ನಿಜ್ವಾಗ್ಲೂ ಪೀರಿಯಡ್ಸ್ ಆಗಿದ್ಯಾ, ಸುಳ್ಳು ಹೇಳ್ತಿದ್ದೀರಾ, ಮಹಿಳಾ ಸಿಬ್ಬಂದಿಗೆ ಬಟ್ಟೆ ಬಿಚ್ಚು ಎಂದ ಯೂನಿವರ್ಸಿಟಿ ಮೇಲ್ವಿಚಾರಕ
ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿ ಬಳಿ ಪುರುಷ ಮೇಲ್ವಿಚಾರಕ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿರುವ ಘಟನೆ ವರದಿಯಾಗಿದೆ. ನಾಲ್ವರು ನೈರ್ಮಲ್ಯ ಕಾರ್ಮಿಕರು ಮುಟ್ಟಾಗಿದ್ದರು, ಅದಕ್ಕೆ ನಿಮಗೆ ನಿಜವಾಗ್ಲೂ ಪೀರಿಯಡ್ಸ್ ಆಗಿದೆಯಾ ಅಥವಾ ಸುಳ್ಳು ಹೇಳುತ್ತಿದ್ದೀರಾ ಬಟ್ಟೆ ಬಿಚ್ಚಿ ಎಂದು ಆತ ಒತ್ತಾಯಿಸಿದ್ದಾನೆ ಎನ್ನುವ ದೂರು ಕೇಳಿಬಂದಿದೆ. ಹರಿಯಾಣ ರಾಜ್ಯಪಾಲ ಅಸಿಮ್ ಕುಮಾರ್ ಘೋಷ್ ಅವರು ಅಕ್ಟೋಬರ್ 26 ರಂದು ವಿಶ್ವವಿದ್ಯಾಲಯ ಆವರಣಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ರೋಹ್ಟಕ್, ಅಕ್ಟೋಬರ್ 31: ಹರಿಯಾಣದ ರೋಹ್ಟಕ್ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿ ಬಳಿ ಪುರುಷ ಮೇಲ್ವಿಚಾರಕ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿರುವ ಘಟನೆ ವರದಿಯಾಗಿದೆ. ನಾಲ್ವರು ನೈರ್ಮಲ್ಯ ಕಾರ್ಮಿಕರು ಮುಟ್ಟಾಗಿದ್ದರು, ಅದಕ್ಕೆ ನಿಮಗೆ ನಿಜವಾಗ್ಲೂ ಪೀರಿಯಡ್ಸ್(Periods) ಆಗಿದೆಯಾ ಅಥವಾ ಸುಳ್ಳು ಹೇಳುತ್ತಿದ್ದೀರಾ ಬಟ್ಟೆ ಬಿಚ್ಚಿ ಎಂದು ಆತ ಒತ್ತಾಯಿಸಿದ್ದಾನೆ ಎನ್ನುವ ದೂರು ಕೇಳಿಬಂದಿದೆ.
ಹರಿಯಾಣ ರಾಜ್ಯಪಾಲ ಅಸಿಮ್ ಕುಮಾರ್ ಘೋಷ್ ಅವರು ಅಕ್ಟೋಬರ್ 26 ರಂದು ವಿಶ್ವವಿದ್ಯಾಲಯ ಆವರಣಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಇಬ್ಬರು ಮೇಲ್ವಿಚಾರಕರನ್ನು ವಿನೋದ್ ಕುಮಾರ್ ಮತ್ತು ವಿತೇಂದರ್ ಕುಮಾರ್ ಎಂದು ಗುರುತಿಸಲಾಗಿದೆ. ಕೆಲಸಕ್ಕೆ ತಡವಾಗಿ ತಲುಪಿದ್ದಕ್ಕಾಗಿ ವಿನೋದ್ ಮತ್ತು ವಿತೇಂದರ್ ನಾಲ್ವರು ಉದ್ಯೋಗಿಗಳನ್ನು ಪ್ರಶ್ನಿಸಿದಾಗ, ಅವರು ಪೀರಿಯಡ್ಸ್ ಆಗಿದೆ, ಸ್ವಲ್ಪ ಹೊಟ್ಟೆ ನೋವಿತ್ತು ಅದಕ್ಕೆ ತಡವಾಯಿತು ಎಂದು ಹೇಳಿದ್ದಾರೆ.
