ನಾನ್ಯಾಕೆ ಪಕ್ಷ ತ್ಯಜಿಸಲಿ, ಬೇಕಾದ್ರೆ ನನ್ನನ್ನು ಹೊರಹಾಕಲಿ-ಪಂಕಜಾ ಮುಂಡೆ

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸೋಕೆ ನಾನಾ ಪಟ್ಟು.. ತಂತ್ರ.. ಕಸರತ್ತು ಅನುಸರಿಸಿದ್ದ ಬಿಜೆಪಿ ಕೈ ಚೆಲ್ಲಿ ಕೂತಿದೆ.. ಮಹಾ ಹೋರಾಟ ಮಾಡಿ ಕೊನೆಗೆ ಹೌಹಾರಿದ್ದ ಕಮಲ ಪಡೆಗೆ ಶಿವಸೇನೆ ಹಾಗೂ ಎನ್​ಸಿಪಿ ಕೊಟ್ಟಿರೋ ಏನು ಇನ್ನೂ ಮಾಸಿಲ್ಲ. ಇದೀಗ ಬಿಜೆಪಿ ಪಾಳಯದಲ್ಲಿ ಆಂತರಿಕ ಕಚ್ಚಾಟ ಅನ್ನೋದು ಬೆಂಕಿಯಂತೆ ಜ್ವಲಿಸ್ತಿದೆ. ಮಹಾರಾಷ್ಟ್ರ ಬಿಜೆಪಿಯಲ್ಲಿ ಜೋರಾಯ್ತು ಆಂತರಿಕ ಕಿತ್ತಾಟ..! ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅದೇನ್ ರಣತಂತ್ರ ರೂಪಿಸಿದ್ರು ಸರ್ಕಾರ ರಚಿಸೋ ಗದ್ದುಗೆ ಏರೋ ಅವಕಾಶ ಸಿಗ್ಲೇ ಇಲ್ಲ. ಇದೀಗ ಮಹಾ […]

ನಾನ್ಯಾಕೆ ಪಕ್ಷ ತ್ಯಜಿಸಲಿ, ಬೇಕಾದ್ರೆ ನನ್ನನ್ನು ಹೊರಹಾಕಲಿ-ಪಂಕಜಾ ಮುಂಡೆ
ಸಾಧು ಶ್ರೀನಾಥ್​

Updated on: Dec 13, 2019 | 7:34 AM

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸೋಕೆ ನಾನಾ ಪಟ್ಟು.. ತಂತ್ರ.. ಕಸರತ್ತು ಅನುಸರಿಸಿದ್ದ ಬಿಜೆಪಿ ಕೈ ಚೆಲ್ಲಿ ಕೂತಿದೆ.. ಮಹಾ ಹೋರಾಟ ಮಾಡಿ ಕೊನೆಗೆ ಹೌಹಾರಿದ್ದ ಕಮಲ ಪಡೆಗೆ ಶಿವಸೇನೆ ಹಾಗೂ ಎನ್​ಸಿಪಿ ಕೊಟ್ಟಿರೋ ಏನು ಇನ್ನೂ ಮಾಸಿಲ್ಲ. ಇದೀಗ ಬಿಜೆಪಿ ಪಾಳಯದಲ್ಲಿ ಆಂತರಿಕ ಕಚ್ಚಾಟ ಅನ್ನೋದು ಬೆಂಕಿಯಂತೆ ಜ್ವಲಿಸ್ತಿದೆ.

