Odisha train accident: ತಪ್ಪಾದ ಹಳಿಯಲ್ಲಿ ಚಲಿಸಿತ್ತೇ ಕೋರಮಂಡಲ್ ಎಕ್ಸ್‌ಪ್ರೆಸ್ ?
ಖರಗ್‌ಪುರ ವಿಭಾಗದ ಸಿಗ್ನಲಿಂಗ್ ನಿಯಂತ್ರಣ ಕೊಠಡಿಯ ವಿಡಿಯೊ ಪ್ರಕಾರ, ಎರಡು ಮುಖ್ಯ ಮಾರ್ಗಗಳು ಮತ್ತು ಎರಡು ಲೂಪ್ ಲೈನ್‌ಗಳನ್ನು ಒಳಗೊಂಡಂತೆ ನಾಲ್ಕು ರೈಲು ಹಳಿಗಳನ್ನು ತೋರಿಸುತ್ತದೆ. ಗಂಟೆಗೆ ಸುಮಾರು 127 ಕಿಮೀ ವೇಗದಲ್ಲಿ ಓಡುತ್ತಿದ್ದ 12841 ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ಲೂಪ್ ಲೈನ್‌ನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಮುಖ್ಯ ಮಾರ್ಗದಲ್ಲಿ ಹಳಿತಪ್ಪಿತು.
ಒಡಿಶಾದ (Odisha) ಬಾಲಸೋರ್‌ನಲ್ಲಿ ಅಪಘಾತಕ್ಕೀಡಾದ ಕೋರಮಂಡಲ್ ಎಕ್ಸ್‌ಪ್ರೆಸ್ (Coromandel Express) ರೈಲು ದುರಂತದ (Odisha train accident) ನಿಮಿಷಗಳ ಮೊದಲು ತಪ್ಪಾದ ಟ್ರ್ಯಾಕ್ ಅನ್ನು ತೆಗೆದುಕೊಂಡಿದೆ ಎಂದು ರೈಲ್ವೇ ಸಿಗ್ನಲಿಂಗ್ ಕಂಟ್ರೋಲ್ ರೂಮ್‌ನಿಂದ ಆರಂಭಿಕ ವರದಿಗಳು ತಿಳಿಸಿವೆ. ಚೆನ್ನೈಗೆ ಹೋಗುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ಶುಕ್ರವಾರ ಸಂಜೆ ಬಹಾನಗರ್ ಬಜಾರ್ ನಿಲ್ದಾಣದ ಸ್ವಲ್ಪ ಮುಂದೆ ಮುಖ್ಯ ಮಾರ್ಗದ ಬದಲಿಗೆ ಲೂಪ್ ಲೈನ್ ಅನ್ನು ತೆಗೆದುಕೊಂಡಿದೆ ಎಂದು ಹೆಸರು ಹೇಳಲು ಬಯಸದ ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಖರಗ್‌ಪುರ ವಿಭಾಗದ ಸಿಗ್ನಲಿಂಗ್ ನಿಯಂತ್ರಣ ಕೊಠಡಿಯ ವಿಡಿಯೊ ಪ್ರಕಾರ, ಎರಡು ಮುಖ್ಯ ಮಾರ್ಗಗಳು ಮತ್ತು ಎರಡು ಲೂಪ್ ಲೈನ್‌ಗಳನ್ನು ಒಳಗೊಂಡಂತೆ ನಾಲ್ಕು ರೈಲು ಹಳಿಗಳನ್ನು ತೋರಿಸುತ್ತದೆ. ಗಂಟೆಗೆ ಸುಮಾರು 127 ಕಿಮೀ ವೇಗದಲ್ಲಿ ಓಡುತ್ತಿದ್ದ 12841 ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ಲೂಪ್ ಲೈನ್‌ನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಮುಖ್ಯ ಮಾರ್ಗದಲ್ಲಿ ಹಳಿತಪ್ಪಿತು.
ಘರ್ಷಣೆಯ ಕೆಲವೇ ನಿಮಿಷಗಳಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಹೌರಾಕ್ಕೆ ಹೋಗುವ ಯಶವಂತನಗರ ಎಕ್ಸ್‌ಪ್ರೆಸ್ ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದಿದೆ.
ಕೋರಮಂಡಲ್ ಎಕ್ಸ್‌ಪ್ರೆಸ್ ತೆಗೆದುಕೊಂಡ ಲೂಪ್ ಲೈನ್ ಯಾವುದು?
ಭಾರತೀಯ ರೈಲ್ವೇಯ ಪ್ರಕಾರ ನಿಲ್ದಾಣದ ಪ್ರದೇಶದಲ್ಲಿ ಲೂಪ್ ಲೈನ್‌ಗಳನ್ನು ನಿರ್ಮಿಸಲಾಗಿದೆ.ಈ ಸಂದರ್ಭದಲ್ಲಿ ಬಹಾನಗರ್ ಬಜಾರ್ ನಿಲ್ದಾಣ ಕಾರ್ಯಾಚರಣೆಯನ್ನು ಸುಲಭಗೊಳಿಸಲು ಹೆಚ್ಚಿನ ರೈಲುಗಳಿಗೆ ಅವಕಾಶ ಕಲ್ಪಿಸುತ್ತದೆ. ಲೂಪ್ ಲೈನ್‌ಗಳು ಸಾಮಾನ್ಯವಾಗಿ 750 ಮೀಟರ್ ಉದ್ದವಿದ್ದು, ಬಹು ಇಂಜಿನ್‌ಗಳೊಂದಿಗೆ ಗೂಡ್ಸ್ ರೈಲುಗಳಿಗೆ ಅವಕಾಶ ಕಲ್ಪಿಸುತ್ತದೆ. ಆದಾಗ್ಯೂ, ಭಾರತೀಯ ರೈಲ್ವೇ ಸುಮಾರು 1500 ಮೀಟರ್‌ಗಳ ಲೂಪ್ ಲೈನ್‌ಗಳ ನಿರ್ಮಾಣ ಮಾಡುತ್ತಿದ್ದು, ಇದು ಅಸ್ತಿತ್ವದಲ್ಲಿರುವ ಲೂಪ್ ಲೈನ್ ಉದ್ದಕ್ಕಿಂತ ಎರಡು ಪಟ್ಟು ಇದೆ. ಘಟನೆಯು ಮಾನವ ದೋಷದ ಪರಿಣಾಮವೋ ಅಥವಾ ತಾಂತ್ರಿಕ ದೋಷದ ಪರಿಣಾಮವೋ ಎಂಬ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ.
ದುರಂತ ಸಂಭವಿಸುವ ನಿಮಿಷಗಳ ಮೊದಲು ರೈಲು ಹಳಿ ತಪ್ಪಿದ ಕಾರಣ ಮಾನವ ದೋಷದಿಂದ ಅಪಘಾತ ಸಂಭವಿಸಿರಬಹುದು ಎಂದು ಪ್ರಾಥಮಿಕ ವರದಿಗಳು ಸೂಚಿಸಿದರೆ, ಪೂರ್ವ ಕರಾವಳಿ ರೈಲ್ವೆ ವಲಯದ ನಿವೃತ್ತ ರೈಲ್ವೆ ಅಧಿಕಾರಿಯೊಬ್ಬರು ತಾಂತ್ರಿಕ ದೋಷಗಳು ಮತ್ತು ಸಿಗ್ನಲ್ ಸಮಸ್ಯೆಗಳ ಬಗ್ಗೆ ಸುಳಿವು ನೀಡಿದ್ದಾರೆ.
ಇದನ್ನೂ ಓದಿ: Odisha Train Accident: ಒಡಿಶಾಗೆ ಭೇಟಿ ನೀಡಿ ರೈಲು ದುರಂತ ಸಂಭವಿಸಿದ ಸ್ಥಳ ಪರಿಶೀಲಿಸಿದ ಪ್ರಧಾನಿ ಮೋದಿ
ಸ್ಟೇಷನ್ ಮ್ಯಾನೇಜರ್ ಕಚೇರಿಯಲ್ಲಿ ಇರಿಸಲಾದ ಸಿಗ್ನಲ್ ಪ್ಯಾನೆಲ್ ಪ್ರಕಾರ ಗೂಡ್ಸ್ ರೈಲು ರೈಲು ನಿಲ್ದಾಣದ ಲೂಪ್ ಲೈನ್‌ನಲ್ಲಿದ್ದರೂ, ಅದರ ಕೊನೆಯ ಕೆಲವು ಬೋಗಿಗಳು ಮುಖ್ಯ ಮಾರ್ಗದಲ್ಲಿ ಇದ್ದಿರಬಹುದು. ಕೋರಮಂಡಲ್ ಎಕ್ಸ್‌ಪ್ರೆಸ್ ಪ್ರತಿ ಗಂಟೆಗೆ 127 ಕಿ.ಮೀ ವೇಗದಲ್ಲಿ ಧಾವಿಸಿದಾಗ ಇವುಗಳಿಗೆ ಡಿಕ್ಕಿ ಹೊಡೆದಿರಬಹುದು ಎಂದು ಅಧಿಕಾರಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