‘ಉತ್ತರ ಪ್ರದೇಶವೂ ಈಗ ಹೊಸ ಜಮ್ಮು-ಕಾಶ್ಮೀರವೇ ಆಗಿದೆ..’: ಒಮರ್​ ಅಬ್ದುಲ್ಲಾ ಟ್ವೀಟ್​

ದೇಶಾದ್ಯಂತ ಕಾಂಗ್ರೆಸ್​ ಸೇರಿ ಹಲವು ಪಕ್ಷಗಳು ಉತ್ತರಪ್ರದೇಶದ ಆಡಳಿತ ಪಕ್ಷ ಬಿಜೆಪಿ ವಿರುದ್ಧ ತಿರುಗಿಬಿದ್ದಿವೆ. ಈ ಘಟನೆಯಲ್ಲಿ ಮುಖ್ಯ ಆರೋಪಿಗಳು ಕೇಂದ್ರ ಸಚಿವ ಅಜಯ್​ ಮಿಶ್ರಾ ಮತ್ತು ಆಶೀಶ್​ ಮಿಶ್ರಾ ಎಂದು ಆರೋಪ ಮಾಡಲಾಗಿದೆ.

‘ಉತ್ತರ ಪ್ರದೇಶವೂ ಈಗ ಹೊಸ ಜಮ್ಮು-ಕಾಶ್ಮೀರವೇ ಆಗಿದೆ..’: ಒಮರ್​ ಅಬ್ದುಲ್ಲಾ ಟ್ವೀಟ್​
ಒಮರ್​ ಅಬ್ದುಲ್ಲಾ

ಶ್ರೀನಗರ: ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಇದೀಗ ಕಾಂಗ್ರೆಸ್ ಸೇರಿ ಹಲವು ಪ್ರತಿಪಕ್ಷಗಳ ನಾಯಕರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇದೀಗ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್​ ಅಬ್ದುಲ್ಲಾ ಕೂಡ ಟ್ವೀಟ್​ ಮೂಲಕ ಕಟುವಾಗಿ ಪ್ರತಿಕ್ರಿಯೆ ನೀಡಿದ್ದು, ಉತ್ತರ ಪ್ರದೇಶ ರಾಜ್ಯ ಹೊಸ ಜಮ್ಮು-ಕಾಶ್ಮೀರ ಎಂದು ಹೇಳಿದ್ದಾರೆ. ಅಂದರೆ ಉತ್ತರಪ್ರದೇಶವೂ ಕೂಡ ಜಮ್ಮು-ಕಾಶ್ಮೀರದಂತೆ ಆಗಿದೆ ಎಂದಿದ್ದಾರೆ. ಅನೇಕವರ್ಷಗಳಿಂದಲೂ ಭಯೋತ್ಪಾದಕರ ದಾಳಿಗೆ ನಲುಗುತ್ತಿರುವ ಜಮ್ಮು-ಕಾಶ್ಮೀರಕ್ಕೆ ಉತ್ತರ ಪ್ರದೇಶವನ್ನುಹೋಲಿಸಿದ್ದಾರೆ.  

ಉತ್ತರಪ್ರದೇಶದಲ್ಲಿ ಲಖಿಂಪುರದಲ್ಲಿ ನಿನ್ನೆ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿದಾಗಿನಿಂದ ಹಿಂಸಾಚಾರ ಶುರುವಾಗಿದೆ. ಇಲ್ಲಿಯವರೆಗೆ 8 ಮಂದಿ ಮೃತಪಟ್ಟಿದ್ದಾರೆ.  ದೇಶಾದ್ಯಂತ ಕಾಂಗ್ರೆಸ್​ ಸೇರಿ ಹಲವು ಪಕ್ಷಗಳು ಉತ್ತರಪ್ರದೇಶದ ಆಡಳಿತ ಪಕ್ಷ ಬಿಜೆಪಿ ವಿರುದ್ಧ ತಿರುಗಿಬಿದ್ದಿವೆ. ಈ ಘಟನೆಯಲ್ಲಿ ಮುಖ್ಯ ಆರೋಪಿಗಳು ಕೇಂದ್ರ ಸಚಿವ ಅಜಯ್​ ಮಿಶ್ರಾ ಮತ್ತು ಆಶೀಶ್​ ಮಿಶ್ರಾ ಎಂದು ಆರೋಪ ಮಾಡಲಾಗಿದ್ದು, ಆಶೀಶ್​ ಮಿಶ್ರಾ ವಿರುದ್ಧ ಕೊಲೆ ಕೇಸ್​ ಕೂಡ ದಾಖಲಾಗಿದೆ.  ಆದರೆ ಇವರಿಬ್ಬರೂ ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದೂ ಅಜಯ್​ ಮಿಶ್ರಾ ಒತ್ತಾಯಿಸಿದ್ದಾರೆ.

ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ನಾಲ್ವರು ರೈತರ ಕುಟುಂಬಗಳಿಗೆ ಉತ್ತರ ಪ್ರದೇಶ ಸರ್ಕಾರ ತಲಾ 45 ಲಕ್ಷ ರೂ.ಘೋಷಣೆ ಮಾಡಿದ್ದು, ಗಾಯಗೊಂಡವರಿಗೆ ತಲಾ 10 ಲಕ್ಷ ರೂ.ನೀಡುವುದಾಗಿ ಹೇಳಿದೆ. ಹಾಗೇ, ಮೃತರ ಕುಟುಂಬದ ಒಬ್ಬರಿಗೆ ಸರ್ಕಾರಿ ಕೆಲಸ ಕೊಡಿಸುವ ಭರವಸೆ ನೀಡಿದೆ. ಆದರೆ ರೈತ ನಾಯಕ ರಾಕೇಶ್ ಟಿಕಾಯತ್​ ಒಂದು ಕೋಟಿ ರೂ.ಪರಿಹಾರ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: 2 ವರ್ಷದಿಂದ ವೇತನ ಸಿಕ್ಕಿಲ್ಲ ಎಂದು 104 ಆರೋಗ್ಯವಾಣಿ ಸಿಬ್ಬಂದಿಗಳಿಂದ ಪ್ರತಿಭಟನೆ, ಆರೋಗ್ಯ ಇಲಾಖೆ ಆಯುಕ್ತ ಹೇಳಿದ್ದೇನು?

ಆರ್ಯನ್ ಖಾನ್​ಗೆ ಅಪ್ಪನಂತೆ ನಟನಾಗುವ ಬಯಕೆಯಿಲ್ಲ, ನಿರ್ದೇಶಕನಾಗುವ ಹೆಬ್ಬಯಕೆ ಇದೆ!

 

Click on your DTH Provider to Add TV9 Kannada