ಆದರೆ ಅವರಲ್ಲೊಬ್ಬ ಮೇಲ್ವಿಚಾರಕ್ಕೆ ಇವರ ವಿವರಣೆ ಕೇಳಲು ಸಿದ್ಧನಿರಲಿಲ್ಲ. ಪುರಾವೆ ಕೊಡಿ ಎಂದು ಕೇಳಿದ ಆತ ಬಟ್ಟೆ ಬಿಚ್ಚುವಂತೆ ಸೂಚಿಸಿದ್ದಾನೆ. ನಂತರ ಮೇಲ್ವಿಚಾರಕರು ಮತ್ತೊಬ್ಬ ಮಹಿಳಾ ಸಿಬ್ಬಂದಿಗೆ ಅವರು ಸ್ಯಾನಿಟರಿ ಪ್ಯಾಡ್‌ಗಳನ್ನು ಧರಿಸಿದ್ದಾರೆಯೇ ಎಂದು ಪರಿಶೀಲಿಸಲು ಆದೇಶಿಸಿದ್ದಾರೆ ಎಂದು ವರದಿಯಾಗಿದೆ.
ಮತ್ತಷ್ಟು ಓದಿ: ವಿಶ್ವ ಋತುಚಕ್ರ ನೈರ್ಮಲ್ಯ ದಿನ: ಮುಟ್ಟಿನ ಬಗ್ಗೆ ಮೌಢ್ಯ, ಮುಜುಗರ ಬೇಡವೇ ಬೇಡ; ಆ ದಿನಗಳಲ್ಲಿ ಸ್ವಚ್ಛತೆಯೇ ಆದ್ಯತೆಯಾಗಲಿ
ಸಿಬ್ಬಂದಿ ಸ್ಯಾನಿಟರಿ ಪ್ಯಾಡ್‌ಗಳ ಫೋಟೊಗಳನ್ನು ತೆಗೆದಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ನಂತರ, ಮಹಿಳಾ ಕಾರ್ಮಿಕರು ಮೇಲ್ವಿಚಾರಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರು ಸಹ ಸ್ಥಳದಲ್ಲಿ ಜಮಾಯಿಸಿ ಇಬ್ಬರು ಪುರುಷರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ರಿಜಿಸ್ಟ್ರಾರ್ ಡಾ. ಕೃಷ್ಣಕಾಂತ್ ಗುಪ್ತಾ ಮತ್ತು ಉಪಕುಲಪತಿ ಪ್ರೊ. ರಾಜ್‌ವೀರ್ ಕೂಡ ನಾಲ್ವರು ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದರು.
ವಿಶ್ವವಿದ್ಯಾಲಯ ಆಡಳಿತ ಮಂಡಳಿಯು ಇಬ್ಬರೂ ಮೇಲ್ವಿಚಾರಕರನ್ನು ಅಮಾನತುಗೊಳಿಸಿದೆ. ಪೊಲೀಸರನ್ನೂ ಕರೆಸಲಾಯಿತು. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪ್ರಶ್ನಿಸಲಾಯಿತು. ಹರಿಯಾಣ ಮಹಿಳಾ ಆಯೋಗವು ಘಟನೆಯನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ, ಈ ವಿಷಯದ ಬಗ್ಗೆ ವಿವರವಾದ ವರದಿಯನ್ನು ಕೋರಿ ರೋಹ್ಟಕ್‌ನ ಪೊಲೀಸ್ ವರಿಷ್ಠಾಧಿಕಾರಿಗೆ (ಎಸ್‌ಪಿ) ಪತ್ರ ಬರೆದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




