Sanjay Raut ಶಿವಸೇನಾ ನಾಯಕ ಸಂಜಯ್ ರಾವತ್​​ ನ್ಯಾಯಾಂಗ ಬಂಧನ ಸೆ.5ರವರೆಗೆ ವಿಸ್ತರಣೆ

ಆಗಸ್ಟ್ 8ರಂದು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು ಸೋಮವಾರ (ಇಂದು) ಅವರ ಬಂಧನ ಅವಧಿ ಮುಗಿದಿದೆ . ಇದಾದ ನಂತರ ವಿಶೇಷ ಪಿಎಂಎಲ್ಎ ನ್ಯಾಯಾಲಯ ರಾವತ್ ಬಂಧನವನ್ನು ಸೆಪ್ಟೆಂಬರ್ 5ರವರೆಗೆ ವಿಸ್ತರಿಸಿದೆ.

Sanjay Raut ಶಿವಸೇನಾ ನಾಯಕ ಸಂಜಯ್ ರಾವತ್​​ ನ್ಯಾಯಾಂಗ ಬಂಧನ ಸೆ.5ರವರೆಗೆ ವಿಸ್ತರಣೆ
ಸಂಜಯ್ ರಾವತ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 22, 2022 | 12:54 PM

ಪಾತ್ರಾ ಚಾಲ್ ಭೂಹಗರಣ ಪ್ರಕರಣದಲ್ಲಿ (Patra Chawl land scam) ಶಿವಸೇನಾ ನಾಯಕ, ರಾಜ್ಯಸಭಾ ಸಂಸದ ಸಂಜಯ್ ರಾವತ್ (Sanjay Raut) ಅವರ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 5ರವರೆಗೆ ವಿಸ್ತರಿಸಲಾಗಿದೆ. ಆಗಸ್ಟ್ 8ರಂದು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು ಸೋಮವಾರ (ಇಂದು) ಅವರ ಬಂಧನ ಅವಧಿ ಮುಗಿದಿದೆ . ಇದಾದ ನಂತರ ವಿಶೇಷ ಪಿಎಂಎಲ್ಎ ನ್ಯಾಯಾಲಯ ರಾವತ್ ಬಂಧನವನ್ನು ಸೆಪ್ಟೆಂಬರ್ 5ರವರೆಗೆ ವಿಸ್ತರಿಸಿದೆ. ಪ್ರಸ್ತುತ ರಾವತ್ ಅವರು ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ. ಪಾತ್ರಾ ಚಾಲ್ ಪುನರಾಭಿವೃದ್ಧಿ ಹಗರಣದಲ್ಲಿ ರಿಯಲ್ ಎಸ್ಟೇಟ್ ಕಂಪನಿಯಾದ ಹೌಸಿಂಗ್ ಡೆವಲಪ್‌ಮೆಂಟ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನಿಂದ ಪ್ರವೀಣ್ ರಾವುತ್ ಪಡೆದ ₹112 ಕೋಟಿಯಲ್ಲಿ ಅವರ ಕುಟುಂಬ ₹1.06 ಕೋಟಿ ನೇರ ಫಲಾನುಭವಿಗಳಾಗಿದ್ದವು. ಇದರಲ್ಲಿ ₹ 13.94 ಲಕ್ಷವನ್ನು ಸಂಜಯ್ ರಾವತ್ ಪತ್ನಿ ವರ್ಷಾ ರಾವತ್ ಅವರು ಅವನಿ ಇನ್ಫ್ರಾಸ್ಟ್ರಕ್ಚರ್‌ನಲ್ಲಿ ₹ 5,625 ರ ಹೂಡಿಕೆಯ ಲಾಭವಾಗಿ ಸ್ವೀಕರಿಸಿದ್ದಾರೆ ಎಂದು ತೋರಿಸಲಾಗಿದೆ. ಒಂದು ಸಂಸ್ಥೆಯು ಪ್ರವೀಣ್ ರಾವುತ್ ಅವರ ಪತ್ನಿ ಮಾಧುರಿ ಹೆಸರಿನಲ್ಲಿದೆ.

ಬಂಧನಕ್ಕಿಂತ ಮುನ್ನ ರಾವತ್ ಅವರನ್ನು ಇಡಿ ವಿಚಾರಣೆಗೊಳಪಡಿಸಿತ್ತು. ಸಂಸತ್ ನಲ್ಲಿ ಮುಂಗಾರು ಅಧಿವೇಶನವಾಗುತ್ತಿದ್ದಾಗ ಇಡಿ ಸಮನ್ಸ್ ಕಳುಹಿಸಿತ್ತು. ಎರಡು ಸಮನ್ಸ್ ಗಳಿಗೆ ಹಾಜರಾಗದ ಕಾರಣ ಆಗಸ್ಟ್ 1 ರಂದು ರಾವತ್ ನ್ನು ಇಡಿ ಬಂಧಿಸಿತ್ತು. ಜೈಲಿನಲ್ಲಿ ರಾವತ್ ಅವರಿಗೆ ಮನೆಯೂಟ ನೀಡಲು ಅನುಮತಿ ಇದೆ. ಸಂಜಯ್ ರಾವತ್ ಬಂಧನ ನಂತರ ಇದೇ ಪ್ರಕರಣ ಬಗ್ಗೆ ಅವರ ಪತ್ನಿಯನ್ನೂ ವಿಚಾರಣೆಗೊಳಪಡಿಸಲಾಗಿದೆ.

