ಆಪರೇಷನ್ ಅಜಯ್: ಇಸ್ರೇಲ್​ನಿಂದ ದೆಹಲಿಗೆ ಬಂದ ಇಬ್ಬರು ನೇಪಾಳಿಯರು ಸೇರಿದಂತೆ 143 ಮಂದಿ ಪ್ರಯಾಣಿಕರನ್ನು ಹೊತ್ತ ಭಾರತೀಯ ವಿಮಾನ

ಇಸ್ರೇಲ್-ಹಮಾಸ್ ಸಂಘರ್ಷದ ನಡುವೆ ‘ಆಪರೇಷನ್ ಅಜಯ್' ಅಡಿಯಲ್ಲಿ, ಇಸ್ರೇಲ್ ತೊರೆಯಲು ಬಯಸಿದ ಇಬ್ಬರು ನೇಪಾಳಿ ನಾಗರಿಕರು ಮತ್ತು ನಾಲ್ವರು ಮಕ್ಕಳು ಸೇರಿದಂತೆ 143 ಜನರನ್ನು ಹೊತ್ತ ವಿಶೇಷ ವಿಮಾನವು ಇಸ್ರೇಲ್‌ನಿಂದ ಹೊರಟು ಭಾರತಕ್ಕೆ ತಲುಪಿದೆ. ಅಕ್ಟೋಬರ್ 7 ರಂದು, ಹಮಾಸ್ ಉಗ್ರಗಾಮಿಗಳು ಇಸ್ರೇಲಿ ನಗರಗಳ ಮೇಲೆ ದಾಳಿ ಮಾಡಿದರು, ನಂತರ ಭಾರತ ಸರ್ಕಾರವು ತನ್ನ ನಾಗರಿಕರ ವಾಪಸಾತಿಗಾಗಿ ಅಕ್ಟೋಬರ್ 12 ರಂದು ‘ಆಪರೇಷನ್ ಅಜಯ್' ಅನ್ನು ಪ್ರಾರಂಭಿಸಿತು.

ಆಪರೇಷನ್ ಅಜಯ್: ಇಸ್ರೇಲ್​ನಿಂದ ದೆಹಲಿಗೆ ಬಂದ ಇಬ್ಬರು ನೇಪಾಳಿಯರು ಸೇರಿದಂತೆ 143 ಮಂದಿ ಪ್ರಯಾಣಿಕರನ್ನು ಹೊತ್ತ ಭಾರತೀಯ ವಿಮಾನ
ಆಪರೇಷನ್ ಅಜಯ್Image Credit source: Mint
Follow us
ನಯನಾ ರಾಜೀವ್
|

Updated on: Oct 23, 2023 | 8:51 AM

ಇಸ್ರೇಲ್-ಹಮಾಸ್ ಸಂಘರ್ಷದ ನಡುವೆ ‘ಆಪರೇಷನ್ ಅಜಯ್’ ಅಡಿಯಲ್ಲಿ, ಇಸ್ರೇಲ್ ತೊರೆಯಲು ಬಯಸಿದ ಇಬ್ಬರು ನೇಪಾಳಿ ನಾಗರಿಕರು ಮತ್ತು ನಾಲ್ವರು ಮಕ್ಕಳು ಸೇರಿದಂತೆ 143 ಜನರನ್ನು ಹೊತ್ತ ವಿಶೇಷ ವಿಮಾನವು ಇಸ್ರೇಲ್‌ನಿಂದ ಹೊರಟು ಭಾರತಕ್ಕೆ ತಲುಪಿದೆ. ಅಕ್ಟೋಬರ್ 7 ರಂದು, ಹಮಾಸ್ ಉಗ್ರಗಾಮಿಗಳು ಇಸ್ರೇಲಿ ನಗರಗಳ ಮೇಲೆ ದಾಳಿ ಮಾಡಿದರು, ನಂತರ ಭಾರತ ಸರ್ಕಾರವು ತನ್ನ ನಾಗರಿಕರ ವಾಪಸಾತಿಗಾಗಿ ಅಕ್ಟೋಬರ್ 12 ರಂದು ‘ಆಪರೇಷನ್ ಅಜಯ್’ ಅನ್ನು ಪ್ರಾರಂಭಿಸಿತು.

