Pandora Papers ಗಣ್ಯ ವ್ಯಕ್ತಿಗಳ ಹಣಕಾಸು ವ್ಯವಹಾರದ ರಹಸ್ಯ ದಾಖಲೆ ಸೋರಿಕೆ; ಏನಿದು ಪಂಡೋರಾ ಪೇಪರ್ಸ್?

ಪಂಡೋರಾ ಪೇಪರ್ಸ್ ಲೀಕ್​ : ಇವುಗಳು 14 ಜಾಗತಿಕ ಕಾರ್ಪೊರೇಟ್ ಸೇವಾ ಸಂಸ್ಥೆಗಳಿಂದ 1.19 ಕೋಟಿ ಸೋರಿಕೆಯಾದ ಕಡತಗಳಾಗಿವೆ. ಇದು 29,000 ಆಫ್-ದಿ-ಶೆಲ್ಫ್ ಕಂಪನಿಗಳು ಮತ್ತು ಖಾಸಗಿ ಟ್ರಸ್ಟ್‌ಗಳನ್ನು ಕೇವಲ ಅಸ್ಪಷ್ಟ ತೆರಿಗೆ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ ಸಿಂಗಾಪುರ, ನ್ಯೂಜಿಲ್ಯಾಂಡ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಂತಹ ಸೇರಿದಂತೆ ಜಗತ್ತಿನಾದ್ಯಂತ ಸ್ಥಾಪಿಸಿದೆ

Pandora Papers ಗಣ್ಯ ವ್ಯಕ್ತಿಗಳ ಹಣಕಾಸು ವ್ಯವಹಾರದ ರಹಸ್ಯ ದಾಖಲೆ ಸೋರಿಕೆ; ಏನಿದು ಪಂಡೋರಾ ಪೇಪರ್ಸ್?
ಪಂಡೋರಾ ಪೇಪರ್ಸ್
Follow us
| Updated By: ರಶ್ಮಿ ಕಲ್ಲಕಟ್ಟ

Updated on: Oct 04, 2021 | 2:08 PM

ಪಂಡೋರಾ ಪೇಪರ್ಸ್‌ನಲ್ಲಿ(Pandora Papers) ಭಾರತೀಯದ ಕನಿಷ್ಠ 380 ವ್ಯಕ್ತಿಗಳ ಹೆಸರು ಇದೆ. ಇವುಗಳಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಇದುವರೆಗೆ ಸುಮಾರು 60 ಪ್ರಮುಖ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ದೃಢೀಕರಿಸಿದೆ. ಪಂಡೋರಾ ಪೇಪರ್ಸ್ ಈ ಘಟಕಗಳ ಬಗ್ಗೆ ಏನು ಹೇಳುತ್ತವೆ? ಟ್ರಸ್ಟ್‌ಗಳು ಕಾನೂನುಬಾಹಿರವಾಗಿಲ್ಲದಿದ್ದರೆ, ತನಿಖೆ ಯಾವುದರ ಬಗ್ಗೆ? ಏನಿದು ಪಂಡೋರಾ ಪೇಪರ್ಸ್? ತನಿಖಾ ಪತ್ರಕರ್ತರ ಅಂತಾರಾಷ್ಟ್ರೀಯ ಒಕ್ಕೂಟ (ICIJ)ಭಾನುವಾರ ಬಿಡುಗಡೆ ಮಾಡಿದ ವರದಿಯಲ್ಲಿ ಏನಿದೆ? ಎಂಬುದರ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ. ಏನಿದು ಪಂಡೋರಾ ಪೇಪರ್ಸ್? ಪಂಡೋರಾ ಪೇಪರ್ಸ್ಇವುಗಳು 14 ಜಾಗತಿಕ ಕಾರ್ಪೊರೇಟ್ ಸೇವಾ ಸಂಸ್ಥೆಗಳಿಂದ 1.19 ಕೋಟಿ ಸೋರಿಕೆಯಾದ ಕಡತಗಳಾಗಿವೆ. ಇದು 29,000 ಆಫ್-ದಿ-ಶೆಲ್ಫ್ ಕಂಪನಿಗಳು ಮತ್ತು ಖಾಸಗಿ ಟ್ರಸ್ಟ್‌ಗಳನ್ನು ಕೇವಲ ಅಸ್ಪಷ್ಟ ತೆರಿಗೆ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ ಸಿಂಗಾಪುರ, ನ್ಯೂಜಿಲ್ಯಾಂಡ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಂತಹ ಸೇರಿದಂತೆ ಜಗತ್ತಿನಾದ್ಯಂತ ಸ್ಥಾಪಿಸಿದೆ.  ಈ ದಾಖಲೆಗಳು ಸಾಗರೋತ್ತರ ಖಾಸಗಿ ಟ್ರಸ್ಟ್‌ಗಳಲ್ಲಿ ‘ಇತ್ಯರ್ಥಗೊಂಡ’ (ಅಥವಾ ಇರಿಸಲಾಗಿರುವ) ಸ್ವತ್ತುಗಳ ಅಂತಿಮ ಮಾಲೀಕತ್ವ ಮತ್ತು ನಗದು, ಷೇರುದಾರ ಮತ್ತು ರಿಯಲ್ ಎಸ್ಟೇಟ್ ಆಸ್ತಿಗಳನ್ನು ಒಳಗೊಂಡಂತೆ ಹೂಡಿಕೆಗೆ ಸಂಬಂಧಿಸಿವೆ. ಪಂಡೋರಾ ಪೇಪರ್ಸ್‌ನಲ್ಲಿ ಭಾರತದ ಕನಿಷ್ಠ 380 ವ್ಯಕ್ತಿಗಳು ಇದ್ದಾರೆ. ಇವುಗಳಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಇದುವರೆಗೆ ಸುಮಾರು 60 ಪ್ರಮುಖ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ದೃಢೀಕರಿಸಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ.

