ರಂಜಿತ್ ಸಿಂಗ್ ಕೊಲೆ ಪ್ರಕರಣದಲ್ಲಿ ಸ್ವಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್ ದೋಷಿ
Gurmeet Ram Rahim Singh ಪಂಚಕುಲಾದ ಕೇಂದ್ರೀಯ ತನಿಖಾ ದಳ (ಸಿಬಿಐ) ವಿಶೇಷ ನ್ಯಾಯಾಲಯವು ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಮತ್ತು ನಾಲ್ವರು ಸಹ ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದೆ.
ಪಂಚಕುಲಾ: ರಂಜಿತ್ ಸಿಂಗ್ ಕೊಲೆ ಪ್ರಕರಣದಲ್ಲಿ ಸ್ವಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್ (Gurmeet Ram Rahim Singh) ಮತ್ತು ಇತರ ನಾಲ್ವರು ಆರೋಪಿಗಳು ಶಿಕ್ಷೆಗೊಳಗಾಗಿದ್ದಾರೆ. ರಾಮ್ ರಹೀಮ್ ಸಿಂಗ್ ನ ಡೇರಾ ಸಚ್ಚಾ ಸೌದಾದ ಮಾಜಿ ಬೆಂಬಲಿಗ ರಂಜಿತ್ ಸಿಂಗ್ ಜುಲೈ 10, 2002 ರಂದು ಹತ್ಯೆಗೀಡಾಗಿದ್ದರು. ಪಂಚಕುಲಾದ ಕೇಂದ್ರೀಯ ತನಿಖಾ ದಳ (CBI) ವಿಶೇಷ ನ್ಯಾಯಾಲಯವು ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಸಿಂಗ್ ಮತ್ತು ನಾಲ್ವರು ಸಹ ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದೆ. ವರದಿಗಳ ಪ್ರಕಾರ, ಅಕ್ಟೋಬರ್ 12 ರಂದು ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.
ಈ ಹಿಂದೆ ಅತ್ಯಾಚಾರ, ಕೊಲೆಗೆ ಶಿಕ್ಷೆ ವಿಧಿಸಲಾಗಿತ್ತು ಪ್ರಸ್ತುತ ವಿವಾದಿತ ದೇವಮಾನವ ತನ್ನ ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. 2017 ರ ಆಗಸ್ಟ್‌ನಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಅತ್ಯಾಚಾರ ಪ್ರಕರಣದಲ್ಲಿ ಆತನನ್ನು ದೋಷಿ ಎಂದು ಘೋಷಿಸಿತು. 2002 ರ ಜುಲೈ 10 ರಂದು ಕುರುಕ್ಷೇತ್ರದ ಖಾನಪುರ ಕೋಲಿಯನ್ ಗ್ರಾಮದಲ್ಲಿ ಡೇರಾ ಮುಖ್ಯಸ್ಥನ ವಿರುದ್ಧ ಪ್ರತಿಭಟಿಸಿದ ನಂತರ ರಂಜಿತ್ ಸಿಂಗ್ ಅವರನ್ನು ನಾಲ್ವರು ಗುಂಡಿಕ್ಕಿ ಹತ್ಯೆ ಮಾಡಿದ್ದರು.
Special CBI court in Haryana convicts Dera Sacha Sauda’s Gurmeet Ram Rahim and four others in the Ranjit Singh murder case pic.twitter.com/e2RhL5mzcn
— ANI (@ANI) October 8, 2021
2019 ಜನವರಿಯಲ್ಲಿ, ಪತ್ರಕರ್ತನ ಹತ್ಯೆಯ ಪ್ರಕರಣದಲ್ಲಿ 16 ವರ್ಷಗಳ ನಂತರ ಸ್ವಘೋಷಿತ ದೇವಮಾನವ ಮತ್ತು ಇತರ ಮೂವರಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿತು. ಈ ವರ್ಷದ ಆರಂಭದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ನೋಡಲು ದೇರಾ ಮುಖ್ಯಸ್ಥನಿಗೆ ‘ತುರ್ತು ಪೆರೋಲ್’ ನೀಡಲಾಯಿತು. ಪೆರೋಲ್ ಪಡೆಯಲು ಸಿಂಗ್ ಜೈಲು ಅಧಿಕಾರಿಗಳಿಗೆ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿ ತಾಯಿಯನ್ನು ಭೇಟಿ ಮಾಡಲು ಗುರುಗ್ರಾಮಕ್ಕೆ ಹೋಗಿದ್ದರು.
ಇದನ್ನೂ ಓದಿ: ಅರುಣಾಚಲ ಪ್ರದೇಶದ ಗಡಿಯಲ್ಲಿ ಭಾರತ-ಚೀನಾ ಪಡೆ ಮುಖಾಮುಖಿ; ಚೀನಾ ಯೋಧರ ಬಂಧನ ನಡೆದಿಲ್ಲ ಎಂದ ಕೇಂದ್ರ ಸರ್ಕಾರ