AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ಭೇಟಿ ನೀಡುವವರೆಗೆ ಸಂದೇಶ್‌ಖಾಲಿ ಸಮಸ್ಯೆ ಪರಿಹಾರವಾಗದಂತೆ ನೋಡಿಕೊಳ್ಳಲು ಬಿಜೆಪಿ ಬಯಸುತ್ತಿದೆ: ಟಿಎಂಸಿ

ಸಂದೇಶ್‌ಖಾಲಿ ವಿಷಯವನ್ನು ಜ್ವಲಂತವಾಗಿಡಲು ಬಿಜೆಪಿ ಬಯಸುತ್ತೆ. ಪ್ರಧಾನಿ ನರೇಂದ್ರ ಮೋದಿ ಮಾರ್ಚ್‌ನಲ್ಲಿ ಪಶ್ಚಿಮ ಬಂಗಾಳಕ್ಕೆ ಆಗಮಿಸುವವರೆಗೆ ಸಂದೇಶ್‌ಖಾಲಿ ಪರಿಹಾರ ಕಂಡುಕೊಳ್ಳಬಾರದು. ಅದಕ್ಕಾಗಿಯೇ ಪ್ರತಿದಿನ ಬಿಜೆಪಿ ನಾಯಕರು ಸಂದೇಶ್‌ಖಾಲಿಗೆ ಭೇಟಿ ನೀಡಲು ಸಾಲುಗಟ್ಟಿ ನಿಂತಿದ್ದಾರೆ ಎಂದು ಟಿಎಂಸಿ ನಾಯಕ ಕುನಾಲ್ ಘೋಷ್ ಹೇಳಿದ್ದಾರೆ.

ಮೋದಿ ಭೇಟಿ ನೀಡುವವರೆಗೆ ಸಂದೇಶ್‌ಖಾಲಿ ಸಮಸ್ಯೆ ಪರಿಹಾರವಾಗದಂತೆ ನೋಡಿಕೊಳ್ಳಲು ಬಿಜೆಪಿ ಬಯಸುತ್ತಿದೆ: ಟಿಎಂಸಿ
ಸಂದೇಶ್​​ಖಾಲಿಯಲ್ಲಿ ಬಿಜೆಪಿ ಪ್ರತಿಭಟನೆ
Follow us
ರಶ್ಮಿ ಕಲ್ಲಕಟ್ಟ
|

Updated on:Feb 23, 2024 | 4:06 PM

ಕೊಲ್ಕತ್ತಾ ಫೆಬ್ರುವರಿ 23: ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ (Locket Chatterjee) ಸೇರಿದಂತೆ ಹಲವು ನಾಯಕಿಯರನ್ನ ಸೆಕ್ಷನ್ 144 ಉಲ್ಲೇಖಿಸಿ ಆ ಪ್ರದೇಶಕ್ಕೆ ತೆರಳುತ್ತಿದ್ದಾಗ ಬಂಧನಕ್ಕೊಳಪಡಿಸಿದ್ದರಿಂದ ಶುಕ್ರವಾರ ಸಂದೇಶ್‌ಖಾಲಿಯಲ್ಲಿ (Sandeshkhali) ಹೊಸ ಗಲಾಟೆ ಭುಗಿಲೆದ್ದಿದೆ. ಭೂಕಬಳಿಕೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ತೃಣಮೂಲದ ಪ್ರಬಲ ನಾಯಕ ಶೇಖ್ ಷಹಜಹಾನ್ ಮತ್ತು ಆತನ ಸಹಾಯಕರ ವಿರುದ್ಧ ಸಂದೇಶ್‌ಖಾಲಿಯಲ್ಲಿ ಮಹಿಳೆಯರು ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸಂದೇಶ್‌ಖಾಲಿಯಲ್ಲಿ ನಿಷೇಧಾಜ್ಞೆ ಇರುವ ಕಾರಣ ಬಿಜೆಪಿ (BJP) ನಾಯಕರು ಅಲ್ಲಿಗೆ ಭೇಟಿ ನೀಡುವುದನ್ನು ಆಡಳಿತಾರೂಢ ಟಿಎಂಸಿ (TMC) ತಡೆಯುತ್ತಿದೆ.

ಶುಕ್ರವಾರ ನಡೆದ ಈ ಗಲಾಟೆ ಬಗ್ಗೆ ಮಾತನಾಡಿದ ತೃಣಮೂಲ ನಾಯಕ ಕುನಾಲ್ ಘೋಷ್, ಸಂದೇಶ್‌ಖಾಲಿ ವಿಷಯವನ್ನು ಜ್ವಲಂತವಾಗಿಡಲು ಬಿಜೆಪಿ ಬಯಸುತ್ತೆ. ಪ್ರಧಾನಿ ನರೇಂದ್ರ ಮೋದಿ ಮಾರ್ಚ್‌ನಲ್ಲಿ ಪಶ್ಚಿಮ ಬಂಗಾಳಕ್ಕೆ ಆಗಮಿಸುವವರೆಗೆ ಸಂದೇಶ್‌ಖಾಲಿ ಪರಿಹಾರ ಕಂಡುಕೊಳ್ಳಬಾರದು. ಅದಕ್ಕಾಗಿಯೇ ಪ್ರತಿದಿನ ಬಿಜೆಪಿ ನಾಯಕರು ಸಂದೇಶ್‌ಖಾಲಿಗೆ ಭೇಟಿ ನೀಡಲು ಸಾಲುಗಟ್ಟಿ ನಿಂತಿದ್ದಾರೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿಯವರು ತಮ್ಮ ಅಧಿಕೃತ ಕಾರ್ಯಕ್ರಮದ ಭಾಗವಾಗಿ ಮಾರ್ಚ್ 1 ಮತ್ತು 2 ರಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು, ಮಾರ್ಚ್ 6 ರಂದು ಉತ್ತರ 24 ಪರಗಣದಲ್ಲಿ ಮಹಿಳಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಂದೇಶ್‌ಖಾಲಿ ಉತ್ತರ 24 ಪರಗಣದಲ್ಲಿದೆ.