ಪಂಡೋರಾ ಪೇಪರ್ಸ್ ಏನು ಬಹಿರಂಗಪಡಿಸುತ್ತದೆ? ಪಂಡೋರಾ ಪೇಪರ್ಸ್ ಶ್ರೀಮಂತರು, ಪ್ರಸಿದ್ಧರು ಮತ್ತು ಕುಖ್ಯಾತರು, ಅವರಲ್ಲಿ ಅನೇಕರು ಈಗಾಗಲೇ ತನಿಖಾ ಸಂಸ್ಥೆಗಳ ನಿಗಾದಲ್ಲಿರುವವವರು ಎಸ್ಟೇಟ್ ಯೋಜನೆಗಾಗಿ, ತೆರಿಗೆ ಉದ್ದೇಶಗಳಿಗಾಗಿ ಸಡಿಲವಾಗಿ ನಿಯಂತ್ರಿಸಲ್ಪಡುವ ನ್ಯಾಯವ್ಯಾಪ್ತಿಯಲ್ಲಿ ಸಂಕೀರ್ಣವಾದ ಬಹು-ಪದರದ ಟ್ರಸ್ಟ್ ಸ್ಥಾಪಿಸಿದ್ದು, ಮಾಹಿತಿಯನ್ನು ರಹಸ್ಯವಾಗಿಟ್ಟಿದ್ದಾರೆ. ಟ್ರಸ್ಟ್‌ಗಳನ್ನು ಸ್ಥಾಪಿಸುವ ಉದ್ದೇಶಗಳು ಹಲವು ಇದ್ದರೂ ಇವುಗಳಲ್ಲಿ ಕೆಲವು ಮಾತ್ರ ನೈಜ ಉದ್ದೇಶದಿಂದ ಕೂಡಿದ್ದಾಗಿದೆ. ಆದರೆ ದಾಖಲೆಗಳ ಪರಿಶೀಲನೆ ನಡೆಸಿದಾಗ ಅನೇಕರ ಉದ್ದೇಶವು ಏನಿದೆ ಎಂಬುದನ್ನು ತೋರಿಸುತ್ತದೆ: i) ತಮ್ಮ ನೈಜ ಗುರುತುಗಳನ್ನು ಮರೆಮಾಚುವುದು ಮತ್ತು ಸಾಗರೋತ್ತರ ಘಟಕಗಳಿಂದ ತಮ್ಮನ್ನು ದೂರವಿಡುವುದು. ಇದರಿಂದ ತೆರಿಗೆ ಅಧಿಕಾರಿಗಳು ಅವರನ್ನು ತಲುಪುವುದು ಅಸಾಧ್ಯವಾಗುತ್ತದೆ ii) ಹೂಡಿಕೆಯನ್ನು ಕಾಪಾಡಲು – ನಗದು, ಷೇರುಗಳು, ರಿಯಲ್ ಎಸ್ಟೇಟ್, ಕಲೆ, ವಿಮಾನ ಮತ್ತು ವಿಹಾರ ನೌಕೆಗಳನ್ನು ಸಾಲಗಾರರು ಮತ್ತು ಕಾನೂನುಗಳಿಂದ ಕಾಪಾಡಲು.

