ಅಮರಿಂದರ್ ಸಿಂಗ್​ ಗೆಳತಿ ಎಂಬ ಕಾರಣಕ್ಕೆ ನನ್ನ ವಿರುದ್ಧ ಸುಳ್ಳು ಆರೋಪ: ಪಾಕ್ ಪತ್ರಕರ್ತೆ ಆರೂಸಾ ಅಲಂ ವಾಗ್ದಾಳಿ

Aroosa Alam: ಪಂಜಾಬ್‌ನಲ್ಲಿ ಕಾಂಗ್ರೆಸ್ ತನ್ನ ಆಸ್ತಿತ್ವವನ್ನು ಕಳೆದುಕೊಂಡಿದೆ. ಯುದ್ಧದ ಮಧ್ಯದಲ್ಲಿ ಯಾರಾದರೂ ಜನರಲ್ ಅನ್ನು ಬದಲಾಯಿಸುತ್ತಾರೆಯೇ ಎಂದು ಪಾಕಿಸ್ತಾನದ ಪತ್ರಕರ್ತೆ ಅರೂಸಾ ಅಲಂ ಪ್ರಶ್ನಿಸಿದ್ದಾರೆ.

ಅಮರಿಂದರ್ ಸಿಂಗ್​ ಗೆಳತಿ ಎಂಬ ಕಾರಣಕ್ಕೆ ನನ್ನ ವಿರುದ್ಧ ಸುಳ್ಳು ಆರೋಪ: ಪಾಕ್ ಪತ್ರಕರ್ತೆ ಆರೂಸಾ ಅಲಂ ವಾಗ್ದಾಳಿ
ಪಾಕಿಸ್ತಾನದ ಪತ್ರಕರ್ತೆ ಅರೂಸಾ ಅಲಂ ಮತ್ತು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್
Follow us
S Chandramohan
| Updated By: Digi Tech Desk

Updated on:Oct 27, 2021 | 5:12 PM

ದೆಹಲಿ: ಪಂಜಾಬ್ ರಾಜ್ಯದಲ್ಲಿ ಈಗ ಪಾಕಿಸ್ತಾನದ ಪತ್ರಕರ್ತೆ ಆರೂಸಾ ಆಲಂ ವಿಚಾರವಾಗಿ ವಾಗ್ವಾದ ನಡೆಯುತ್ತಿದೆ. ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್‌ ಸ್ನೇಹಿತೆಯಾಗಿರುವ ಆರೂಸಾ ಆಲಂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಏಜೆಂಟ್ ಎಂದು ಡಿಸಿಎಂ ಹಾಗೂ ಗೃಹ ಸಚಿವ ಸುಖಜೀಂದರ್ ಸಿಂಗ್ ರಾಂಧವಾ ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸುವುದಾಗಿಯೂ ಹೇಳಿದ್ದಾರೆ. ಇದಕ್ಕೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕೂಡ ತಿರುಗೇಟು ನೀಡಿದ್ದರು. ಈಗ ನೇರವಾಗಿ ಆರೂಸಾ ಆಲಂ ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಪ್ರತ್ಯುತ್ತರ ನೀಡಿದ್ದಾರೆ. ಆರೂಸಾ ಆಲಂ ನೀಡಿದ ಪ್ರತ್ಯುತ್ತರ ಏನು? ಆರೂಸಾ ಆಲಂ ನಿಜಕ್ಕೂ ಪಾಕಿಸ್ತಾನದ ಐಎಸ್ಐ ಏಜೆಂಟ್ ಎನ್ನುವ ಆರೋಪಕ್ಕೆ ನೀಡಿದ ಉತ್ತರದ ವಿವರ ಇಲ್ಲಿದೆ.

ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಜಟಾಪಟಿಯ ನಡುವೆ ಪಾಕಿಸ್ತಾನದ ಪತ್ರಕರ್ತೆ ಅರೂಸಾ ಆಲಂ ಹೆಸರು ಕೇಳಿ ಬರುತ್ತಿದೆ. ಪಾಕಿಸ್ತಾನದ ಪತ್ರಕರ್ತೆ ಆರೂಸಾ ಆಲಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸ್ನೇಹಿತೆ ಎನ್ನುವ ಕಾರಣದಿಂದ ಆಕೆಯ ಹೆಸರು ಬಳಸಿಕೊಂಡು ವಾಗ್ದಾಳಿ ನಡೆಸಲಾಗುತ್ತಿದೆ. ಆರೂಸಾ ಆಲಂ ಪಾಕಿಸ್ತಾನದ ಐಎಸ್ಐ ಏಜೆಂಟ್. ಪಾಕ್ ಐಎಸ್ಐ ಏಜೆಂಟ್ ಆಗಿರುವ ಆರೂಸಾ ಆಲಂ ಜೊತೆಗೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರಿಗೆ ಸ್ನೇಹ ಇದೆ. ಇದು ರಾಷ್ಟ್ರದ ಭದ್ರತೆಗೆ ಧಕ್ಕೆ ತರುವ ವಿಷಯ. ಈ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಪಂಜಾಬ್ ಡಿಸಿಎಂ ಹಾಗೂ ಗೃಹ ಮಂತ್ರಿ ಸುಖಜೀಂದರ್ ಸಿಂಗ್ ರಾಂಧವಾ ಹೇಳಿದ್ದರು.

ತಮ್ಮ ಮೇಲಿನ ಆರೋಪಗಳು ಹಾಗೂ ತಮ್ಮ ಹೆಸರು ಬಳಸಿಕೊಂಡು ಪಂಜಾಬ್ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಾಗ್ದಾಳಿಗಳ ಬಗ್ಗೆ ಈಗ ಪಾಕಿಸ್ತಾನದ ಪತ್ರಕರ್ತೆ ಆರೂಸಾ ಆಲಂ ಮೌನ ಮುರಿದಿದ್ದಾರೆ. ‘ಪಂಜಾಬ್​ನ ಕಾಂಗ್ರೆಸ್ ರಾಜಕಾರಣಿಗಳ ಬಗ್ಗೆ ತೀವ್ರ ನಿರಾಶೆ ಮತ್ತು ಅಸಹ್ಯ ಹೊಂದಿದ್ದೇನೆ. ಅವರು ನೋಯಿಸಿದ್ದರಿಂದ ಮತ್ತೆ ಎಂದೂ ಭಾರತಕ್ಕೆ ಬರುವುದಿಲ್ಲ. ಹೃದಯ ಭಗ್ನವಾಗಿದೆ’ ಎಂದು ಆರೂಸಾ ಆಲಂ ಹೇಳಿದ್ದಾರೆ.

ಕಳೆದ ವಾರ, ಪಂಜಾಬ್ ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವಾ ಅವರು ಆಲಂ ಅವರ ಐಎಸ್‌ಐ ಸಂಪರ್ಕಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದರು. ಅಮರಿಂದರ್ ಅವರು ತಮ್ಮ ಪರವಾಗಿ ಪೋಸ್ಟ್ ಮಾಡಿದ ಟ್ವೀಟ್‌ಗಳಲ್ಲಿ ಅವರ ಮಾಧ್ಯಮ ಸಲಹೆಗಾರ ರವೀನ್ ತುಕ್ರಾಲ್ ಅವರು ‘16 ವರ್ಷಗಳಿಂದ ಭಾರತ ಸರ್ಕಾರದ ಅನುಮತಿಯೊಂದಿಗೆ ಆರೂಸಾ ಆಲಂ ಭಾರತಕ್ಕೆ ಬರುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಆರೂಸಾ ಆಲಂ ಮಾತನಾಡುತ್ತಾ, ‘ಅವರು ತುಂಬಾ ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂದು ನಾನು ನಂಬಲು ಸಾಧ್ಯವಿಲ್ಲ. ಸುಖಜಿಂದರ್ ರಾಂಧವಾ, ಪಂಜಾಬ್ ಕಾಂಗ್ರೆಸ್ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಮತ್ತು ಅವರ ಪತ್ನಿ (ನವಜೋತ್ ಕೌರ್ ಸಿಧು) ಕತ್ತೆ ಕಿರುಬುಗಳ ಗುಂಪಾಗಿದ್ದಾರೆ. ಅವರು ನನ್ನನ್ನು ಬಳಸಿಕೊಂಡು ಕ್ಯಾಪ್ಟನ್‌ಗೆ ಮುಜುಗರ ತರಲು ಪ್ರಯತ್ನಿಸುತ್ತಿದ್ದಾರೆ. ನಾನು ಅವರನ್ನು ಕೇಳಲು ಬಯಸುತ್ತೇನೆ, ಅವರು ಬೌದ್ದಿಕವಾಗಿ ದಿವಾಳಿಯಾಗಿದ್ದಾರೆಯೇ? ಅವರು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ನನ್ನನ್ನು ಏಕೆ ಎಳೆಯಬೇಕು, ಎಂದು ಆರೂಸಾ ಆಲಂ ಪಾಕಿಸ್ತಾನದಿಂದ ದೂರವಾಣಿಯಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡುತ್ತಾ ಹೇಳಿದರು.

