ಕೇರಳದ ಪೂಜಾಪ್ಪುರ ಕೇಂದ್ರ ಕಾರಾಗೃಹದ 262 ಕೈದಿಗಳಲ್ಲಿ ಕೊರೊನಾ ದೃಢ; ಪ್ರತ್ಯೇಕ ಸೆಲ್​​ಗೆ ಸೋಂಕಿತರ ರವಾನೆ, ವಿಶೇಷ ವೈದ್ಯರ ನೇಮಕಕ್ಕೆ ಆಗ್ರಹ

ಕೇರಳದ ಪೂಜಾಪ್ಪುರ ಕೇಂದ್ರ ಕಾರಾಗೃಹದ 262 ಕೈದಿಗಳಲ್ಲಿ ಕೊರೊನಾ ದೃಢ; ಪ್ರತ್ಯೇಕ ಸೆಲ್​​ಗೆ ಸೋಂಕಿತರ ರವಾನೆ, ವಿಶೇಷ ವೈದ್ಯರ ನೇಮಕಕ್ಕೆ ಆಗ್ರಹ
ಪೂಜಾಪ್ಪುರ ಸೆಂಟ್ರಲ್​ ಜೈಲು

ಕೇರಳದಲ್ಲಿ  ಇಂದು ಶುಕ್ರವಾರ ಒಂದೇ ದಿನ 54 ಒಮಿಕ್ರಾನ್​ ಸೋಂಕಿನ ಕೇಸ್​ಗಳು ದಾಖಲಾಗಿವೆ. ಈ ಮೂಲಕ ಒಟ್ಟು ಒಮಿಕ್ರಾನ್​ ಸೋಂಕಿತರ ಸಂಖ್ಯೆ 761ಕ್ಕೆ ಏರಿಕೆಯಾಗಿದೆ. ಈ 54 ಮಂದಿಯಲ್ಲಿ ಒಬ್ಬರು ಕರ್ನಾಟಕ ಮೂಲದವರಾಗಿದ್ದು, ಯುಎಇಯಿಂದ ಕೇರಳಕ್ಕೆ ಬಂದಿದ್ದರು.

TV9kannada Web Team

| Edited By: Lakshmi Hegde

Jan 22, 2022 | 5:41 PM

ದೇಶದಲ್ಲಿ ಸದ್ಯ ಒಂದು ದಿನದಲ್ಲಿ ಪತ್ತೆಯಾಗುವ ಕೊರೊನಾ ಸೋಂಕಿತರ ಸಂಖ್ಯೆ 3 ಲಕ್ಷದ ಗಡಿ ದಾಟಿದೆ. ಪೊಲೀಸರು, ವೈದ್ಯರು, ವಿದ್ಯಾರ್ಥಿಗಳು, ವೈದ್ಯಕೀಯ ಸಿಬ್ಬಂದಿ ಈ ಸೋಂಕಿಗೆ ಒಳಗಾಗಿದ್ದಾರೆ. ಹಾಗೇ, ಇದೀಗ ಕೇರಳದ ತಿರುವನಂತಪುರಂನ ಪೂಜಾಪ್ಪುರ ಸೆಂಟ್ರಲ್​ ಜೈಲಿನಲ್ಲಿರುವ 262 ಕೈದಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ 3ದಿನಗಳಲ್ಲಿ ಒಟ್ಟು 936 ಕೈದಿಗಳಿಗೆ ಆ್ಯಂಟಿಜೆನ್​ ಟೆಸ್ಟ್​ ಮಾಡಲಾಗಿತ್ತು. ಅದರಲ್ಲಿ 262 ಜನರಿಗೆ ಕೊರೊನಾ ದೃಢಪಟ್ಟಿದೆ.  

ಕೊರೊನಾ ಸೋಂಕಿತರ ಚಿಕಿತ್ಸೆ ಮತ್ತು ಆರೈಕೆಗಾಗಿ ವಿಶೇಷ ವೈದ್ಯರನ್ನು ನೇಮಕ ಮಾಡಬೇಕು ಎಂದು ಜೈಲು ಅಧೀಕ್ಷಕರು ಆಗ್ರಹ ಮಾಡಿದ್ದಾರೆ. ಹಾಗೇ, ಕೊರೊನಾ ಸೋಂಕಿತ ಕೈದಿಗಳನ್ನು ಜೈಲಿನಲ್ಲಿಯೇ ಒಂದು ಪ್ರತ್ಯೇಕ ಸೆಲ್​ಗೆ ಹಾಕಲಾಗಿದೆ.  ಅದರೊಂದಿಗೆ ಕಣ್ಣೂರು ಕೇಂದ್ರ ಕಾರಾಗೃಹದಲ್ಲಿಯೂ 10 ಕೈದಿಗಳಿಗೆ ಕೊರೊನಾ ಸೋಂಕು ತಗುಲಿದೆ.  ಕೊರೊನಾ ಪಾಸಿಟಿವ್ ಬಂದವರನ್ನು ಕೋಳಿಕ್ಕೋಡ್ ಮತ್ತು ಕಾಸರಗೋಡಿನ ಜೈಲಿನಲ್ಲಿ ಇಡಲಾಗಿದೆ.

