ಕದನವಿರಾಮಕ್ಕೆ ಗೋಗರೆದು ಮತ್ತೆ ಖ್ಯಾತೆ ತೆಗೆದ ಪಾಕಿಸ್ತಾನ; ಜಮ್ಮುವಿನಲ್ಲಿ ಡ್ರೋನ್ ದಾಳಿ!

ತನ್ನ ಹಳೇ ಚಾಳಿ ಮುಂದುವರೆಸಿರುವ ಪಾಕಿಸ್ತಾನ ಕದನವಿರಾಮ ಘೋಷಣೆಯಾದ ಮೂರೇ ಗಂಟೆಯಲ್ಲಿ ಮತ್ತೆ ಭಾರತದ ಮೇಲೆ ದಾಳಿ ನಡೆಸಿದೆ. ಇಂದು ಸಂಜೆ 5 ಗಂಟೆಯಿಂದ ಕದನವಿರಾಮ ಘೋಷಿಸಲಾಗಿತ್ತು. ಆದರೆ, ಇಂದು ರಾತ್ರಿ 8.45ರ ಸುಮಾರಿ ಜಮ್ಮುವಿನ ಉದಂಪುರ ಮತ್ತು ಸಾಂಬಾದಲ್ಲಿ ಡ್ರೋನ್ ಹಾಗೂ ಶೆಲ್ ದಾಳಿ ನಡೆಸಲಾಗಿದೆ.

ಕದನವಿರಾಮಕ್ಕೆ ಗೋಗರೆದು ಮತ್ತೆ ಖ್ಯಾತೆ ತೆಗೆದ ಪಾಕಿಸ್ತಾನ; ಜಮ್ಮುವಿನಲ್ಲಿ ಡ್ರೋನ್ ದಾಳಿ!
Pakistan Attack

Updated on: May 10, 2025 | 9:41 PM

ಶ್ರೀನಗರ, ಮೇ 10: ಅಮೆರಿಕ ಮಧ್ಯಸ್ಥಿಕೆ ವಹಿಸಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನವಿರಾಮ (Ceasefire)  ಘೋಷಿಸಿತ್ತು. ಪಾಕಿಸ್ತಾನವೇ ಭಾರತದ ಬಳಿ ಕದನವಿರಾಮವನ್ನು ಪ್ರಸ್ತಾಪಿಸಿದೆ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿತ್ತು. ಆದರೂ ತನ್ನ ಹಳೇ ಚಾಳಿ ಮುಂದುವರೆಸಿರುವ ಪಾಕಿಸ್ತಾನ ಕದನವಿರಾಮ ಘೋಷಣೆಯಾದ ಮೂರೇ ಗಂಟೆಯಲ್ಲಿ ಮತ್ತೆ ಭಾರತದ ಮೇಲೆ ದಾಳಿ ನಡೆಸಿದೆ. ಇಂದು ಸಂಜೆ 5 ಗಂಟೆಯಿಂದ ಕದನವಿರಾಮ ಘೋಷಿಸಲಾಗಿತ್ತು. ಆದರೆ, ಇಂದು ರಾತ್ರಿ 8.45ರ ಸುಮಾರಿಗೆ ಜಮ್ಮುವಿನ ಉದಂಪುರ ಮತ್ತು ಸಾಂಬಾದಲ್ಲಿ ಡ್ರೋನ್ ಹಾಗೂ ಶೆಲ್ ದಾಳಿ ನಡೆಸಲಾಗಿದೆ. ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಕಚ್ ಗಡಿಯಲ್ಲಿ ಹೊಸ ಡ್ರೋನ್‌ಗಳು ಪತ್ತೆಯಾಗಿವೆ, ಶ್ರೀನಗರದಲ್ಲಿ ಸ್ಫೋಟಗಳ ಸದ್ದು ಕೇಳಿಬಂದಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಭಾರತ ಮತ್ತು ಪಾಕಿಸ್ತಾನ ತಕ್ಷಣ ಹಾಗೂ ಪೂರ್ತಿಯಾಗಿ ಕದನವಿರಾಮಕ್ಕೆ ಒಪ್ಪಿಗೆ ನೀಡಿವೆ ಎಂದು ಘೋಷಿಸಿದ್ದರು. ಅದನ್ನು ಭಾರತ ಮತ್ತು ಪಾಕಿಸ್ತಾನ ಕೂಡ ಸ್ಪಷ್ಟಪಡಿಸಿತ್ತು.

