ಕಳೆದ ಶುಕ್ರವಾರ ದೆಹಲಿಯ ಘಾಜಿಪುರ್ನಲ್ಲಿ ಆರ್ಡಿಎಕ್ಸ್ನಿಂದ ಪ್ಯಾಕ್ ಮಾಡಲಾದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ತನಿಖೆಯನ್ನೂ ನಡೆಸುತ್ತಿದ್ದಾರೆ. ಈ ಮಧ್ಯೆ ಗುಪ್ತಚರ ಇಲಾಖೆ ಮಾಹಿತಿಯೊಂದನ್ನು ನೀಡಿದ್ದು, ಇಂಥ ಐಇಡಿಗಳನ್ನು ಪಾಕಿಸ್ತಾನಿ ಸಂಘಟನೆಗಳು ಭೂ ಮತ್ತು ಸಮುದ್ರ ಮಾರ್ಗಗಳನ್ನು ಬಳಸಿಕೊಳ್ಳುತ್ತಿವೆ. ಅದರಲ್ಲೂ ಮಾದಕ ದ್ರವ್ಯಗಳು (Drugs) ಸಾಗಣೆಯಾಗುವ ಮಾರ್ಗದಲ್ಲಿಯೇ ಇವುಗಳನ್ನು ಪಾಕಿಸ್ತಾನದಿಂದ ಭಾರತಕ್ಕೆ ಕಳಿಸಲಾಗುತ್ತಿದೆ ಎಂದು ಹೇಳಿದೆ.
ಘಾಜಿಪುರದಲ್ಲಿ ಪತ್ತೆಯಾದ ಐಇಡಿಯಲ್ಲಿ ರಿಮೋಟ್ ನಿಯಂತ್ರಿತ ಟೈಮರ್ ಇತ್ತು. ಅದರಲ್ಲಿ ಐಇಡಿ ಸಜ್ಜಾದ ಒಂದು ತಾಸು ಎಂಟು ನಿಮಿಷದ ನಂತರ ಸ್ಫೋಟಿಸುವಂತೆ ಫಿಕ್ಸ್ ಮಾಡಿಡಲಾಗಿತ್ತು. ಹೀಗೆ ಭಾರತಕ್ಕೆ ಅಪಾರ ಪ್ರಮಾಣದಲ್ಲಿ ಬಾಂಬ್, ಐಇಡಿ, ಗ್ರೆನೇಡ್ಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ 5-6 ಕೆಜಿಗಳಷ್ಟು ತೂಕದ ಸುಮಾರು 20 ಐಇಡಿಗಳು, 100 ಗ್ರೆನೇಡ್ಗಳನ್ನು ಪಂಜಾಬ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಫ್ಘಾನಿಸ್ತಾನದಿಂದ ಹೆರಾಯಿನ್ ಮತ್ತು ಅಫೀಮುಗಳಂತ ಡ್ರಗ್ಗಳನ್ನು ಕಳ್ಳಸಾಗಣೆ ಮಾಡುವ ಮಾರ್ಗದಲ್ಲೇ, ಈ ಐಇಡಿಯಂಥ ಸ್ಫೋಟಕಗಳನ್ನೂ ಸಾಗಿಸುವ ಕೆಲಸವಾಗುತ್ತಿದೆ. ಇದಕ್ಕಾಗಿ ಪಾಕಿಸ್ತಾನಿ ಮೂಲದ ಉಗ್ರಸಂಘಟನೆಗಳು ಡ್ರೋನ್, ಹಡಗುಗಳನ್ನು ಬಳಸಿಕೊಳ್ಳುತ್ತಿವೆ ಎಂದು ಭದ್ರತಾ ಏಜೆನ್ಸಿಗಳು ತಿಳಿಸಿವೆ. ಘಾಜಿಪುರದಲ್ಲಿ ಐಇಡಿ ಸ್ಫೋಟಗೊಳ್ಳುವುದನ್ನು ದೆಹಲಿ ಪೊಲೀಸರು ಸೂಕ್ತ ಸಮಯದಲ್ಲಿ ತಪ್ಪಿಸದೆ ಇದ್ದರೆ, ಅದು ಹಲವು ಅಮಾಯಕರನ್ನು ಖಂಡಿತವಾಗಿಯೂ ಕೊಲ್ಲುತ್ತಿತ್ತು. ಸ್ಫೋಟಕವನ್ನು ಸ್ಟೀಲ್ ಟಿಫಿನ್ ಬಾಕ್ಸ್ನಲ್ಲಿ ಹಾಕಿ, ಸೈಕಲ್ ಬೇರಿಂಗ್ ಮತ್ತು ನೇಲ್ಗಳನ್ನು ಸೇರಿಸಿಡಲಾಗಿತ್ತು. ಇದು ಸ್ಫೋಟವಾದಾಗ ಇನ್ನಷ್ಟು ತೀವ್ರತೆ ಹೆಚ್ಚಿಸುತ್ತದೆ.
ಇದನ್ನೂ ಓದಿ:ಟ್ಯಾಂಕರ್‌ಗಳಲ್ಲಿ ಬೇಬಿ ಟ್ಯಾಂಕ್ ಬಳಸಿ ಪೆಟ್ರೋಲ್ ಕಳ್ಳತನ; ಸುಮಾರು 50 ಲೀಟರ್ ಪೆಟ್ರೋಲ್ ಕಳವು