Pandora Papers: ಕೇಂದ್ರೀಯ ನೇರ ತೆರಿಗೆ ಮಂಡಳಿ ನೇತೃತ್ವದಲ್ಲಿ ತನಿಖೆ ನಡೆಸಲು ಕೇಂದ್ರ ಸರ್ಕಾರ ನಿರ್ಧಾರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 04, 2021 | 8:56 PM

ಪಂಡೋರಾ ಪೇಪರ್ಸ್​ ಬಹಿರಂಗಪಡಿಸಿರುವ ವ್ಯಕ್ತಿಗಳ ಹಣಕಾಸು ವ್ಯವಹಾರದ ಬಗ್ಗೆ ತನಿಖಾಧಿಕಾರಿಗಳು ಗಮನ ಕೇಂದ್ರೀಕರಿಸಲಿದ್ದಾರೆ.

Pandora Papers: ಕೇಂದ್ರೀಯ ನೇರ ತೆರಿಗೆ ಮಂಡಳಿ ನೇತೃತ್ವದಲ್ಲಿ ತನಿಖೆ ನಡೆಸಲು ಕೇಂದ್ರ ಸರ್ಕಾರ ನಿರ್ಧಾರ
ಪಂಡೋರಾ ಪೇಪರ್ಸ್
Follow us on

ದೆಹಲಿ: ಬಹುಚರ್ಚಿತ ಪಂಡೋರಾ ಪೇಪರ್ಸ್​ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ನೇರ ತೆರಿಗೆ ಮಂಡಳಿ (Central Board of Direct Taxes – CBDT) ಮುಖ್ಯಸ್ಥರ ನೇತೃತ್ವದಲ್ಲಿ ಬಹು ಇಲಾಖೆಯ ತಂಡದಿಂದ ತನಿಖೆ ನಡೆಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಪಂಡೋರಾ ಪೇಪರ್ಸ್​ ಬಹಿರಂಗಪಡಿಸಿರುವ ವ್ಯಕ್ತಿಗಳ ಹಣಕಾಸು ವ್ಯವಹಾರದ ಬಗ್ಗೆ ತನಿಖಾಧಿಕಾರಿಗಳು ಗಮನ ಕೇಂದ್ರೀಕರಿಸಲಿದ್ದಾರೆ.

ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ತೆಂಡುಲ್ಕರ್​ ವಿದೇಶದಲ್ಲಿ ಕಂಪನಿ ತೆರೆದು ಹಣ ವಾಪಸ್ ಪಡೆದಿರುವ ಬಗ್ಗೆ, ಉದ್ಯಮಿ ಅನಿಲ್ ಅಂಬಾನಿ ವಿದೇಶಗಳಲ್ಲಿ 1.3 ಶತಕೋಟಿ ರೂಪಾಯಿಯಷ್ಟು ಹಣ ಹೂಡಿಕೆ ಮಾಡಿದ್ದಾರೆ ಎಂದು ಪ್ಯಾಂಡೋರಾ ಪೇಪರ್ಸ್​ ಹೇಳಿದೆ. ಬಯೊಟೆಕ್ ಉದ್ಯಮಿ ಕಿರಣ್ ಮಜುಂದಾರ್ ಷಾ ಅವರ ಪತಿ ಜಾನ್ ಷಾ ಸಹ ವಿದೇಶಗಳಲ್ಲಿ ರಹಸ್ಯ ಹೂಡಿಕೆ ಮಾಡಿದ್ದಾರೆ. ನಟ ಜಾಕಿ ಶ್ರಾಫ್​ ತನ್ನ ಅತ್ತೆ ಮತ್ತು ಮಕ್ಕಳ ಹೆಸರಿನಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಎಲ್ಲ ಅಂಶಗಳಿಗೆ ಸಂಬಂಧಿಸಿದಂತೆ ಸಿಬಿಡಿಟಿ ಇದೀಗ ತನಿಖೆ ನಡೆಸಲಿದೆ.

ಏನಿದು ಪಂಡೋರಾ ಪೇಪರ್ಸ್
ತನಿಖಾ ಪತ್ರಕರ್ತರ ಅಂತಾರಾಷ್ಟ್ರೀಯ ಒಕ್ಕೂಟ (International Council of Investigative Journalism – ICIJ) ಭಾನುವಾರ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ವಿವಿಧ ದೇಶಗಳ ಮುಖ್ಯಸ್ಥರು, ಕೈಗಾರಿಕೋದ್ಯಮಿಗಳು, ಸೆಲೆಬ್ರಿಟಿಗಳು ಮತ್ತು ಕ್ರೀಡಾಪಟುಗಳ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ಸೋರಿಕೆ ಆಗಿವೆ.

‘ಪಂಡೋರಾ ಪೇಪರ್ಸ್‌’ (Pandora Papers) ಎಂದು ಕರೆಯಲಾಗುತ್ತಿರುವ ಈ ದಾಖಲೆಗಳಲ್ಲಿ ಪ್ರಮುಖ ವ್ಯಕ್ತಿಗಳಿಗೆ ಸಂಬಂಧಿಸಿದ ರಹಸ್ಯ ವಿವರಗಳು ಇರುವುದಾಗಿ ವರದಿಯಾಗಿದೆ. ಈ ತನಿಖೆಯು ಪ್ರಪಂಚದಾದ್ಯಂತದ 14 ವಿವಿಧ ಹಣಕಾಸು ಸೇವಾ ಕಂಪನಿಗಳಿಂದ ಸುಮಾರು 1.2 ಕೋಟಿ ದಾಖಲೆಗಳನ್ನು ಪರಿಶೀಲಿಸಲಾಗಿದೆ.

(Pandora Papers Govt of India Decides to Investigate from CBDT let Multi Agency Team)

ಇದನ್ನೂ ಓದಿ: Pandora Papers ಗಣ್ಯ ವ್ಯಕ್ತಿಗಳ ಹಣಕಾಸು ವ್ಯವಹಾರದ ರಹಸ್ಯ ದಾಖಲೆ ಸೋರಿಕೆ; ಏನಿದು ಪಂಡೋರಾ ಪೇಪರ್ಸ್?
ಇದನ್ನೂ ಓದಿ: Pandora Papers – ಪಂಡೋರಾ ಪೇಪರ್ಸ್: 300 ಭಾರತೀಯರು, ಜಗತ್ತಿನ ಗಣ್ಯರು, ಸೆಲೆಬ್ರಿಟಿಗಳು, ಕೈಗಾರಿಕೋದ್ಯಮಿಗಳ ಹೂಡಿಕೆ ದಾಖಲೆಗಳು ಸೋರಿಕೆ