ಪಂಜಾಬ್ ರಾಜ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಲು ಆರೂಸಾ ಆಲಂ ನಿರಾಕರಿಸಿದ್ದಾರೆ. ‘ಪಂಜಾಬ್​ನಲ್ಲಿ ನನಗೆ ಯಾವುದೇ ವ್ಯವಹಾರವಿಲ್ಲ’ ಎಂದು ಹೇಳಿರುವ ಅವರು, ‘ಅವರ ಶತ್ರು ನನ್ನ ಹೆಸರು ಎಳೆದು ತರಲು ಸಲಹೆ ನೀಡಿದರು. ಆದರೆ ಇದರಿಂದ ಯಾವುದೇ ಪ್ರಯೋಜನವಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಆ ‘ಶತ್ರು’ ಯಾರು ಎಂದು ಹೇಳಿಲ್ಲ.

‘ಅವರಿಗೆ ನನ್ನ ಬಳಿ ಒಂದು ಸಂದೇಶವಿದೆ, ದಯವಿಟ್ಟು ಪ್ರಬುದ್ಧರಾಗಿ ನಿಮ್ಮ ಮನೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ಪಂಜಾಬ್‌ನಲ್ಲಿ ಕಾಂಗ್ರೆಸ್ ತನ್ನ ಆಸ್ತಿತ್ವವನ್ನು ಕಳೆದುಕೊಂಡಿದೆ. ಯುದ್ಧದ ಮಧ್ಯದಲ್ಲಿ ಯಾರಾದರೂ ಜನರಲ್ ಅನ್ನು ಬದಲಾಯಿಸುತ್ತಾರೆಯೇ? ಅಸೆಂಬ್ಲಿ ಚುನಾವಣೆಗೆ ತಿಂಗಳುಗಳ ಮುಂಚೆಯೇ ಸಿಂಗ್ ಅವರನ್ನು ಸಿಎಂ ಹುದ್ದೆಯಿಂದ ಉಚ್ಚಾಟಿಸಿರುವುದನ್ನು ಉಲ್ಲೇಖಿಸಿ ಅವರು ಹೇಳಿದರು. ” ಪಂಜಾಬ್ ಕಾಂಗ್ರೆಸ್ ಈಗ ತೀವ್ರವಾಗಿ ವಿಭಜಿತ ಮನೆ. ಈಗ ದಯವಿಟ್ಟು ನಿಮ್ಮ ಹೋರಾಟವನ್ನು ನೀವೇ ಮಾಡಿ, ಈ ಪಂಜಾಬ್ ಕಾಂಗ್ರೆಸ್ ಮತ್ತು ಸರ್ಕಾರದ ಅವ್ಯವಸ್ಥೆಗೆ ನೀವು ನನ್ನನ್ನು ಏಕೆ ಎಳೆಯುತ್ತಿದ್ದೀರಿ? ಈಗ ಅವರು ನನ್ನನ್ನು ಅದರೊಳಗೆ ಎಳೆದಿದ್ದಾರೆ, ನಾನು ‘ನಿಮ್ಮ ಮಂಗಗಳು, ನಿಮ್ಮ ಸರ್ಕಸ್’ ಎಂದು ಮಾತ್ರ ಹೇಳಬಲ್ಲೆ.

