Tamil Nadu: ತಮಿಳುನಾಡಿನ ವಿಮಾನ ನಿಲ್ದಾಣದಲ್ಲಿ 6,500 ಕ್ಕೂ ಹೆಚ್ಚು ಜೀವಂತ ಆಮೆಗಳು ವಶ, ಇಬ್ಬರ ಬಂಧನ

ತಮಿಳುನಾಡಿನ ಕಸ್ಟಮ್ ಏರ್ ಇಂಟೆಲಿಜೆನ್ಸ್ ಯುನಿಟ್ (ಎಐಯು) ಅಧಿಕಾರಿಗಳು ಶುಕ್ರವಾರ 6,850 ಜೀವಂತ ಕೆಂಪು ಇಯರ್ಡ್ ಸ್ಲೈಡರ್‌ಗಳು, ಒಂದು ಜಾತಿಯ ಆಮೆಯನ್ನು ವಶಪಡಿಸಿಕೊಂಡಿದ್ದಾರೆ.

Tamil Nadu: ತಮಿಳುನಾಡಿನ ವಿಮಾನ ನಿಲ್ದಾಣದಲ್ಲಿ 6,500 ಕ್ಕೂ ಹೆಚ್ಚು ಜೀವಂತ ಆಮೆಗಳು ವಶ, ಇಬ್ಬರ ಬಂಧನ
ವಿಮಾನ ನಿಲ್ದಾಣದಲ್ಲಿ 6,500 ಕ್ಕೂ ಹೆಚ್ಚು ಜೀವಂತ ಆಮೆಗಳ ವಶ
Follow us
ಅಕ್ಷಯ್​ ಪಲ್ಲಮಜಲು​​
|

Updated on:Jun 24, 2023 | 10:50 AM

ತಿರುಚಿರಾಪಳ್ಳಿ : ತಮಿಳುನಾಡಿನ (Tamil Nadu) ಕಸ್ಟಮ್ ಏರ್ ಇಂಟೆಲಿಜೆನ್ಸ್ ಯುನಿಟ್ (ಎಐಯು) ಅಧಿಕಾರಿಗಳು ಶುಕ್ರವಾರ 6,850 ಜೀವಂತ ಕೆಂಪು ಇಯರ್ಡ್ ಸ್ಲೈಡರ್‌ಗಳು, ಒಂದು ಜಾತಿಯ ಆಮೆಯನ್ನು ವಶಪಡಿಸಿಕೊಂಡಿದ್ದಾರೆ. ಇದರ ಜತೆಗೆ ಕೌಲಾಲಂಪುರದಿಂದ ತಮಿಳುನಾಡಿನ ತಿರುಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಬ್ಬರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಪ್ತಚರದ ಮಾಹಿತಿಯ ಮೇರೆಗೆ, ತಿರುಚ್ಚಿಯ AIU ಅಧಿಕಾರಿಗಳು ವಿಮಾನ ನಿಲ್ದಾಣದ ನಿರ್ಗಮನ ಗೇಟ್‌ನಲ್ಲಿ ಇಬ್ಬರು ಪ್ರಯಾಣಿಕರನ್ನು ತಡೆದಿದ್ದಾರೆ. ಅವರ ಚೆಕ್-ಇನ್ ಲಗೇಜ್‌ಗಳನ್ನು ಪರಿಶೀಲಿಸಿದಾಗ ಪ್ರಯಾಣಿಕರ ಸ್ಟ್ರಾಲರ್ ಬ್ಯಾಗ್‌ನೊಳಗೆ ಸಣ್ಣ ಪೆಟ್ಟಿಗೆಗಳಲ್ಲಿ ಸಣ್ಣ ಗಾತ್ರದ ಜೀವಂತ ಆಮೆಗಳನ್ನು ಇರುವುದನ್ನು ಪತ್ತೆ ಮಾಡಿದ್ದಾರೆ.

ಇದನ್ನೂ ಓದಿ:Tamil Nadu Bus Accident: ಎರಡು ಖಾಸಗಿ ಬಸ್​ಗಳ ನಡುವೆ ಭೀಕರ ಅಪಘಾತ, 4 ಮಂದಿ ಸಾವು, 70 ಪ್ರಯಾಣಿಕರಿಗೆ ಗಾಯ

ಇದರ ಒಬ್ಬನಿಂದ 57,441ರೂ. (ಭಾರತೀಯ ರೂಪಾಯಿ ಸಮಾನವಾದ) ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ತಮಿಳುನಾಡು ವಿಮಾನ ನಿಲ್ದಾಣದಲ್ಲಿ 6,500 ಕ್ಕೂ ಹೆಚ್ಚು ಜೀವಂತ ಆಮೆಗಳನ್ನು ವಶಪಡಿಸಿಕೊಳ್ಳಲಾಗಿದೆ, 2 ಬಂಧಿನ ಹೆಚ್ಚಿನ ತನಿಖೆ ಮಾಡಲಾಗುತ್ತಿದೆ. ಯಾವ ದೇಶದಿಂದ ಕೆಂಪು ಇಯರ್ಡ್ ಸ್ಲೈಡರ್ ಆಮೆಗಳನ್ನು ತರಲಾಗಿದೆ ಅದನ್ನು ಮತ್ತೆ ಆ ದೇಶಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ.

ಅಧಿಕಾರಿಗಳು ಕಸ್ಟಮ್ಸ್ ಆಕ್ಟ್, 1962ರ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ಬಂಧಿತ ಇಬ್ಬರನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:49 am, Sat, 24 June 23