ಕುಟುಂಬ ರಾಜಕಾರಣ, ಅಧಿಕಾರಕ್ಕಾಗಿ ಹಗಲು-ರಾತ್ರಿ ಆಟ; ವಿಪಕ್ಷಗಳ ವಿರುದ್ಧ ವಾರಾಣಸಿಯಲ್ಲಿ ಮೋದಿ ವಾಗ್ದಾಳಿ

ವಾರಾಣಸಿಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಾಗತಿಸಿದರು. ಯೋಗಿ ಆದಿತ್ಯನಾಥ್ ನೇತೃತ್ವದ ಯುಪಿ ಸರ್ಕಾರ 8 ವರ್ಷಗಳನ್ನು ಪೂರೈಸಿದ ನಂತರ ವಾರಾಣಸಿಗೆ ಪ್ರಧಾನಿಯವರ ಮೊದಲ ಭೇಟಿ ಇದಾಗಿದೆ. ಇಂದು ಪ್ರಧಾನಿ 3884.18 ಕೋಟಿ ರೂ. ಮೌಲ್ಯದ 44 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಿದರು.

ಕುಟುಂಬ ರಾಜಕಾರಣ, ಅಧಿಕಾರಕ್ಕಾಗಿ ಹಗಲು-ರಾತ್ರಿ ಆಟ; ವಿಪಕ್ಷಗಳ ವಿರುದ್ಧ ವಾರಾಣಸಿಯಲ್ಲಿ ಮೋದಿ ವಾಗ್ದಾಳಿ
Pm Modi In Varanasi

Updated on: Apr 11, 2025 | 4:38 PM

ವಾರಾಣಸಿ, ಏಪ್ರಿಲ್ 11: ವಾರಾಣಸಿಯಲ್ಲಿ ಇಂದು ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರೋಧ ಪಕ್ಷಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. ವಾರಾಣಸಿಯಲ್ಲಿ  (Varanasi) 3,880 ಕೋಟಿ ರೂ. ಮೌಲ್ಯದ 44 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ ಪ್ರಧಾನಿ ಮೋದಿ, ಅಧಿಕಾರ ಪಡೆಯುವತ್ತ ಗಮನಹರಿಸಿದ ಪಕ್ಷಗಳು ಮುಖ್ಯವಾಗಿ ತಮ್ಮ ಕುಟುಂಬಗಳನ್ನು ಉತ್ತೇಜಿಸುವತ್ತ ಕಾಳಜಿ ವಹಿಸುತ್ತಿವೆ. ನಮ್ಮದು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಮಂತ್ರವಾದರೆ ವಿರೋಧ ಪಕ್ಷಗಳದ್ದು ‘ಪರಿವಾರ್ ಕಾ ಸಾಥ್ ಪರಿವಾರ್ ಕಾ ವಿಕಾಸ್’ ಎಂಬುದು ಮಂತ್ರವಾಗಿದೆ. ನಮ್ಮ ಸರ್ಕಾರವು ಎಲ್ಲರನ್ನೂ ಒಳಗೊಳ್ಳುವ ಪ್ರಗತಿಯ ಕಲ್ಪನೆಯ ಮೂಲಕ ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಕೆಲಸ ಮಾಡಲು ಬದ್ಧವಾಗಿದೆ ಎಂದು ಹೇಳಿದ್ದಾರೆ.

