Operation Sindoor: ಈ ಚೀಪ್ ಪಬ್ಲಿಸಿಟಿ ಯಾಕೆಂದು ಛೀಮಾರಿ ಹಾಕಿ ಪ್ರೊಫೆಸರ್​ಗೆ ಸುಪ್ರೀಂನಿಂದ ಜಾಮೀನು

Operation Sindoor: ‘ಈ ಚೀಪ್ ಪಬ್ಲಿಸಿಟಿ ನಿಮಗೆ ಯಾಕೆ ಬೇಕು’’ ಎಂದು ಛೀಮಾರಿ ಹಾಕಿರುವ ಸುಪ್ರೀಂಕೋರ್ಟ್​ ಆಪರೇಷನ್ ಸಿಂಧೂರ್​ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಅಶೋಕ ವಿಶ್ವವಿದ್ಯಾಲಯದ ಪ್ರೊಫೆಸರ್ ಅಲಿ ಖಾನ್​ಗೆ ಮಧ್ಯಂತರ ಜಾಮೀನು ನೀಡಿದೆ. ಅಲಿ ಖಾನ್ ಮಹ್ಮದಾಬಾದ್ ಅವರನ್ನು ಆಪರೇಷನ್ ಸಿಂದೂರ್ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಬಂಧಿಸಲಾಗಿತ್ತು.

Operation Sindoor: ಈ ಚೀಪ್ ಪಬ್ಲಿಸಿಟಿ ಯಾಕೆಂದು ಛೀಮಾರಿ ಹಾಕಿ ಪ್ರೊಫೆಸರ್​ಗೆ ಸುಪ್ರೀಂನಿಂದ ಜಾಮೀನು
ಅಲಿ ಖಾನ್
Image Credit source: India Today

Updated on: May 21, 2025 | 2:01 PM

ನವದೆಹಲಿ, ಮೇ 21: ‘‘ಈ ಚೀಪ್ ಪಬ್ಲಿಸಿಟಿ ನಿಮಗೆ ಯಾಕೆ ಬೇಕು’’ ಎಂದು ಛೀಮಾರಿ ಹಾಕಿರುವ ಸುಪ್ರೀಂಕೋರ್ಟ್​ ಆಪರೇಷನ್ ಸಿಂಧೂರ್(Operation Sindoor)​ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಅಶೋಕ ವಿಶ್ವವಿದ್ಯಾಲಯದ ಪ್ರೊಫೆಸರ್ ಅಲಿ ಖಾನ್​ಗೆ ಮಧ್ಯಂತರ ಜಾಮೀನು ನೀಡಿದೆ. ಅಲಿ ಖಾನ್ ಮಹ್ಮದಾಬಾದ್ ಅವರನ್ನು ಆಪರೇಷನ್ ಸಿಂದೂರ್ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಬಂಧಿಸಲಾಗಿತ್ತು.

ಹರಿಯಾಣ ರಾಜ್ಯ ಮಹಿಳಾ ಆಯೋಗವು ಸಹಾಯಕ ಪ್ರಾಧ್ಯಾಪಕರಿಗೆ ಅವರ ಆಪರೇಷನ್ ಸಿಂದೂರ್ ಹೇಳಿಕೆಗಳ ಕುರಿತು ನೋಟಿಸ್ ಕಳುಹಿಸಿದ ಕೆಲವು ದಿನಗಳ ನಂತರ ಬಂಧಿಸಲಾಗಿತ್ತು.ಮಹ್ಮದಾಬಾದ್ ಅವರ ಹೇಳಿಕೆಗಳನ್ನು ಆಯೋಗದ ನೋಟೀಸ್‌ಗೆ ಲಗತ್ತಿಸಲಾಗಿತ್ತು, ಮತ್ತು ಅವುಗಳಲ್ಲಿ ಒಂದರಲ್ಲಿ, ಕರ್ನಲ್ ಖುರೇಷಿಯನ್ನು ಶ್ಲಾಘಿಸುವ ಬಲಪಂಥೀಯ ಜನರು ಗುಂಪು ಹಲ್ಲೆ ಮತ್ತು ಆಸ್ತಿಗಳ ಬುಲ್ಡೋಜರ್‌ಗೆ ಬಲಿಯಾದವರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಬೇಕು ಎಂದು ಅವರು ಹೇಳಿದ್ದರು.

ಅಶೋಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಪ್ರೊಫೆಸರ್ ಅಲಿ ಖಾನ್ ಮಹ್ಮದಾಬಾದ್ ಅವರನ್ನು ಕಳೆದ ವಾರ ಆಪರೇಷನ್ ಸಿಂಧೂರ್ ಕುರಿತ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಬಂಧಿಸಲಾಯಿತು. ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ರಾಷ್ಟ್ರೀಯ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಕೃತ್ಯಗಳ ಅಡಿಯಲ್ಲಿ ಅವರ ವಿರುದ್ಧ ಆರೋಪ ಹೊರಿಸಲಾಗಿತ್ತು.

