Odisha Train Accident: ಒಡಿಶಾ ರೈಲು ದುರಂತ ಹಿನ್ನೆಲೆ ಅನೇಕ ರೈಲುಗಳ ಸಂಚಾರ ರದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ
ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಶುಕ್ರವಾರ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ಇನ್ನೂರಕ್ಕೂ ಹೆಚ್ಚು ಜನ ಮೃತಪಟ್ಟಿದ್ದು ಹಲವಾರು ರೈಲುಗಳನ್ನು ರದ್ದುಗೊಳಿಸಲಾಗಿದೆ.
ಸಾಂದರ್ಭಿಕ ಚಿತ್ರ
ಆಯೇಷಾ ಬಾನು
Updated on:
Jun 03, 2023 | 10:39 AM
ಒಡಿಶಾದ ಬಾಲಸೋರ್ (Balasore) ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಶುಕ್ರವಾರ ಸಂಭವಿಸಿದ ಭೀಕರ ರೈಲು ದುರಂತದಲ್ಲಿ(Odisha Train Accident) ಇನ್ನೂರಕ್ಕೂ ಹೆಚ್ಚು ಜನ ಮೃತಪಟ್ಟಿದ್ದು ಹಲವಾರು ರೈಲುಗಳನ್ನು ರದ್ದುಗೊಳಿಸಲಾಗಿದೆ. ಮತ್ತು ಹಲವಾರು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಒಡಿಶಾದ ಬಾಲಸೋರ್ ಜಿಲ್ಲೆಯ ಬಹಾನಗರ್‌ನಲ್ಲಿ ಮೂರು ಪ್ರತ್ಯೇಕ ಹಳಿಗಳಲ್ಲಿ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಹೌರಾಕ್ಕೆ ಪ್ರಯಾಣಿಸುತ್ತಿದ್ದ 12864 ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನ ಹಲವಾರು ಕೋಚ್‌ಗಳು ಬಹನಾಗಬಜಾರ್‌ನಲ್ಲಿ ಹಳಿತಪ್ಪಿ ಅಪ್‌ಲೈನ್‌ನಲ್ಲಿ ಬಿದ್ದವು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 233ಕ್ಕೆ ಏರಿಕೆಯಾಗಿದ್ದು 900ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೆನಾ ಮಾಹಿತಿ ನೀಡಿದ್ದಾರೆ.
ರದ್ದಾದ ರೈಲುಗಳು
12245 ಹೌರಾ-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಎಕ್ಸ್‌ಪ್ರೆಸ್
08415 ಜಲೇಶ್ವರ-ಪುರಿ ವಿಶೇಷ ಪ್ರಯಾಣವು ಜೂನ್ 3, 2023 ರಂದು ಪ್ರಾರಂಭವಾಗುತ್ತದೆ.
12891 ಬ್ಯಾಂಗ್ರಿಪೋಸಿ-ಪುರಿ, ಎಕ್ಸ್‌ಪ್ರೆಸ್ ಪ್ರಯಾಣವು ಜೂನ್ 3, 2023 ರಂದು ಪ್ರಾರಂಭವಾಗುತ್ತದೆ.
18021 ಖರಗ್‌ಪುರ-ಖುರ್ದಾ ರೋಡ್ ಎಕ್ಸ್‌ಪ್ರೆಸ್ ಪ್ರಯಾಣವು ಜೂನ್ 3, 2023 ರಂದು ಪ್ರಾರಂಭವಾಗುತ್ತದೆ.
08063 ಖರಗ್‌ಪುರ -ಭದ್ರಕ್ ವಿಶೇಷ ಪ್ರಯಾಣವು ಜೂನ್ 3, 2023 ರಂದು ಪ್ರಾರಂಭವಾಗುತ್ತದೆ.
22895 ಹೌರಾ-ಪುರಿ ಎಕ್ಸ್‌ಪ್ರೆಸ್ ಪ್ರಯಾಣವು ಜೂನ್ 3, 2023 ರಂದು ಪ್ರಾರಂಭವಾಗುತ್ತದೆ.
12703 ಹೌರಾ-ಸಿಕಂದರಾಬಾದ್ ಎಕ್ಸ್‌ಪ್ರೆಸ್ ಪ್ರಯಾಣವು ಜೂನ್ 3, 2023 ರಂದು ಪ್ರಾರಂಭವಾಗುತ್ತದೆ.
12821 ಶಾಲಿಮಾರ್-ಪುರಿ ಎಕ್ಸ್‌ಪ್ರೆಸ್ ಪ್ರಯಾಣವು ಜೂನ್ 3, 2023 ರಂದು ಪ್ರಾರಂಭವಾಗುತ್ತದೆ.
08031 ಬಾಲಸೋರ್-ಭದ್ರಕ್ ವಿಶೇಷ ಪ್ರಯಾಣ ರದ್ದು
18045 ಶಾಲಿಮಾರ್-ಹೈದರಾಬಾದ್ ಈಸ್ಟ್ ಕೋಸ್ಟ್ ಎಕ್ಸ್‌ಪ್ರೆಸ್ ರದ್ದು