
ನವದೆಹಲಿ, ಜನವರಿ 9: ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 28ರಂದು ಆರಂಭವಾಗಲಿದ್ದು, ಫೆಬ್ರವರಿ 1ರಂದು ಕೇಂದ್ರ ಬಜೆಟ್ 2026 (Union Budget 2026) ಮಂಡನೆಯಾಗಲಿದೆ. ಈ ಕುರಿತು ಮಾಹಿತಿಯನ್ನು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು ಇಂದು ಬಿಡುಗಡೆ ಮಾಡಿದೆ. ಬಜೆಟ್ ಅಧಿವೇಶನವು ಜನವರಿ 28ರಂದು ಪ್ರಾರಂಭವಾಗಿ ಏಪ್ರಿಲ್ 2ರವರೆಗೆ ಮುಂದುವರಿಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಅಧಿವೇಶನಕ್ಕೆ ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ. ಅವರು ಅಧಿವೇಶನದ ಮೊದಲ ದಿನದಂದು ಸಂಸತ್ತಿನ ಎರಡೂ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬಜೆಟ್ ಅಧಿವೇಶನದ ಮೊದಲ ಹಂತವು ಫೆಬ್ರವರಿ 13ರಂದು ಮುಕ್ತಾಯಗೊಳ್ಳಲಿದ್ದು, ಎರಡನೇ ಹಂತಕ್ಕೆ ಮಾರ್ಚ್ 9ರಂದು ಸಂಸತ್ ಸಭೆ ಸೇರಲಿದೆ. ಕೇಂದ್ರ ಸರ್ಕಾರವು 2025-26 ರ ಆರ್ಥಿಕ ಸಮೀಕ್ಷೆಯನ್ನು ಜನವರಿ 29ರಂದು ಮಂಡಿಸಲಿದೆ. ಕೇಂದ್ರ ಬಜೆಟ್ 2026-27 ಅನ್ನು ಫೆಬ್ರವರಿ 1ರಂದು ಮಂಡಿಸಲಾಗುವುದು.
ಇದನ್ನೂ ಓದಿ: ಬರಲಿದೆ ಹೊಸ ಆದಾಯ ತೆರಿಗೆ ಕಾಯ್ದೆ; ಬಜೆಟ್ನಲ್ಲಿ ಘೋಷಣೆ, ಏ. 1ರಿಂದ ಜಾರಿ
ಈ ಬಜೆಟ್ ಅಧಿವೇಶನದಲ್ಲಿ ಬಜೆಟ್ ಚರ್ಚೆಗಳು, ಸಬ್ಸಿಡಿ ಬೇಡಿಕೆಗಳು ಮತ್ತು ಪ್ರಮುಖ ಆರ್ಥಿಕ ನೀತಿಗಳ ಕುರಿತು ವಿವರವಾದ ಚರ್ಚೆಗಳು ನಡೆಯಲಿವೆ. ಸಾರ್ವಜನಿಕರು, ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು ಮತ್ತು ತೆರಿಗೆದಾರರು ಎಲ್ಲರೂ ಈ ಬಜೆಟ್ ಬಗ್ಗೆ ಬಹಳ ಕಾತುರ ಇಟ್ಟುಕೊಂಡಿದ್ದಾರೆ. ಈ ಅಧಿವೇಶನದಲ್ಲಿ ಕೇಂದ್ರ ಬಜೆಟ್, ಸಬ್ಸಿಡಿ ಬೇಡಿಕೆಗಳು ಮತ್ತು ಪ್ರಮುಖ ಆರ್ಥಿಕ ನೀತಿಗಳ ಕುರಿತು ವಿವರವಾದ ಚರ್ಚೆಗಳು ಸಂಸತ್ತಿನಲ್ಲಿ ನಡೆಯಲಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