ನವರಾತ್ರಿ ಪ್ರಯುಕ್ತ ಗಂಗಾಜಲ ತುಂಬಿದ 21 ಕಲಶಗಳನ್ನು ಎದೆಯ ಮೇಲಿಟ್ಟು ಪೂಜೆ ಸಲ್ಲಿಸಿದ ಪಾಟ್ನಾದ ಅರ್ಚಕ

| Updated By: shruti hegde

Updated on: Oct 08, 2021 | 11:14 AM

Navratri 2021: ಪಾಟ್ನಾದ ದುರ್ಗಾ ದೇವಿಯ ದೇವಸ್ಥಾನದ ಅರ್ಚಕ ನಾಗೇಶ್ವರ ಬಾಬಾ, ಗಂಗಾಜಲ ತುಂಬಿದ 21 ಕಲಶಗಳನ್ನು ತನ್ನ ಎದೆಯ ಮೇಲೆ ಇಟ್ಟುಕೊಂಡು ದುರ್ಗಾದೇವಿಯನ್ನು ಪೂಜಿಸಲು ಆರಂಭಿಸಿದ್ದಾರೆ.

ನವರಾತ್ರಿ ಪ್ರಯುಕ್ತ ಗಂಗಾಜಲ ತುಂಬಿದ 21 ಕಲಶಗಳನ್ನು ಎದೆಯ ಮೇಲಿಟ್ಟು ಪೂಜೆ ಸಲ್ಲಿಸಿದ ಪಾಟ್ನಾದ ಅರ್ಚಕ
ನವರಾತ್ರಿ ಪ್ರಯುಕ್ತ ಎದೆಯ ಮೇಲೆ 21 ಕಲಶಗಳನ್ನು ಇಟ್ಟುಕೊಂಡು ಪೂಜೆ ಕೈಗೊಂಡ ಪಾಟ್ನಾದ ಅರ್ಚಕ
Follow us on

ನವರಾತ್ರಿ ಆಚರಣೆ ಕಳೆದ ಗುರುವಾರದಿಂದ ಪ್ರಾರಂಭವಾಗಿದೆ. ದೇವಿಯ ಆರಾಧನೆಯಲ್ಲಿ ಭಕ್ತರು ಹೇಗೆ ವಿಭಿನ್ನವಾಗಿರುತ್ತಾರೆಯೋ ಅದೇ ರೀತಿ ಭಕ್ತಿಯ ವಿಧಾನವೂ ಸಹ ವಿಭಿನ್ನವಾಗಿರುತ್ತದೆ. ನವರಾತ್ರಿಯ ವಿಶೇಷವಾಗಿ ವಿವಿಧ ಆಚರಣೆಗಳಲ್ಲಿ ಭಕ್ತರು ತೊಡಗಿಕೊಳ್ಳುತ್ತಾರೆ. ಭಕ್ತರು ಕಲಶವನ್ನು ಸ್ಥಾಪಿಸಿ ವಿಶೇಷ ಪೂಜೆ ಕೈಗೊಳ್ಳುವ ಮೂಲಕ ದೇವಿ ದುರ್ಗೆಯ ಮೊರೆ ಹೋಗುತ್ತಾರೆ. ಕೆಲವರು ಒಂಭತ್ತು ದಿನಗಳ ಕಾಲ ನಡೆಯುವ ಈ ನವರಾತ್ರಿ ವಿಶೇಷವಾಗಿ ಉಪವಾಸ ಕೈಗೊಳ್ಳುತ್ತಾರೆ. ಅದೇ ರೀತಿ ಪಾಟ್ನಾದ ಅರ್ಚಕ ಗಂಗಾಜಲ ತುಂಬಿದ 21 ಕಲಶಗಳನ್ನು ಸ್ಥಾಪಿಸಿ ವಿಶೇಷ ಪೂಜೆ ಕೈಗೊಳ್ಳುವ ಆಚರಣೆಯನ್ನು ಮಾಡುತ್ತಿದ್ದಾರೆ. ಅಚ್ಚರಿಯೆಂದರೆ ಅರ್ಚಕರು ತಮ್ಮ ಎದೆಯ ಮೇಲೆ 21 ಕಲಶಗಳನ್ನೂ ಸಹ ಇಟ್ಟುಕೊಂಡು ದೇವಿಯ ಆರಾಧನೆಯಲ್ಲಿ ತೊಡಗಿಕೊಂಡಿದ್ದಾರೆ.

