125 ವರ್ಷದ ಆಮೆ ಮೃಗಾಲಯದ ಉದ್ಯಾನದಲ್ಲಿ ಸಾವನ್ನಪ್ಪಿದೆ, ವಿಡಿಯೋ ನೋಡಿ

ಆದರೆ ಇನ್ನುಮುಂದೆ ಮೃಗಾಲಯದಲ್ಲಿ ಈ ಆಮೆ ಕಾಣಸಿಗುವುದಿಲ್ಲ. 1963 ರಲ್ಲಿ, ಈ ಆಮೆಯನ್ನು ನಾಂಪಲ್ಲಿ ಸಾರ್ವಜನಿಕ ಉದ್ಯಾನದಿಂದ ಮೃಗಾಲಯಕ್ಕೆ ಸ್ಥಳಾಂತರಿಸಲಾಯಿತು, ಅಂದಿನಿಂದ ರಾಕ್ಷಸುಡು ಎಂಬ ಈ ದೈತ್ಯ ಆಮೆ ಮೃಗಾಲಯ ಉದ್ಯಾನವನದಲ್ಲಿ ವಾಸಿಸುತ್ತಿತ್ತು.

Follow us
ಸಾಧು ಶ್ರೀನಾಥ್​
|

Updated on: Mar 19, 2024 | 1:08 PM

ಹೈದರಾಬಾದ್‌ನ ಜವಾಹರ್ ಲಾಲ್ ನೆಹರು ಮೃಗಾಲಯದಲ್ಲಿ 125 ವರ್ಷದ ಆಮೆ ​​ಸಾವನ್ನಪ್ಪಿದೆ. ಮೃಗಾಲಯದಲ್ಲಿ ಈ ಆಮೆ ಬಹಳ ವಿಶೇಷವಾಗಿತ್ತುರಾಕ್ಷಸುಡು ಎಂಬ ಹೆಸರಿನ ಈ ಗಂಡು ಆಮೆಗೆ ಮೃಗಾಲಯದ ಉದ್ಯಾನವನದೊಂದಿಗೆ (Nehru Zoological Garden in Hyderabad) ವರ್ಷಗಟ್ಟಲೆ ಅವಿನಾಭಾವ ನಂಟು. ಶತಾಯುಷಿಯಾದ ಈ ಆಮೆ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಕಳೆದ ಹತ್ತು ದಿನಗಳಂದಲಂತೂ ಯಾವುದೇ ಆಹಾರ ತೆಗೆದುಕೊಳ್ಳುತ್ತಿರಲಿಲ್ಲ. ಸಾಮಾನ್ಯವಾಗಿ ಆಮೆಯ ಜೀವಿತಾವಧಿ 80 ವರ್ಷದಿಂದ 150 ವರ್ಷಗಳು.

ಕಳೆದ ಶನಿವಾರ ಈ ಆಮೆ ಕೊನೆಯುಸಿರೆಳೆದಿದ್ದು, ಅದರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ವಿಷಯ ತಿಳಿದ ಮೃಗಾಲಯದ ಅಧಿಕಾರಿಗಳು ಹಾಗೂ ಕಳೆದ ಕೆಲ ವರ್ಷಗಳಿಂದ ಸೇವೆ ಸಲ್ಲಿಸಿದವರು ಭಾವುಕರಾದರು. ಜವಾಹರಲಾಲ್ ನೆಹರು ಮೃಗಾಲಯಕ್ಕೆ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆದೇಶದ ವಿವಿಧ ಭಾಗಗಳಿಂದ ಇಲ್ಲಿಗೆ ವಿವಿಧ ರೀತಿಯ ಪ್ರಾಣಿ ಮತ್ತು ಪಕ್ಷಿಗಳನ್ನು ನೋಡಲು ಬರುತ್ತಾರೆ.

ಬೇಸಿಗೆ ರಜೆ ಬಂದರೆ ಉದ್ಯಾನವನವು ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿರುತ್ತದೆ. ನೀವು ಮೃಗಾಲಯವನ್ನು ಪ್ರವೇಶಿಸಿದಾಗ ಮೊದಲು ನೋಡುವುದೇ ಈ ದೊಡ್ಡ ಆಮೆ. ಇದನ್ನು ನೋಡಿದ ಯಾರಾದರೂ ಆಶ್ಚರ್ಯಚಕಿತರಾಗುತ್ತಿದ್ದರು. ಇದು ಸಣ್ಣ ಸಣ್ಣ ಹೆಜ್ಜೆಗಳನ್ನು ಇಡುವ ಮೂಲಕ ಮತ್ತು ಬೃಹತ್ ದೇಹದೊಂದಿಗೆ ಚಲಿಸುವ ಮೂಲಕ ಎಲ್ಲರನ್ನು ಆಕರ್ಷಿಸುತ್ತಿತ್ತು.

ಆದರೆ ಇನ್ನುಮುಂದೆ ಮೃಗಾಲಯದಲ್ಲಿ ಈ ಆಮೆ ಕಾಣಸಿಗುವುದಿಲ್ಲ. 1963 ರಲ್ಲಿ, ಈ ಆಮೆಯನ್ನು ನಾಂಪಲ್ಲಿ ಸಾರ್ವಜನಿಕ ಉದ್ಯಾನದಿಂದ ಮೃಗಾಲಯಕ್ಕೆ ಸ್ಥಳಾಂತರಿಸಲಾಯಿತು, ಅಂದಿನಿಂದ ರಾಕ್ಷಸುಡು ಎಂಬ ಈ ದೈತ್ಯ ಆಮೆ ಮೃಗಾಲಯ ಉದ್ಯಾನವನದಲ್ಲಿ ವಾಸಿಸುತ್ತಿತ್ತು.

ಮೃಗಾಲಯ ಉದ್ಯಾನವನಕ್ಕೆ ಬಂದವರು ಮೊದಲು ಈ ಬೃಹತ್ ಆಮೆಯನ್ನು ನೋಡುತ್ತಿದ್ದರು. ಆ ನಂತರವೇ ಉಳಿದ ಪ್ರಾಣಿ ಪಕ್ಷಿಗಳನ್ನು ನೋಡಲು ಹೋಗುತ್ತಿದ್ದರು. ಇನ್ನು ಮುಂದೆ ಈ ಬೃಹತ್ ಆಮೆ ಕಾಣಸಿಗುವುದಿಲ್ಲ ಎಂದು ತಿಳಿದು ಪ್ರವಾಸಿಗರೂ ಭಾವುಕರಾಗುತ್ತಿದ್ದಾರೆ.

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು