ಬಾಲ್​ಕೋಟ್​ ದಾಳಿಯಲ್ಲಿ 300ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ: ಕೊನೆಗೂ ಸತ್ಯ ಒಪ್ಪಿಕೊಂಡ ಪಾಕಿಸ್ತಾನ

|

Updated on: Jan 09, 2021 | 8:23 PM

ನವದೆಹಲಿ: 2019, ಫೆಬ್ರವರಿ 26ರಂದು​ ಉಗ್ರರು ನೆಲೆಸಿರುವ ಬಾಲ್​ಕೋಟ್ ಮೇಲೆ ಭಾರತ ವಾಯುದಾಳಿ ನಡೆಸಿತ್ತು. ಈ ವೇಳೆ 300 ಕ್ಕೂ ಅಧಿಕ ಭಯೋತ್ಪಾದಕರು ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನ ನಿವೃತ್ತ ರಾಜ ತಾಂತ್ರಿಕರೊಬ್ಬರು ಒಪ್ಪಿಕೊಂಡಿದ್ದಾರೆ. ಉಗ್ರರನ್ನು ಮಟ್ಟ ಹಾಕಲು ಭಾರತ ಬಾಲ್​ಕೋಟ್​ನಲ್ಲಿ ದಾಳಿ ಮಾಡಿತ್ತು. ಈ ವೇಳೆ ಸಾಕಷ್ಟು ಉಗ್ರರು ಮೃತಪಟ್ಟಿದ್ದಾರೆ ಎಂದು ಭಾರತ ಹೇಳಿತ್ತು. ಆದರೆ, ಪಾಕಿಸ್ತಾನ ಇದನ್ನು ಅಲ್ಲಗಳೆದಿತ್ತು. ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಆಘಾ ಹಿಲಾಲಿ ಟಿವಿ ಒಂದರ ಚರ್ಚೆ ವೇಳೆ ಈ ವಿಚಾರದ ಬಗ್ಗೆ […]

ಬಾಲ್​ಕೋಟ್​ ದಾಳಿಯಲ್ಲಿ 300ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ: ಕೊನೆಗೂ ಸತ್ಯ ಒಪ್ಪಿಕೊಂಡ ಪಾಕಿಸ್ತಾನ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: 2019, ಫೆಬ್ರವರಿ 26ರಂದು​ ಉಗ್ರರು ನೆಲೆಸಿರುವ ಬಾಲ್​ಕೋಟ್ ಮೇಲೆ ಭಾರತ ವಾಯುದಾಳಿ ನಡೆಸಿತ್ತು. ಈ ವೇಳೆ 300 ಕ್ಕೂ ಅಧಿಕ ಭಯೋತ್ಪಾದಕರು ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನ ನಿವೃತ್ತ ರಾಜ ತಾಂತ್ರಿಕರೊಬ್ಬರು ಒಪ್ಪಿಕೊಂಡಿದ್ದಾರೆ.

ಉಗ್ರರನ್ನು ಮಟ್ಟ ಹಾಕಲು ಭಾರತ ಬಾಲ್​ಕೋಟ್​ನಲ್ಲಿ ದಾಳಿ ಮಾಡಿತ್ತು. ಈ ವೇಳೆ ಸಾಕಷ್ಟು ಉಗ್ರರು ಮೃತಪಟ್ಟಿದ್ದಾರೆ ಎಂದು ಭಾರತ ಹೇಳಿತ್ತು. ಆದರೆ, ಪಾಕಿಸ್ತಾನ ಇದನ್ನು ಅಲ್ಲಗಳೆದಿತ್ತು. ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಆಘಾ ಹಿಲಾಲಿ ಟಿವಿ ಒಂದರ ಚರ್ಚೆ ವೇಳೆ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಭಾರತ ಪಾಕಿಸ್ತಾನದ ಗಡಿಯನ್ನು ದಾಟಿ ಬಂದಿತ್ತು. ಅಷ್ಟೇ ಅಲ್ಲ, 300ಕ್ಕೂ ಹೆಚ್ಚು ಉಗ್ರರರನ್ನು ನಾಶ ಮಾಡಿದೆ. ಇದನ್ನು ನಾವು ಒಪ್ಪಿಕೊಳ್ಳಲೇಬೇಕು ಎಂದಿದ್ದಾರೆ ಹಿಲಾಲಿ.

ಪಾಕಿಸ್ತಾನ ಈ ಮೊದಲಿನಿಂದಲೂ ಭಾರತ ದಾಳಿಯಿಂದ ಯಾವುದೇ ಹಾನಿ ಆಗಿಲ್ಲ ಎಂದು ಹೇಳುತ್ತಲೇ ಬಂದಿತ್ತು. ಆದರೆ, ಕೊನೆಗೂ ಈ ವಿಚಾರದಲ್ಲಿ ಪಾಕಿಸ್ತಾನ ತನ್ನ ಹುಳುಕನ್ನು ಒಪ್ಪಿಕೊಂಡಂತೆ ಆಗಿದೆ.

ಕರಾಚಿಯಲ್ಲೇ ಇದ್ದಾನೆ ದಾವೂದ್ ಇಬ್ರಾಹಿಂ, ವಿಶ್ವಸಂಸ್ಥೆಗೆ 88 ಉಗ್ರರ ಅಡ್ರಸ್ ಕೊಟ್ಟು ಪಾಕಿಸ್ತಾನ್ ನಾಟಕ

Published On - 8:20 pm, Sat, 9 January 21