ಮಹಾರಾಷ್ಟ್ರ ಬಿಜೆಪಿಯಲ್ಲಿ ಜೋರಾಯ್ತು ಆಂತರಿಕ ಕಿತ್ತಾಟ..!
ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅದೇನ್ ರಣತಂತ್ರ ರೂಪಿಸಿದ್ರು ಸರ್ಕಾರ ರಚಿಸೋ ಗದ್ದುಗೆ ಏರೋ ಅವಕಾಶ ಸಿಗ್ಲೇ ಇಲ್ಲ. ಇದೀಗ ಮಹಾ ಬಿಜೆಪಿ ಪಾಳಯದ ಒಳಬೇಗುದಿ ಹೊರ ಬಿದ್ದಿದ್ದು ಆಂತರಿಕ ಕಚ್ಚಾಟ ತಾರಕಕ್ಕೇರಿದೆ. ಮಾಜಿ ಸಚಿವೆ ಪಂಕಜಾ ಮುಂಡೆ ಬಿಜೆಪಿ ತ್ಯಜಿಸುತ್ತಾರೆ ಅನ್ನೋ ಸುದ್ದಿ ಕೆಲ ದಿನಗಳ ಹಿಂದೆ ಸುಳಿದಾಡ್ತಿತ್ತು. ಆದ್ರೀಗ ಪಂಕಜಾ ಮುಂಡೆ ಅಧಿಕೃತ ಸ್ಪಷ್ಟನೆ ನೀಡಿದ್ದು, ನಾನ್ಯಾಕೆ ಪಕ್ಷ ತ್ಯಜಿಸಲಿ. ಬೇಕಾದ್ರೆ ನನ್ನನ್ನು ಹೊರಹಾಕಲಿ. ಈ ಬಗ್ಗೆ ಪಕ್ಷವೇ ತೀರ್ಮಾನ ಕೈಗೊಳ್ಳಲಿ ಅಂತಾ ಸಿಡಿದೆದ್ದಿದ್ದಾರೆ.

ಇನ್ನು ಮಹಾರಾಷ್ಟ್ರದಲ್ಲಿ ಸಿಡಿದೆದ್ದಿರೋ ಪಂಕಜಾ ಮುಂಡೆ ಭೀಡ್ ಜಿಲ್ಲೆಯ ಪರ್ಲಿ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳು ತಮ್ಮ ವಿರುದ್ಧ ಸ್ಪರ್ಧಿಸದೇ ಇದ್ದಿದ್ದರೇ ತಾವು ಸೋಲುತ್ತಿರಲಿಲ್ಲ. ತಮ್ಮ ಎದುರಾಳಿ ಧನಂಜಯ ಮುಂಡೆ, ಬಿಜೆಪಿ ಸರ್ಕಾರದ ಕೆಲವರು ಸಹಾಯ ಮಾಡಿದ್ದಾರೆ ಅಂತಾ ಬಾಂಬ್ ಸಿಡಿಸಿದ್ದಾರೆ. ಅಲ್ಲದೇ, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ವಿರುದ್ಧ ಮಾಜಿ ಸಚಿವೆ ಪಂಕಜಾ ಮುಂಡೆ, ಏಕನಾಥ್ ಖಡ್ಸೆ, ವಿನೋದ್ ತಾವಡೆ, ಚಂದ್ರಶೇಖರ್ ಭವನಕುಲೆ, ಪ್ರಕಾಶ್ ಮೆಹ್ತಾ ಸೇರಿದಂತೆ ಅನೇಕರರು ಅಸಮಾಧಾನಗೊಂಡಿದ್ದಾರೆ.

ಕೆಲವರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಲಾಗಿತ್ತು. ಹೀಗೆ, ಬಿಜೆಪಿ ಹೈಕಮಾಂಡ್ ತಮಗೆ ಟಿಕೆಟ್ ನಿರಾಕರಿಸಿಲ್ಲ. ಮುಂಬೈನಲ್ಲಿ ಕುಳಿತುಕೊಂಡೇ ದೇವೇಂದ್ರ ಫಡ್ನವೀಸ್ ತಮಗೆ ಟಿಕೆಟ್ ನಿರಾಕರಿಸಿದ್ರು ಅಂತಾ ಸ್ಫೋಟಕ ಮಾಹಿತಿ ಹೊರಹಾಕಿರೋದು ಬಿಜೆಪಿ ಪಾಳಯದಲ್ಲಿ ಸುನಾಮಿ ಎಬ್ಬಿಸಿದೆ. ಅಂದು ಕಮಲ ಪಾಳಯದಲ್ಲಿ ಸಿಡಿದೆದ್ದಿದ್ದ ತಂದೆ ಗೋಪಿನಾಥ್ ಮುಂಡೆ ಹಾದಿಯಲ್ಲೇ ಪಂಕಜಾ ಮುಂದೆ ಸಾಗ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಬೆಂಬಲ ಸಿಗದೆ ಪರದಾಡಿರೋ ಬಿಜೆಪಿಗೆ ಇದೀಗ ಪಂಕಜಾ ಬಿಗ್ ಶಾಕ್ ನೀಡಿದ್ದಾರೆ.

Published On - 7:34 am, Fri, 13 December 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us