ದೆಹಲಿ: ಭಾರತದಲ್ಲಿ ತೀವ್ರವಾದ ಕೊವಿಡ್ ರೋಗ ಉಲ್ಬಣದ ಬಗ್ಗೆ ಅಮೆರಿಕ ಅತೀವ ಕಳಕಳಿ ಹೊಂದಿದೆ. ಭಾರತದಲ್ಲಿರುವ ನಮ್ಮ ಸ್ನೇಹಿತರಿಗೆ ಮತ್ತು ಸಹಭಾಗಿಗಳಿಗೆ ಸಾಂಕ್ರಾಮಿಕ ರೋಗದ ವಿರುದ್ಧ ಧೈರ್ಯದಿಂದ ಹೋರಾಡುವಾಗ ಹೆಚ್ಚಿನ ಸಾಮಾಗ್ರಿ ಮತ್ತು ಬೆಂಬಲ ನೀಡಲು ನಾವು ದಿನರಾತ್ರಿ ಶ್ರಮಿಸುತ್ತಿದ್ದೇವೆ .ಶೀಘ್ರದಲ್ಲಿಯೇ ಹೆಚ್ಚಿನದ್ದು ಕಳುಹಿಸುತ್ತೇವೆ ಎಂದು ಅಮೆರಿಕದ ಭದ್ರತಾ ಸಲಹೆಗಾರ ಜೇಕ್ ಸಲ್ಲಿವಾನ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ನ್ನು ರೀಟ್ವೀಟ್ ಮಾಡಿದ ಚೆನ್ನೈನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಅನುವಾದ ಮಾಡಿ ಟ್ವೀಟ್ ಮಾಡಿದೆ.
The U.S. is deeply concerned by the severe COVID outbreak in India. We are working around the clock to deploy more supplies and support to our friends and partners in India as they bravely battle this pandemic. More very soon.
— Jake Sullivan (@JakeSullivan46) April 25, 2021
https://t.co/2LAuZkGgUq pic.twitter.com/VzMsgvWyAn
— US Consulate Chennai (@USAndChennai) April 25, 2021
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರ ಟ್ವೀಟ್ನ್ನೂ ಅಮೆರಿಕ ರಾಯಭಾರಿ ಕಚೇರಿ ಮೂರು ಭಾಷೆಗಳಲ್ಲಿ ಅನುವಾದ ಮಾಡಿ ಟ್ವೀಟ್ ಮಾಡಿದೆ.
https://t.co/w9yZOJ0YuG pic.twitter.com/kG0yxqnIo3
— US Consulate Chennai (@USAndChennai) April 25, 2021
Our hearts go out to the Indian people in the midst of the horrific COVID-19 outbreak. We are working closely with our partners in the Indian government, and we will rapidly deploy additional support to the people of India and India’s health care heroes.
— Secretary Antony Blinken (@SecBlinken) April 25, 2021
ಭೀಕರವಾದ ಕೊವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಭಾರತ ಸರ್ಕಾರದೊಂದಿಗೆ ಕೈಜೋಡಿಸಿ ನಿಕಟ ಬೆಂಬಲ ನೀಡುತ್ತಿದ್ದೇವೆ. ಭಾರತದ ನಾಗರಿಕರು ಮತ್ತು ಆರೋಗ್ಯ ಕ್ಷೇತ್ರದ ಹೋರಾಟಗಾರರಿಗೆ ಹೆಚ್ಚಿನ ಬೆಂಬಲವನ್ನು ಕ್ಷಿಪ್ರವಾಗಿ ನಿಯೋಜಿಸುತ್ತೇವೆ ಎಂದು ಆಂಟನಿ ಬ್ಲಿಂಕೆನ್ ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿ ಒಂದೇ ದಿನ 3,52,991 ಪ್ರಕರಣ ದಾಖಲು
ಭಾರತದಲ್ಲಿ ಕಳೆದ 24ಗಂಟೆಯಲ್ಲಿ 3,52,991 ಪ್ರಕರಣಗಳು ದಾಖಲಾಗಿದ್ದು, 2,891 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಭಾನುವಾರ ಕೂಡ ದೇಶದಲ್ಲಿ 3.55 ಹೊಸ ಕೇಸ್ಗಳು, 2,807 ಸಾವುಗಳು ದಾಖಲಾಗಿದ್ದವು. ಈ ಎರಡೂ ಸಂಖ್ಯೆಗಳು ಜಗತ್ತಿನ ಉಳಿದೆಲ್ಲ ರಾಷ್ಟ್ರಗಳಲ್ಲಿ ದಾಖಲಾದ ಕೊರೊನಾ ಸೋಂಕಿತರ ಸಂಖ್ಯೆಗಿಂತ ಜಾಸ್ತಿ.
