ಜಾರ್ಖಂಡ್: ವಿದ್ಯಾರ್ಥಿನಿಯರ ಶರ್ಟ್​ ಬಿಚ್ಚಿಸಿ ಕೇವಲ ಬ್ಲೇಜರ್​ನಲ್ಲಿ ಮನೆಗೆ ಕಳುಹಿಸಿದ ಪ್ರಾಂಶುಪಾಲರು

|

Updated on: Jan 12, 2025 | 8:56 AM

ಶಾಲೆಯ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿನಿಯರ ಶರ್ಟ್​ ಬಿಚ್ಚಿಸಿ ಬ್ಲೇಜರ್​ನಲ್ಲಿ ಮನೆಗೆ ಕಳುಹಿಸಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ಜಾರ್ಖಂಡ್‌ನ ಧನ್‌ಬಾದ್‌ನಲ್ಲಿರುವ ಪ್ರತಿಷ್ಠಿತ ಖಾಸಗಿ ಶಾಲೆಯ ಪ್ರಾಂಶುಪಾಲರು ಶಾಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬೇಸರಗೊಂಡು ಈ ಕ್ರಮ ಕೈಗೊಂಡಿದ್ದರು.ಕೆಲವು ಚಟುವಟಿಕೆಗಳ ಬಗ್ಗೆ ಪ್ರಾಂಶುಪಾಲರು ಆಕ್ಷೇಪ ವ್ಯಕ್ತಪಡಿಸಿದ್ದರು, ಆಚರಣೆ ಬಳಿಕ ವಿದ್ಯಾರ್ಥಿನಿಯರನ್ನು ಕರೆದು ಅವರಿಗೆ ಶರ್ಟ್​ ಬಿಚ್ಚಿ ಕೇವಲ ಬ್ಲೇಜರ್ ಧರಿಸುವಂತೆ ಹೇಳಲಾಯಿತು.

ಜಾರ್ಖಂಡ್: ವಿದ್ಯಾರ್ಥಿನಿಯರ ಶರ್ಟ್​ ಬಿಚ್ಚಿಸಿ ಕೇವಲ ಬ್ಲೇಜರ್​ನಲ್ಲಿ ಮನೆಗೆ ಕಳುಹಿಸಿದ ಪ್ರಾಂಶುಪಾಲರು
ಶಾಲೆ
Image Credit source: India Today
Follow us on

ಜಾರ್ಖಂಡ್​ ಶಾಲೆಯ ಪ್ರಾಂಶುಪಾಲರ ಕ್ರಮದ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯರ ಶರ್ಟ್​ ಬಿಚ್ಚಿಸಿ ಕೇವಲ ಬ್ಲೇಜರ್​ ಧರಿಸಿ ಮನೆಗೆ ಹೋಗುವಂತೆ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಜಾರ್ಖಂಡ್‌ನ ಧನ್‌ಬಾದ್‌ನಲ್ಲಿರುವ ಪ್ರತಿಷ್ಠಿತ ಖಾಸಗಿ ಶಾಲೆಯ ಪ್ರಾಂಶುಪಾಲರು ಶಾಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬೇಸರಗೊಂಡು ಈ ಕ್ರಮ ಕೈಗೊಂಡಿದ್ದರು.

10ನೇ ತರಗತಿ ವಿದ್ಯಾರ್ಥಿನಿಯರಿಗೆ ಯೂನಿಫಾರ್ಮ್​ನ ಶರ್ಟ್​ ತೆಗೆಯುವಂತೆ ಹೇಳಿ ಕೇವಲ ಬ್ಲೇಜರ್​ ಧರಿಸಿ ಮನೆಗೆ ಹೋಗುವಂತಹ ದಂಡನೆ ನೀಡಿದ್ದಾರೆ. ವಿದ್ಯಾರ್ಥಿಗಳು ಪೆನ್​ ಡೇ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕೆಲವು ಚಟುವಟಿಕೆಗಳ ಬಗ್ಗೆ ಪ್ರಾಂಶುಪಾಲರು ಆಕ್ಷೇಪ ವ್ಯಕ್ತಪಡಿಸಿದ್ದರು, ಆಚರಣೆ ಬಳಿಕ ವಿದ್ಯಾರ್ಥಿನಿಯರನ್ನು ಕರೆದು ಅವರಿಗೆ ಶರ್ಟ್​ ಬಿಚ್ಚಿ ಕೇವಲ ಬ್ಲೇಜರ್ ಧರಿಸುವಂತೆ ಹೇಳಲಾಯಿತು. ಅದೇ ಸ್ಥಿತಿಯಲ್ಲಿ ಮನೆಗೆ ಕಳುಹಿಸಲಾಯಿತು.

ಘಟನೆ ಬಗ್ಗೆ ಕಣ್ಣೀರು ಹಾಕುತ್ತಾ ಮನೆಯವರಿಗೆ ಮಕ್ಕಳು ವಿವರಿಸಿದ್ದಾರೆ. ಸಂಕಟಕ್ಕೊಳಗಾದ ವಿದ್ಯಾರ್ಥಿಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಹಲವರು ಈ ದಿನವನ್ನು ಆಘಾತಕಾರಿ ಎಂದು ವಿವರಿಸಿದ್ದಾರೆ.

ಮತ್ತಷ್ಟು ಓದಿ:ಕಂಠಪೂರ್ತಿ ಕುಡಿದ ಪ್ರಿನ್ಸಿಪಾಲ್​ನಿಂದ ಶಿಕ್ಷಕಿಗೆ ಆಲ್ಕೋಹಾಲ್ ಸೇವಿಸಿ, ಸಿಗರೇಟ್ ಸೇದಲು ಒತ್ತಾಯ

ಘಟನೆ ಪೋಷಕರ ಆಕ್ರೋಶಕ್ಕೆ ಕಾರಣವಾಗಿದ್ದು, ಅನೇಕರು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಶಾಲೆಯ ಪ್ರಾಂಶುಪಾಲರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸ್ಥಳೀಯ ಶಾಸಕಿ ರಾಗಿಣಿ ಸಿಂಗ್ ಕೂಡ ಪೋಷಕರ ಜೊತೆಗಿದ್ದು, ಘಟನೆ ದುರದೃಷ್ಟಕರ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಬಣ್ಣಿಸಿದ್ದಾರೆ.

ಜಿಲ್ಲಾಧಿಕಾರಿ ಮಾಧವಿ ಮಿಶ್ರಾ ಅವರೊಂದಿಗಿನ ಚರ್ಚೆಯ ಸಂದರ್ಭದಲ್ಲಿ, ಪೋಷಕರು ತಮ್ಮ ಕೋಪವನ್ನು ವ್ಯಕ್ತಪಡಿಸಿದರು.
ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಮಿಶ್ರಾ ಪೋಷಕರು ಮತ್ತು ಶಾಸಕರಿಗೆ ಭರವಸೆ ನೀಡಿದರು.

ಘಟನೆಯ ತನಿಖೆಗಾಗಿ ಸಮಿತಿಯನ್ನು ರಚಿಸುವುದಾಗಿ ಅವರು ಘೋಷಿಸಿದರು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ಭರವಸೆ ನೀಡಿದರು. ಈ ಪ್ರಕರಣದಲ್ಲಿ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಆಡಳಿತವು ಬದ್ಧವಾಗಿದೆ ಎಂದು ರಾಗಿಣಿ ಸಿಂಗ್ ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:55 am, Sun, 12 January 25