ದುರ್ಗಾದೇವಿಯನ್ನು ಒಂಭತ್ತು ದಿನಗಳ ಕಾಲ ಅದ್ದೂರಿಯಾಗಿ ಪೂಜಿಸಲಾಗುತ್ತದೆ. ಈ ವಿಶೇಷವಾಗಿ ಪಾಟ್ನಾದ ಅರ್ಚಕರು ವಿಶಿಷ್ಟವಾದ ಆಚರಣೆಯನ್ನು ಮಾಡುತ್ತಿದ್ದಾರೆ. ದೇವಸ್ಥಾನದ ಅರ್ಚಕರಾದ ನಾಗೇಶ್ವರ ಬಾಬಾ ಅವರು ಎದೆಯ ಮೇಲೆ ಗಂಗಾಜಲ ತುಂಬಿದ 21 ಕಲಶಗಳನ್ನು ಸ್ಥಾಪಿಸಿದ್ದಾರೆ. ಕಳೆದ 25 ವರ್ಷಗಳಿಂದ ಈ ಆಚರಣೆಯನ್ನು ಮಾಡುತ್ತಿರುವುದಾಗಿ ಎಎನ್ಐ ಜತೆ ಮಾಹಿತಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪಾಟ್ನಾದ ದುರ್ಗಾ ದೇವಿಯ ದೇವಸ್ಥಾನದ ಅರ್ಚಕ ನಾಗೇಶ್ವರ ಬಾಬಾ, ಗಂಗಾಜಲ ತುಂಬಿದ 21 ಕಲಶಗಳನ್ನು ತನ್ನ ಎದೆಯ ಮೇಲೆ ಇಟ್ಟುಕೊಂಡು ದುರ್ಗಾದೇವಿಯನ್ನು ಪೂಜಿಸಲು ಆರಂಭಿಸಿದ್ದಾರೆ. ನವರಾತ್ರಿ ಮುಗಿಯುವವರೆಗೆ ನನ್ನ ಎದೆಯ ಮೇಲೆ ಕಲಶವನ್ನು ಇಟ್ಟುಕೊಳ್ಳುತ್ತೇನೆ. ಕಳೆದ 25 ವರ್ಷಗಳಿಂದಲೂ ಈ ಆಚರಣೆಯಲ್ಲಿ ತೊಡಗಿಕೊಂಡು ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ.

ಚಿತ್ರಗಳಲ್ಲಿ ನೀವು ಗಮನಿಸುವಂತೆ ಅರ್ಚಕರು ತಮ್ಮ ಎದೆಯ ಮೇಲೆ 21 ಕಲಶಗಳನ್ನು ಇಟ್ಟುಕೊಂಡಿರುವುದನ್ನು ನೋಡಬಹುದು. ನವರಾತ್ರಿಯ ಒಂಭತ್ತು ದಿನಗಳವರೆಗೂ ಅರ್ಚಕರು ಉಪವಾಸ ಮಾಡುತ್ತಾ ಆಚರಣೆಯಲ್ಲಿ ತೊಡಗಿಕೊಳ್ಳುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:

ನವರಾತ್ರಿ 2021 ಎರಡನೇ ದಿನ: ದೇವಿ ಬ್ರಹ್ಮಚಾರಿಣಿ ಯಾರು? ಇಲ್ಲಿದೆ ಆಕೆಯ ಮನ ಗೆಲ್ಲುವ ಮಂತ್ರ

Durga Puja: ನವರಾತ್ರಿಯ ಮೊದಲ ದಿನ ಹಳದಿ ಬಣ್ಣ ಶ್ರೇಷ್ಠ; ಈ ವಿಶೇಷ ಶೈಲಿಯ ದಿರಿಸುಗಳನ್ನು ನೀವು ಧರಿಸಬಹುದು

Published On - 11:10 am, Fri, 8 October 21