ತಮಗೆ ಐಎಸ್‌ಐ ನಂಟು ಇದೆ ಎಂಬ ಪಂಜಾಬ್ ಗೃಹ ಸಚಿವ ರಾಂಧವಾ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಅರೂಸಾ, ನಾನು ಸುಮಾರು 20 ವರ್ಷಗಳಿಂದ ಪತ್ರಕರ್ತೆಯಾಗಿ ಮತ್ತು ನಿಯೋಗಗಳ ಭಾಗವಾಗಿ ಭಾರತಕ್ಕೆ ಬರುತ್ತಿದ್ದೇನೆ. ನನ್ನ ಲಿಂಕ್‌ಗಳ ಬಗ್ಗೆ ಅವರು ಇದ್ದಕ್ಕಿದ್ದಂತೆ ಎಚ್ಚರಗೊಂಡಿದ್ದಾರೆಯೇ? ಯಾರಾದರೂ ಪಾಕಿಸ್ತಾನದಿಂದ ಭಾರತಕ್ಕೆ ಬಂದಾಗ, ಅವರನ್ನು ಹಲವು ಹಂತಗಳಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತದೆ. ಯಾವುದೇ ಪ್ರಕ್ರಿಯೆಯನ್ನು ಬೈಪಾಸ್ ಮಾಡಲು ಆಗುವುದಿಲ್ಲ. ನಾನೂ ಅಷ್ಟೇ, ಪ್ರತಿ ಹಂತದಲ್ಲೂ ಸ್ಕ್ರೀನಿಂಗ್​ಗೆ ಒಳಪಟ್ಟಿದ್ದೇನೆ. ನಾನು ಅಷ್ಟೇ, ರಾ (Research and Analysis Wing), ಐಬಿ (Intelligence Bureau – IB), ಕೇಂದ್ರ ಗೃಹ ಸಚಿವಾಲಯ, ವಿದೇಶಾಂಗ ವ್ಯವಹಾರಗಳಿಂದ ಅನುಮತಿಗಳನ್ನು ತೆಗೆದುಕೊಳ್ಳಬೇಕಾಗಿತ್ತು. ವೀಸಾ ಫಾರ್ಮ್ ಆನ್‌ಲೈನ್‌ನಲ್ಲಿ ತುಂಬಲು ಸಹ ಅವರು ಅನುಮತಿ ನೀಡಿರಲಿಲ್ಲ. ಈ ತನಿಖಾ ಸಂಸ್ಥೆಗಳ ಅನುಮತಿ ಇಲ್ಲದೆ ನಾನು ಭಾರತಕ್ಕೆ ಭೇಟಿ ನೀಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ಯುಪಿಎ ಮತ್ತು ಎನ್‌ಡಿಎ ಸರ್ಕಾರಗಳು ಐಎಸ್ಐ ಏಜೆಂಟರಿಗೆ ವೀಸಾ ನೀಡುವಷ್ಟು ಅಸಮರ್ಥವಾಗಿ ಕೆಲಸ ಮಾಡುತ್ತಿತ್ತೆ ಎಂದು ತಮ್ಮ ಟೀಕಾಕಾರರನ್ನು ಆರೂಸಾ ಆಲಂ ಪ್ರಶ್ನಿಸಿದ್ದಾರೆ. ಸ್ಪಲ್ಪ ಪ್ರಜ್ಞೆ ಇಟ್ಟುಕೊಂಡು ಮಾತನಾಡಲು ಹೇಳಿ, ನನ್ನನ್ನು ವಿವಾದಕ್ಕೆ ಎಳೆದು ಕ್ಯಾಪ್ಟನ್‌ಗೆ ಮುಜುಗರ ಉಂಟು ಮಾಡಲು ಅವರು ಬಯಸಿದ್ದರು. ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೊಸ ಪಕ್ಷವನ್ನು ಸ್ಥಾಪಿಸುತ್ತಿದ್ದಾರೆ. ಇದರಿಂದ ಇವರೆಲ್ಲಾರ ಅವಕಾಶಗಳು ಮುಗಿದು ಹೋಗುತ್ತಾವೆ ಎಂಬುದು ಅವರಿಗೆ ಚೆನ್ನಾಗಿ ಅರಿವಾಗಿದೆ ಎಂದು ಆರೂಸಾ ಆಲಂ ಹೇಳಿದ್ದಾರೆ.