ಮತ್ತಷ್ಟು ಓದಿ: ರಾಹುಲ್ ಗಾಂಧಿ ಆಧುನಿಕ ಯುಗದ ಮೀರ್ ಜಾಫರ್; ಬಿಜೆಪಿಯಿಂದ ತೀವ್ರ ವಾಗ್ದಾಳಿ

ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಇಂದು ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಎನ್. ಕೋಟಿಶ್ವರ್ ಸಿಂಗ್ ಅವರ ಪೀಠದ ಮುಂದೆ ಮಹ್ಮದಾಬಾದ್ ಪ್ರಕರಣವನ್ನು ವಾದಿಸಲು ಹಾಜರಾದರು. ವಾದಗಳಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕಾಂತ್, ಹೌದು ಪ್ರತಿಯೊಬ್ಬರಿಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ, ಇದೆಲ್ಲದರ ಬಗ್ಗೆ ಮಾತನಾಡಲು ಇದು ಸಮಯವೇ? ದೇಶದಲ್ಲಿ ಪಹಲ್ಗಾಮ್​ನಂತಹ ದಾಳಿ ನಡೆಸಿರುವಾಗ, ರಾಕ್ಷಸರು ಬಂದು ದಾಳಿ ಮಾಡಿದಾಗ ನಾವು ಒಗ್ಗಟ್ಟಾಗಿ ಹೋರಾಡುವ ಬದಲು ಇಂಥಾ ಹೇಳಿಕೆ ನೀಡುವುದು ಸರಿಯೇ, ಈ ಸಮಯದಲ್ಲಿ ಈ ಚೀಪ್ ಪಬ್ಲಿಸಿಟಿ ಬೇಕೇ ಎಂದು ಪ್ರಶ್ನಿಸಿದ್ದಾರೆ.

ಪ್ರಾಧ್ಯಾಪಕರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಯಾವುದೇ ಕ್ರಿಮಿನಲ್ ಉದ್ದೇಶವಿಲ್ಲ ಎಂದು ಸಿಬಲ್ ಒತ್ತಿ ಹೇಳಿದರು. ನ್ಯಾಯಮೂರ್ತಿ ಕಾಂತ್, ಇಲ್ಲಿ ಏನು ನಡೆಯುತ್ತಿದೆ ಎಂದು ನಿಮಗೆ ತಿಳಿದಿರಬೇಕು. ವಾಕ್ ಸ್ವಾತಂತ್ರ್ಯದ ಹಕ್ಕು ಇದೆ ಎಂದು ವಾದಿಸುವವರು ದೇಶದ ಕರ್ತವ್ಯ ಮರೆತಿರಾ ಎಂದು ಅವರನ್ನು ಕೇಳಬೇಕು. ಕಳೆದ 75 ವರ್ಷಗಳಿಂದ ಜನರು ಕೇವಲ ತಮ್ಮ ಹಕ್ಕುಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ.

ಆದರೆ ಕರ್ತವ್ಯದ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಗುಡುಗಿದರು. ನ್ಯಾಯಾಲಯವು ಪ್ರಾಧ್ಯಾಪಕರಿಗೆ ಮೂರು ಷರತ್ತುಗಳೊಂದಿಗೆ ಜಾಮೀನು ನೀಡಿದೆ: ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಲೇಖನ ಅಥವಾ ಆನ್‌ಲೈನ್ ಪೋಸ್ಟ್ ಬರೆಯಬಾರದು ಅಥವಾ ಯಾವುದೇ ಭಾಷಣ ಮಾಡಬಾರದು, ಪಹಲ್ಗಾಮ್ ದಾಳಿ ಅಥವಾ ಆಪರೇಷನ್ ಸಿಂಧೂರ್ ಬಗ್ಗೆ ಅವರು ಪ್ರತಿಕ್ರಿಯಿಸಬಾರದು ಮತ್ತು ಅವರು ತಮ್ಮ ಪಾಸ್‌ಪೋರ್ಟ್ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಹೇಳಲಾಗಿದೆ.

ಆಪರೇಷನ್ ಸಿಂದೂರ್ ಬ್ರೀಫಿಂಗ್‌ಗಳಿಗಾಗಿ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರನ್ನು ಸರ್ಕಾರ ಆಯ್ಕೆ ಮಾಡಿದ್ದರ ಬಗ್ಗೆ ಮಾಡಿದ ಹೇಳಿಕೆಗಳಿಗಾಗಿ ಪ್ರಾಧ್ಯಾಪಕರ ವಿರುದ್ಧ ಎರಡು ಎಫ್‌ಐಆರ್‌ಗಳು ದಾಖಲಾಗಿದ್ದು, ಅವುಗಳಲ್ಲಿ ಒಂದನ್ನು ಹರಿಯಾಣ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ ದಾಖಲಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:06 pm, Wed, 21 May 25