ಆಪರೇಷನ್ ಅಜಯ್ ಮುಂದುವರೆದಿದೆ: ಆಪರೇಷನ್ ಅಜಯ್ ಅಡಿಯಲ್ಲಿ ಭಾರತೀಯ ನಾಗರಿಕರನ್ನು ಮರಳಿ ಕರೆತಂದ ಆರನೇ ವಿಮಾನ ಇದಾಗಿದೆ. ಇಬ್ಬರು ನೇಪಾಳ ಪ್ರಜೆಗಳು ಮತ್ತು ನಾಲ್ಕು ಶಿಶುಗಳು ಸೇರಿದಂತೆ 143 ಜನರು ವಿಮಾನದಲ್ಲಿದ್ದರು ಎಂದು ಮೂಲಗಳು ಪಿಟಿಐಗೆ ತಿಳಿಸಿವೆ. ಇಲ್ಲಿನ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಬರೆದುಕೊಂಡಿದೆ.

ಈ ಹಿಂದೆ ಅಕ್ಟೋಬರ್ 17 ರಂದು ವಿಶೇಷ ವಿಮಾನದ ಮೂಲಕ 18 ನೇಪಾಳಿ ನಾಗರಿಕರನ್ನು ಕರೆತರಲಾಗಿತ್ತು, ಆದರೆ ಅದರಲ್ಲಿ 286 ಭಾರತೀಯ ನಾಗರಿಕರು ಕೂಡ ಇದ್ದರು. ಇಲ್ಲಿಯವರೆಗೆ ಮಕ್ಕಳು ಸೇರಿದಂತೆ ಸುಮಾರು 1,200 ಪ್ರಯಾಣಿಕರನ್ನು ಒಟ್ಟು ಐದು ವಿಶೇಷ ವಿಮಾನಗಳ ಮೂಲಕ ಟೆಲ್ ಅವೀವ್‌ನಿಂದ ದೆಹಲಿಗೆ ಕರೆತರಲಾಗಿದೆ.

ಭಾರತವು ಪ್ಯಾಲೆಸ್ತೀನ್‌ಗೆ ನೆರವು ಕಳುಹಿಸಿದೆ

ಈ ಮಧ್ಯೆ, ಭಾರತವು ಸುಮಾರು 6.5 ಟನ್ ವೈದ್ಯಕೀಯ ನೆರವು ಮತ್ತು 32 ಟನ್ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಪ್ಯಾಲೆಸ್ತೀನ್‌ಗೆ ಕಳುಹಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಭಾರತವು ಪ್ಯಾಲೆಸ್ತೀನ್‌ಗೆ ನೆರವು ಕಳುಹಿಸಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ಈಜಿಪ್ಟ್​ನ ರಫಾ ಮೂಲಕ ಗಾಜಾಗೆ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿದ ಭಾರತ

ಪ್ಯಾಲೇಸ್ತೀನಿಯನ್ ಜನರಿಗಾಗಿ ಸುಮಾರು 6.5 ಟನ್ ವೈದ್ಯಕೀಯ ನೆರವು ಮತ್ತು 32 ಟನ್ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತ IAF C-17 ವಿಮಾನವು ಈಜಿಪ್ಟ್‌ನ ಎಲ್-ಅರಿಶ್ ವಿಮಾನ ನಿಲ್ದಾಣಕ್ಕೆ ಹೊರಟಿದೆ ಎಂದು ಅವರು ಹೇಳಿದರು.

ಇಸ್ರೇಲ್ ದಾಳಿಯಲ್ಲಿ ಇದುವರೆಗೆ ಸುಮಾರು 4,400 ಜನರು ಸಾವನ್ನಪ್ಪಿದ್ದಾರೆ ಹಮಾಸ್ ದಾಳಿಯ ನಂತರ, ಗಾಜಾದ ಮೇಲೆ ಇಸ್ರೇಲ್ ಪ್ರತೀಕಾರದ ದಾಳಿಯಲ್ಲಿ ಮಕ್ಕಳೂ ಸೇರಿದಂತೆ ಸುಮಾರು 4,400 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂಬುದು ಗಮನಾರ್ಹ. ಅಧಿಕೃತ ಮೂಲಗಳ ಪ್ರಕಾರ, ಇಸ್ರೇಲ್‌ನಲ್ಲಿ ಕನಿಷ್ಠ 1,400 ಇಸ್ರೇಲಿ ನಾಗರಿಕರು ಮತ್ತು ವಿದೇಶಿ ಪ್ರಜೆಗಳು ಸಾವನ್ನಪ್ಪಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