುಹಿಡಿಯುವುದು ತುಂಬಾ ಕಷ್ಟ ಎಂದು ಡಿಎಸ್ಪಿ ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