ಒಡಿಶಾ: ನಾಟಕ ಪ್ರದರ್ಶನ ವೇಳೆ ಕಬ್ಬಿಣದ ಗೇಟ್​ ಬಿದ್ದು 30 ಮಂದಿಗೆ ಗಂಭೀರ ಗಾಯ

|

Updated on: Dec 15, 2024 | 11:39 AM

ನಾಟಕ ಪ್ರದರ್ಶನ ವೇಳೆ ಕಬ್ಬಿಣದ ಗೇಟ್ ಕುಸಿದುಬಿದ್ದು 30 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಸಾಲೇಪುರ ಪ್ರದೇಶದ ರೈಸುಂಗುಡಾದಲ್ಲಿ ಜನರು ಗೇಟ್ ಮೂಲಕ ಹಾದು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಸಲೇಪುರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು.

ಒಡಿಶಾ: ನಾಟಕ ಪ್ರದರ್ಶನ ವೇಳೆ ಕಬ್ಬಿಣದ ಗೇಟ್​ ಬಿದ್ದು 30 ಮಂದಿಗೆ ಗಂಭೀರ ಗಾಯ
Follow us on

ನಾಟಕ ಪ್ರದರ್ಶನ ವೇಳೆ ಕಬ್ಬಿಣದ ಗೇಟ್ ಕುಸಿದುಬಿದ್ದು 30 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಸಾಲೇಪುರ ಪ್ರದೇಶದ ರೈಸುಂಗುಡಾದಲ್ಲಿ ಜನರು ಗೇಟ್ ಮೂಲಕ ಹಾದು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಗಾಯಾಳುಗಳನ್ನು ಸಲೇಪುರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅವರಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು.

ರಾಜಾ ರಾಣಿ ಜಾತ್ರೆ ತಂಡವು ಶುಕ್ರವಾರದಿಂದ ರಾಯಸುಂಗುಡದಲ್ಲಿ ಪ್ರದರ್ಶನ ನೀಡುತ್ತಿದೆ. ಶನಿವಾರ ರಾತ್ರಿ ಸೆಕೆಂಡ್ ಶೋ ಆರಂಭವಾಗುವ ಮುನ್ನವೇ ಈ ದುರ್ಘಟನೆ ನಡೆದಿದೆ. ಎತ್ತರದ ಕಬ್ಬಿಣದ ದ್ವಾರದ ಮೂಲಕ ಪ್ರೇಕ್ಷಕರು ಜಾತ್ರಾ ಆವರಣ ಪ್ರವೇಶಿಸುತ್ತಿದ್ದಂತೆಯೇ ಗೇಟ್ ಕುಸಿದು ಬಿದ್ದಿದೆ.

ಮತ್ತಷ್ಟು ಓದಿ:ಹಾವೇರಿ: ಮನೆ ಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಮೂವರ ಸಾವು

ಜನಸಮೂಹ ಏಕಕಾಲಕ್ಕೆ ಪ್ರವೇಶಿಸಲು ಯತ್ನಿಸಿದ ಕಾರಣ ಗೇಟ್ ಕುಸಿದಿದೆ ಎಂದು ಆರೋಪಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಕುಸಿದು ಬಿದ್ದ ಆಸ್ಪತ್ರೆಯ ಲಿಫ್ಟ್,​ ಕೆಲ ಸಮಯದ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಸಾವು

ಆಸ್ಪತ್ರೆಯ ಲಿಫ್ಟ್​ ಕುಸಿದುಬಿದ್ದ ಪರಿಣಾಮ ಕೆಲ ಸಮಯದ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ. ಲೋಹಿಯಾ ನಗರದ ಕ್ಯಾಪಿಟಲ್ ಆಸ್ಪತ್ರೆಯಲ್ಲಿ ನಡೆದ ಈ ದುರಂತ ಘಟನೆಯಲ್ಲಿ ಇತರ ಇಬ್ಬರಿಗೂ ಗಾಯಗಳಾಗಿವೆ. ರೋಗಿಯ ಸಂಬಂಧಿಕರು ಪ್ರತಿಭಟನೆ ನಡೆಸಿ ಆಸ್ತಿಪಾಸ್ತಿ ಧ್ವಂಸಗೊಳಿಸಿದ್ದರಿಂದ ಈ ಘಟನೆ ಆಸ್ಪತ್ರೆಯಲ್ಲಿ ಗೊಂದಲಕ್ಕೆ ಕಾರಣವಾಯಿತು.

ಕರೀಷ್ಮಾ ಎಂಬುವವರಿಗೆ ಆಗಷ್ಟೇ ಮಗುವಿಗೆ ಜನ್ಮ ನೀಡಿದ್ದರು, ಅವರನ್ನು ವಾರ್ಡ್​ಗೆ ಶಿಫ್ಟ್​ ಮಾಡಲಾಗುತ್ತಿತ್ತು. ಇಬ್ಬರು ಆಸ್ಪತ್ರೆಯ ಸಿಬ್ಬಂದಿ ಕೂಡ ಆಕೆಯ ಜತೆಗಿದ್ದರು. ಲಿಫ್ಟ್​ ಕೆಳಗೆ ಬರುತ್ತಿರುವಾಗ ಕೇಬಲ್ ತುಂಡಾಗಿ ಲಿಫ್ಟ್​ ಕೆಳಗೆ ಅಪ್ಪಳಿಸಿತು. ಆಕೆಯ ತಲೆ ಹಾಗೂ ಕುತ್ತಿಗೆಗೆ ಗಂಭೀರ ಗಾಯಗಳಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಇಬ್ಬರು ಸಿಬ್ಬಂದಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. 45 ನಿಮಿಷಗಳ ಬಳಿಕ ಬಾಗಿಲು ಒಡೆದು ಅವರನ್ನು ಹೊರ ತೆಗೆಯಲಾಗಿತ್ತು. ಘಟನೆ ನಡೆದ ತಕ್ಷಣ ಆಸ್ಪತ್ರೆ ಸಿಬ್ಬಂದಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