PAN Aadhaar Link Last Date: ಆಧಾರ್​ – ಪಾನ್​ ಲಿಂಕ್​ಗೆ ಇಂದೇ ಕೊನೇ ದಿನ; ಈಗಲೂ ನಿರ್ಲಕ್ಷ್ಯ ಮಾಡಿದರೆ ಎದುರಾಗುವ ತೊಡಕುಗಳು ಹಲವು

ನೀವು ಇಂದು ಆಧಾರ್​ ಕಾರ್ಡ್-ಪಾನ್​ ಕಾರ್ಡ್​ ಲಿಂಕ್​ ಮಾಡದೆ ಕೊಳ್ಳದೆ ಇದ್ದರೆ ನಿಮ್ಮ ಪಾನ್​ ಕಾರ್ಡ್ ನಿಷ್ಕ್ರಿಯ ಆಗುತ್ತದೆ. ಹಾಗೊಮ್ಮೆ ಪಾನ್​ ಕಾರ್ಡ್ ನಿಷ್ಕ್ರಿಯ ಆದರೆ ಹಲವು ಸಮಸ್ಯೆಗಳು ಎದುರಾಗುತ್ತವೆ.

PAN Aadhaar Link Last Date: ಆಧಾರ್​ - ಪಾನ್​ ಲಿಂಕ್​ಗೆ ಇಂದೇ ಕೊನೇ ದಿನ; ಈಗಲೂ ನಿರ್ಲಕ್ಷ್ಯ ಮಾಡಿದರೆ ಎದುರಾಗುವ ತೊಡಕುಗಳು ಹಲವು
ಸಾಂದರ್ಭಿಕ ಚಿತ್ರ
Follow us
Lakshmi Hegde
| Updated By: Digi Tech Desk

Updated on:Mar 31, 2021 | 4:00 PM

ಪಾನ್​ ಕಾರ್ಡ್​ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಇಂದು (ಮಾರ್ಚ್​ 31) ಕೊನೇ ದಿನ. ಇನ್ನೂ ನೀವು ಯಾರಾದರೂ ಈ ಕೆಲಸ ಬಾಕಿ ಇಟ್ಟುಕೊಂಡಿದ್ದರೆ ಇಂದೇ ಮುಗಿಸಿಕೊಂಡುಬಿಡಿ. ಇಂದು ಮಧ್ಯರಾತ್ರಿವರೆಗೆ ಅವಕಾಶವಿದ್ದು, ಆದಾಗ್ಯೂ ಯಾರಾದರೂ ಲಿಂಕ್ ಮಾಡಿಕೊಳ್ಳದೆ ಹೋದರೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 1000 ರೂ.ವರೆಗೆ ದಂಡ ತುಂಬಬೇಕಾಗುತ್ತದೆ.. ಅಷ್ಟೇ ಅಲ್ಲ, ಪಾನ್​ ಕಾರ್ಡ್​ ನಿಷ್ಕ್ರಿಯಗೊಳ್ಳುತ್ತದೆ.

ಆಧಾರ್​ ಮತ್ತು ಪಾನ್​ಕಾರ್ಡ್ ಲಿಂಕ್​ ಮಾಡದವರಿಗೆ, 1961ರ ಆದಾಯ ತೆರಿಗೆ ಕಾಯ್ದೆಯ ಹೊಸ ಸೆಕ್ಷನ್​ 234ಎಚ್​ನಡಿ ದಂಡ ವಿಧಿಸಲಾಗುವುದು ಎಂದು ಮಾರ್ಚ್​ 23ರಂದು ಲೋಕಸಭೆಯಲ್ಲಿ ಫೈನಾನ್ಸ್ ಬಿಲ್​ 2021ನ್ನು ಅಂಗೀಕಾರ ಮಾಡುವ ಸಂದರ್ಭದಲ್ಲಿ ಸರ್ಕಾರ ಸೂಚಿಸಿದೆ. ಕೊಟ್ಟ ಅವಧಿಯೊಳಗೆ ಆಧಾರ್​ ಮತ್ತು ಪಾನ್​ ಕಾರ್ಡ್​ ಲಿಂಕ್ ಮಾಡದೆ ಇರುವವರಿಗೆ ದಂಡ ವಿಧಿಸಲಾಗುವುದು. ದಂಡದ ಮೊತ್ತ 1000 ರೂ.ದಿಂದ ಪ್ರಾರಂಭವಾಗುತ್ತದೆ. ಇದು ಹೆಚ್ಚು ಆಗಬಹುದು ಎಂದು 1961ರ ಕಾಯ್ದೆಯ ಸೆಕ್ಷನ್​ 234ಎಚ್​​ನಡಿ ಸ್ಪಷ್ಟವಾಗಿ ಹೇಳಲಾಗಿದೆ. ಹಾಗೇ, ಪಾನ್​ ಕಾರ್ಡ್​ ನಿಷ್ಕ್ರಿಯಗೊಳ್ಳಲಿದ್ದು, ಮುಂದೆ ಕೆಲವು ರೀತಿಯ ಹಣಕಾಸು ವ್ಯವಹಾರಕ್ಕೆ ತೊಂದರೆಯಾಗಲಿದೆ.