ಇದನ್ನೂ ಓದಿ
ಸೂಕ್ಷ್ಮ ಸಂದರ್ಭದಲ್ಲಿ ಏನೋನೋ ಮಾತನಾಡಿದ್ರೆ ಏನೇನು ಅವಾಂತರವಾಗುತ್ತೆ ನೋಡಿ
ಭಾರತ-ಪಾಕ್​ ಉದ್ವಿಗ್ನತೆ ಶಮನಕ್ಕೆ ಜೈಶಂಕರ್ ಜತೆ ಮಾತುಕತೆ
ಪಾಕಿಸ್ತಾನದ ಸುಳ್ಳಿನ ಸರಮಾಲೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಭಾರತ
ಪಾಕಿಸ್ತಾನದ ನಾಲ್ಕು ವಾಯುನೆಲೆಗಳ ಮೇಲೆ ದಾಳಿ ನಡೆಸಿದ ಭಾರತ


ಇದನ್ನೂ ಓದಿ: ಕದನ ವಿರಾಮಕ್ಕೆ ಭಾರತ-ಪಾಕಿಸ್ತಾನ ಒಪ್ಪಿಗೆ, ಮೇ 12ಕ್ಕೆ ಮತ್ತೆ ಮಾತುಕತೆ; ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸ್ಪಷ್ಟನೆ


ಯುನೈಟೆಡ್ ಸ್ಟೇಟ್ಸ್ ಎರಡು ರಾಷ್ಟ್ರಗಳ ನಡುವೆ ಯುದ್ಧವನ್ನು ಕೊನೆಗೊಳಿಸಲು ಮಧ್ಯಸ್ಥಿಕೆ ವಹಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ನಂತರ ಅವರ ಹೇಳಿಕೆ ಬಂದಿದೆ. “ಯುನೈಟೆಡ್ ಸ್ಟೇಟ್ಸ್ ಮಧ್ಯಸ್ಥಿಕೆಯಲ್ಲಿ ನಡೆದ ದೀರ್ಘ ರಾತ್ರಿಯ ಮಾತುಕತೆಯ ನಂತರ, ಭಾರತ ಮತ್ತು ಪಾಕಿಸ್ತಾನವು ಸಂಪೂರ್ಣ ಮತ್ತು ತಕ್ಷಣದ ಒಪ್ಪಂದಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಸಾಮಾನ್ಯ ಜ್ಞಾನ ಮತ್ತು ಉತ್ತಮ ಬುದ್ಧಿವಂತಿಕೆಯನ್ನು ಬಳಸಿದ್ದಕ್ಕಾಗಿ ಎರಡೂ ದೇಶಗಳಿಗೆ ಅಭಿನಂದನೆಗಳು” ಎಂದು ಟ್ರಂಪ್ ಟ್ರೂತ್ ಸೋಶಿಯಲ್‌ನಲ್ಲಿ ಬರೆದಿದ್ದರು.


ಇದನ್ನೂ ಓದಿ: Ceasefire: ಕದನ ವಿರಾಮ ಎಂದರೇನು? ಭಾರತ- ಪಾಕಿಸ್ತಾನದ ನಡುವೆ ಮುಂದೆ ಏನಾಗುತ್ತೆ?


“ಪಾಕಿಸ್ತಾನದ ಡಿಜಿಎಂಒ ಇಂದು ಮಧ್ಯಾಹ್ನ 3:35ಕ್ಕೆ ಭಾರತೀಯ ಡಿಜಿಎಂಒಗೆ ಕರೆ ಮಾಡಿದರು. ಭಾರತೀಯ ಕಾಲಮಾನ 5 ಗಂಟೆಯಿಂದ ಜಾರಿಗೆ ಬರುವಂತೆ ಭೂಮಿ, ಗಾಳಿ ಮತ್ತು ಸಮುದ್ರದಲ್ಲಿನ ಎಲ್ಲಾ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ಎರಡೂ ಕಡೆಯವರು ನಿಲ್ಲಿಸುವುದಾಗಿ ಅವರ ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು. ಈ ನಿಯಮವನ್ನು ಜಾರಿಗೆ ತರಲು ಎರಡೂ ಕಡೆಯಿಂದಲೂ ಸೂಚನೆಗಳನ್ನು ನೀಡಲಾಗಿದೆ. ಎರಡೂ ದೇಶಗಳ ನಡುವೆ ಮೇ 12ರಂದು ಮಧ್ಯಾಹ್ನ 12 ಗಂಟೆಗೆ ಮತ್ತೆ ಮಾತುಕತೆ ನಡೆಸಯಲಿದೆ” ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದರು. ಆದರೆ, ಅದಾಗಿ ಕೆಲವೇ ಗಂಟೆಗಳಲ್ಲಿ ಜಮ್ಮುವಿನಲ್ಲಿ ಮತ್ತೆ ಪಾಕಿಸ್ತಾನ ಡ್ರೋನ್ ದಾಳಿ ನಡೆಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:14 pm, Sat, 10 May 25