ಪಂಡೋರಾ ಪೇಪರ್ಸ್, ಪನಾಮ ಪೇಪರ್ಸ್ ಮತ್ತು ಪ್ಯಾರಡೈಸ್ ಪೇಪರ್‌ಗಳಿಂದ ಹೇಗೆ ಭಿನ್ನ? ಪನಾಮ ಮತ್ತು ಪ್ಯಾರಡೈಸ್ ಪೇಪರ್‌ಗಳು ಕ್ರಮವಾಗಿ ವ್ಯಕ್ತಿಗಳು ಮತ್ತು ಕಾರ್ಪೊರೇಟ್‌ಗಳು ಸ್ಥಾಪಿಸಿದ ಸಾಗರೋತ್ತರ ಘಟಕಗಳೊಂದಿಗೆ ವ್ಯವಹರಿಸುತ್ತವೆ. ಪಾಂಡೊರಾ ಪೇಪರ್ಸ್ ತನಿಖೆಯು ದೇಶಗಳು ಹಣ ಅವ್ಯವಹಾರ, ಭಯೋತ್ಪಾದನೆ ಧನಸಹಾಯ ಮತ್ತು ತೆರಿಗೆ ವಂಚನೆಯ ಹೆಚ್ಚುತ್ತಿರುವ ಕಾಳಜಿಯೊಂದಿಗೆ ಇಂತಹ ಸಾಗರೋತ್ತರ ಘಟಕಗಳ ಮೇಲೆ ಕಠಿಣಕ್ರಮಗಳಿಗೆ ಒತ್ತಾಯಿಸಿದ ನಂತರ ಹಣದ ವ್ಯವಹಾರ ಹೇಗೆ ಮಾಡಲಾಗಿದೆ ಎಂಬುದನ್ನು ತೋರಿಸುತ್ತದೆ.

ಪಂಡೋರಾ ಪೇಪರ್ಸ್ ಕಾರ್ಪೊರೇಟ್ ಮುಸುಕನ್ನು ಕಿತ್ತೆಸೆಯುತ್ತದೆ. ವ್ಯಾಪಾರಿ ಕುಟುಂಬಗಳು ಮತ್ತು ಅತಿ ಶ್ರೀಮಂತ ವ್ಯಕ್ತಿಗಳಿಂದ ಹೂಡಿಕೆಗಳು ಮತ್ತು ಇತರ ಸ್ವತ್ತುಗಳನ್ನು ಹೊಂದುವ ಏಕೈಕ ಉದ್ದೇಶಕ್ಕಾಗಿ ಸ್ಥಾಪಿಸಲಾದ ಸಾಗರೋತ್ತರ ಕಂಪನಿಗಳ ಜೊತೆಯಲ್ಲಿ ಟ್ರಸ್ಟ್‌ಗಳನ್ನು ಹೇಗೆ ವಾಹನವಾಗಿ ಬಳಸುತ್ತಾರೆ ಎಂಬುದನ್ನು ಬಹಿರಂಗಪಡಿಸುತ್ತದೆ. ತೆರಿಗೆದಾರರ ಸ್ವರ್ಗ ಎಂದೇ ಹೇಳಲಾಗುವ ಸಮೋವಾ, ಬೆಲೀಜ್, ಪನಾಮ ಮತ್ತು ಬ್ರಿಟಿಷ್ ವರ್ಜಿನ್ ದ್ವೀಪಗಳಲ್ಲಿ ಅಥವಾ ಸಿಂಗಾಪುರ್ ಅಥವಾ ನ್ಯೂಜಿಲ್ಯಾಂಡ್‌ನಲ್ಲಿ ಅಥವಾ ಯುಎಸ್‌ನ ದಕ್ಷಿಣ ಡಕೋಟಾ ತೆರಿಗೆ ಅನುಕೂಲಗಳನ್ನು ಒದಗಿಸುತ್ತವೆ.

