ಪತಂಜಲಿ ಜಾಹೀರಾತು: ರಾಮದೇವ್ ವಿರುದ್ಧದ ಪ್ರಕರಣದ ಆದೇಶ ಕಾಯ್ದಿರಿಸಿದ ಸುಪ್ರೀಂಕೋರ್ಟ್

ಪತಂಜಲಿ, ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಪರ ವಕೀಲರು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದ  ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಹಿಂಪಡೆದಿದ್ದಾರೆ. ಪರವಾನಗಿಗಳನ್ನು ರದ್ದುಗೊಳಿಸಿರು ಉತ್ಪನ್ನಗಳ ಮಾರಾಟವನ್ನು ಸಹ ನಿಲ್ಲಿಸಿದ್ದಾರೆ ಎಂದು ಹೇಳಿದ ನಂತರ ನ್ಯಾಯಾಲಯವು ತನ್ನ ಆದೇಶಗಳನ್ನು ಕಾಯ್ದಿರಿಸಿದೆ.

ಪತಂಜಲಿ ಜಾಹೀರಾತು: ರಾಮದೇವ್ ವಿರುದ್ಧದ ಪ್ರಕರಣದ ಆದೇಶ ಕಾಯ್ದಿರಿಸಿದ ಸುಪ್ರೀಂಕೋರ್ಟ್
ಬಾಬಾ ರಾಮ್ ದೇವ್
Follow us
|

Updated on: May 14, 2024 | 1:19 PM

ದೆಹಲಿ ಮೇ 14: ಬಾಬಾ ರಾಮ್‌ದೇವ್ (Baba Ramdev), ಆಚಾರ್ಯ ಬಾಲಕೃಷ್ಣ ಮತ್ತು ಪತಂಜಲಿ(Patanajali) ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಯ ತೀರ್ಪನ್ನು ಕಾಯ್ದಿರಿಸಿರುವ ಸುಪ್ರೀಂಕೋರ್ಟ್ (Supreme Court), ಬಾಬಾ ರಾಮ್‌ದೇವ್ ಅವರಿಗೆ ದೇಶದ ಜನರಲ್ಲಿ ಅವರ ಸ್ಥಾನಮಾನವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವಂತೆ ಮಂಗಳವಾರ ಸಲಹೆ ನೀಡಿದೆ. ಬಾಬಾ ರಾಮ್‌ದೇವ್ ಅವರ ಮೇಲೆ ದೇಶದ ಜನರಿಗೆ ನಂಬಿಕೆ ಇದೆ. ಅವರು ಅದನ್ನು ಹೆಚ್ಚು ಬುದ್ಧಿವಂತಿಕೆಯಿಂದ ಬಳಸಬೇಕು ಎಂದು ನ್ಯಾಯಾಲಯ ಹೇಳಿದೆ. ಅವರು ಯೋಗ ಬಗ್ಗೆ ಮಾಡಿದ ಕೆಲಸ ಬಗ್ಗೆ ಹೆಮ್ಮೆಪಡುತ್ತೇವೆ. ಜನರು ಅವರನ್ನು ನೋಡುತ್ತಿರುತ್ತಾರೆ. ಅಂಥದನ್ನು ಅವರು ಸಕಾರಾತ್ಮಕವಾಗಿ ಬಳಸಬೇಕು ಮತ್ತು ಅವರು ಹೆಚ್ಚು ಜವಾಬ್ದಾರಿಯುತವಾಗಿರಬೇಕು ಎಂದು ನ್ಯಾಯಾಲಯ ಹೇಳಿದೆ.

ಪತಂಜಲಿ, ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಪರ ವಕೀಲರು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದ  ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಹಿಂಪಡೆದಿದ್ದಾರೆ. ಪರವಾನಗಿಗಳನ್ನು ರದ್ದುಗೊಳಿಸಿರು ಉತ್ಪನ್ನಗಳ ಮಾರಾಟವನ್ನು ಸಹ ನಿಲ್ಲಿಸಿದ್ದಾರೆ ಎಂದು ಹೇಳಿದ ನಂತರ ನ್ಯಾಯಾಲಯವು ತನ್ನ ಆದೇಶಗಳನ್ನು ಕಾಯ್ದಿರಿಸಿದೆ.

ಆದರೆ ಪರವಾನಗಿಯನ್ನು ರದ್ದುಗೊಳಿಸಿರುವ ಉತ್ಪನ್ನಗಳ ಜಾಹೀರಾತುಗಳನ್ನು ಔಷಧಗಳನ್ನು ಹಿಂಪಡೆಯಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸೂಚಿಸುವ ಅಫಿಡವಿಟ್ ಅನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಉತ್ತರಾಖಂಡ ಸರ್ಕಾರದ ರಾಜ್ಯ ಪರವಾನಗಿ ಪ್ರಾಧಿಕಾರವು ಏಪ್ರಿಲ್ 30 ರಂದು 14 ಪತಂಜಲಿ ಉತ್ಪನ್ನಗಳ ಪರವಾನಗಿಯನ್ನು ರದ್ದುಗೊಳಿಸಿತ್ತು.