ಕೇರಳದಲ್ಲಿ ಕೊರೊನಾ ವೈರಸ್​ ಮತ್ತು ಒಮಿಕ್ರಾನ್​ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಶುಕ್ರವಾರ ಒಂದೇ ದಿನ 41,668 ಕೊರೊನಾ ವೈರಸ್​ ಕೇಸ್​ಗಳು ದಾಖಲಾಗಿವೆ. ಅದರಲ್ಲೂ ತಿರುವನಂತಪುರಂನಲ್ಲಿಯೇ 7896 ಕೇಸ್​ಗಳಿವೆ.   ಈ ಮೂಲಕ ಕೇರಳದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 55,29,566ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,23,548.  ಶುಕ್ರವಾರ ಒಂದೇ ದಿನ ಕೇರಳದಲ್ಲಿ 106 ಮಂದಿ ಕೊರೊನಾದಿಂದ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 51,607 ಆಗಿದೆ.

ಹಾಗೇ, ಇನ್ನೊಂದೆಡೆ ಕೇರಳದಲ್ಲಿ  ಇಂದು ಶುಕ್ರವಾರ ಒಂದೇ ದಿನ 54 ಒಮಿಕ್ರಾನ್​ ಸೋಂಕಿನ ಕೇಸ್​ಗಳು ದಾಖಲಾಗಿವೆ. ಈ ಮೂಲಕ ಒಟ್ಟು ಒಮಿಕ್ರಾನ್​ ಸೋಂಕಿತರ ಸಂಖ್ಯೆ 761ಕ್ಕೆ ಏರಿಕೆಯಾಗಿದೆ. ಈ 54 ಮಂದಿಯಲ್ಲಿ ಒಬ್ಬರು ಕರ್ನಾಟಕ ಮೂಲದವರಾಗಿದ್ದು, ಯುಎಇಯಿಂದ ಕೇರಳಕ್ಕೆ ಬಂದಿದ್ದರು ಎಂದು ಕೇರಳ ಆರೋಗ್ಯ ಇಲಾಖೆ ತಿಳಿಸಿದೆ.  ಹಾಗೇ, 54 ಜನರಲ್ಲಿ ಎಂಟು ಜನರು ತಿರುವನಂತಪುರಂನವರು.  ಎರ್ನಾಕುಲಂ, ತ್ರಿಸ್ಸುರ್​, ಮಲಪ್ಪುರಂ, ಕಣ್ಣೂರಿನ ತಲಾ ಆರು ಮಂದಿಯಿದ್ದಾರೆ. ಹಾಗೇ, ಕೊಲ್ಲಂ, ಕೊಟ್ಟಾಯಂನ ತಲಾ ಐದು ಜನರು, ಅಲಪ್ಪುಳದ ನಾಲ್ವರು, ಕೊಳಿಕ್ಕೋಡ್​ನ ಮೂವರು, ಪಲಕ್ಕಡ್​ನ ಇಬ್ಬರು, ವಯಾನಾಡ್​ ಮತ್ತು ಕಾಸರಗೋಡಿನ ತಲಾ ಒಬ್ಬರು ಇದ್ದಾರೆ ಎಂದೂ ಮಾಹಿತಿ ನೀಡಿದೆ.

ಇದನ್ನೂ ಓದಿ: ಪಂಚಮಸಾಲಿ 3ನೇ ಪೀಠವಾದರೆ ತಪ್ಪೇನಲ್ಲ, ಇದಕ್ಕೂ ನನಗೂ ಸಂಬಂಧವಿಲ್ಲ; ಸಚಿವ ಮುರುಗೇಶ್ ನಿರಾಣಿ ಸ್ಪಷ್ಟನೆ

Follow us on

Related Stories

Most Read Stories

Click on your DTH Provider to Add TV9 Kannada