Menstruation Leave: ಒಡಿಶಾದ ಎಲ್ಲ ಮಹಿಳಾ ಉದ್ಯೋಗಿಗಳಿಗೆ ತಿಂಗಳಲ್ಲಿ 1 ದಿನ ಮುಟ್ಟಿನ ರಜೆ ಘೋಷಣೆ

|

Updated on: Aug 15, 2024 | 5:53 PM

ಒಡಿಶಾ ಸರ್ಕಾರವು ತಮ್ಮ ರಾಜ್ಯದಲ್ಲಿ ಎಲ್ಲಾ ವೃತ್ತಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಒಂದು ದಿನದ ಮುಟ್ಟಿನ ರಜೆಯನ್ನು ನೀಡುತ್ತದೆ. ಸ್ವಾತಂತ್ರ್ಯ ದಿನವಾದ ಇಂದು ಒಡಿಶಾದ ಉಪಮುಖ್ಯಮಂತ್ರಿ ಪ್ರವತಿ ಪರಿದಾ ಅವರು ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಒಂದು ದಿನದ ಮುಟ್ಟಿನ ರಜೆಯನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ.

Menstruation Leave: ಒಡಿಶಾದ ಎಲ್ಲ ಮಹಿಳಾ ಉದ್ಯೋಗಿಗಳಿಗೆ ತಿಂಗಳಲ್ಲಿ 1 ದಿನ ಮುಟ್ಟಿನ ರಜೆ ಘೋಷಣೆ
ಮುಟ್ಟಿನ ರಜೆ
Follow us on

ಭುವನೇಶ್ವರ: ಸ್ವಾತಂತ್ರ್ಯ ದಿನವಾದ ಇಂದು ಒಡಿಶಾ ಉಪಮುಖ್ಯಮಂತ್ರಿ ಪ್ರವತಿ ಪರಿದಾ ಅವರು ಒಡಿಶಾದಲ್ಲಿ ಎಲ್ಲಾ ವೃತ್ತಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಒಂದು ದಿನದ ಮುಟ್ಟಿನ ರಜೆ ನೀತಿಯನ್ನು ಪರಿಚಯಿಸಿದ್ದಾರೆ. ಕಟಕ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಒಡಿಶಾ ಉಪ ಮುಖ್ಯಮಂತ್ರಿ ಈ ಕುರಿತು ಘೋಷಿಸಿದ್ದಾರೆ. ಈ ಮೂಲಕ ಕೇರಳ ಮತ್ತು ಬಿಹಾರದೊಂದಿಗೆ ಮುಟ್ಟಿನ ರಜೆಯನ್ನು ರಾಜ್ಯ ಸರ್ಕಾರಗಳು ಅಧಿಕೃತಗೊಳಿಸಿದ ರಾಜ್ಯಗಳ ಪಟ್ಟಿಗೆ ಒಡಿಶಾ ಕೂಡ ಸೇರುತ್ತದೆ.

ಮಹಿಳಾ ಉದ್ಯೋಗಿಗಳಿಗೆ ಋತುಚಕ್ರದ ಒಂದು ದಿನ ರಜೆ ತೆಗೆದುಕೊಳ್ಳಲು ಅವಕಾಶ ನೀಡುವ ಹೊಸ ನೀತಿಯು ಅವರ ಋತುಚಕ್ರದ ಮೊದಲ ಅಥವಾ ಎರಡನೇ ದಿನದಂದು ರಜೆ ಪಡೆಯಲು ಅರ್ಹರಾಗಿರುವವರಿಗೆ ತಕ್ಷಣವೇ ಪ್ರಾರಂಭವಾಗುತ್ತದೆ.

ಇದನ್ನೂ ಓದಿ: PM Modi Speech: ಕೆಂಪು ಕೋಟೆಯಲ್ಲಿ ಇಂದು ಪ್ರಧಾನಿ ಮೋದಿ ಧ್ವಜಾರೋಹಣ, ರಾಷ್ಟ್ರವನ್ನುದ್ದೇಶಿಸಿ ಭಾಷಣ

ಋತುಚಕ್ರದ ಎಲ್ಲಾ ವ್ಯಕ್ತಿಗಳಿಗೆ ಪಾವತಿಸಿದ ಮುಟ್ಟಿನ ರಜೆ ನೀತಿಗಾಗಿ ದೀರ್ಘಾವಧಿಯ ವಿನಂತಿಯ ನಂತರ ಘೋಷಣೆ ಬಂದಿದೆ. ಜುಲೈ 8ರಂದು ಸುಪ್ರೀಂ ಕೋರ್ಟ್ ಎಲ್ಲಾ ಪಕ್ಷಗಳೊಂದಿಗೆ ಚರ್ಚೆಯ ನಂತರ ಮುಟ್ಟಿನ ರಜೆ ನೀತಿಯನ್ನು ರಚಿಸಲು ಕೇಂದ್ರಕ್ಕೆ ವಿನಂತಿಸಿತು. ಆದರೆ, ಮುಟ್ಟಿನ ರಜೆಯ ಅಗತ್ಯವನ್ನು ಜಾರಿಗೊಳಿಸುವ ಉದ್ದೇಶವನ್ನು ಕೇಂದ್ರ ಹೊಂದಿಲ್ಲ.

ಋತುಚಕ್ರದ ರಜೆಗಾಗಿ ನೀತಿಗಳನ್ನು ಹೊಂದಿರುವ ಇತರ ರಾಜ್ಯಗಳು:

ಕೇರಳ ಮತ್ತು ಬಿಹಾರದೊಂದಿಗೆ ಒಡಿಶಾ ಇತ್ತೀಚೆಗೆ ಮುಟ್ಟಿನ ರಜೆ ನೀಡುವ ಭಾರತೀಯ ರಾಜ್ಯಗಳ ಪಟ್ಟಿಗೆ ಸೇರಿಕೊಂಡಿದೆ. ಈ ಮಧ್ಯೆ, ಜುಲೈ 26ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಅವರು ಎಲ್ಲಾ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವ ಯಾವುದೇ ಉದ್ದೇಶವಿಲ್ಲ ಎಂದು ತಿಳಿಸಿರುವುದರಿಂದ ರಾಷ್ಟ್ರವ್ಯಾಪಿ ಈ ನೀತಿಯನ್ನು ಜಾರಿಗೆ ತರುವುದು ಅಸಂಭವವಾಗಿದೆ.

ಇದನ್ನೂ ಓದಿ: Independence Day 2024: ಇದು ಪ್ರಧಾನಿ ನರೇಂದ್ರ ಮೋದಿಯವರ ಸುದೀರ್ಘ ಭಾಷಣ; ಇದಕ್ಕಿಂತ ಮುಂಚೆ ಎಷ್ಟು ಅವಧಿಯದ್ದಾಗಿತ್ತು?

ಈ ಸಮಯದಲ್ಲಿ, ಎಲ್ಲಾ ಕೆಲಸದ ಸ್ಥಳಗಳಿಗೆ ವೇತನ ಸಹಿತ ಮುಟ್ಟಿನ ರಜೆಯನ್ನು ಒದಗಿಸಬೇಕೆಂಬ ಪ್ರಸ್ತಾಪವನ್ನು ಸರ್ಕಾರ ಪರಿಗಣಿಸುತ್ತಿಲ್ಲ ಎಂದು ಸಚಿವೆ ಅನ್ನಪೂರ್ಣ ದೇವಿ ಲೋಕಸಭೆಯಲ್ಲಿ ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ಒಡಿಶಾ ಸರ್ಕಾರ ಘೋಷಿಸಿದ ನೀತಿಗೆ ನೆಟಿಜನ್‌ಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಹಿಳೆಯರ ಯೋಗಕ್ಷೇಮಕ್ಕಾಗಿ ಒಡಿಶಾ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಕೆಲವರು ಶ್ಲಾಘಿಸಿದರೆ, ಕೆಲವರು ಈ ನೀತಿಯನ್ನು ಅನಗತ್ಯವೆಂದು ಪರಿಗಣಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