ಈ ಹಗರಣ ಬಗ್ಗೆ ಇಡಿ ಹೇಳುವುದೇನು? ಪಾತ್ರಾ ಚಾಲ್ ಪುನರಾಭಿವೃದ್ಧಿ ಯೋಜನಯಲ್ಲಿ ಹಣಕಾಸಿನ ಅವ್ಯವಹಾರ ನಡೆದಿದೆ ಎಂದು ಇಡಿ ಆರೋಪಿಸುತ್ತಿದ್ದು ಇದರಲ್ಲಿ ರಾವತ್ ಪತ್ನಿ ಮತ್ತು ಆಪ್ತರು ಭಾಗಿಯಾಗಿದ್ದಾರೆ ಎಂದು ಹೇಳಿದೆ. ಈ ಹಿಂದೆ ನಡೆಸಿದ ವಿಚಾರಣೆಯಲ್ಲಿ ರಾವಕ್ ಅವರು 2.25 ಕೋಟಿ ಹಣ ಲಾಭವಾಗಿ ಪಡೆದಿದ್ದಾರೆ ಎಂದು ತನಿಖಾ ಸಂಸ್ಥೆ ಹೇಳಿತ್ತು. ಈ ಹಣವನ್ನು ಅವರು ಹತ್ತಿರದ ರಾಯ್ ಗಢ ಜಿಲ್ಲೆಯ ಆಲಿಬಾಗ್ ನಲ್ಲಿ ಆಸ್ತಿ ಖರೀದಿಗೆ ಬಳಸಿದ್ದರು ಎಂದು ಇಡಿ ಹೇಳಿದೆ.

ಇಡಿ ಪ್ರಕಾರ ಪಾತ್ರಾ ಚಾಲ್​​ನಲ್ಲಿರುವ 47 ಎಕರೆ ಜಮೀನು ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರ (MHADA)ಕ್ಕೆ ಸೇರಿದ್ದು  ಅಲ್ಲಿ 672 ಬಾಡಿಗೆದಾರರು ನಿವೇಶನದ ವಠಾರದಲ್ಲಿ ವಾಸಿಸುತ್ತಿದ್ದರು. ಗುರು ಆಶಿಶ್ ಕನ್ಸ್ಟ್ರಕ್ಷನ್ಸ್ ಹೆಚ್ಚುವರಿ ಮಹಡಿ ಬಾಹ್ಯಾಕಾಶ ಸೂಚ್ಯಂಕದೊಂದಿಗೆ (ಎಫ್‌ಎಸ್‌ಐ) ಪ್ಲಾಟ್ ಪುನರಾಭಿವೃದ್ಧಿಗೆ ಅನುಮತಿಯನ್ನು ಪಡೆದುಕೊಂಡಿತು, ಆದರೆ ಇಲ್ಲಿಯವರೆಗೆ ಯಾವುದೇ ನಿಜವಾದ ಪುನರಾಭಿವೃದ್ಧಿ ನಡೆದಿಲ್ಲ. ತನಿಖಾ ಸಂಸ್ಥೆಯ ಪ್ರಕಾರ, ಬಾಡಿಗೆದಾರರನ್ನು ನಿರ್ಲಕ್ಷ್ಯ ಮಾಡಲಾಗಿದೆ.  ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಪ್ರವೀಣ್ ರಾವತ್ ಸಂಸ್ಥೆಯ ನಿರ್ದೇಶಕರಲ್ಲಿ ಒಬ್ಬರು. ಸಂಜಯ್ ರಾವತ್ ಅವರೇ ಇದರಲ್ಲಿ ಪ್ರಮುಖರು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ಶನಿವಾರ ಸಂಜಯ್ ರಾವತ್ ಅವರ ಪತ್ನಿ ವರ್ಷಾ ರಾವತ್ ಅವರನ್ನು ಒಂಬತ್ತು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ. ಸಂಜಯ್ ರಾವತ್  ತಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಮೇಲಿನ  ಆರೋಪ ಸುಳ್ಳು ಎಂದಿದ್ದಾರೆ.

Published On - 12:41 pm, Mon, 22 August 22