ಟ್ರಸ್ಟ್ ಎಂದರೇನು? ಟ್ರಸ್ಟ್ ಅನ್ನು ನಂಬಿಕಸ್ಥ ವ್ಯವಸ್ಥೆ ಎಂದು ವಿವರಿಸಬಹುದು, ಅಲ್ಲಿ ಟ್ರಸ್ಟೀ ಎಂದು ಕರೆಯಲ್ಪಡುವ ಮೂರನೇ ವ್ಯಕ್ತಿಯು ವ್ಯಕ್ತಿಗಳಿಂದ ಅಥವಾ ಸಂಸ್ಥೆಗಳ ಪರವಾಗಿ ಸ್ವತ್ತುಗಳನ್ನು ಹೊಂದಿದ್ದು ಅದರಿಂದ ಲಾಭ ಪಡೆಯಬೇಕು. ಇದನ್ನು ಸಾಮಾನ್ಯವಾಗಿ ಎಸ್ಟೇಟ್ ಯೋಜನೆ ಉದ್ದೇಶಗಳಿಗಾಗಿ ಮತ್ತು ಉತ್ತರಾಧಿಕಾರ ಯೋಜನೆಗಾಗಿ ಬಳಸಲಾಗುತ್ತದೆ. ಇದು ದೊಡ್ಡ ವ್ಯಾಪಾರ ಕುಟುಂಬಗಳಿಗೆ ತಮ್ಮ ಸ್ವತ್ತುಗಳನ್ನು ಅಂದರೆ ಹಣಕಾಸು ಹೂಡಿಕೆಗಳು, ಷೇರುದಾರ ಮತ್ತು ರಿಯಲ್ ಎಸ್ಟೇಟ್ ಆಸ್ತಿ ಒಟ್ಟುಗೂಡಿಸಲು ಸಹಾಯ ಮಾಡುತ್ತದೆ. ಒಂದು ಟ್ರಸ್ಟ್ ಮೂರು ಪ್ರಮುಖ ಮೂರು ಹಂತವನ್ನು ಒಳಗೊಂಡಿದೆ: ‘ಸೆಟ್ಲರ್’ – ಟ್ರಸ್ಟ್ ಅನ್ನು ಸ್ಥಾಪಿಸುವ, ಸೃಷ್ಟಿಸುವ ಅಥವಾ ಸ್ಥಾಪಕ, ‘ಟ್ರಸ್ಟಿ’ – ‘ಸೆಟ್ಲರ್’ ನಿಂದ ಹೆಸರಿಸಲ್ಪಟ್ಟ ಜನರ ಗುಂಪಿನ ಲಾಭಕ್ಕಾಗಿ ಸ್ವತ್ತುಗಳನ್ನು ಹೊಂದಿರುವವನು, ಮೂರನೆಯದ್ದು ‘ಫಲಾನುಭವಿಗಳು’ – ಯಾರಿಗೆ ಸ್ವತ್ತುಗಳ ಲಾಭಗಳನ್ನು ನೀಡಲಾಗುತ್ತದೆ ಅವರೇ ಫಲಾನುಭವಿ.

ಒಂದು ಟ್ರಸ್ಟ್ ಪ್ರತ್ಯೇಕ ಕಾನೂನು ಘಟಕವಲ್ಲ, ಆದರೆ ಅದರ ಕಾನೂನು ಸ್ವಭಾವವು ‘ಟ್ರಸ್ಟೀ’ಯಿಂದ ಬಂದಿದೆ. ಕೆಲವೊಮ್ಮೆ, ‘ಸೆಟ್ಲರ್’ ಒಬ್ಬ ‘ರಕ್ಷಕರನ್ನು’ ನೇಮಿಸುತ್ತಾನೆ, ಅವರು ಟ್ರಸ್ಟಿಯನ್ನು ಮೇಲ್ವಿಚಾರಣೆ ಮಾಡುವ ಅಧಿಕಾರವನ್ನು ಹೊಂದಿದ್ದಾರೆ ಮತ್ತು ಟ್ರಸ್ಟಿಯನ್ನು ತೆಗೆದುಹಾಕಿ ಮತ್ತು ಹೊಸಬರನ್ನು ನೇಮಿಸುತ್ತಾರೆ.

ಭಾರತದಲ್ಲಿ ಅಥವಾ ಸಾಗರೋತ್ತರ/ ದೇಶದ ಹೊರಗೆ ಟ್ರಸ್ಟ್ ಸ್ಥಾಪಿಸುವುದು ಕಾನೂನುಬಾಹಿರವೇ? ಇಲ್ಲ. ಭಾರತೀಯ ಟ್ರಸ್ಟ್ಸ್ ಕಾಯಿದೆ 1882(The Indian Trusts Act, 1882) ಟ್ರಸ್ಟ್‌ಗಳ ಪರಿಕಲ್ಪನೆಗೆ ಕಾನೂನು ಆಧಾರವನ್ನು ನೀಡುತ್ತದೆ. ಭಾರತೀಯ ಕಾನೂನುಗಳು ಟ್ರಸ್ಟ್‌ಗಳನ್ನು ಕಾನೂನುಬದ್ಧ ವ್ಯಕ್ತಿ/ ಘಟಕವಾಗಿ ನೋಡದಿದ್ದರೂ, ಟ್ರಸ್ಟ್‌ನಲ್ಲಿ ನೆಲೆಸಿರುವ ಸ್ವತ್ತುಗಳನ್ನು ‘ಫಲಾನುಭವಿಗಳ’ ಲಾಭಕ್ಕಾಗಿ ನಿರ್ವಹಿಸಲು ಮತ್ತು ಬಳಸಲು ಟ್ರಸ್ಟಿಯ ಬಾಧ್ಯತೆಯಾಗಿ ಟ್ರಸ್ಟ್ ಅನ್ನು ಅವರು ಗುರುತಿಸುತ್ತಾರೆ. ಭಾರತವು ಸಾಗರೋತ್ತರ ಟ್ರಸ್ಟ್‌ಗಳನ್ನು ಗುರುತಿಸುತ್ತದೆ, ಅಂದರೆ, ಇತರ ತೆರಿಗೆ ನ್ಯಾಯವ್ಯಾಪ್ತಿಯಲ್ಲಿ ಸ್ಥಾಪಿಸಲಾದ ಟ್ರಸ್ಟ್‌ಗಳು.

