Video: ಮುಂಬೈ ಏರ್ಪೋರ್ಟ್ನಲ್ಲಿ ಭರ್ಜರಿ ಜನದಟ್ಟಣೆ; ವಿಮಾನ ಹಾರಾಟದಲ್ಲಿ ಅಸ್ತವ್ಯಸ್ತ, ಪ್ರಯಾಣಿಕರ ಆಕ್ರೋಶ
ಮುಂಬೈ ಏರ್ಪೋರ್ಟ್ನ ಗಲಾಟೆ, ಉದ್ದನೆಯ ಕ್ಯೂನಲ್ಲಿ ಸಿಲುಕಿ ಬೆಂಡಾದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೆಡೆ ಚೆಕ್ಕಿಂಗ್ ಪ್ರಕ್ರಿಯೆ ಬೇಗಬೇಗ ಮುಗಿಯುತ್ತಿಲ್ಲ. ಚೆಕ್ಕಿಂಗ್ ಮುಗಿದರೂ ವಿಮಾನ ಹೊರಡಲು ವಿಳಂಬವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣ (Mumbai International Airport) ಪ್ರಯಾಣಿಕರಿಂದ ತುಂಬಿ ಹೋಗಿತ್ತು. ಇಡೀ ವಿಮಾನನಿಲ್ದಾಣದಲ್ಲಿ ಎಲ್ಲ ಕಡೆಗೂ ಪ್ರಯಾಣಿಕರು ನಿಂತಿರುವ ದೃಶ್ಯದ ವಿಡಿಯೋ, ಫೋಟೋಗಳು ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿವೆ. ಸಿಐಎಸ್ಎಫ್ ಸೆಕ್ಯೂರಿಟಿ ಗೇಟ್ ಬಳಿ ಜನರ ಉದ್ದನೆಯ ಕ್ಯೂ ಇದ್ದು, ಅವರೆಲ್ಲ ತಮ್ಮ ಬೋರ್ಡಿಂಗ್ ಗೇಟ್ ಬಳಿ ಹೋಗಲು ತುಂಬ ಕಷ್ಟಪಡುತ್ತಿದ್ದರು. ಒಟ್ಟಾರೆ ಇಂದು ಬೆಳಗ್ಗೆ ಮುಂಬೈ ಏರ್ಪೋರ್ಟ್ ಅವ್ಯವಸ್ಥೆಗಳ ಆಗರವಾಗಿ ಬಹುತೇಕ ಎಲ್ಲ ದೇಶೀಯ ವಿಮಾನಗಳೂ ವಿಳಂಬವಾಗಿವೆ. ಇದು ಹಬ್ಬದ ಸೀಸನ್ ಮತ್ತು ವೀಕೆಂಡ್ ಆಗಿರುವುದರಿಂದ ಏರ್ಪೋರ್ಟ್ನಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರಯಾಣಿಕರು ತುಂಬಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಒಂದೆಡೆ ವಿಮಾನಗಳು ವಿಳಂವಾದರೆ, ಇನ್ನೂ ಕೆಲವು ಪ್ರಯಾಣಿಕರಿಗೆ ಬೋರ್ಡಿಂಗ್ ಗೇಟ್ಗೆ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗದೆ ತಾವು ಹೋಗಬೇಕಿದ್ದ ವಿಮಾನವನ್ನು ತಪ್ಪಿಸಿಕೊಂಡು ಪರದಾಡಿದ್ದಾರೆ. ಇದು ಗಲಾಟೆಗೂ ಕಾರಣವಾಗಿದೆ. ಕೆಲವರು ಏರ್ಪೋರ್ಟ್ ಅಧಿಕಾರಿಗಳು, ಸಿಬ್ಬಂದಿ ಬಳಿ ಜಗಳವನ್ನೂ ಮಾಡಿದ್ದಾರೆ. ಅವರನ್ನು ನಿಯಂತ್ರಿಸಲು ತುಂಬ ಸಿಬ್ಬಂದಿ ತುಂಬ ಕಷ್ಟಪಟ್ಟಿದ್ದಾರೆ.
