Lok Sabha Election: ಕೈಗಾರಿಕೋದ್ಯಮಿ ಪಲ್ಲವಿ ಡೆಂಪೊಗೆ ಟಿಕೆಟ್, ಗೋವಾದಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಮಹಿಳಾ ಅಭ್ಯರ್ಥಿ ಸ್ಪರ್ಧೆ
ಲೋಕಸಭೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಐದನೇ ಪಟ್ಟಿ ಸಾಕಷ್ಟು ಸದ್ದು ಮಾಡಿದೆ. ಗೋವಾದಲ್ಲಿ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯೊಬ್ಬರು ಬಿಜೆಪಿಯಿಂದ ಕಣಕ್ಕಿಳಿಯುತ್ತಿದ್ದಾರೆ. ಕೈಗಾರಿಕೋದ್ಯಮಿ ಪಲ್ಲವಿ ಡೆಂಪೊಗೆ ಟಿಕೆಟ್ ನೀಡಲಾಗಿದೆ. ಒಂದೆಡೆ ಈ ಪಟ್ಟಿಯಿಂದ ವರುಣ್ ಗಾಂಧಿಯನ್ನು ಬದಿಗಿಟ್ಟರೆ ಮತ್ತೊಂದೆಡೆ ಕಂಗನಾ ರಣಾವತ್ ಹಾಗೂ ಅರುಣ್ ಗೋವಿಲ್ಗೆ ಟಿಕೆಟ್ ನೀಡಿರುವುದು ಅಚ್ಚರಿ ಮೂಡಿಸಿದೆ.
ಲೋಕಸಭೆ ಚುನಾವಣೆ(Lok Sabha Election)ಗೆ ಬಿಜೆಪಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಐದನೇ ಪಟ್ಟಿ ಸಾಕಷ್ಟು ಸದ್ದು ಮಾಡಿದೆ. ಗೋವಾದಲ್ಲಿ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯೊಬ್ಬರು ಬಿಜೆಪಿಯಿಂದ ಕಣಕ್ಕಿಳಿಯುತ್ತಿದ್ದಾರೆ. ಕೈಗಾರಿಕೋದ್ಯಮಿ ಪಲ್ಲವಿ ಡೆಂಪೊಗೆ ಟಿಕೆಟ್ ನೀಡಲಾಗಿದೆ. ಒಂದೆಡೆ ಈ ಪಟ್ಟಿಯಿಂದ ವರುಣ್ ಗಾಂಧಿಯನ್ನು ಬದಿಗಿಟ್ಟರೆ ಮತ್ತೊಂದೆಡೆ ಕಂಗನಾ ರಣಾವತ್ ಹಾಗೂ ಅರುಣ್ ಗೋವಿಲ್ಗೆ ಟಿಕೆಟ್ ನೀಡಿರುವುದು ಅಚ್ಚರಿ ಮೂಡಿಸಿದೆ.
ಪಲ್ಲವಿ ಡೆಂಪೊ ಮಹಿಳಾ ಕೈಗಾರಿಕೋದ್ಯಮಿ, ಡೆಂಪೊ ಇಂಡಸ್ಟ್ರೀಸ್ನ ಕಾರ್ಯನಿರ್ವಾಹಕ ನಿರ್ದೇಶಕಿ ಕೂಡ. ಅವರು ಗೋವಾದಲ್ಲಿ ಉದ್ಯಮಿ ಹಾಗೂ ಶಿಕ್ಷಣತಜ್ಞರಾಗಿ ಗುರುತಿಸಿಕೊಂಡಿದ್ದಾರೆ. 49 ವರ್ಷದ ಪಲ್ಲವಿ ರಾಸಾಯನ ಶಾಸ್ತ್ರದಲ್ಲಿ ಪದವಿ ಹಾಗೂ ಎಂಐಟಿ ಪುಣೆಯಲ್ಲಿ ಎಂಬಿಎ ಮಾಡಿದ್ದಾರೆ. ಅವರಿಗೆ ಟಿಕೆಟ್ ನೀಡಲಾಗಿರುವ ದಕ್ಷಿಣ ಗೋವಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಫ್ರಾನ್ಸಿಸ್ಕೊ ಸರ್ದಿನ್ಹಾ ಪ್ರತಿನಿಧಿಸುತ್ತಿದ್ದಾರೆ.
ಬಿಜೆಪಿ ಈ ಕ್ಷೇತ್ರದಲ್ಲಿ ಎರಡು ಬಾರಿ ಮಾತ್ರ ಗೆದ್ದಿದೆ 1962ರಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಎರಡು ಬಾರಿ ಮಾತ್ರ ಗೆಲುವು ಸಾಧಿಸಿದೆ. 20 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ದಕ್ಷಿಣ ಗೋವಾ ಕ್ಷೇತ್ರವು ಅಂದಿನಿಂದ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ, ಯುನೈಟೆಡ್ ಗೋವಾನ್ಸ್ ಪಕ್ಷ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಡುವೆ ಸ್ಪರ್ಧೆ ಏರ್ಪಡುತ್ತಿತ್ತು.
ಮತ್ತಷ್ಟು ಓದಿ: Lok Sabha Election: ವರುಣ್ ಗಾಂಧಿ ಬದಲಾಗಿ ತಾಯಿ ಮೇನಕಾ ಗಾಂಧಿಗೆ ಟಿಕೆಟ್ ಕೊಟ್ಟ ಬಿಜೆಪಿ
ಬಿಜೆಪಿಯು 1999 ಮತ್ತು 2014ರ ಚುನಾವಣೆಯಲ್ಲಿ ಮಾತ್ರ ಈ ಸ್ಥಾನವನ್ನು ಗೆದ್ದಿದೆ, ಆದರೆ ಪಕ್ಷವು ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪಲ್ಲವಿ 2012 ರಿಂದ 2016 ರವರೆಗೆ ಗೋವಾ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಅಕಾಡೆಮಿಕ್ ಕೌನ್ಸಿಲ್‌ನ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಏಪ್ರಿಲ್ 19ಕ್ಕೆ ಶುರುವಾಗಲಿರುವ ಚುನಾವಣೆ ಜೂನ್ 1ರವರೆಗೆ ನಡೆಯಲಿದ್ದು, ಜೂನ್ 4ಕ್ಕೆ ಫಲಿತಾಂಶ ಹೊರಬರಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