Pahalgam Terror Attack: ತಂದೆಗೆ ಗುಂಡು ಹಾರಿಸುವ ಮೊದಲು ಇಸ್ಲಾಮಿಕ್ ಪಠಣ ಮಾಡುವಂತೆ ಒತ್ತಾಯಿಸಿದ್ರು

ಕಾಶ್ಮೀರದ ಉಗ್ರರ ದಾಳಿ ವೇಳೆ ಟೆಂಟ್​ನಲ್ಲಿ ನಡೆದಿದ್ದೇನು ಎನ್ನುವ ವಿಚಾರವನ್ನು ಉದ್ಯಮಿಯ ಮಗಳೊಬ್ಬಳು ಪಿಟಿಐ ಬಳಿ ಹಂಚಿಕೊಂಡಿದ್ದಾಳೆ. ಉಗ್ರರು ಬಂದ ಸಮಯದಲ್ಲಿ ಕುಟುಂಬವು ಭಯದಿಂದ ಟೆಂಟ್​ ಒಳಗೆ ಕುಳಿತಿತ್ತು. 54 ವರ್ಷದ ಸಂತೋಷ್ ಜಗದಲೆ ಅವರನ್ನು ಎಳೆದುಕೊಂಡು ಬಂದು ಇಸ್ಲಾಮಿಕ್ ಪಠಣ ಮಾಡುವಂತೆ ಒತ್ತಾಯಿಸಿದ್ದರು. ಅವರಿಗೆ ಸಾಧ್ಯವಾಗದಿದ್ದಾಗ ಅವರ ಕಿವಿಯ ಮೇಲೆ ಮೂರು ಬಾರಿ ಗುಂಡು ಹಾರಿಸಲಾಯಿತು. ಒಮ್ಮೆ ತಲೆಗೆ, ನಂತರ ಕಿವಿಯ ಹಿಂದೆ ಮತೊಂದು ಬೆನ್ನಿಗೆ ತಗುಲಿತ್ತು.

Pahalgam Terror Attack: ತಂದೆಗೆ ಗುಂಡು ಹಾರಿಸುವ ಮೊದಲು ಇಸ್ಲಾಮಿಕ್ ಪಠಣ ಮಾಡುವಂತೆ ಒತ್ತಾಯಿಸಿದ್ರು
ಭಾರತೀಯ ಸೇನೆ
Image Credit source: Indian Express

Updated on: Apr 23, 2025 | 7:53 AM

ಕಾಶ್ಮೀರ, ಏಪ್ರಿಲ್ 23: ಜಮ್ಮು ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯ ಪಹಲ್ಗಾಮ್​(Pahalgam )ನಲ್ಲಿ ಮಂಗಳವಾರ ನಡೆದ ಭೀಕರ ಉಗ್ರರ ದಾಳಿ(Terror Attack)ಯಲ್ಲಿ 24ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಶಿವಮೊಗ್ಗದ ರಿಯಲ್ ಎಸ್ಟೇಟ್‌ ಉದ್ಯಮಿ ಸೇರಿ 24ಕ್ಕೂ ಹೆಚ್ಚು ಮಂದಿ ಉಗ್ರರ ದಾಳಿಗೆ ಬಲಿಯಾಗಿದ್ದು, ಹಲವು ಪ್ರವಾಸಿಗರು ಗಾಯಗೊಂಡಿದ್ದಾರೆ.

ಹಾಗೆಯೇ ಉಗ್ರರ ದಾಳಿಯಲ್ಲಿ ತಂದೆಯನ್ನು ಕಳೆದುಕೊಂಡ ಮಗಳೊಬ್ಬಳು ತನಗಾದ ಕಹಿ ಅನುಭವವನ್ನು ತೆರೆದಿಟ್ಟಿದ್ದಾಳೆ. ಉಗ್ರರು ಬಂದ ಸಮಯದಲ್ಲಿ ಕುಟುಂಬವು ಭಯದಿಂದ ಟೆಂಟ್​ ಒಳಗೆ ಕುಳಿತಿತ್ತು. 54 ವರ್ಷದ ಸಂತೋಷ್ ಜಗದಲೆ ಅವರನ್ನು ಎಳೆದುಕೊಂಡು ಬಂದು ಇಸ್ಲಾಮಿಕ್ ಪಠಣ ಮಾಡುವಂತೆ ಒತ್ತಾಯಿಸಿದ್ದರು.

ಅವರಿಗೆ ಸಾಧ್ಯವಾಗದಿದ್ದಾಗ ಅವರ ಕಿವಿಯ ಮೇಲೆ ಮೂರು ಬಾರಿ ಗುಂಡು ಹಾರಿಸಲಾಯಿತು. ಒಮ್ಮೆ ತಲೆಗೆ, ನಂತರ ಕಿವಿಯ ಹಿಂದೆ ಮತೊಂದು ಬೆನ್ನಿಗೆ ತಗುಲಿತ್ತು. ಮಂಗಳವಾರ ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಭೀಕರ ದಾಳಿಯ ಅನುಭವವನ್ನು ಪುಣೆಯ ಉದ್ಯಮಿಯ ಮಗಳು ಪಿಟಿಐ ಜತೆ ಹಂಚಿಕೊಂಡಿದ್ದಾಳೆ.

