ಹೈದರಾಬಾದ್: ಒಲೆಕ್ಟ್ರಾ ಗ್ರೀನ್ಟೆಕ್ ಲಿಮಿಟೆಡ್ (OLECTRA) 100 ಎಲೆಕ್ಟ್ರಿಕ್ ಬಸ್‌ಗಳಿಗಾಗಿ ಅಸ್ಸಾಂ ರಾಜ್ಯ ಸಾರಿಗೆ ಸಂಸ್ಥೆಗಳಿಂದ ಪ್ರಶಸ್ತಿ ಪತ್ರವನ್ನು ಸ್ವೀಕರಿಸಿದೆ. ಈಶಾನ್ಯ ರಾಜ್ಯಗಳಿಂದ ಬಂದ ಮೊದಲ ಆರ್ಡರ್ ಇದಾಗಿದೆ. ಇನ್ನು 9 ತಿಂಗಳ ಅವಧಿಯಲ್ಲಿ ಒಲೆಕ್ಟ್ರಾ ಎಲೆಕ್ಟ್ರಿಕ್ ಬಸ್ಗಳನ್ನು (Electric Buses) ವಿತರಿಸಲಾಗುವುದು. ಮುಂದಿನ 5 ವರ್ಷಗಳ ಅವಧಿಗೆ ಈ ಬಸ್‌ಗಳ ನಿರ್ವಹಣೆಗೆ ಈ ಕಂಪನಿಯೇ ಜವಾಬ್ದಾರರಾಗಿರುತ್ತದೆ.
ಅಂದಹಾಗೆ, ಈ 100 ಎಲೆಕ್ಟ್ರಿಕ್ ಬಸ್‌ಗಳ ಪೂರೈಕೆಯ ಮೌಲ್ಯವು ಅಂದಾಜು 151 ಕೋಟಿ ರೂ. ಆಗಿದೆ. ಈ ಬಗ್ಗೆ ಒಲೆಕ್ಟ್ರಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಕೆ.ವಿ ಪ್ರದೀಪ್ ಮಾತನಾಡಿ, “ಈಶಾನ್ಯ ರಾಜ್ಯಗಳು ಮತ್ತು ಅಸ್ಸಾಂನಿಂದ ಮೊದಲ ಆರ್ಡರ್ ಸಿಕ್ಕಿರುವುದಕ್ಕೆ ನಮಗೆ ಬಹಳ ಸಂತೋಷವಾಗಿದೆ. ಈ ಆದೇಶದೊಂದಿಗೆ, ನಮ್ಮ ಬಸ್ಸುಗಳು ಭಾರತದ ಎಲ್ಲಾ ಮೂಲೆಗಳಲ್ಲಿ ಸಂಚರಿಸುತ್ತಿವೆ. ಇಂಗಾಲದ ಹೊರಸೂಸುವಿಕೆಯನ್ನು ಈ ಬಸ್ಗಳು ಗಣನೀಯವಾಗಿ ಕಡಿಮೆ ಮಾಡಿದೆ ಎಂದು ಹೇಳಿದ್ದಾರೆ.
2000ರಲ್ಲಿ ಸ್ಥಾಪಿತವಾದ ಒಲೆಕ್ಟ್ರಾ ಗ್ರೀನ್ಟೆಕ್ ಲಿಮಿಟೆಡ್ MEIL ಗ್ರೂಪ್ನ ಭಾಗವಾಗಿದೆ. 2015ರಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಪರಿಚಯವನ್ನು ಮಾಡಲಾಯಿತು. ಇದು ವಿದ್ಯುತ್ ಪ್ರಸರಣ ಮತ್ತು ವಿತರಣಾ ಜಾಲಗಳಿಗಾಗಿ ಸಿಲಿಕಾನ್ ರಬ್ಬರ್ ಸಂಯೋಜಿತವಾದ ಭಾರತದಲ್ಲಿನ ಅತಿದೊಡ್ಡ ಉತ್ಪಾದಕವಾಗಿದೆ.
Published On - 12:15 pm, Sat, 3 September 22