ಇದು ಕಾನೂನುಬದ್ಧವಾಗಿದ್ದರೆ, ತನಿಖೆ ಮಾಡುವುದೇಕೆ? ನಿಜ, ಟ್ರಸ್ಟ್‌ಗಳನ್ನು ಸ್ಥಾಪಿಸಲು ಕಾನೂನುಬದ್ಧ ಕಾರಣಗಳಿವೆ ಮತ್ತು ಅನೇಕರು ಅವುಗಳನ್ನು ನಿಜವಾದ ಎಸ್ಟೇಟ್ ಯೋಜನೆಗಾಗಿ ಸ್ಥಾಪಿಸಿದರು. ಒಬ್ಬ ಉದ್ಯಮಿ ‘ಫಲಾನುಭವಿಗಳಿಗೆ’ ಟ್ರಸ್ಟಿಯಿಂದ ವಿತರಿಸಲ್ಪಡುವ ಆದಾಯವನ್ನು ಸೆಳೆಯಲು ಅಥವಾ ಆಕೆಯ/ ಅವನ ಮರಣದ ನಂತರ ಸ್ವತ್ತುಗಳನ್ನು ಆನುವಂಶಿಕವಾಗಿ ಪಡೆಯಲು ಷರತ್ತುಗಳನ್ನು ವಿಧಿಸಬಹುದು.

ಉದಾಹರಣೆಗೆ ಒಂದೇ ಕುಟುಂಬದ ನಾಲ್ಕು ಜನ ಮಕ್ಕಳಿಗೆ ಕಂಪನಿಯಲ್ಲಿ ಷೇರುಗಳನ್ನು ಹಂಚುವಾಗ, ತಂದೆ  ಷೇರುಗಳಿಂದ ಲಾಭಾಂಶವನ್ನು ಪಡೆಯಬಹುದು ಮತ್ತು ಷೇರುಗಳ ಮಾಲೀಕತ್ವವನ್ನು ಪಡೆದುಕೊಳ್ಳಬಹುದು. ಆದರೆ ಇತರ ಮೂರು ಒಡಹುಟ್ಟಿದವರಿಗೆ ಮೊದಲ ನಿರಾಕರಣೆಯ ಹಕ್ಕನ್ನು ನೀಡದೆ ಅದನ್ನು ಮಾರಾಟ ಮಾಡಬೇಡಿ ಎಂದು ಷರತ್ತು ವಿಧಿಸಿದರೆ ಇದು ಕುಟುಂಬದೊಳಗಿನ ಉದ್ಯಮದ ಮಾಲೀಕತ್ವವನ್ನು ಖಚಿತಪಡಿಸುತ್ತದೆ.

ಆದರೆ ಟ್ರಸ್ಟ್‌ಗಳನ್ನು ಕೆಲವರು ರಹಸ್ಯ ವಾಹನಗಳನ್ನಾಗಿ ಬಳಸುತ್ತಾರೆ, ಅಕ್ರಮವಾಗಿ ಗಳಿಸಿದ ಹಣವನ್ನು ಇರಿಸಲು, ಆದಾಯವನ್ನು ಅಡಗಿಸಲು, ತೆರಿಗೆಯನ್ನು ತಪ್ಪಿಸಲು, ಕಾನೂನು ಕೈಗಳಿಂದ ಸಂಪತ್ತನ್ನು ರಕ್ಷಿಸಲು, ಸಾಲಗಾರರಿಂದ ದೊಡ್ಡ ಹಣ ಬರಬೇಕಾದವರಿಗೆ ಮತ್ತು ಅದನ್ನು ಕೆಲವೊಮ್ಮೆ ಕ್ರಿಮಿನಲ್ ಚಟುವಟಿಕೆಗಳಿಗೆ ಬಳಸುತ್ತಾರೆ.

