Patanjali Ads Case: ನಾವು ಇಂತಹ ತಪ್ಪನ್ನು ಮತ್ತೆ ಮಾಡುವುದಿಲ್ಲ, ಮರಳಿ ಕ್ಷಮೆಯಾಚಿಸಿದ ರಾಮ್‌ದೇವ್, ಬಾಲಕೃಷ್ಣ
ಪತಂಜಲಿ ಸಂಸ್ಥೆಯ ಹಾದಿ ತಪ್ಪಿಸುವ ಜಾಹಿರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಮುಖ್ಯಸ್ಥರಾದ ಬಾಬಾ ರಾಮ್ ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಮತ್ತೆ ಕ್ಷಮೆಯಾಚಿಸಿದ್ದಾರೆ. ಪತಂಜಲಿ ಆಯುರ್ವೇದ ಲಿಮಿಟೆಡ್‌ನ ದಾರಿತಪ್ಪಿಸುವ ಜಾಹೀರಾತು ಪ್ರಕರಣದ ವಿಚಾರಣೆ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ನಡೆಯಿತು. ಕಂಪನಿಯ ಸಂಸ್ಥಾಪಕರಾದ ಯೋಗ ಗುರು ರಾಮದೇವ್ ಮತ್ತು ಬಾಲಕೃಷ್ಣ ಆಚಾರ್ಯ ಅವರ ಪರವಾಗಿ ಬೇಷರತ್ ಕ್ಷಮೆಯಾಚಿಸುವ ಕ್ಷಮಾಪಣೆ ಪತ್ರವನ್ನು ಮುದ್ರಿಸಲಾಗಿದೆ.

ನಾವು ಇಂತಹ ತಪ್ಪನ್ನು ಮತ್ತೆ ಮಾಡುವುದಿಲ್ಲ ಎಂದು ಬಾಬಾ ರಾಮ್‌ದೇವ್( Baba Ramdev) ಹಾಗೂ ಬಾಲಕೃಷ್ಣ ಮತ್ತೆ ಕ್ಷಮೆಯಾಚಿಸಿದ್ದಾರೆ. ದಾರಿ ತಪ್ಪಿಸುವ ಜಾಹೀರಾತು ನೀಡಿದ್ದಕ್ಕಾಗಿ ಮತ್ತೆ ಇಂತಹ ತಪ್ಪಾಗುವುದಿಲ್ಲ ಎಂದು ರಾಮ್‌ದೇವ್ ಕ್ಷಮೆಯಾಚಿಸಿದ್ದಾರೆ. ನಮ್ಮಿಂದ ಆದ ಲೋಪಕ್ಕೆ ನಾವು ಪ್ರಾಣಿಕವಾಗಿ ವಿಷಾದಿಸುತ್ತೇನೆ. ಈ ತಪ್ಪು ಪುನರಾವರ್ತನೆಯಾಗುವುದಿಲ್ಲ, ಕಾನೂನು ಮತ್ತು ನ್ಯಾಯದ ಘನತೆಯನ್ನು ಎತ್ತಿಹಿಡಿಯಲು ಬದ್ಧರಾಗಿದ್ದೇವೆ ಎಂದು ಹೇಳಿದ್ದರು.
ಪತಂಜಲಿ ಆಯುರ್ವೇದ ಲಿಮಿಟೆಡ್‌ನ ದಾರಿತಪ್ಪಿಸುವ ಜಾಹೀರಾತು ಪ್ರಕರಣದ ವಿಚಾರಣೆ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ನಡೆಯಿತು. ಕಂಪನಿಯ ಸಂಸ್ಥಾಪಕರಾದ ಯೋಗ ಗುರು ರಾಮದೇವ್ ಮತ್ತು ಬಾಲಕೃಷ್ಣ ಆಚಾರ್ಯ ಅವರ ಪರವಾಗಿ ಬೇಷರತ್ ಕ್ಷಮೆಯಾಚಿಸುವ ಕ್ಷಮಾಪಣೆ ಪತ್ರವನ್ನು ಮುದ್ರಿಸಲಾಗಿದೆ.
ಈ ಹಿಂದೆ ಪತಂಜಲಿ ಸಂಸ್ಥೆಯ ಉಭಯ ಮುಖ್ಯಸ್ಥರು ಸಲ್ಲಿಸಿದ್ದ ‘ಭೇಷರತ್ ಕ್ಷಮೆ’ಯನ್ನು ನಿರಾಕರಿಸಿದ್ದ ಸುಪ್ರೀಂ ಕೋರ್ಟ್ ಅವರಿಗೆ ಛೀಮಾರಿ ಹಾಕಿತ್ತು. ಆದರೆ ಇದೀಗ ಬಾಬಾ ರಾಮ್ ದೇವ್ ಪತ್ರಿಕೆಗಳಲ್ಲಿ ತಮ್ಮ ಕ್ಷಮಾಪಣೆ ಪತ್ರವನ್ನು ಮುದ್ರಿಸಿರುವುದಾಗಿ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ. ಈ ವಾದವನ್ನು ಆಲಿಸಿದ ಕೋರ್ಟ್ ರಾಮ್ ದೇವ್ ಅವರ ಕ್ಷಮೆ ಜಾಹಿರಾತನ್ನು ಕಡತಗಳಿಗೆ ಸೇರಿಸುವಂತೆ ಸೂಚನೆ ನೀಡಿತ್ತು.
ಮತ್ತಷ್ಟು ಓದಿ: ದಾರಿತಪ್ಪಿಸುವ ಜಾಹೀರಾತು ಪ್ರಕರಣ: ಸುಪ್ರೀಂಕೋರ್ಟ್ ಮುಂದೆ ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್
ಪತಂಜಲಿ ಆಯುರ್ವೇದ್ ಲಿಮಿಟೆಡ್ ಯಾವುದೇ ಕಾನೂನನ್ನು ಉಲ್ಲಂಘಿಸುವುದಿಲ್ಲ ಎಂದು ನವೆಂಬರ್ 21, 2023 ರಂದು ಪ್ರಸ್ತುತ ಕಂಪನಿ ಸುಪ್ರೀಂಕೋರ್ಟ್‌ಗೆ ಭರವಸೆ ನೀಡಿತ್ತು, ಅದರಲ್ಲೂ ವಿಶೇಷವಾಗಿ ತಾನು ತಯಾರಿಸಿದ ಮತ್ತು ಮಾರಾಟ ಮಾಡುವ ಉತ್ಪನ್ನಗಳ ಜಾಹೀರಾತು ಅಥವಾ ಬ್ರ್ಯಾಂಡಿಂಗ್‌ಗೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಈ ಹಿಂದೆ ಹೇಳಿತ್ತು.
ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಮತ್ತು ಆಧುನಿಕ ಔಷಧ ಪದ್ಧತಿಯ ವಿರುದ್ಧ ರಾಮ್‌ದೇವ್ ಅವರು ಅಭಿಯಾನ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