ನಾನು ಕ್ಯಾಪ್ಟನ್‌ರನ್ನು ಭೇಟಿಯಾಗುವ ಮೊದಲು ನನ್ನ ಜೀವನದಲ್ಲಿ ನಾನು ಭೇಟಿಯಾದ ಭಾರತದ ವಿವಿಧ ನಾಯಕರ ಚಿತ್ರಗಳನ್ನು ಅವರಿಗೆ (ಸಿಂಗ್) ಕಳುಹಿಸಿದೆ. ಪಂಜಾಬ್ ರಾಜಕೀಯದಲ್ಲಿ ಇದೆಲ್ಲವೂ ಅತ್ಯಂತ ಕೀಳು ಮಟ್ಟದ್ದು ಎಂದು ನಾನು ಹೇಳಲೇಬೇಕು ಎಂದು ಆರೂಸಾ ಆಲಂ ಹೇಳಿದರು. ಕ್ಯಾಪ್ಟನ್ ಅಮರೀಂದರ್ ಸಿಂಗ್, ಮಾಜಿ ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್ ಮತ್ತು ಯಶವಂತ್ ಸಿನ್ಹಾ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರೊಂದಿಗೆ ಇರುವ ಚಿತ್ರಗಳನ್ನು ಆರೂಸಾ ಆಲಂ ನಿನ್ನೆಯಷ್ಟೇ (ಅ.25) ಬಿಡುಗಡೆ ಮಾಡಿದ್ದರು. ಈ ನಾಯಕರು ಐಎಸ್ಐ ಸಂಪರ್ಕದಲ್ಲಿದ್ದರೇ ಎಂದು ಕೇಳಿದರು.

ಕ್ಯಾಪ್ಟನ್ ಅಮರಿಂದರ್ ಸಿಂಗ್ ಜೊತೆಗಿನ ಒಡನಾಟದ ಮೂಲಕ ಪಂಜಾಬ್ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ ಆಲಂ, ಯಾರು ಯಾವ ಖಾತೆ ನಿರ್ವಹಿಸುತ್ತಿದ್ದಾರೆ ಎನ್ನುವುದು ಸಹ ನನಗೆ ತಿಳಿದಿಲ್ಲ. ಈ ಇಲಾಖೆ ಚೆನ್ನಾಗಿದೆ, ಆ ಇಲಾಖೆ ಇಲ್ಲ ಅಂತ ಜನ ಹೇಳುತ್ತಿದ್ದರು. ನಾನು ಬಹಳಷ್ಟು ಸ್ನೇಹಿತರನ್ನು ಮಾಡಿಕೊಂಡೆ. ಅವರೆಲ್ಲರೂ ಪಕ್ಷ ಬದಲಾಯಿಸಿದರು ಮತ್ತು ಈಗ ಅವರು ಹುಚ್ಚುತನದ ವ್ಯಕ್ತಿಯ ಹಿಂದೆ ಹೋಗುತ್ತಿದ್ದಾರೆ. ಅವರ ವ್ಯಕ್ತಿತ್ವ ಎಂಥದ್ದು? ಎಂದು ಪ್ರಶ್ನಿಸಿದ್ದಾರೆ.