ಪಾನ್​ ಕಾರ್ಡ್ ಮತ್ತು ಆಧಾರ್ ಕಾರ್ಡ್​ ಲಿಂಕ್​ ಮಾಡಿಕೊಳ್ಳಲು ಈಗಾಗಲೇ ಕೇಂದ್ರ ಸರ್ಕಾರ ಸಾಕಷ್ಟು ಸಮಯ ನೀಡಿತ್ತು. ಡೆಡ್​ಲೈನ್ ಅವಧಿಯನ್ನು ವಿಸ್ತರಿಸುತ್ತ ಬಂದಿತ್ತು. ಅದಾದ ಮೇಲೆ 2021ರ ಮಾರ್ಚ್​ 31 ಲಾಸ್ಟ್​ ಡೇಟ್​ ಎಂದು ಖಡಾಖಂಡಿತವಾಗಿ ಹೇಳಿದೆ.

ಪಾನ್​ಕಾರ್ಡ್ ನಿಷ್ಕ್ರಿಯ ಆದ್ರೆ ಏನಾಗತ್ತೆ? ನೀವು ಇಂದು ಆಧಾರ್​ ಕಾರ್ಡ್-ಪಾನ್​ ಕಾರ್ಡ್​ ಲಿಂಕ್​ ಮಾಡದೆ ಕೊಳ್ಳದೆ ಇದ್ದರೆ ನಿಮ್ಮ ಪಾನ್​ ಕಾರ್ಡ್ ನಿಷ್ಕ್ರಿಯ ಆಗುತ್ತದೆ. ಹಾಗೊಮ್ಮೆ ಪಾನ್​ ಕಾರ್ಡ್ ನಿಷ್ಕ್ರಿಯ ಆದರೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಬ್ಯಾಂಕಿಂಗ್​ ವ್ಯವಹಾರಗಳಿಗೆ ತೊಡಕಾಗುತ್ತದೆ. ಯಾವುದೇ ಬ್ಯಾಂಕ್​ಗಳಲ್ಲಿ 50,000 ರೂ.ಗೂ ಮೇಲ್ಪಟ್ಟು ಹಣದ ವ್ಯವಹಾರ ಮಾಡುವಾಗ ಪಾನ್​ ನಂಬರ್ ಬೇಕಾಗುತ್ತದೆ. ಒಮ್ಮೆ ನಿಮ್ಮ ಪಾನ್​ ಕಾರ್ಡ್ ನಿಷ್ಕ್ರಿಯ ಗೊಂಡಿದ್ದರೆ ನಿಮಗೇನಾದರೂ ಎಮರ್ಜನ್ಸಿ ಇದ್ದಾಗ ಹಣ ತೆಗೆಯಲಾಗದೆ, ಅಥವಾ ಬೇರೆಯವರ ಖಾತೆಗೆ ಹಾಕಲಾಗದೆ ಪರದಾಡಬೇಕಾಗುತ್ತದೆ.

ಇನ್ನು ಐಟಿ ರಿಟರ್ನ್​ ಮಾಡಲು ಸಾಧ್ಯವಾಗುವುದಿಲ್ಲ. ಹಾಗೇ ಯಾವುದೇ ಬ್ಯಾಂಕ್​ ಅಕೌಂಟ್​ನಲ್ಲಿ ಹೊಸ ಖಾತೆ ತೆರೆಯಲೂ ಸಾಧ್ಯವಾಗುವುದಿಲ್ಲ. ಹೆಚ್ಚಿನ ಮೊತ್ತದ ಟಿಡಿಎಸ್​ ಪಾವತಿಸಬೇಕಾಗುತ್ತದೆ. ಇನ್ನು ಐಟಿ ರಿಟರ್ನ್​ ವೇಳೆಯಲ್ಲಿ ಪಾನ್ ನಂಬರ್​ ಒದಗಿಸದೆ ಇದ್ದರೆ 10,000 ರೂ.ವರೆಗೂ ದಂಡ ವಿಧಿಸಬಹದು. 1000 ರೂ. ಆಗಲೀ, 10 ಸಾವಿರವೇ ಆಗಲಿ.. ಮೌಲ್ಯ ಇದ್ದೇ ಇದೆ ತಾನೇ? ಯಾಕೆ ಸುಮ್ಮನೆ ದಂಡಕ್ಕಾಗಿ ಅದನ್ನು ಖಾಲಿ ಮಾಡುತ್ತೀರಿ. ಇಂದೇ ಆಧಾರ್ ಪಾನ್ ಲಿಂಕ್ ಮಾಡಿಕೊಳ್ಳಿ.

Published On - 3:57 pm, Wed, 31 March 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್