ಹಾಗಾದರೆ, ಟ್ರಸ್ಟ್‌ಗಳನ್ನು ಏಕೆ ಸ್ಥಾಪಿಸಲಾಗಿದೆ? ಮತ್ತು ವಿದೇಶದಲ್ಲಿಯೇ ಏಕೆ? ಸಾಗರೋತ್ತರ ಟ್ರಸ್ಟ್‌ಗಳು ಕಾರ್ಯ ನಿರ್ವಹಿಸುವ ನ್ಯಾಯವ್ಯಾಪ್ತಿಯಲ್ಲಿ ಕಠಿಣ ಗೌಪ್ಯತೆ ಕಾನೂನುಗಳ ಕಾರಣದಿಂದಾಗಿ ಗಮನಾರ್ಹವಾದ ಗೌಪ್ಯತೆಯನ್ನು ನೀಡುತ್ತವೆ. ತೆರಿಗೆದಾರರು ಟ್ರಸ್ಟ್‌ನಿಂದ ಅಸಮರ್ಪಕ ಉದ್ದೇಶವನ್ನು ಸೂಚಿಸುವ ಪುರಾವೆಗಳನ್ನು ಒದಗಿಸಬಹುದಾದರೆ, ನ್ಯಾಯಾಲಯಗಳು ತೆರಿಗೆಯನ್ನು ಹಿಂಪಡೆಯಲು ಪ್ರಯತ್ನಿಸುತ್ತವೆ ಮತ್ತು ತೆರಿಗೆಯನ್ನು ಮರುಪಡೆಯಲು ಪ್ರಯತ್ನಿಸುತ್ತವೆ. ಇದನ್ನು ತಪ್ಪಿಸಲು ಸಾಗರೋತ್ತರ ಟ್ರಸ್ಟ್ ಅನ್ನು ಸ್ಥಾಪಿಸಲಾಗುತ್ತದೆ.

ಜನರು ಟ್ರಸ್ಟ್ ಸ್ಥಾಪಿಸಲಿರುವ ಪ್ರಮುಖ ಕಾರಣಗಳು: ತನಿಖೆಯಿಂದ ತಿಳಿದು ಬಂದಿರುವುದು i) ಆಸ್ತಿಯ ಅಂತರ ಕಾಯ್ದುಕೊಳ್ಳಲು: ಉದ್ಯಮಿಗಳು ತಮ್ಮ ವೈಯಕ್ತಿಕ ಸ್ವತ್ತುಗಳಿಂದ ಬೇರ್ಪಡಿಸುವ ಮಟ್ಟವನ್ನು ಯೋಜಿಸಲು ಖಾಸಗಿ ಸಾಗರೋತ್ತರ ಟ್ರಸ್ಟ್‌ಗಳನ್ನು ಸ್ಥಾಪಿಸಿದರು. ಟ್ರಸ್ಟ್‌ನ ‘ಸೆಟ್ಲರ್’ (ಸ್ಥಾಪಿಸುವ/ ಸೃಷ್ಟಿಸುವ/ ಸ್ಥಾಪಕ) ಅವರು ಇನ್ನು ಮುಂದೆ ಸ್ವತ್ತುಗಳನ್ನು ಹೊಂದಿಲ್ಲ. ಈ ರೀತಿಯಾಗಿ, ಅವರು ಈ ಸ್ವತ್ತುಗಳನ್ನು ಸಾಲಗಾರರಿಂದ ಅಂತರ ಕಾಯ್ದುಕೊಳ್ಳುತ್ತಾರೆ.

ii) ರಹಸ್ಯವಾಗಿರಿಸಲು : ಸಾಗರೋತ್ತರ ಟ್ರಸ್ಟ್‌ಗಳು ತಮ್ಮ ಸಂಕೀರ್ಣ ರಚನೆಗಳನ್ನು ಗಮನದಲ್ಲಿಟ್ಟುಕೊಂಡು ಉದ್ಯಮಿಗಳಿಗೆ ಹೂಡಿಕೆ ರಹಸ್ಯವಾಗಿಡಲು ಸಹಕರಿಸುತ್ತವೆ. ಸಾಗರೋತ್ತರ ನ್ಯಾಯವ್ಯಾಪ್ತಿಯಲ್ಲಿ ಹಣಕಾಸು ತನಿಖಾ ಸಂಸ್ಥೆ ಅಥವಾ ಅಂತಾರಾಷ್ಟ್ರೀಯ ತೆರಿಗೆ ಪ್ರಾಧಿಕಾರದೊಂದಿಗೆ ಮಾಹಿತಿಯನ್ನು ವಿನಂತಿಸುವ ಮೂಲಕ ಮಾತ್ರ ಭಾರತದಲ್ಲಿ ಆದಾಯ ತೆರಿಗೆ ಇಲಾಖೆಯು ಅಂತಿಮ ಲಾಭದಾಯಕ ಮಾಲೀಕರನ್ನು ಪಡೆಯಬಹುದು. ಮಾಹಿತಿಯ ವಿನಿಮಯಕ್ಕೆ ತಿಂಗಳುಗಳೇ ಬೇಕಾಗುತ್ತದೆ.