ಅಫಿಡವಿಟ್‌ನಲ್ಲಿ ಪರವಾನಗಿ ಪ್ರಾಧಿಕಾರವು ತಾವು ಕಾನೂನಿನ ಪ್ರಕಾರ ಕಾರ್ಯನಿರ್ವಹಿಸಿರುವುದಾಗಿ ಹೇಳಿದ್ದು, ದಿವ್ಯಾ ಫಾರ್ಮಸಿ ಮತ್ತು ಪತಂಜಲಿ ಆಯುರ್ವೇದ ಅವರ 14 ಉತ್ಪನ್ನಗಳಾದ ‘ಸ್ವಾಸರಿ ಗೋಲ್ಡ್’, ‘ಸ್ವಾಸರಿ ವತಿ, ಬ್ರಾಂಕೋಮ್‌,’, ‘ಸ್ವಾಸರಿ ಪ್ರವಾಹಿ’, ‘ಸ್ವಾಸರಿ ಅವಳೇಹ್’, ‘ಮುಕ್ತ ವಟಿ ಎಕ್ಸ್‌ಟ್ರಾ ಪವರ್’, ‘ಲಿಪಿಡೋಮ್’, ‘ಬಿಪಿ ಗ್ರಿಟ್’, ‘ಮಧುಗ್ರಿತ್’, ‘ಮಧುನಾಶಿನಿ ವಟಿ ಎಕ್ಸ್‌ಟ್ರಾ ಪವರ್’, ‘ಲಿವಾಮೃತ್ ಅಡ್ವಾನ್ಸ್’, ‘ಲಿವೋಗ್ರಿಟ್’, ‘ಐಗ್ರಿಟ್ ಗೋಲ್ಡ್’ ಮತ್ತು ‘ಪತಂಜಲಿ ದೃಷ್ಟಿ ಐ ಡ್ರಾಪ್’ ಸಂಬಂಧಿಸಿದಂತೆ ಉತ್ಪಾದನಾ ಪರವಾನಗಿಯನ್ನು ಅಮಾನತುಗೊಳಿಸಿರುವುದಾಗಿ ತಿಳಿಸಿದೆ.

ಇದಲ್ಲದೆ, ಬಾಬಾ ರಾಮ್‌ದೇವ್, ಆಚಾರ್ಯ ಬಾಲಕೃಷ್ಣ, ದಿವ್ಯ ಫಾರ್ಮಸಿ ಮತ್ತು ಪತಂಜಲಿ ಆಯುರ್ವೇದ್ ಲಿಮಿಟೆಡ್ ವಿರುದ್ಧ ಡ್ರಗ್ಸ್ ಆಂಡ್ ಮೆಡಿಕಲ್ ರೆಮಡೀಸ್  ಆ್ಯಕ್ಟ್ ಸೆಕ್ಷನ್ 3, 4 ಮತ್ತು 7 ರ ಅಡಿಯಲ್ಲಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಹರಿದ್ವಾರದ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಿಸಲಾಗಿದೆ ಎಂದು ಎಸ್‌ಎಲ್‌ಎ ನ್ಯಾಯಾಲಯಕ್ಕೆ ತಿಳಿಸಿದೆ.

ಇದನ್ನೂ ಓದಿ: Narendra Modi Files Nomination: ಲೋಕಸಭಾ ಚುನಾವಣೆ 2024: ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿ

ಈ ಹಿಂದೆ ರಾಮ್‌ದೇವ್, ಬಾಲಕೃಷ್ಣ ಮತ್ತು ಪತಂಜಲಿ ಸಲ್ಲಿಸಿದ್ದ ಅಫಿಡವಿಟ್‌ಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಪತಂಜಲಿ, ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ವಿರುದ್ಧ ಸುಪ್ರೀಂ ಕೋರ್ಟ್ ನಿಂದನೆ ಪ್ರಕ್ರಿಯೆಗಳನ್ನು ಪ್ರಾರಂಭಿಸಿದ ನಂತರ, ನ್ಯಾಯಾಲಯವು ಕ್ಷಮಾಪಣೆಯಿಂದ ತೃಪ್ತರಾಗದ ಕಾರಣ ಅವರು ಮೂರು ಸಂದರ್ಭಗಳಲ್ಲಿ ಕ್ಷಮೆಯಾಚನೆಯನ್ನು ಸಲ್ಲಿಸಬೇಕಾಯಿತು.

ಪತಂಜಲಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಸುದ್ದಿ ಮಾಧ್ಯಮಗಳಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಪತಂಜಲಿ, ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರಿಗೆ ನ್ಯಾಯಾಲಯ ಸೂಚಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