ಹೊಸ ಪಕ್ಷವನ್ನು ಸ್ಥಾಪಿಸುವ ಅಮರಿಂದರ್ ಸಿಂಗ್ ಅವರ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ಅವರು, ಇದು ಅವರ ನಿರ್ಧಾರವಾಗಿರುವುದರಿಂದ ನಾನು ಪ್ರತಿಕ್ರಿಯಿಸುವ ಸ್ಥಿತಿಯಲ್ಲಿಲ್ಲ. ನಾನು ಅವರಿಗೆ ಶುಭ ಹಾರೈಸುತ್ತೇನೆ. ಅವರು ಉತ್ತಮ ಸ್ನೇಹಿತರಾಗಿದ್ದಾರೆ. ನಾನು ಅವರಿಗಾಗಿ ಪ್ರಾರ್ಥಿಸುತ್ತೇನೆ. ಅವರು ಬಹಳ ಒಳ್ಳೆಯ ಸಂಭಾವಿತ ವ್ಯಕ್ತಿ. ಈ ದೊಡ್ಡ ಜಗತ್ತಿನಲ್ಲಿ, ಅವರು ನನ್ನನ್ನು ತನ್ನ ಸ್ನೇಹಿತೆಯಾಗಿ ಆರಿಸಿಕೊಂಡಿದ್ದಾರೆ. ಅದರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಅವರನ್ನು ಪಕ್ಷದಿಂದ ಹೊರಹಾಕಲ್ಪಟ್ಟ ರೀತಿಗೆ ನಾನು ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ.

ತಾನು ಸೋನಿಯಾ ಗಾಂಧಿಯನ್ನು ಅತ್ಯಂತ ಇಷ್ಟಪಡುತ್ತೇನೆ ಎಂದು ಹೇಳಿರುವ ಅವರು, ‘ನಾನು ಅವರನ್ನು ತುಂಬಾ ಮೆಚ್ಚುತ್ತೇನೆ. ನಾನು ನಿಯಮಿತವಾಗಿ ಭಾರತ-ಪಾಕ್ ಸಂಬಂಧಗಳ ಬಗ್ಗೆ ಬರೆಯುತ್ತಿದ್ದರಿಂದ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ನನಗೆ ಒಳ್ಳೆಯ ಭಾವನೆಗಳಿವೆ. ಪಂಜಾಬ್‌ನಲ್ಲಿ ಕಾಂಗ್ರೆಸ್‌ಗೆ ಬಹುಮತವಿತ್ತು, ಆದರೆ ಈಗ ಅದು ಚುಕ್ಕಾಣಿಯಿಲ್ಲದ, ದಿಕ್ಕುದೆಸೆ ಇಲ್ಲದ ಪಕ್ಷವಾಗಿದೆ.

ನವಜೋತ್ ಕೌರ್ ಸಿಧು ಮತ್ತು ಪಿಸಿಸಿ ಮುಖ್ಯಸ್ಥ ಸಿಧು ಅವರ ಸಹಾಯಕ ಮೊಹಮ್ಮದ್ ಮುಸ್ತಫಾ ಅವರ ಇತ್ತೀಚಿನ ಕಾಮೆಂಟ್‌ಗಳ ಬಗ್ಗೆ ಆಲಂ ಕೂಡ ವಾಗ್ದಾಳಿ ನಡೆಸಿದರು. ಸಿಧು ಪತ್ನಿ ನವಜೋತ್ ಕೌರ್ ಅವರು ಪಂಜಾಬ್‌ನಲ್ಲಿ ಪೋಸ್ಟಿಂಗ್‌ಗಾಗಿ ಆಲಂ ‘ಕಿಕ್‌ಬ್ಯಾಕ್‌ಗಳನ್ನು ಸ್ವೀಕರಿಸಿದ್ದಾರೆ’ ಎಂದು ಆರೋಪಿಸಿದ್ದರು. ಸೋನಿಯಾ ಗಾಂಧಿ ಅವರೊಂದಿಗಿನ ಆಲಂ ಅವರ ಫೋಟೋವನ್ನು ಟ್ವೀಟ್ ಮಾಡಿದ್ದಕ್ಕಾಗಿ ಮುಸ್ತಫಾ ಸಿಂಗ್ ಅವರನ್ನು ಸಹ ಆರೂಸಾ ಆಲಂ ತರಾಟೆಗೆ ತೆಗೆದುಕೊಂಡಿದ್ದರು.