iiii) ಯೋಜನೆಯ ನೆಪದಲ್ಲಿ ತೆರಿಗೆ ತಪ್ಪಿಸಲು: ಉದ್ಯಮಿಗಳು ತಮ್ಮ ಎನ್ಆರ್​​ಐ ಮಕ್ಕಳಿಗೆ ಎಲ್ಲಾ ಸ್ವತ್ತುಗಳನ್ನು ಒಂದು ಟ್ರಸ್ಟ್‌ಗೆ ವರ್ಗಾಯಿಸುವ ಮೂಲಕ ತಮ್ಮ ಆಸ್ತಿಯಿಂದ ಬರುವ ಆದಾಯದ ಮೇಲೆ ತೆರಿಗೆ ವಿಧಿಸುವುದನ್ನು ತಪ್ಪಿಸುತ್ತಾರೆ. ಸ್ವತ್ತುಗಳ ಮಾಲೀಕತ್ವವು ಟ್ರಸ್ಟ್‌ನ ಮೇಲೆ ಇರುತ್ತದೆ, ಮತ್ತು ಮಗ/ ಮಗಳು ಕೇವಲ ‘ಫಲಾನುಭವಿ’ ಆಗಿರುವುದರಿಂದ ಟ್ರಸ್ಟ್‌ನಿಂದ ಬರುವ ಆದಾಯದ ಮೇಲೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ.

ಅನೇಕ ವ್ಯಾಪಾರಿ ಕುಟುಂಬಗಳಲ್ಲಿ ಮಕ್ಕಳು ವಿದೇಶದಲ್ಲಿರುತ್ತಾರೆ, ಆದ್ದರಿಂದ ಕುಟುಂಬದ ಹಿರಿಯರು ತಮ್ಮ ಮಕ್ಕಳ ಕೈಗೆ ಜಗಳವಿಲ್ಲದ ಸ್ವತ್ತುಗಳ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳಲು ಟ್ರಸ್ಟ್‌ಗಳತ್ತ ಹೆಚ್ಚು ಗಮನಹರಿಸಿದ್ದಾರೆ.

iv) ಎಸ್ಟೇಟ್ ಡ್ಯೂಟಿ : ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ 1985 ರಲ್ಲಿ ರದ್ದುಪಡಿಸಲಾದ ಎಸ್ಟೇಟ್ ಡ್ಯೂಟಿಯನ್ನು ಶೀಘ್ರದಲ್ಲೇ ಮರು-ಪರಿಚಯಿಸುವ ಸಾಧ್ಯತೆಯಿದೆ. ಹಾಗಾಗಿ ಅದಕ್ಕಿಂತ ಮುಂಚಿತವಾಗಿ ಟ್ರಸ್ಟ್‌ಗಳನ್ನು ಸ್ಥಾಪಿಸಲು, ವ್ಯಾಪಾರ ಕುಟುಂಬಗಳಿಗೆ ಸಲಹೆ ನೀಡಲಾಗಿದೆ. ಇದು ಮುಂದಿನ ಪೀಳಿಗೆಯನ್ನು ಸಾವಿನ/ ಪಿತ್ರಾರ್ಜಿತ ತೆರಿಗೆಯನ್ನು ಪಾವತಿಸದಂತೆ ರಕ್ಷಿಸುತ್ತದೆ, ಇದು ಜಾರಿಗೆ ಬಂದ ಮೂರು ದಶಕಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ಇದು 85 ಶೇಕಡಕ್ಕಿಂತ ಹೆಚ್ಚಿತ್ತು (ಎಸ್ಟೇಟ್ ಡ್ಯೂಟಿ ಆಕ್ಟ್, 1953). ಭಾರತವು ಈಗ ಸಂಪತ್ತಿನ ತೆರಿಗೆಯನ್ನು ಹೊಂದಿಲ್ಲವಾದರೂ, ಯುಎಸ್, ಯುಕೆ, ಫ್ರಾನ್ಸ್, ಕೆನಡಾ ಮತ್ತು ಜಪಾನ್ ಸೇರಿದಂತೆ ಹೆಚ್ಚಿನ ಅಭಿವೃದ್ಧಿ ಹೊಂದಿದ ದೇಶಗಳು ಇಂತಹ ಪಿತ್ರಾರ್ಜಿತ ತೆರಿಗೆಯನ್ನು ಹೊಂದಿವೆ.