ದೇಶದಲ್ಲಿ ಕೇವಲ 7ದಿನಗಳಲ್ಲಿ ಅಂದರೆ ಏಪ್ರಿಲ್ 18-25ರವರೆಗೆ 22.49 ಲಕ್ಷ ಕೊರೊನಾ ಪ್ರಕರಣಗಳು ದಾಖಲಾಗಿವೆ. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಏಳುದಿನಗಳಲ್ಲಿ 22 ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿದ್ದು ಇದೇ ಮೊದಲು ಮತ್ತು ಅದೂ ಭಾರತದಲ್ಲೇ ಆಗಿದೆ.
ಜ.10ರ ಸಮಯದಲ್ಲಿ ಏಳುದಿನಗಳ ಅವಧಿಯಲ್ಲಿ ಅಮೆರಿಕ 17.9 ಲಕ್ಷ ಪ್ರಕರಣಗಳನ್ನು ದಾಖಲಿಸಿದ್ದು ಬಿಟ್ಟರೆ ಇನ್ಯಾವ ದೇಶಗಳಲ್ಲೂ ಅಷ್ಟು ಪ್ರಮಾಣದ ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿಲ್ಲ. ಕಳೆದ ಅಲೆಯಲ್ಲಿ ಉತ್ತುಂಗದಲ್ಲಿದ್ದ ಬ್ರೆಜಿಲ್ ಒಂದು ವಾರದಲ್ಲಿ 5.4 ಲಕ್ಷ, ಬ್ರಿಟನ್ ನಲ್ಲಿ 4.3 ಲಕ್ಷ, ಟರ್ಕಿಯಲ್ಲಿ 4.2 ಲಕ್ಷ ದಾಖಲಾಗಿದ್ದೇ ಹೆಚ್ಚು. ಉಳಿದಂತೆ ಇನ್ಯಾವ ದೇಶಗಳಲ್ಲೂ ಏಳು ದಿನಲ್ಲಿ 4 ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಈ ಅಂಕಿ-ಅಂಶ ನೋಡಿದರೆ ಭಾರತದಲ್ಲಿ ಕೊರೊನಾ ಉಲ್ಬಣತೆಯ ಭೀಕರತೆ ಸ್ಪಷ್ಟವಾಗುತ್ತದೆ.
ಕೊರೊನಾ ಸೋಂಕಿತರ ಪ್ರಮಾಣದೊಂದಿಗೆ ಸಾವಿನ ಸಂಖ್ಯೆಯನ್ನೂ ಏರಿಕೆಯಾಗುತ್ತಿದೆ. ಏಪ್ರಿಲ್ 18ರಂದು ಕೊನೆಯಾಗುವಂತೆ ಏಳುದಿನಗಳ ಅವಧಿಯಲ್ಲಿ ದೇಶದಲ್ಲಿ 8,588 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದರು. ಆದರೆ 18ರಿಂದ ಈಚೆಗೆ ಒಂದು ವಾರದಲ್ಲಿ ದಾಖಲಾದ ಸಾವಿನ ಸಂಖ್ಯೆ ಬರೋಬ್ಬರಿ 16,257. ದೇಶದಲ್ಲಿ ಸೋಂಕಿತರ ಏರಿಕೆಯ ಪ್ರಮಾಣ ಶೇ.47 ಇದ್ದರೆ, ಸಾವಿನ ಪ್ರಮಾಣ ಅದರ 2ರಷ್ಟು, ಅಂದರೆ ಶೇ.89ರಷ್ಟಿದೆ.
(Our hearts go out to the Indian people in the midst of the horrific COVID 19 says USA consulates in Chennai tweets in kannada)
Published On - 11:56 am, Mon, 26 April 21