ವಿಡಿಯೋ ನೋಡಿ: ಗ್ರಾ ಪಂ ಮಹಿಳಾ ಅಧಿಕಾರಿಯ ಆ ಒಂದು ಉಪಾಯದಿಂದ ಮಂಗಗಳ ಕಾಟ ದೂರವಾಯಿತು! ಏನದು?

Monkey menace: ಮಂಗಗಳ ಕಾಟದಿಂದ ಗ್ರಾಮವನ್ನು ರಕ್ಷಿಸಲು ಪಂಚಾಯತ್ ಕಾರ್ಯದರ್ಶಿ ಭವಾನಿ ಸಾಮಾಜಿಕ ಜಾಲತಾಣಗಳನ್ನು ಆಶ್ರಯಿಸಿದರು. ಮಂಗನ ಕಾಟವನ್ನು ಹೇಗೆ ಹೋಗಲಾಡಿಸುವುದು ಎಂಬುದರ ಕುರಿತು ವೀಡಿಯೊಗಳಿಗಾಗಿ YouTube ಅನ್ನು ಹುಡುಕಾಡಿದರು. ಈ ಪ್ರಕ್ರಿಯೆಯಲ್ಲಿ, ಅವರಿಗೆ ಆ ಒಂದು ವೀಡಿಯೊ ಗಮನ ಸೆಳೆಯಿತು. ವೀಡಿಯೊ ಪ್ರದರ್ಶಿಸಲು ಗ್ರಾಮಸ್ಥರ ಸಭೆ ಕರೆದರು.

Follow us
ಸಾಧು ಶ್ರೀನಾಥ್​
|

Updated on:Mar 26, 2024 | 5:11 PM

ಇತ್ತೀಚಿನ ದಿನಗಳಲ್ಲಿ ಮಂಗಗಳ ಹಾವಳಿ ಎಲ್ಲೆಡೆ ಇವೆ. ಹಳ್ಳಿ, ಪಟ್ಟಣ, ಬೆಳೆ ಗದ್ದೆ ಎಲ್ಲೆಂದರಲ್ಲಿ ಇವುಗಳ ಹಾವಳಿ ಸಾಮಾನ್ಯವಾಗಿಬಿಟ್ಟಿದೆ. ಮಂಗಗಳ ಕಾಟ ತಡೆಯಲು ನಾನಾ ಪ್ರಯತ್ನಗಳು ನಡೆಯುತ್ತವೆ. ಇಲ್ಲಿನ ಗ್ರಾಮಸ್ಥರಿಗೂ ಅದೇ ಮಂಗಗಳ ಕಾಟ ಹೇಳತೀರದಾಗಿತ್ತು. ಆದರೆ ಅವರಿನ್ನು ಚಿಂತಿಸಬೇಕಿಲ್ಲ. ಹಲವು ವರ್ಷಗಳಿಂದ ಮಂಗಗಳ ಕಾಟದಿಂದ ಬಳಲುತ್ತಿದ್ದ ಆ ಗ್ರಾಮಸ್ಥರಿಗಾಗಿ ಜನಪರ ಅಧಿಕಾರಿಯೊಬ್ಬರು ಮಾಡಿದ ವಿನೂತನ ಪ್ರಯತ್ನ ಫಲ ನೀಡಿದೆ. ಅಧಿಕಾರಿಯ ಕಾರ್ಯಕ್ಕೆ ಜನ ಈಗ ಅಭಿನಂದಿಸುತ್ತಿದ್ದಾರೆ. ಹಾಗಾದರೆ ಆ ಅಧಿಕಾರಿ ಮಾಡಿದ್ದೇನು..? ಆ ಊರು ಎಲ್ಲಿದೆ? ಇಲ್ಲಿದೆ ನೋಡಿ ವಿವರ

ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಬುರ್ಗಂಪಾಡು ಮಂಡಲ ವ್ಯಾಪ್ತಿಯ ಮೋರಂಪಳ್ಳಿ ಬಂಜಾರ ಗ್ರಾಮದಲ್ಲಿ ಹಲವು ವರ್ಷಗಳಿಂದ ಮಂಗಗಳ ಕಾಟ ತೀವ್ರವಾಗಿ ಕಾಡುತ್ತಿದ್ದು, ಹತ್ತಾರು ಮಂಗಗಳು ಮನೆಗಳ ಮೇಲೆ ಬಿದ್ದು ಗ್ರಾಮವೇ ಛಿದ್ರಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಂಗಗಳ ಹಿಂಡಿನಿಂದ ತಮ್ಮ ಮನೆಗಳನ್ನು ರಕ್ಷಿಸಿಕೊಳ್ಳಲು ಇಲ್ಲಿನ ಜನರು ಮಾಡದ ಪ್ರಯತ್ನವೇ ಇಲ್ಲ. ಈ ಹಿನ್ನಲೆಯಲ್ಲಿ ಮಂಗಗಳಿಂದ ರಕ್ಷಿಸಿ ಮಂಗಗಳ ಕಾಟ ಹೋಗಲಾಡಿಸಲು ಪಂಚಾಯತ್ ಕಾರ್ಯದರ್ಶಿ ಭವಾನಿ ಅವರಿಗೆ ದೂರು ನೀಡಿ ಸಮಸ್ಯೆ ನಿವಾರಣೆಗೆ ದೃಢ ಪ್ರಯತ್ನ ಆರಂಭಿಸಿದ್ದಾರೆ.