ಲಾಕೆಟ್ ಚಟರ್ಜಿಯನ್ನು ತಡೆದ ಪೊಲೀಸ್

ಲಾಕೆಟ್ ಚಟರ್ಜಿ ತನ್ನ ಕ್ಷೇತ್ರಕ್ಕೆ ಹೋಗದೆ ಸಂಸಂದೇಶ್‌ಖಾಲಿಗೆ ಫೋಟೋಶೂಟ್ ಮಾಡಲು ಹೋಗುತ್ತಾರೆ. ಹಾಗಾಗಿ ಅವರು ಪ್ರತಿದಿನ ಹೋಗಿ ಜನರನ್ನು ಪ್ರಚೋದಿಸಿ ಅಲ್ಲಿ ನಾಟಕ ಮಾಡುತ್ತಾರೆ ”ಎಂದು ಕುನಾಲ್ ಘೋಷ್ ಹೇಳಿದರು.

ಶುಕ್ರವಾರ ಸಂದೇಶ್‌ಖಾಲಿಗೆ ತೆರಳುತ್ತಿದ್ದ ಮಹಿಳಾ ತಂಡದಲ್ಲಿ ಸಂಸದೆ ಲಾಕೆಟ್ ಚಟರ್ಜಿ, ಶಾಸಕ ಅಗ್ನಿಮಿತ್ರ ಪಾಲ್, ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಮಧುಚಂದ್ರ ಕರ್, ಉಪಾಧ್ಯಕ್ಷೆ, ವಕೀಲ ಪ್ರಿಯಾಂಕಾ ತಿಬ್ರೆವಾಲ್, ರಾಜ್ಯ ಕಾರ್ಯದರ್ಶಿ ಸೋನಾಲಿ ಮುರ್ಮು, ಫಲ್ಗುಣಿ ಪಾತ್ರ ಮತ್ತು ಪರೋಮಿತಾ ದತ್ತಾ ಇದ್ದರು.

ಪಶ್ಚಿಮ ಬಂಗಾಳದ ಡಿಜಿಪಿ ರಾಜೀವ್ ಕುಮಾರ್ ಶುಕ್ರವಾರ ಸಂದೇಶ್‌ಖಾಲಿಯಲ್ಲಿದ್ದರು. ಕೆಲವು ಭಾಗಗಳಲ್ಲಿ ಷಹಜಾನ್ ವಿರುದ್ಧ ಹೊಸ ಪ್ರತಿಭಟನೆಗಳು ಪ್ರಾರಂಭವಾಗಿವೆ. ಇಬ್ಬರು ಟಿಎಂಸಿ ನಾಯಕರು ಮತ್ತು ಶಹಜಹಾನ್ ಅವರ ಆಪ್ತ ಸಹಾಯಕ ಸೇರಿದಂತೆ ಭೂಹಗರಣ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 18 ಜನರನ್ನು ಬಂಧಿಸಿದ್ದಾರೆ. ಜನವರಿಯಿಂದ ಷಹಜಹಾನ್ ತಲೆಮರೆಸಿಕೊಂಡಿದ್ದು, ಇಡಿ ಮೊದಲ ಬಾರಿಗೆ ಆತನ ಮನೆ ಮೇಲೆ ದಾಳಿ ನಡೆಸಿತ್ತು.

ಇದನ್ನೂ ಓದಿ: ಮಾರ್ಚ್ 6 ರಂದು ಪಶ್ಚಿಮ ಬಂಗಾಳಕ್ಕೆ ಮೋದಿ; ಸಂದೇಶ್‌ಖಾಲಿ ಸಂತ್ರಸ್ತರನ್ನು ಭೇಟಿ ಮಾಡುವ ಸಾಧ್ಯತೆ

ಸಂದೇಶ್‌ಖಾಲಿ ಘಟನೆಗಳ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ್ದಕ್ಕಾಗಿ ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಅವರನ್ನು ಗುರುವಾರ ಬಂಧಿಸಲಾಯಿತು. “ಪೊಲೀಸರು ನಮ್ಮನ್ನು ಬಲವಂತವಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ನನ್ನನ್ನು ಬಂಧಿಸಿ ಬಿಡುಗಡೆ ಮಾಡುವ ಮೊದಲು ಜಾಮೀನು ಬಾಂಡ್‌ಗೆ ಸಹಿ ಹಾಕಲಾಯಿತು. ಇಲ್ಲಿ ಧರಣಿ ಕುಳಿತಿದ್ದಕ್ಕಾಗಿ ನಮ್ಮನ್ನು ಬಂಧಿಸಲಾಯಿತು. ನಮ್ಮ ಕಾರ್ಯಕರ್ತರ ಭೇಟಿಗೆ ಅವಕಾಶ ನೀಡುವವರೆಗೆ ನಾವು ಧ್ವನಿ ಎತ್ತುತ್ತೇವೆ ಮತ್ತು ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದ್ದಾರೆ

ಇಡಿ ಶುಕ್ರವಾರ ಷಹಜಹಾನ್ ಶೇಖ್ ವಿರುದ್ಧ ಹೊಸ ಪ್ರಕರಣ ದಾಖಲಿಸಿದ್ದು, ರಾಜ್ಯದ ಹಲವು ಸ್ಥಳಗಳಲ್ಲಿ ಶೋಧ ನಡೆಸಿದೆ.

Published On - 4:05 pm, Fri, 23 February 24

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