ಇದನ್ನೂ ಓದಿ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ: ಮತ್ತೊಬ್ಬ ಕನ್ನಡಿಗ ಬಲಿ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌ ಉಗ್ರರ ದಾಳಿ, ಕನ್ನಡಿಗರ ನೆರವಿಗೆ ಅಧಿಕಾರಿಗಳನ್ನ ಕಳುಹಿಸಿದ ಸಿಎಂ

ಮತ್ತಷ್ಟು ಓದಿ: Pahalgam Terror Attack: ಉಗ್ರರ ದಾಳಿ ಬೆನ್ನಲ್ಲೇ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ

ಆಕೆಯ ತಂದೆ ನೆಲಕ್ಕೆ ಕುಸಿದು ಬಿದ್ದ ಬಳಿಕ ಬಂದೂಕುಧಾರಿಗಳು ಆಕೆಯ ಪಕ್ಕದಲ್ಲಿ ಮಲಗಿದ್ದ ಆಕೆಯ ಚಿಕ್ಕಪ್ಪನ ಬೆನ್ನಿಗೆ ಹಲವು ಬಾರಿ ಗುಂಡು ಹಾರಿಸಿದ್ದಾರೆ. ಪೋಷಕರು ಸೇರಿದಂತೆ ನಮ್ಮದು ಐದು ಗುಂಪುಗಳಿತ್ತು. ನಾವು ಪಹಲ್ಗಾಮ್ ಬಳಿಯ ಬೈಸರನ್ ಕಣಿವೆಯಲ್ಲಿದ್ದೆವು ಮತ್ತು ಗುಂಡಿನ ದಾಳಿ ಪ್ರಾರಂಭವಾದಾಗ ಮಿನಿ ಸ್ವಿಟ್ಜರ್ಲೆಂಡ್ ಎಂಬ ಸ್ಥಳದಲ್ಲಿದ್ದೆವು.

ಇತ್ತೀಚಿನ ದಿನಗಳಲ್ಲಿ ಕಾಶ್ಮೀರದಲ್ಲಿ ನಡೆದ ಭೀಕರ ದಾಳಿ ಇದಾಗಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ಪ್ರವಾಸಿಗರಾಗಿದ್ದಾರೆ. ಆಕೆಗೆ ತನ್ನ ತಂದೆ ಮತ್ತು ಚಿಕ್ಕಪ್ಪ ಜೀವಂತವಾಗಿದ್ದಾರೆಯೇ ಅಥವಾ ಸತ್ತವರಲ್ಲಿದ್ದಾರೆಯೇ ಎಂದು ತಿಳಿದಿಲ್ಲ.

ಅವಳ ತಾಯಿ ಮತ್ತು ಇನ್ನೊಬ್ಬ ಮಹಿಳಾ ಸಂಬಂಧಿಯನ್ನು ರಕ್ಷಿಸಲಾಯಿತು, ಮತ್ತು ಸ್ಥಳೀಯರು ಮತ್ತು ಭದ್ರತಾ ಪಡೆಗಳು ಅವರನ್ನು ಪಹಲ್ಗಾಮ್ ಕ್ಲಬ್‌ಗೆ ಸ್ಥಳಾಂತರಿಸಿದರು.

ಹತ್ತಿರದ ಬೆಟ್ಟದಿಂದ ಇಳಿಯುತ್ತಿದ್ದಾಗ ಸ್ಥಳೀಯ ಪೊಲೀಸರ ಬಟ್ಟೆಗಳನ್ನು ಹೋಲುವ ಬಟ್ಟೆಗಳನ್ನು ಧರಿಸಿದ್ದ ಜನರು ಗುಂಡು ಹಾರಿಸುವ ಶಬ್ದ ಕೇಳಿಸಿತು. ರಕ್ಷಣೆಗಾಗಿ ಟೆಂಟ್​ಗೆ ಓಡಿ ಬಂದೆವು. ಉಳಿದ ಏಳು ಮಂದಿ ಪ್ರವಾಸಿಗರು ಕೂಡ ಅದನ್ನೇ ಮಾಡಿದರು. ಭಯೋತ್ಪಾದಕರು ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ನಡೆದ ಗುಂಡಿನ ದಾಳಿಯಿಂದ ರಕ್ಷಣೆ ಪಡೆಯಲು ನಾವೆಲ್ಲರೂ ನೆಲದ ಮೇಲೆ ಮಲಗಿದೆವು .ಭಯೋತ್ಪಾದಕರ ಗುಂಪು ಮೊದಲು ಹತ್ತಿರದ ಟೆಂಟ್‌ಗೆ ಬಂದು ಗುಂಡು ಹಾರಿಸಿತು ಎಂದು ಮಾಹಿತಿ ನೀಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 7:53 am, Wed, 23 April 25