ಮಂಗಗಳ ಕಾಟದಿಂದ ಗ್ರಾಮವನ್ನು ರಕ್ಷಿಸಲು ಪಂಚಾಯತ್ ಕಾರ್ಯದರ್ಶಿ ಭವಾನಿ ಸಾಮಾಜಿಕ ಜಾಲತಾಣಗಳನ್ನು ಆಶ್ರಯಿಸಿದರು. ಮಂಗನ ಕಾಟವನ್ನು ಹೇಗೆ ಹೋಗಲಾಡಿಸುವುದು ಎಂಬುದರ ಕುರಿತು ವೀಡಿಯೊಗಳಿಗಾಗಿ YouTube ಅನ್ನು ಹುಡುಕಾಡಿದರು. ಈ ಪ್ರಕ್ರಿಯೆಯಲ್ಲಿ, ಅವರಿಗೆ ಆ ಒಂದು ವೀಡಿಯೊ ಗಮನ ಸೆಳೆಯಿತು.

ವೀಡಿಯೊ ಪ್ರದರ್ಶಿಸಲು ಗ್ರಾಮದ ಜನರನ್ನು ಸಭೆಗೆ ಕರೆದರು. ಯೂಟ್ಯೂಬ್‌ನಲ್ಲಿ ನೋಡಿದ ವೀಡಿಯೊವನ್ನು ಆಧರಿಸಿ, ಅವರು ಗೊರಿಲ್ಲಾದಂತೆ ಕಾಣುವ ಉಡುಗೆಯನ್ನು ಖರೀದಿಸಿದರು. ಅವರ ಪಂಚಾಯತಿಯಲ್ಲಿ ಕಾರ್ಮಿಕನೊಬ್ಬ ಗೊರಿಲ್ಲಾ ವೇಷ ಧರಿಸಿ ಬಂಜಾರ ಗ್ರಾಮದ ಬೀದಿಗಳಲ್ಲಿ ಅಲೆದಾಡುತ್ತಿದ್ದಂತೆ ಮಂಗಗಳು ಮಂಗಮಾಯವಾಗಿವೆ.

ಊರನ್ನೆಲ್ಲಾ ದೋಪಿಡಿ ಮಾಡಿ, ಗ್ರಾಮಸ್ಥರನ್ನು ಗೋಳುಹೊಯ್ದುಕೊಂಡಿದ್ದ ಮಂಗಗಳು ಗೊರಿಲ್ಲಾ ವೇಷ ಧರಿಸಿದ್ದ ಆ ಕಾರ್ಮಿಕನನ್ನು ನೋಡಿ ದಿಕ್ಕಾಪಾಲಾಗಿ ಓಡತೊಡಗಿದವು. ಆ ಕಾರ್ಮಿಕ ಇದೀಗ ಪ್ರತಿದಿನ ಪಂಚಾಯತಿ ಕಚೇರಿಗೆ ಹಾಜರಿ ಹಾಕುತ್ತಾನೆ. ಮಂಗಗಳ ಹಿಂಡು ಇರುವ ಸ್ಥಳಕ್ಕೆ ಆತನನ್ನು ಕಳುಹಿಸಿದಾಗ ಶೇ. 80 ರಷ್ಟು ಮಂಗಗಳು ಗ್ರಾಮ ತೊರೆದು ಸಮೀಪದ ಕಾಡುಗಳಿಗೆ ಓಡಿ ಹೋಗಿರುವುದು ಗಮನಾರ್ಹ.

ವಾಸ್ತವದಲ್ಲಿ ಹಳ್ಳಿಗಳಿಂದ ಮಂಗಗಳನ್ನು ಓಡಿಸುವುದು ತುಂಬಾ ದುಬಾರಿ ಕೆಲಸ. ಆದರೆ ಕಾರ್ಯದರ್ಶಿ ಭವಾನಿ ಮೇಡಂ ಅವರು ಮಾಡಿದ ಆ ಉಪಾಯದಿಂದ ಕನಿಷ್ಠ ಬಂಡವಾಳದಲ್ಲಿ ಗೊರಿಲ್ಲಾ ವೇಷ ಧರಿಸಿ ಮೋರಂಪಳ್ಳಿ ಬಂಜಾರ ಗ್ರಾಮದ ಜನರು ಹಲವು ವರ್ಷಗಳಿಂದ ಎದುರಿಸುತ್ತಿರುವ ಮಂಗಗಳ ಸಮಸ್ಯೆಗೆ ಕಡಿವಾಣ ಹಾಕಿದರು. ಜನರು ತಮ್ಮ ಸಮಸ್ಯೆಯನ್ನು ಪರಿಹರಿಸಿದ್ದಕ್ಕಾಗಿ ಆ ಮಹಿಳಾ ಅಧಿಕಾರಿಯನ್ನು ಅಭಿನಂದಿಸುತ್ತಿದ್ದಾರೆ.

Published On - 5:09 pm, Tue, 26 March 24

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