
ನವದೆಹಲಿ, ಮೇ 7: ಪಹಲ್ಗಾಂ ಉಗ್ರ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದೊಳಗೆ ನುಗ್ಗಿ 9 ಸ್ಥಳಗಳ ಮೇಲೆ ದಾಳಿ ಮಾಡಿದೆ. 70ಕ್ಕೂ ಹೆಚ್ಚು ಉಗ್ರಗಾಮಿಗಳು ಸತ್ತಿರುವ ಅಂದಾಜು ಇದೆ. ಇದು ಈವರೆಗೆ ಭಾರತ ಮಾಡಿರದ ಅತಿ ತೀಕ್ಷ್ಣ ದಾಳಿ (Operation Sindoor) ಎನಿಸಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಹಾಗೂ ಆಕ್ರಮಿತ ಕಾಶ್ಮೀರ ಭಾಗದಲ್ಲಿ (PoK- Pakistan occupied Kashmir) ಈ 9 ಸ್ಥಳಗಳಿವೆ. ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯ ಕಚೇರಿ ಅಥವಾ ತರಬೇತಿ ಕ್ಯಾಂಪ್ ಇರುವುದು ಬಹವಾಲಪುರ್ನಲ್ಲಿ. ಇಲ್ಲಿ ಭಾರತ ನುಗ್ಗಿ ಹೊಡೆದಿದೆ. ಹಫೀಜ್ ಸಯ್ಯದ್ ಕುಟುಂಬದ 10 ಸದಸ್ಯರು ಸೇರಿ ಹಲವರು ಇಲ್ಲಿ ಸತ್ತಿರುವ ಶಂಕೆ ಇದೆ.
ಬಹವಾಲ್ಪುರ್ನಲ್ಲಿರುವ ಜೈಷೆ ಶಿಬಿರವು ಅಂತಾರಾಷ್ಟ್ರೀಯ ಗಡಿಯಿಂದ 250-300 ಕಿಮೀ ದೂರದಲ್ಲಿದೆ ಎಂದು ಹೇಳಲಾಗುತ್ತಿದೆ. ಕೆಲ ಮಾಧ್ಯಮಗಳಲ್ಲಿ ಇದು 100 ಕಿಮೀ ಎಂದಿದೆ. 100 ಕಿಮೀ ಆಗಲೀ ಅಥವಾ 250 ಕಿಮೀ ಆಗಲಿ, ಭಾರತವು ಪಾಕಿಸ್ತಾನದೊಳಗೆ ಇಷ್ಟು ಒಳನುಗ್ಗಿ ಹೊಡೆತ ನೀಡಿದ್ದು ಇದೇ ಮೊದಲು. 1947ರಿಂದ ಪಾಕಿಸ್ತಾನದೊಂದಿಗೆ ನಡೆದ ನಾಲ್ಕು ಯುದ್ಧಗಳಲ್ಲಾಗಲೀ, ಅಥವಾ ಸರ್ಜಿಕಲ್ ಸ್ಟ್ರೈಕ್, ಏರ್ಸ್ಟ್ರೈಕ್ನಂತಹ ಕಾರ್ಯಾಚರಣೆಗಳಲ್ಲಾಗಲೀ ಭಾರತವು ಪಾಕಿಸ್ತಾನದ ಮುಖ್ಯ ಭಾಗಕ್ಕೆ ಇಷ್ಟು ದೂರ ಹೋಗಿದ್ದಿಲ್ಲ. ಹೀಗಾಗಿ, ಆಪರೇಷನ್ ಸಿಂದೂರ ಎಲ್ಲಾ ದೃಷ್ಟಿಯಿಂದಲೂ ಐತಿಹಾಸಿಕ ಎನಿಸಿದೆ.
ಇದನ್ನೂ ಓದಿ: ಅಭಿ ಪಿಕ್ಚರ್ ಬಾಕಿ ಹೈ ಎಂದ ಮನೋಜ್ ನರವನೆ; ದೊಡ್ಡ ಪ್ರಹಾರದ ಮುನ್ಸೂಚನೆ ಕೊಟ್ಟರಾ ಮಾಜಿ ಸೇನಾ ಮುಖ್ಯಸ್ಥ?
ಇದನ್ನೂ ಓದಿ: ಆಪರೇಷನ್ ಸಿಂಧೂರ್: ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಯಾರು? ಇಲ್ಲಿದೆ ಮಾಹಿತಿ
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:38 pm, Wed, 7 May 25