ಬೆಳಗ್ಗೆ 6ಗಂಟೆಗೂ ಮೊದಲು ಹೊರಡಬೇಕಿದ್ದ ದೇಶೀಯ ವಿಮಾನಗಳು ಮಾತ್ರ ಸರಿಯಾದ ಸಮಯಕ್ಕೆ ಟೇಕ್ ಆಫ್ ಆಗಿವೆ. ಅದರಲ್ಲಿ ಹೈದರಾಬಾದ್, ಗೋವಾ, ನಾಗ್ಪುರಕ್ಕೆ ಪ್ರಯಾಣಿಸಬೇಕಿದ್ದ ಏರ್ ಇಂಡಿಯಾ ವಿಮಾನಗಳು, ಕೊಚ್ಚಿಗೆ ಹೋಗಬೇಕಿದ್ದ ಸ್ಪೈಸ್ಜೆಟ್ ಮತ್ತು ಕೋಲ್ಕತ್ತ, ಉದಯ್ಪುರಕ್ಕೆ ತೆರಳಬೇಕಿದ್ದ ಇಂಡಿಗೋಗಳಷ್ಟೇ ಸರಿಯಾದ ಸಮಯಕ್ಕೆ ಟೇಕ್ ಆಫ್ ಆಗಿದ್ದು ಬಿಟ್ಟರೆ, 6ಗಂಟೆ ನಂತರ ಇದ್ದ ಎಲ್ಲ ವಿಮಾನಗಳೂ ವಿಳಂಬವಾಗಿಯೇ ಹೊರಟಿವೆ. ಕೆಲವು 20-30 ನಿಮಿಷ ತಡವಾಗಿದ್ದರೆ, ಇನ್ನೂ ಕೆಲವು ವಿಮಾನಗಳು ಒಂದು ತಾಸುಗಳ ಕಾಲ ತಡವಾಗಿ ಹೊರಟಿವೆ.
ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ತೋಡಿಕೊಂಡ ಜನರು ಈ ಮಧ್ಯೆ ಮುಂಬೈ ಏರ್ಪೋರ್ಟ್ನ ಗಲಾಟೆ, ಉದ್ದನೆಯ ಕ್ಯೂನಲ್ಲಿ ಸಿಲುಕಿ ಬೆಂಡಾದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೆಡೆ ಚೆಕ್ಕಿಂಗ್ ಪ್ರಕ್ರಿಯೆ ಬೇಗಬೇಗ ಮುಗಿಯುತ್ತಿಲ್ಲ. ಚೆಕ್ಕಿಂಗ್ ಮುಗಿದರೂ ವಿಮಾನ ಹೊರಡಲು ವಿಳಂಬವಾಗುತ್ತಿದೆ. ಹಲವರ ಕೂಗಾಟ ಎಲ್ಲ ಸೇರಿ ತುಂಬ ಕಿರಿಕಿರಿಯಾಯಿತು ಎಂದು ಸೋಷಿಯಲ್ ಮೀಡಿಯಾಗಳ ಮೂಲಕ ಅನೇಕರು ಹೇಳಿಕೊಂಡಿದ್ದಾರೆ. ಒಂದಷ್ಟು ಮಂದಿ ಜನಂಗುಳಿಯ ವಿಡಿಯೋ, ಫೋಟೋವನ್ನೂ ಶೇರ್ ಮಾಡಿಕೊಂಡಿದ್ದಾರೆ. ಏರ್ಪೋರ್ಟ್ನಲ್ಲಿ ಇಷ್ಟರ ಮಟ್ಟಿಗೆ ಅವ್ಯವಸ್ಥೆಯುಂಟಾಗಿ, ನನ್ನಂತ ಹಲವು ಪ್ರಯಾಣಿಕರು ವಿಮಾನ ಮಿಸ್ ಮಾಡಿಕೊಂಡಿದ್ದರೂ ಅಲ್ಲಿನ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಜನರನ್ನು ನಿಯಂತ್ರಿಸಲೂ ಪ್ರಯತ್ನ ಪಟ್ಟಿಲ್ಲ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿ, ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಮಾನ ನಿಲ್ದಾಣದ ಪ್ರತಿಕ್ರಿಯೆ ಮುಂಬೈ ಏರ್ಪೋರ್ಟ್ ಕೂಡ ಜನದಟ್ಟಣೆಯ ಬಗ್ಗೆ ಇಂದು ಬೆಳಗ್ಗೆ 11 ಗಂಟೆ ಹೊತ್ತಿಗೆ ಪ್ರತಿಕ್ರಿಯೆ ನೀಡಿದೆ. ಇದೀಗ ಹಬ್ಬದ ಸೀಸನ್ ಶುರುವಾಗಿದೆ. ಅದರೊಂದಿಗೆ ವೀಕೆಂಡ್ ಬೇರೆ ಬಂದಿದೆ. ಹಾಗಾಗಿಯೇ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಪರಿ ಜನದಟ್ಟಣೆ ಉಂಟಾಯಿತು. ಇದು ಬರಿ ನಮ್ಮಲ್ಲಷ್ಟೇ ಅಲ್ಲ, ದೇಶದ ಬೇರೆ ನಗರಗಳ ವಿಮಾನ ನಿಲ್ದಾಣದಲ್ಲೂ ಇದೇ ಪರಿಸ್ಥಿತಿ ಉಂಟಾಗಿತ್ತು. ಹಾಗಂತ ಪ್ರಯಾಣಿಕರ ಭದ್ರತೆ, ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ವಹಿಸಿಲ್ಲ. ಆದ್ಯತೆಯ ಮೇರೆಗೆ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಈ ವಿಚಾರದಲ್ಲಿ ಎಂದಿಗೂ ರಾಜಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
Complete chaos at Mumbai airport and the poor admin/officials have no idea how to control it. Proper mismanagement. @AdaniOnline @CSMIA_Official pic.twitter.com/dXElWci8pM
— Neelesh Arora (@AroraNeelesh) October 8, 2021
T2 AT CSMIA (Mumbai Airport) is a shambles.
Literally feels like we’re in the dark ages. Endless milling crowds, machines breaking down, tempers frayed, chaos everywhere. Staff doing their best but absolutely unable to cope.
Who runs this absolute shitshow? Please tag them.
— VISHAL DADLANI (@VishalDadlani) October 8, 2021
Mumbai Airport is a mess. It takes atleast 1 hr to enter and do check-in and then this crowd for security check. How can someone board a flight even reaching 2 1/2 hrs before domestic flight. This is the real commercial capital of the country. pic.twitter.com/OII3s46GZh
— Prakarsh Gagdani (@PrakarshGagdani) October 8, 2021
ಇದನ್ನೂ ಓದಿ: ಆನ್ಲೈನ್ ಗೇಮ್ ಬ್ಯಾನ್: ಅನ್ನಪೂರ್ಣೇಶ್ವರಿ ನಗರದಲ್ಲಿ ಡ್ರೀಮ್ 11 ಆನ್ಲೈನ್ ಗೇಮ್ ಆ್ಯಪ್ ವಿರುದ್ಧ ಎಫ್ಐಆರ್
ಪಾಂಡವಪುರ ಶಾಸಕ ಸಿ.ಎಸ್.ಪುಟ್ಟರಾಜು ಮನೆ ಮೇಲೆ ಕಲ್ಲುತೂರಾಟ; ಮನೆ ಕಿಟಕಿ ಗಾಜು, 8 ಕಾರುಗಳ ಗಾಜು ಪುಡಿಪುಡಿ