ಟ್ವಿಟರ್​ ಬಯೋದಿಂದ ‘ಬಿಜೆಪಿ’ ತೆಗೆದು ಹಾಕಿದ ಸುಬ್ರಹ್ಮಣಿಯನ್ ಸ್ವಾಮಿ; ಕಾರ್ಯಕಾರಿಣಿ ಸಮಿತಿಯಿಂದ ಕೈಬಿಟ್ಟ ಕೆಲವೇ ಕ್ಷಣದಲ್ಲಿ ಬದಲಾವಣೆ

ಸುಬ್ರಹ್ಮಣಿಯನ್​ ಸ್ವಾಮಿಯವರು ಬಿಜೆಪಿಯಲ್ಲೇ ಇದ್ದರೂ, ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ನೀತಿಯನ್ನು ಕಟುವಾಗಿ ವಿಮರ್ಶೆ ಮಾಡುತ್ತ ಬಂದಿದ್ದಾರೆ. ಹಿಂದೆಯೂ ಹಲವು ಬಾರಿ ಮಾಡಿದ್ದಾರೆ.

ಟ್ವಿಟರ್​ ಬಯೋದಿಂದ ‘ಬಿಜೆಪಿ’ ತೆಗೆದು ಹಾಕಿದ ಸುಬ್ರಹ್ಮಣಿಯನ್ ಸ್ವಾಮಿ; ಕಾರ್ಯಕಾರಿಣಿ ಸಮಿತಿಯಿಂದ ಕೈಬಿಟ್ಟ ಕೆಲವೇ ಕ್ಷಣದಲ್ಲಿ ಬದಲಾವಣೆ
ಸುಬ್ರಹ್ಮಣಿಯನ್ ಸ್ವಾಮಿ
Follow us
TV9 Web
| Updated By: Lakshmi Hegde

Updated on:Oct 08, 2021 | 9:55 AM

ಬಿಜೆಪಿ ನಿನ್ನೆ ಹೊಸ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯನ್ನು ರಚಿಸಿದ್ದು, ಅದರಲ್ಲಿ ಬಿಜೆಪಿ ಸಂಸದ ವರುಣ್​ ಗಾಂಧಿ, ಹಿರಿಯ ನಾಯಕರಾದ ಸುಬ್ರಹ್ಮಣಿಯನ್ ಸ್ವಾಮಿ, ಚೌಧರಿ ಬೀರೇಂದ್ರ ಸಿಂಗ್​ ಇತರರನ್ನು ಕೈಬಿಡಲಾಗಿದೆ. ಅದರ ಬೆನ್ನಲ್ಲೇ ಬಿಜೆಪಿ ರಾಜ್ಯ ಸಭಾ ಸದಸ್ಯ ಸುಬ್ರಹ್ಮಣಿಯನ್ ಸ್ವಾಮಿ ಒಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ತಮ್ಮ ಟ್ವಿಟರ್​ ಖಾತೆಯ ಬಯೋವನ್ನು ಬದಲಿಸಿದ್ದು, ಅದರಲ್ಲಿ ಬಿಜೆಪಿ ಪಕ್ಷದ ಹೆಸರನ್ನು ತೆಗೆದುಹಾಕಿದ್ದಾರೆ. ಅಂದರೆ ಈ ಹಿಂದೆ ಇದ್ದ ಬಯೋದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ (BJP National Exec. member) ಎಂಬ ಉಲ್ಲೇಖವಿತ್ತು. ಆದರೆ ಕಾರ್ಯಕಾರಿಣಿಯಿಂದ ಕೈಬಿಡುತ್ತಿದ್ದಂತೆ ಅದನ್ನು ತೆಗೆದಿದ್ದಾರೆ.

ರಾಜ್ಯಸಭಾ ಸದಸ್ಯರಾಗಿರುವ ಸುಬ್ರಹ್ಮಣಿಯನ್​ ಸ್ವಾಮಿ ಟ್ವಿಟರ್​​ನ ಪ್ರೊಫೈಲ್​​ ಬಯೋದಲ್ಲಿ ಈಗ ಬಿಜೆಪಿಯ ಹೆಸರು ಇಲ್ಲ. ಸದ್ಯ ರಾಜ್ಯಸಭಾ ಸದಸ್ಯ, ಮಾಜಿ ಕೇಂದ್ರ ಸಚಿವ, ಹಾರ್ವರ್ಡ್​ ಪಿಎಚ್​ಡಿ ಇನ್​ ಎಕನಾಮಿಕ್ಸ್​; ಪ್ರೊಫೆಸರ್​, ಎಂಬ ಮಾಹಿತಿಗಳೊಂದಿಗೆ ‘ನಾನು ಪಡೆದಷ್ಟು ಒಳ್ಳೆಯದನ್ನು ಕೊಡುತ್ತೇನೆ’(I give as good as I get) ಎಂಬ ಒಂದು ಸಾಲು ಇದೆ.

