ನವೀನ್ ಪಟ್ನಾಯಕ್(Naveen Patnaik) ಮತ್ತೊಮ್ಮೆ ಒಡಿಶಾದ ಮುಖ್ಯಮಮತ್ರಿಯಾಗುತ್ತಿದ್ದಂತೆ ಜನರಿಗೆ ಉಚಿತ ವಿದ್ಯುತ್ ನೀಡುವ ಆದೇಶಕ್ಕೆ ಮೊದಲು ಸಹಿ ಹಾಕಲಿದ್ದಾರೆ ಎಂದು ಅವರ ಆಪ್ತ ಸಹಾಯಕ ವಿಕೆ ಪಾಂಡಿಯನ್ ಹೇಳಿದ್ದಾರೆ. ಅವರ ಮೊದಲ ಆದೇಶವು ಒಡಿಶಾದ 90 ಪ್ರತಿಶತ ಜನಸಂಖ್ಯೆಗೆ ಉಚಿತ ವಿದ್ಯುತ್ ಪೂರೈಕೆಯಾಗುವ ಕುರಿತು ಇರುತ್ತದೆ ಎಂದು ಹೇಳಿದ್ದಾರೆ.
ದಿಯೋಗಢ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಎಂ ಜೊತೆಗಿನ ಸಂಭಾಷಣೆಯ ಕಿರು ವೀಡಿಯೊವನ್ನು ಹಂಚಿಕೊಂಡ ಪಾಂಡಿಯನ್, ಜಗನ್ನಾಥ ಮತ್ತು ಜನರ ಆಶೀರ್ವಾದವು ನವೀನ್ ಪಟ್ನಾಯಕ್ ಅವರನ್ನು ಜೂನ್ 9ರಂದು ಮತ್ತೆ ಪ್ರಮಾಣವಚನ ಸ್ವೀಕರಿಸುವಂತೆ ಮಾಡುತ್ತದೆ.
ಮೊದಲ ಆದೇಶವು ಒಡಿಶಾದ 90 ಪ್ರತಿಶತ ಜನಸಂಖ್ಯೆಗೆ ಉಚಿತ ವಿದ್ಯುತ್ ಸರಬರಾಜು ಮತ್ತು ಸರ್ಕಾರಿ ನೌಕರರು ಸೇರಿದಂತೆ ಎಲ್ಲರಿಗೂ ಬಿಜು ಸ್ವಾಸ್ಥ್ಯ ಕಲ್ಯಾಣ ಯೋಜನೆ (ಬಿಎಸ್‌ಕೆವೈ) ವಿಸ್ತರಣೆಯಾಗಿದೆ ಎಂದರು. ರಾಜ್ಯ ಬಿಜೆಪಿ ನಾಯಕ ಸಮೀರ್ ಮೊಹಂತಿ ಅವರು ಬಿಜೆಡಿಯಿಂದ ಉಚಿತ ವಿದ್ಯುತ್ ಸರಬರಾಜು ಭರವಸೆಯ ಬಗ್ಗೆ ಸ್ಪಷ್ಟೀಕರಣವನ್ನು ಕೋರಿದ ನಂತರ ಸಿಎಂ ಮತ್ತು ಪಾಂಡಿಯನ್ ಅವರ ಈ ಕಿರು ವೀಡಿಯೊ ಬಂದಿದೆ.
ಮತ್ತಷ್ಟು ಓದಿ: ಲೋಕಸಭಾ ಚುನಾವಣೆ 2024: ಪಶ್ಚಿಮ ಬಂಗಾಳ ಜನತೆಗೆ 5 ಭರವಸೆಗಳ ಕೊಟ್ಟ ಮೋದಿ
ಎಲ್ಲರಿಗೂ ಉಚಿತ ವಿದ್ಯುತ್ ನೀಡುವುದಾಗಿ ಸುಳ್ಳು ಭರವಸೆ ನೀಡುವ ಮೂಲಕ ಬಿಜೆಡಿ ಜನರನ್ನು ವಂಚಿಸಿದೆ ಎಂದು ಆರೋಪಿಸಿರುವ ಮೊಹಾಂತಿ, ಉಚಿತ ವಿದ್ಯುತ್ ಪೂರೈಕೆಯ ಭರವಸೆಯಿಂದ ಎಷ್ಟು ಜನರಿಗೆ ಪ್ರಯೋಜನವಾಗಲಿದೆ ಎಂಬುದನ್ನು ಬಿಜೆಡಿ ಸ್ಪಷ್ಟಪಡಿಸಲಿ ಎಂದಿದ್ದರು.
ಬಿಜೆಡಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಿಂಗಳಿಗೆ 100 ಯೂನಿಟ್‌ಗಿಂತ ಕಡಿಮೆ ಬಳಕೆ ಮಾಡುವ ಎಲ್ಲಾ ಮನೆಗಳಿಗೆ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದೆ. 100-150 ಯೂನಿಟ್‌ಗಳ ನಡುವೆ ಬಳಸುವ ಕುಟುಂಬಗಳಿಗೆ 50 ಯೂನಿಟ್‌ಗಳು ಉಚಿತವಾಗಿರುತ್ತದೆ.
ಬಹುತೇಕ ಇಡೀ ಗ್ರಾಮೀಣ ಜನತೆ ಈ ಉಪಕ್ರಮಗಳಿಂದ ಪ್ರಯೋಜನ ಪಡೆಯುತ್ತಾರೆ. ಇದು ನಗರ ಪ್ರದೇಶದ ಕುಟುಂಬಗಳಿಗೂ ಪ್ರಯೋಜನವನ್ನು ನೀಡುತ್ತದೆ. ಈ ಯೋಜನೆಯು ಒಡಿಶಾದ 85-90 ಪ್ರತಿಶತ ಕುಟುಂಬಗಳನ್ನು ಒಳಗೊಳ್ಳುತ್ತದೆ. ರೈತರಿಗೆ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂಬುದನ್ನು ಪ್ರಣಾಳಿಕೆಯಲ್ಲಿ ಬರೆಯಲಾಗಿದೆ. ಮೇ13ರಂದು ಒಡಿಶಾದಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು, ಜೂನ್ 4ರಂದು ಫಲಿತಾಂಶ ಹೊರಬರಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