‘ಬೃಹತ್ ಪ್ರಮಾಣದ ಡ್ರಗ್ಸ್ ವಶ ಪಡಿಸಲು ನೆರವಾಯ್ತು ಮುಂದ್ರಾ ಬಂದರಿನಲ್ಲಿ ಜೂನ್ 9ರಂದು ನಡೆದ ಅಣಕು ಕಾರ್ಯಾಚರಣೆ’

Mundra port ಮುಂದ್ರಾ ಬಂದರಿನಲ್ಲಿ ಡ್ರಗ್ಸ್ ವಶಪಡಿಸಿಕೊಳ್ಳುವಿಕೆಯು ಭಾರತದಲ್ಲಿ ಅಫ್ಘಾನ್ ಪ್ರಜೆಗಳ ಡ್ರಗ್ ಜಾಲದ ವ್ಯಾಪ್ತಿಯನ್ನು ಎತ್ತಿ ತೋರಿಸುವುದರೊಂದಿಗೆ ಕೇಂದ್ರ ಸರ್ಕಾರವು ಇಡೀ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸುವ ನಿರೀಕ್ಷೆಯಿದೆ.

'ಬೃಹತ್ ಪ್ರಮಾಣದ ಡ್ರಗ್ಸ್ ವಶ ಪಡಿಸಲು ನೆರವಾಯ್ತು ಮುಂದ್ರಾ ಬಂದರಿನಲ್ಲಿ ಜೂನ್ 9ರಂದು ನಡೆದ ಅಣಕು ಕಾರ್ಯಾಚರಣೆ'
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 04, 2021 | 7:15 PM

ಅಹಮದಾಬಾದ್: ಸೆಪ್ಟೆಂಬರ್ 15 ರಂದು ಮುಂದ್ರಾ ಬಂದರಿನಲ್ಲಿ(Mundra port) ಬೃಹತ್ ಪ್ರಮಾಣದ ಡ್ರಗ್ಸ್ ವಶ ಪಡಿಸಿದ್ದು, ಜೂನ್ 9 ರಂದು ಕಚ್ ಬಂದರಿನಲ್ಲಿ ನಡೆದ ಅಣಕು ಕಾರ್ಯಾಚರಣೆ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಶ್ರಮದಾಯಕ ತನಿಖೆಯ ಫಲಿತಾಂಶವಾಗಿದೆ. ಸೆಪ್ಟೆಂಬರ್ 14-15ರ ರಾತ್ರಿ ಡಿಆರ್‌ಐ ಮುಂದ್ರಾ ಬಂದರಿನಿಂದ ಸುಮಾರು 3000 ಕಿಲೋಗ್ರಾಂಗಳಷ್ಟು ಟಾಲ್ಕಂ ಪೌಡರ್ ಮಿಶ್ರಿತ ಅಫ್ಘಾನ್ ಹೆರಾಯಿನ್ ವಶಪಡಿಸಿಕೊಂಡಿದೆ. ಉನ್ನತ ನಾರ್ತ್ ಬ್ಲಾಕ್ ಅಧಿಕಾರಿಗಳ ಪ್ರಕಾರ, ಡಿಆರ್‌ಐ, ಜೂನ್ 9 ರ ಅಣಕು ಕಾರ್ಯಾಚರಣೆಯಲ್ಲಿ ಲಭಿಸಿದ ಮಾಹಿತಿ ಆಧರಿಸಿಕೆಲಸ ಮಾಡುತ್ತಿದೆ. ಐಬಿ, ಆರ್‌ಎ & ಡಬ್ಲ್ಯೂ, ಎನ್ಐಎ ನಂತಹ ಕೇಂದ್ರ ಏಜೆನ್ಸಿಗಳ ಸಹಾಯದಿಂದ ಮುಂದ್ರಾ ಬಂದರಿನ ವಶಪಡಿಸಿಕೊಳ್ಳುವಿಕೆಯ ಹಿಂದೆ ಡ್ರಗ್ ರನ್ನರ್‌ಗಳು, ಪಾವತಿ ವಿಧಾನ ಮತ್ತು ಪ್ರಕ್ರಿಯೆಗಳನ್ನು ಗುರುತಿಸಲು ಸಾಧ್ಯವಾಯಿತು.

ಈ ವಶಪಡಿಸಿಕೊಳ್ಳುವಿಕೆಯು ಭಾರತದಲ್ಲಿ ಅಫ್ಘಾನ್ ಪ್ರಜೆಗಳ ಡ್ರಗ್ ಜಾಲದ ವ್ಯಾಪ್ತಿಯನ್ನು ಎತ್ತಿ ತೋರಿಸುವುದರೊಂದಿಗೆ ಕೇಂದ್ರ ಸರ್ಕಾರವು ಇಡೀ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸುವ ನಿರೀಕ್ಷೆಯಿದೆ. ಮುಂದ್ರಾ ವಶಪಡಿಸಿಕೊಳ್ಳುವಿಕೆಯ ಲಿಂಕ್‌ಗಳು ರಾಜಧಾನಿಗೆ ತಲುಪಿದ ನಂತರ ದೆಹಲಿ ಪೊಲೀಸರು ವಿಶೇಷ ಸೆಲ್‌ನಲ್ಲಿ ನೂತನವಾಗಿ ಡ್ರಗ್ಸ್ -ಭಯೋತ್ಪಾದಕ-ಭೂಗತ ಘಟಕವನ್ನು ಆರಂಭಿಸಿದರು ಮತ್ತು ಘಟಕದಲ್ಲಿ ಮೂರು ಹೊಸ ಡಿಸಿಪಿಗಳನ್ನು ನೇಮಿಸಿದರು. ಕೇಂದ್ರ ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತಿರುವ ದೆಹಲಿ ಪೊಲೀಸರು ರಾಜಧಾನಿ ನಗರದಲ್ಲಿ ನೈಜೀರಿಯನ್ ಮತ್ತು ಅಫ್ಘಾನ್ ಡ್ರಗ್ ಮಾರಾಟಗಾರರು ಸಕ್ರಿಯವಾಗಿರುವ ಮೂವರ ಜಾಲವನ್ನು ಅನ್ನು ಅನ್ವೇಷಿಸಲು ಪ್ರಯತ್ನಿಸುತ್ತಿದ್ದಾರೆ.

ಭದ್ರತಾ ಏಜೆನ್ಸಿಗಳ ಪ್ರಕಾರ ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಳ್ಳುವುದರಿಂದ ಭಾರತೀಯ ಉಪಖಂಡದಲ್ಲಿ ಅಫೀಮು ಸಾಗುವಳಿ ಮತ್ತು ಹೆರಾಯಿನ್ ಸಂಸ್ಕರಣೆಯು ಪಾಕಿಸ್ತಾನದ ಬೆಂಬಲಿತ ಸುನ್ನಿ ಇಸ್ಲಾಮಿಸ್ಟ್‌ಗಳ ಪ್ರಮುಖ ಆದಾಯದ ಮೂಲವಾಗಿರುವುದರಿಂದ ಗಂಭೀರವಾದ ಡ್ರಗ್ಸ್ ಹರಿಯುವಿಕೆಗೆ ಕಾರಣವಾಗುತ್ತದೆ. “ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ಮೂರು ಲಕ್ಷ ಹೆಕ್ಟೇರ್‌ಗಿಂತ ಹೆಚ್ಚು ಅಫೀಮು ಕೃಷಿ ಇದೆ. ಈ ವರ್ಷ ತಾಲಿಬಾನ್‌ನ ಅಡಿಯಲ್ಲಿ ಸೂಪರ್ ಬಂಪರ್ ಬೆಳೆ ನಿರೀಕ್ಷಿಸಿದ್ದೇವೆ, ಇದರ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಗಳು ಡ್ರಗ್ಸ್‌ನಿಂದ ತುಂಬಿರುತ್ತವೆ, ಇದರಿಂದಾಗಿ ಯುವಕರು ಮತ್ತು ಮಕ್ಕಳು ಅತ್ಯಂತ ದುರ್ಬಲರಾಗುತ್ತಾರೆ ಎಂದು ಎನ್‌ಸಿಬಿ ಅಧಿಕಾರಿಯೊಬ್ಬರು ಹೇಳಿದರು.

ಭಾರತವು ಒಪಿಯಾಡ್‌ಗಳ ಬಳಕೆಯ ಹರಡುವಿಕೆಯನ್ನು ಹೊಂದಿದೆ. ಇದು ಸರ್ಕಾರದ ಅಧ್ಯಯನದ ಪ್ರಕಾರ .70 ಶೇಕಡಾ ಜಾಗತಿಕ ಸರಾಸರಿ ಮತ್ತು 0.46 ಏಷ್ಯಾದ ಸರಾಸರಿಗೆ ಹೋಲಿಸಿದರೆ ಶೇ. 2.1 ರಷ್ಟಿದೆ. ನಾವು ಈ ಶೇಕಡಾವಾರುಗಳನ್ನು ಸಂಖ್ಯೆಗಳಾಗಿ ವಿಸ್ತರಿಸಿದರೆ, ಭಾರತದಲ್ಲಿ ದಿನನಿತ್ಯದ ಹೆರಾಯಿನ್ ಅವಶ್ಯಕತೆ ದಿನಕ್ಕೆ ಒಂದು ಮೆಟ್ರಿಕ್ ಟನ್ ಅಥವಾ ಒಂದು ವರ್ಷದಲ್ಲಿ 360 ಮೆಟ್ರಿಕ್ ಟನ್ ಆಗಿದೆ. ಇದರ ಮೌಲ್ಯವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 1,44000 ಕೋಟಿ. ಈ ಹಣವನ್ನು ಇತರ ಸಂಘಟಿತ ಅಪರಾಧ ಚಟುವಟಿಕೆಗಳಲ್ಲಿ ಮತ್ತು ಭಯೋತ್ಪಾದನೆಗೆ ಬಳಸಲಾಗುತ್ತದೆ ಎಂಬುದು ಸ್ಪಷ್ಟವಾಗಿದೆ.

ಒಂದು ನಿರ್ದಿಷ್ಟ ಅವಧಿಯಲ್ಲಿ ಭಾರತವು ಕೊಕೇನ್‌ನ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ, ಇದರ ಪೂರೈಕೆಯನ್ನು ದಕ್ಷಿಣ ಅಮೆರಿಕದ ದೇಶಗಳ ಪ್ರಬಲ ಡ್ರಗ್ಸ್ ಕಾರ್ಟೆಲ್‌ಗಳು (ಡ್ರಗ್ ಸಾಗಾಣಿಕೆ ಮತ್ತು ಮಾರಾಟ) ನಿಯಂತ್ರಿಸುತ್ತಾರೆ. ಮುಂಬೈ ಭಾರತದ ಕೊಕೇನ್ ರಾಜಧಾನಿಯಾಗಿದ್ದರೆ, ದೇಶವು ಕೊಕೇನ್ ಅನ್ನು ವಿಶ್ವದ ಇತರ ಭಾಗಗಳಿಗೆ ಪರಿವರ್ತಿಸಲು ಒಂದು ಮಾರ್ಗವಾಗಿ ಬಳಸುತ್ತದೆ ಎಂದು ಎನ್‌ಸಿಬಿ ಕಂಡುಹಿಡಿದಿದೆ.

ಇದನ್ನೂ ಓದಿ: 2,990 ಕೆಜಿ ಹೆರಾಯಿನ್ ವಶ ಪ್ರಕರಣ; ಮುಂದ್ರಾ ಅದಾನಿ ಬಂದರು ಲಾಭ ಪಡೆದಿದೆಯೇ?: ತನಿಖೆಗೆ ಆದೇಶಿಸಿದ ಎನ್‌ಡಿಪಿಎಸ್ ನ್ಯಾಯಾಲಯ

ಇದನ್ನೂ ಓದಿ: ಗುಜರಾತ್ ಡ್ರಗ್ಸ್ ವಶ ಪ್ರಕರಣದಿಂದ ಬೇರೆಡೆಗೆ ಗಮನ ಸೆಳೆಯಲು ಮುಂಬೈ ಕ್ರೂಸ್ ದಾಳಿ ಮಾಡಲಾಗಿದೆ: ಕಾಂಗ್ರೆಸ್

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