ಪಂಚರ್ ಹಾಕುವಾಗ ಕಾರಿಗೆ ಅಪರಿಚಿತ ವಾಹನ ಡಿಕ್ಕಿ; ಸ್ಥಳದಲ್ಲೇ ಇಬ್ಬರ ಸಾವು
ತುಮಕೂರು ಕಡೆಯಿಂದ ಶಿರಾಗೆ ಹೋಗುತ್ತಿರುವಾಗ ಘಟನೆ ಸಂಭವಿಸಿದೆ. ಕಾರು ಟೈರ್ ಪಂಚರ್ ಆಗಿತ್ತು. ಪಂಚರ್ ಹಾಕುತ್ತಿರುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಸಾವು ಸಂಭವಿಸಿದೆ. ಬೆಂಗಳೂರಿನ ಆವಲಹಳ್ಳಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.
ತುಮಕೂರು, ಜ.15: ಸಂಕ್ರಾಂತಿ ಹಬ್ಬದ ಸಂಭ್ರಮದ ನಡುವೆ ತುಮಕೂರಿನಲ್ಲಿ ಭೀಕರ ಅಪಘಾತ (Accident) ಸಂಭವಿಸಿದೆ. ಕಾರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ (Death). ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕುಂಟೇಗೌಡನಹಳ್ಳಿ ಗೇಟ್ ಬಳಿ ಕಾರಿಗೆ ಪಂಚರ್ ಹಾಕುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನ ಆವಲಹಳ್ಳಿ ನಿವಾಸಿಗಳಾದ ಮಹೇಶ್(40), ಉಮೇಶ್(40) ಮೃತ ದುರ್ದೈವಿಗಳು.
ತುಮಕೂರು ಕಡೆಯಿಂದ ಶಿರಾಗೆ ಹೋಗುತ್ತಿರುವಾಗ ಘಟನೆ ಸಂಭವಿಸಿದೆ. ಕಾರು ಟೈರ್ ಪಂಚರ್ ಆಗಿತ್ತು. ಪಂಚರ್ ಹಾಕುತ್ತಿರುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಸಾವು ಸಂಭವಿಸಿದೆ. ಬೆಂಗಳೂರಿನ ಆವಲಹಳ್ಳಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆಸಿದೆ.
ಇದನ್ನೂ ಓದಿ: ರಾಮ ಮಂದಿರ: ಜ. 22ರಂದು ಹುಟ್ಟಿದ ಶಿಶುಗಳನ್ನು ಆಶೀರ್ವದಿಸಲು ಹಣ ಪಡೆಯೋದಿಲ್ಲ ಎಂದ ತೃತೀಯಲಿಂಗಿಗಳು
ಈಜಲು ಹೋಗಿದ್ದ ವಿದ್ಯಾರ್ಥಿ ನೀರುಪಾಲು
ಈಜಲು ಹೋಗಿದ್ದ ಮೂವರ ಪೈಕಿ ಓರ್ವ ವಿದ್ಯಾರ್ಥಿ ನೀರುಪಾಲಾಗಿದ್ದಾನೆ. ಕೊಪ್ಪಳ ಜಿಲ್ಲೆಯ ಕುಕನೂರು ಬಳಿಯ ಕಲ್ಲಿನ ಕ್ವಾರಿಯಲ್ಲಿ ಘಟನೆ ನಡೆದಿದ್ದು, ಪ್ರದೀಪ್ ಮೃತಪಟ್ಟ ದುರ್ದೈವಿ.. ಬಾಲಕ ಪ್ರದೀಪ್, ಕುಕನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡ್ತಿದ್ದ.. ನಿನ್ನೆ ರಜೆ ಇದ್ರಿಂದ ವಸತಿ ಶಾಲೆಯ ಕಾಂಪೌಂಡ್ ಹಾರಿ ಈಜಲು ಹೋಗಿದ್ರು. ಈ ವೇಳೆ ಕಲ್ಲಿನ ಕ್ವಾರಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಬಾಲಕನ ಶವಕ್ಕಾಗಿ ಅಗ್ನಿಶಾಮಕ ದಳ, ಪೊಲೀಸರಿಂದ ಹುಡುಕಾಟ ನಡೆಸುತ್ತಿದ್ದಾರೆ. ಅತ್ತ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಿಬ್ಬಂದಿ ನಿರ್ಲಕ್ಷ್ಯಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಾವಿಗೆ ಬಿದ್ದ ಜಿಂಕೆ ರಕ್ಷಿಸಿದ ಯುವಕರು
ಕೊಳ್ಳೂರು ಗ್ರಾಮದಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದ ಜಿಂಕೆಯನ್ನ ರಕ್ಷಿಸಲಾಗಿದೆ. ಬೀದರ್ ಜಿಲ್ಲೆ ಔರಾದ್ ತಾಲೂಕಿನ ಕೊಳ್ಳೂರು ಗ್ರಾಮದ ಬಳಿ ಘಟನೆ ನಡೆದಿದ್ದು, ಬಾವಿಗೆ ಬಿದ್ದು ಜಿಂಕೆ ಸಾವು ಬದುಕಿನ ಜೊತೆ ಹೋರಾಡುತ್ತಿತ್ತು. ಇದನ್ನ ಗಮನಿಸಿದ ಕೊಳ್ಳೂರಿನ ಯುವಕರು ಹರಸಾಹಸಪಟ್ಟು ಜಿಂಕೆಯನ್ನ ರಕ್ಷಿಸಿದ್ದಾರೆ, ನಂತ್ರ ಕಾಡಿಗೆ ಬಿಟ್ಟಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