ಸುಬ್ರಹ್ಮಣಿಯನ್​ ಸ್ವಾಮಿಯವರು ಬಿಜೆಪಿಯಲ್ಲೇ ಇದ್ದರೂ, ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ನೀತಿಯನ್ನು ಕಟುವಾಗಿ ವಿಮರ್ಶೆ ಮಾಡುತ್ತ ಬಂದಿದ್ದಾರೆ. ಹಿಂದೆಯೂ ಹಲವು ಬಾರಿ ಮಾಡಿದ್ದಾರೆ. ಆದರೆ ಸುಬ್ರಹ್ಮಣಿಯನ್​ ಸ್ವಾಮಿ ಏನೇ ಮಾತನಾಡಿದರೂ ಅವರ ವಿರುದ್ಧ ಪ್ರಧಾನಿ ಸೇರಿ, ಕೇಂದ್ರದ ಯಾವುದೇ ನಾಯಕರೂ ಇದುವರೆಗೂ ಮಾತನಾಡಿಲ್ಲ. ಆದರೆ ಈ ಬಾರಿ ರಾಷ್ಟ್ರೀಯ ಕಾರ್ಯಕಾರಿಣಿ ರಚಿಸುವಾಗ ಬಿಜೆಪಿ ಒಟ್ಟು 80 ನಾಯಕರನ್ನು ಕೈಬಿಟ್ಟಿದ್ದು ಅದರಲ್ಲಿ ಸುಬ್ರಹ್ಮಣಿಯನ್​ ಸ್ವಾಮಿಯೂ ಒಬ್ಬರು.  ಹಾಗೇ, ಬಿಜೆಪಿ ಸಂಸದ ವರುಣ್​ ಗಾಂಧಿಯನ್ನೂ ಸಮಿತಿಯಲ್ಲಿ ಸೇರ್ಪಡೆಗೊಳಿಸಲಿಲ್ಲ. ಅವರು ಇತ್ತೀಚೆಗೆ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಮಾತನಾಡುತ್ತಿದ್ದಾರೆ. ಅದರಲ್ಲೂ ಮೊನ್ನೆ ಲಖಿಂಪುರ ಖೇರಿ ಹಿಂಸಾಚಾರ ನಡೆದ ಬಳಿಕ ಮತ್ತಷ್ಟು ಗಟ್ಟಿಯಾಗಿ ಧ್ವನಿ ಎತ್ತಿದ್ದಾರೆ. ರೈತರನ್ನು ಹತ್ಯೆಯ ಮೂಲಕ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಟ್ವೀಟ್​ ಮಾಡಿ, ರೈತರಿಗೆ ವಾಹನ ಡಿಕ್ಕಿ ಹೊಡೆದ ವಿಡಿಯೋವನ್ನೂ ಶೇರ್ ಮಾಡಿಕೊಂಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಅವರನ್ನು ಒಳಗೊಂಡಂತೆ,ಪಕ್ಷದ ಹಿರಿಯರಾದ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಸದಸ್ಯರಾಗಿದ್ದಾರೆ. 80 ಸಾಮಾನ್ಯ ಸದಸ್ಯರಲ್ಲದೆ, ಕಾರ್ಯಕಾರಣಿಯಲ್ಲಿ 50 ವಿಶೇಷ ಆಹ್ವಾನಿತರು ಮತ್ತು 179 ಖಾಯಂ ಆಹ್ವಾನಿತರು ಇರುತ್ತಾರೆ. 80 ಸದಸ್ಯರಲ್ಲಿ 37 ಮಂದಿ ಕೇಂದ್ರ ಸಚಿವರು ಮತ್ತು ರಾಜ್ಯದ ಹಲವಾರು ಸಚಿವರು ಸಮಿತಿಯ ಭಾಗವಾಗಿದ್ದಾರೆ.

ಹಳೇ ಟ್ವಿಟರ್​ ಬಯೋ

ಬಿಜೆಪಿಯ ಹೆಸರನ್ನು ತೆಗೆದಿರುವ ಟ್ವಿಟರ್ ಬಯೋ

ಇದನ್ನೂ ಓದಿ: ಅರುಣಾಚಲ ಪ್ರದೇಶದ ಎಲ್​​ಎಸಿ ಬಳಿ ಭಾರತ-ಚೀನಾ ಸೈನಿಕರ ಜಟಾಪಟಿ

Mysuru Dasara 2021: ದುರ್ಗಾ ಮಾತೆಯ 9 ದಿವ್ಯ ಅವತಾರ ಆಯುರ್ವೇದದಲ್ಲಿ 9 ದಿವ್ಯ ಔಷಧ ರೂಪದಲ್ಲಿದೆ; ವಿವರ ಇಲ್ಲಿದೆ

Published On - 9:53 am, Fri, 8 October 21

Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