ಕೆಲವು ರಾಜಕೀಯ ಗುಂಪುಗಳು ಸಾರ್ವಜನಿಕ ಸೇವೆಗಿಂತ ಅಧಿಕಾರದ ಮೇಲೆ ಹೆಚ್ಚು ಗಮನಹರಿಸುತ್ತವೆ. “ಕೇವಲ ಅಧಿಕಾರವನ್ನು ಪಡೆದುಕೊಳ್ಳಲಿಕ್ಕಾಗಿ ಹಗಲಿರುಳು ಆಟವಾಡುವವರು ಅವರ ತತ್ವ ‘ಪರಿವಾರ್ ಕಾ ಸಾಥ್ ಪರಿವಾರ್ ಕಾ ವಿಕಾಸ್’ ಎಂಬುದಾಗಿದೆ” ಎಂದು ಮೋದಿ ಹೇಳಿದರು. ಇಂದು ಭಾರತ ಅಭಿವೃದ್ಧಿ ಮತ್ತು ಪರಂಪರೆ ಎರಡನ್ನೂ ಒಟ್ಟಿಗೆ ತೆಗೆದುಕೊಂಡು ಮುಂದುವರಿಯುತ್ತಿದೆ. ನಮ್ಮ ಕಾಶಿ ಇದಕ್ಕೆ ಅತ್ಯುತ್ತಮ ಮಾದರಿಯಾಗುತ್ತಿದೆ. ಭಾರತದ ಆತ್ಮವು ಅದರ ವೈವಿಧ್ಯತೆಯಲ್ಲಿ ನೆಲೆಸಿದೆ. ಕಾಶಿ ಅದರ ಅತ್ಯಂತ ಸುಂದರ ನಿದರ್ಶನವಾಗಿದೆ” ಎಂದು ಮೋದಿ ಹೇಳಿದರು.

ಇದನ್ನೂ ಓದಿ
ರಾಜ್ಯಸಭೆಯಲ್ಲಿ ಅಸಂಸದೀಯ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆ
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು


ಇದನ್ನೂ ಓದಿ: ಕಾಶಿ ನನ್ನದು: ಸಂಸದರಾಗಿ 50ನೇ ಬಾರಿಗೆ ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ

ವಾರಾಣಸಿಯಲ್ಲಿ ಪ್ರಧಾನಿ ಮೋದಿ 3880 ಕೋಟಿ ರೂ. ಮೌಲ್ಯದ 44 ಯೋಜನೆಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ಮಾಡಿದರು. ಕಳೆದ 10 ವರ್ಷಗಳಲ್ಲಿ ಬನಾರಸ್ ಅಭಿವೃದ್ಧಿ ಹೊಸ ವೇಗವನ್ನು ಪಡೆದುಕೊಂಡಿದೆ. ಇಂದು ಕಾಶಿ ಪ್ರಾಚೀನವಲ್ಲ, ಅದು ಪ್ರಗತಿಪರವೂ ಆಗಿದೆ. ಕಾಶಿಯ ಪ್ರೀತಿಗೆ ನಾನು ಋಣಿಯಾಗಿದ್ದೇನೆ. ಕಾಶಿ ನನ್ನದು ಮತ್ತು ನಾನು ಕಾಶಿಗೆ ಸೇರಿದವನು ಎಂದು ಮೋದಿ ಹೇಳಿದ್ದಾರೆ.


ತಮ್ಮ ಸಂಸದೀಯ ಕ್ಷೇತ್ರದ ಅಭಿವೃದ್ಧಿಯ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಪೂರ್ವಾಂಚಲ್‌ನಲ್ಲಿ ಮೊದಲು ಆರೋಗ್ಯ ಸೌಲಭ್ಯಗಳ ಕೊರತೆ ಇತ್ತು. ಆದರೆ ಇಂದು ಕಾಶಿ ಆರೋಗ್ಯದ ರಾಜಧಾನಿಯಾಗುತ್ತಿದೆ ಎಂದು ಹೇಳಿದರು. ಇಂದು ದೆಹಲಿ ಮತ್ತು ಮುಂಬೈನ ದೊಡ್ಡ ಆಸ್ಪತ್ರೆಗಳು ನಿಮ್ಮ ಮನೆಯ ಹತ್ತಿರ ಬಂದಿವೆ. ಇದು ಅಭಿವೃದ್ಧಿ. ಕಳೆದ 10 ವರ್ಷಗಳಲ್ಲಿ ನಾವು ಆಸ್ಪತ್ರೆಗಳ ಸಂಖ್ಯೆಯನ್ನು ಹೆಚ್ಚಿಸಿದ್ದಲ್ಲದೆ, ರೋಗಿಗಳ ಘನತೆಯನ್ನು ಹೆಚ್ಚಿಸಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