ರಜಿಯಾ ನನ್ನನ್ನು ತನ್ನ ಸಹೋದರಿ ಎಂದು ಕರೆಯುತ್ತಿದ್ದರು. ಮುಸ್ತಫಾ ಕೂಡ ಹಾಗೆಯೇ ಕರೆಯುತ್ತಿದ್ದರು. ನಾನು ಅವರನ್ನು ಡಿಜಿಪಿಯಾಗಲು ಬಿಡಲಿಲ್ಲ ಎಂಬ ತಪ್ಪು ಕಲ್ಪನೆ ಅವರಲ್ಲಿರಬಹುದು. ಯುಪಿಎಸ್‌ಸಿಯೇ ಡಿಜಿಪಿಯನ್ನು ಆಯ್ಕೆ ಮಾಡಿದ ಸಂದರ್ಭದಲ್ಲಿ ಅವರು ನನ್ನ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ. ನಾನು ಅವರಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಒಂದು ವರ್ಷದಿಂದ ಭಾರತಕ್ಕೆ ಭೇಟಿ ನೀಡಿಲ್ಲ ಎಂದು ಹೇಳಿದ ಆರೂಸಾ ಆಲಂ, ನಾನು ಹಣ ಮತ್ತು ಆಭರಣದೊಂದಿಗೆ ಪರಾರಿಯಾಗಿದ್ದೇನೆ ಎಂದು ಮಹಿಳೆಯೊಬ್ಬರು (ನವಜೋತ್ ಕೌರ್ ಸಿಧು) ಹೇಳಿದ್ದಾರೆ. ಇದು ಸಾಧ್ಯವೇ ಎಂದು ನಾನು ಅವರನ್ನು ಕೇಳಲು ಬಯಸುತ್ತೇನೆ. ಭದ್ರತೆಯ ಹಲವು ಹಂತಗಳನ್ನು ಮೂಲಕ ದಾಟಿ ಪಾಕಿಸ್ತಾನಕ್ಕೆ ವಾಪಸ್ ಹೋಗಬೇಕು. ನಾನು ಪರಾರಿಯಾಗಿಲ್ಲ ಎಂದು ಅವರಿಗೆ ಹೇಳಲು ಬಯಸುತ್ತೇನೆ. ನಾನು ನನ್ನ ಮನೆಗೆ ಹಿಂತಿರುಗಿದ್ದೇನೆ ಎಂದು ಆರೂಸಾ ಆಲಂ ಹೇಳಿದ್ದಾರೆ.

ಈ ಮೂಲಕ ಪಾಕಿಸ್ತಾನದ ಪತ್ರಕರ್ತೆ ಆರೂಸಾ ಆಲಂ ತಮ್ಮ ವಿರುದ್ಧ ಪಂಜಾಬ್ ಕಾಂಗ್ರೆಸ್ ರಾಜಕಾರಣಿಗಳು ಮಾಡುತ್ತಿರುವ ಆರೋಪ, ಟೀಕೆಗಳಿಗೆಲ್ಲಾ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: Salman Butt: ಪಾಕಿಸ್ತಾನದ ಬೀದಿಯಲ್ಲಿ ಮಕ್ಕಳು ವರುಣ್ ಚಕ್ರವರ್ತಿ ರೀತಿಯ ಬೌಲಿಂಗ್​ಗೆ ಚೆನ್ನಾಗಿ ಆಡುತ್ತಾರೆ: ಪಾಕ್ ಮಾಜಿ ನಾಯಕ ಇದನ್ನೂ ಓದಿ: Terrorists Attack: ಜಮ್ಮು ಕಾಶ್ಮೀರದ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ; ವಿಡಿಯೋದಿಂದ ಬಯಲು

Published On - 7:32 pm, Tue, 26 October 21

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್