v) ಬಂಡವಾಳ-ನಿಯಂತ್ರಿತ ಆರ್ಥಿಕತೆಯಲ್ಲಿ ಹೊಂದಿಕೊಳ್ಳುವಿಕೆ: ಭಾರತವು ಬಂಡವಾಳ-ನಿಯಂತ್ರಿತ ಆರ್ಥಿಕತೆಯಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಲಿಬರಲೈಸ್ಡ್ ರೆಮಿಟೆನ್ಸ್ ಸ್ಕೀಮ್ (LRS) ಅಡಿಯಲ್ಲಿ ವ್ಯಕ್ತಿಗಳು ವರ್ಷಕ್ಕೆ  250,000  ಡಾಲರ್  ಮಾತ್ರ ಹೂಡಿಕೆ ಮಾಡಬಹುದು. ಉದ್ಯಮಿಗಳು NRI ಗಳಾಗಿದ್ದರೆ FEMA ಅಡಿಯಲ್ಲಿ, NRI ಗಳು ತಮ್ಮ ಪ್ರಸ್ತುತ ವಾರ್ಷಿಕ ಆದಾಯದ ಜೊತೆಗೆ ವರ್ಷಕ್ಕೆ  1 ಮಿಲಿಯನ್ ಡಾಲರ್ ಹಣವನ್ನು ಭಾರತದ ಹೊರಗೆ ಕಳುಹಿಸಬಹುದು. ಇದಲ್ಲದೆ, ಸಾಗರೋತ್ತರ ನ್ಯಾಯವ್ಯಾಪ್ತಿಯಲ್ಲಿನ ತೆರಿಗೆ ದರಗಳು ಭಾರತದಲ್ಲಿ ಶೇ 30 ವೈಯಕ್ತಿಕ ಐಟಿ ದರ ಮತ್ತು ಅತಿ ಶ್ರೀಮಂತರು (ವಾರ್ಷಿಕ 1 ಕೋಟಿ ರೂ.ಗಿಂತ ಹೆಚ್ಚು ಆದಾಯ ಹೊಂದಿರುವವರು) ಸೇರಿದಂತೆ ಸರ್ಚಾರ್ಜ್‌ಗಳಿಗಿಂತ ಕಡಿಮೆ ಆಗಿರುತ್ತದೆ.

vi) ಎನ್‌ಆರ್‌ಐ ಕೋನ: ಸಾಗರೋತ್ತರ ಟ್ರಸ್ಟ್‌ಗಳು ಈ ಹಿಂದೆ ಗಮನಿಸಿದಂತೆ, ಭಾರತೀಯ ಕಾನೂನುಗಳ ಅಡಿಯಲ್ಲಿ ಗುರುತಿಸಲ್ಪಟ್ಟಿವೆ, ಆದರೆ ಕಾನೂನುಬದ್ಧವಾಗಿ, ಟ್ರಸ್ಟಿಗಳು – ‘ಸೆಟ್ಲರ್’ ಅಥವಾ ‘ಫಲಾನುಭವಿಗಳು’ ಅಲ್ಲ – ಟ್ರಸ್ಟ್‌ನ ಆಸ್ತಿ ಮತ್ತು ಆದಾಯದ ಮಾಲೀಕರು. ಎನ್‌ಆರ್‌ಐ ಟ್ರಸ್ಟಿ ಅಥವಾ ಸಾಗರೋತ್ತರ ಟ್ರಸ್ಟಿ ಮತ್ತೊಂದು ಸಾಗರೋತ್ತರ ‘ರಕ್ಷಕ’ ದಿಂದ ಸೂಚನೆಗಳನ್ನು ತೆಗೆದುಕೊಳ್ಳುತ್ತಾರೆ. ಅವರು ಭಾರತದಿಂದ ತಮ್ಮ ಒಟ್ಟು ಆದಾಯದ ಮೇಲೆ ಮಾತ್ರ ಭಾರತದಲ್ಲಿ ತೆರಿಗೆ ವಿಧಿಸುವುದನ್ನು ಖಾತ್ರಿಪಡಿಸಿಕೊಳ್ಳುತ್ತಾರೆ. ಅದೇ ವೇಳೆ ಅನಿವಾಸಿ ಭಾರತೀಯರು ಕೂಡಾ ಆದಾಯ ತೆರಿಗೆ ಇಲಾಖೆಯ ಹೆಚ್ಚಿನ ಪರಿಶೀಲನೆಯಲ್ಲಿದ್ದಾರೆ.

ಇದನ್ನೂ ಓದಿ: Pandora Papers  ಪಂಡೋರಾ ಪೇಪರ್ಸ್: 300 ಭಾರತೀಯರು, ಜಗತ್ತಿನ ಗಣ್ಯರು, ಸೆಲೆಬ್ರಿಟಿಗಳು, ಕೈಗಾರಿಕೋದ್ಯಮಿಗಳ ಹೂಡಿಕೆ ದಾಖಲೆಗಳು ಸೋರಿಕೆ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